ಈ ಗಡುವು ಕಳೆದರೆ ಮುಂದೇನಾಗುವುದೋ ಹರಿಯೇ?


Team Udayavani, Jul 31, 2017, 6:10 AM IST

gaduvu.jpg

ಯಾರೆಲ್ಲಾ ಮಾಡಬೇಕು? 
ಆದಾಯವಿರುವವರೆಲ್ಲಾ ರಿಟರ್ನ್ ಫೈಲಿಂಗ್‌ ಮಾಡುವ ಅಗತ್ಯವಿಲ್ಲ. ಯಾರ ಆದಾಯ (ಗ್ರಾಸ್‌ ಟೋಟಲ್‌ ಇನ್ಕಂ) ಕರವ್ಯಾಪ್ತಿಯ ಒಳಗೆ ಬರುವುದಿಲ್ಲವೋ ಅಂತಹವರು ರಿಟರ್ನ್ ಫೈಲಿಂಗ್‌ ಮಾಡುವ ಅಗತ್ಯವೇ ಇಲ್ಲ. ಕರ ವ್ಯಾಪ್ತಿ ಅಂದರೆ ವಾರ್ಷಿಕ ಆದಾಯ ರೂ 2.5 ಲಕ್ಷ (60 ವಯಸ್ಸು ದಾಟಿದ ಹಿರಿಯರಿಗೆ ರೂ 3 ಲಕ್ಷ ಹಾಗೂ 80 ದಾಟಿದ ಅತಿಹಿರಿಯರಿಗೆ 5 ಲಕ್ಷ ರೂ.) ಇರುವವರಿಗೆ ರಿಟರ್ನ್ ಫೈಲಿಂಗ್‌ ಕಡ್ಡಾಯ.

ಆನ್‌-ಲೈನ್‌ ಫೈಲಿಂಗ್‌ ಎಲ್ಲ ವರ್ಗದವರಿಗೂ ಕಡ್ಡಾಯವಲ್ಲದಿದ್ದರೂ ಎಲ್ಲರೂ ಹಾಗೆ ಮಾಡುವುದು ಸುಲಭ ಹಾಗೂ ಪರಿಣಾಮಕಾರಿ. ಇಲ್ಲಿ ಗ್ರಾಸ್‌ ಟೋಟಲ್‌ ಇನ್ಕಂ ಅಂದರೆ 80ಸಿ, ಕರಮುಕ್ತ ಆದಾಯ ಇತ್ಯಾದಿ ಯಾವುದೇ ವಿನಾಯಿತಿಗಳನ್ನು ಕಳೆಯದೆ ತಮ್ಮ ಎಲ್ಲ ಮೂಲಗಳಿಂದ ಬರುವ ಆದಾಯದ ಒಟ್ಟು ಮೊತ್ತ. ಇನ್ನೊಂದು ಮುಖ್ಯ ವಿಚಾರ ಏನೆಂದರೆ ಅಷ್ಟು ಆದಾಯ ಇಲ್ಲದವರಿಗೂ ಅಕಸ್ಮಾತ್‌ ಟಿಡಿಎಸ್‌ ಕಡಿತ ಉಂಟಾಗಿದ್ದು ಸರಕಾರದ ಬೊಕ್ಕಸಕ್ಕೆ ಕರಪಾವತಿ ಸಂದಾಯವಾಗಿದ್ದಲ್ಲಿ ಅಂಥ‌ವರು ರಿಟರ್ನ್ ಫೈಲಿಂಗ್‌ -ಅದೂ ಕೂಡಾ ಆನ್‌-ಲೈನ್‌ ಆಗಿ- ಮಾಡಿಯೇ ಕಡಿತವಾದ ಟಿಡಿಎಸ್‌ ಅನ್ನು ರಿಫ‌ಂಡ್‌ ಪಡೆಯಬೇಕು. ರಿಟರ್ನ್ ಫೈಲಿಂಗ್‌ ಮಾಡದೆಯೇ ಪಾವತಿಯಾದ ಹೆಚ್ಚುವರಿ ಕರ ಸ್ವಯಂಚಾಲಿತವಾಗಿ ವಾಪಾಸ್‌ ಬರುವುದಿಲ್ಲ.

ಆದಾಯ ಕರದ ಮೇಲಿನ ಯಾವುದೇ ಲೇಖನವನ್ನೂ ಅದರ ವಿತ್ತ ವರ್ಷ ಮತ್ತು ಅಸೆಸೆ¾ಂಟ್‌ ವರ್ಷಗಳನ್ನು ಸಜ್ಜಿಗೆ-
ಬಜಿಲ್‌ ಮಾಡಿ ಗೊಂದಲ ಹುಟ್ಟಿಸಿಕೊಳ್ಳದೆ ಸಮಾಧಾನ ಚಿತ್ತರಾಗಿ ಓದಿಕೊಳ್ಳಬೇಕೆಂದು ಇದುವರೆಗೆ ಈ ಕಾಕುವಿನಲ್ಲಿ ಸಾವಿರದ ನೂರ ಒಂಭತ್ತು ಬಾರಿ ಕೇಳಿಕೊಂಡಿದ್ದೇನೆ. ಸರಿಸುಮಾರು ಇಷ್ಟು ಬಾರಿ ಭಗವಂತನ ನಾಮಸ್ಮರಣೆ ಮಾಡಿದ್ದಿದ್ದಲ್ಲಿ ಸಾûಾತ್‌ ಶ್ರೀಮನ್ನಾರಾಯಣನೇ ಪ್ರತ್ಯಕ್ಷನಾಗಿ “ವತ್ಸ ಮೊಳೆಯಾರಾ, ನಿನ್ನ ಭಕ್ತಿಗೆ ಮೆಚ್ಚಿದೆ, ನಿನ್ನ ಇಂಡಿಯಾದಲ್ಲಿ ಕರಪ್ಷನ್‌ ಲೆಸ್‌ ಸೊಸೈಟಿ ಒಂದು ಬಿಟ್ಟು ಬೇರೆ ಯಾವ ವರ ಬೇಕಾದರೂ ಕೇಳು’ ಎಂದು ಉಲಿಯುತ್ತಿದ್ದ. ಆದಾಗ್ಯೂ ಒಂದು ಸಾವಿರದ ನೂರಾ ಹತ್ತನೆಯ ಬಾರಿ ಇದೀಗ ನಾನು ನಿಮಗೆ ಹೇಳುತ್ತಿದ್ದೇನೆ – ವಿತ್ತ ವರ್ಷ ಮತ್ತು ಅಸೆಸೆ¾ಂಟ್‌ ವರ್ಷವನ್ನು ದಯವಿಟ್ಟು ಸಜ್ಜಿಗೆ-ಬಜಿಲ್‌ ಮಾಡಬೇಡೀ…

ಇಂದು ಕಾಕುವಾರ, 31 ಜುಲೈ. ಕಡ್ಡಾಯ ಆಡಿಟ್‌ ಇಲ್ಲದ ಬಹುತೇಕ ಜನಸಾಮಾನ್ಯರಿಗೆ ರಿಟರ್ನ್ ಫೈಲಿಂಗ್‌ ಮಾಡುವ ಕೊನೆಯ ದಿನ. ಕನಿಷ್ಠ ಪಕ್ಷ ಈ ಲೇಖನ ಬರೆಯುವ ಹೊತ್ತಿಗಾದರೂ (30ರ ಬೆಳಗ್ಗೆ) 31 ಜುಲೈ ಕೊನೆಯ ದಿನ. ಈ ಬಾರಿ ಈ ಗಡುವನ್ನು ಕೆಲ ದಿನ ಮುಂದೂಡಬಹುದಾದ ಪ್ರಬಲ ಶಂಕೆ ಇದ್ದರೂ ಈ ಹೊತ್ತಿನವರೆಗೆ ಮುಂದೂಡಲ್ಪಟ್ಟಿಲ್ಲ. ಮುಂದೇನಾಗುವುದು ಎಂದು ಈಗ ಕಾಕು ಕುಟ್ಟುತ್ತಿರುವ ನನಗೆ ಗೊತ್ತಿಲ್ಲದಿದ್ದರೂ ಕಾಕು ಓದುತ್ತಿರುವ ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ ಅಥವಾ ಸಂಜೆಯೊಳಗೆ ಗೊತ್ತಾಗಬಹುದು. ಈ ವರ್ಷ ಈ ಗಡು ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಇಷ್ಟು ದಿನ ಆಧಾರ ಮತ್ತು ಪ್ಯಾನ್‌ ಕಾರ್ಡುಗಳ ವಿವಾಹ ಮಾಡದೆ ಆರಾಮವಾಗಿ ತಿರುಗಾಡುತ್ತಿದ್ದವರಿಗೆ ಇದೀಗ ಸಂಕಟದ ಕಾಲ ಒದಗಿಬಂದಿದೆ. ಈ ಎರಡು ಕಾರ್ಡುಗಳಲ್ಲಿ ಹೆಸರು ವ್ಯತ್ಯಾಸ ಇದ್ದು ಕಾರ್ಡುಗಳು ಲಿಂಕ್‌ ಆಗದ ಇರುವವರು ಅಧಾರ ಕೇಂದ್ರದ ಹೊರಗೆ ಕ್ಯೂ ನಿಂತು ಮಂಡೆಬಿಸಿ ಮಾಡಿಕೊಳ್ಳುತ್ತಿದ್ದಾರೆ. ಅಧಾರ್‌-ಪ್ಯಾನ್‌ ಲಿಂಕ್‌ ಆಗದೆ ಈ ಬಾರಿ ರಿಟರ್ನ್ ಫೈಲಿಂಗ್‌ ಮಾಡುವಂತಿಲ್ಲ. ಯಾವುದೇ ಪ್ಲಾನಿಂಗ್‌ ಎಂಬುದು ಇಲ್ಲದೆ ಎಲ್ಲ ಕೆಲಸಗಳನ್ನೂ ಕೊನೆಯ ಕ್ಷಣಕ್ಕೆ ಇಟ್ಟುಕೊಳ್ಳುವವರು ಇನ್ನಾದರೂ ಬುದ್ಧಿ ಕಲಿಯಲಿ, ಹೇ ಭಗವಂತಾ!! 

ಅದಿರಲಿ, ಯಾವುದೇ ಗಡು ನಿಕ್ಕಿಯಾಗಿರಲಿ, ವಿಷಯ ಏನಪ್ಪಾ ಅಂತಂದ್ರೆ ಆ ಗಡುವಿನೊಳಗೆ ರಿಟರ್ನ್ ಫೈಲಿಂಗ್‌ ಮಾಡದೆ ಹೋದಲ್ಲಿ ಏನಾಗುತ್ತದೆ? ಎಷ್ಟೋ ಜನ ನನಗೆ ಫೋನ್‌ ಮಾಡಿ ಈ ಪ್ರಶ್ನೆ ಕೇಳುತ್ತಾರೆ. ಇ-ಮೈಲ್‌ ಮೂಲಕವೂ ಈ ಪ್ರಶ್ನೆ ಬಂದದ್ದಿದೆ. ಫೋನ್‌ ಮೂಲಕ ಇ-ಮೈಲ್‌ ಮೂಲಕ ಪ್ರಶ್ನೆ ಮಾಡುವ ಜನ ಸಾಮಾನ್ಯರ ವಿಷಯ ಬದಿಗಿರಲಿ; ಇದೀಗ ಸ್ವತಃ ಗುರಗುಂಟಿರಾಯರೇ ಈ ಪ್ರಶ್ನೆಯನ್ನು ಎತ್ತಿದ್ದಾರೆ. ಇದಕ್ಕೆ ಸಮರ್ಪಕವಾದ ಉತ್ತರವನ್ನು ನೀಡದೆ ಇದ್ದಲ್ಲಿ ನನ್ನ ತಲೆ ಸಾವಿರ ಹೋಳಾಗುವುದಾಗಿ ಎಚ್ಚರಿಕೆ ಬೇರೆ ನೀಡಿದ್ದಾರೆ. ಜುಲೈ 31 ಅಥವಾ ಬೇರಾವುದೇ ವಿಸ್ತರಿತ ದಿನಾಂಕದಂದು ರಿಟರ್ನ್ ಫೈಲಿಂಗ್‌ ಮಾಡದೆ ಇದ್ದಲ್ಲಿ ಏನಾಗುತ್ತದೆ? ಇದು ನಮ್ಮ ಇವತ್ತಿನ ಕಾಕುವಿನ ಸಿಲೆಬಸ್‌.

ಮೊತ್ತ ಮೊದಲನೆಯ ವಿಚಾರೆ ಏನೆಂದರೆ ನೀವು ರಿಟರ್ನ್ ಫೈಲಿಂಗ್‌ ಮಾಡದೆಯೇ ಅದರ ಗಡು ದಾಟಿ ಹೋಗಿದ್ದರೆ ಯಾವುದೇ ಬಾಂಬ್‌ ಸ್ಫೋಟ, ಭೂಕಂಪ, ಪ್ರಳಯ ಇತ್ಯಾದಿ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಕೊನೆಯ ದಿನಾಂಕ ಕಳೆದ ಮೇಲೆಯೂ ರಿಟರ್ನ್ ಫೈಲಿಂಗ್‌ ಮಾಡಬಹುದು. 

ಕೊನೆಯ ದಿನಾಂಕ ಜುಲೈ 31 ಇದ್ದರೂ ಆ ವರ್ಷದ ಅಂತ್ಯದವೆಗೂ ಅಂದರೆ ಮಾರ್ಚ್‌ 31ರ ವರೆಗೂ ರಿಟರ್ನ್ ಫೈಲಿಂಗ್‌ ಅನ್ನು ತಡವಾಗಿ ಮಾಡಬಹುದು. ಇದು ಬಿಲೇಟೆಡ್‌ ಅಥವಾ ವಿಳಂಬಿತ ರಿಟರ್ನ್ ಫೈಲಿಂಗ್‌ ಮಾಡಲು ಇರುವ ಅವಕಾಶ. ಉದಾಹರಣೆಗೆ ಸದ್ರಿ ವಿತ್ತ ವರ್ಷ 2016-17 ಸಾಲಿನ ರಿಟ®Õ…ì ಅನ್ನು ಜುಲೈ 31, 2017 ರ ಒಳಗಾಗಿ ಕ್ರಮಬದ್ಧವಾಗಿ ಮಾಡತಕ್ಕದ್ದು. ಆದರೆ ವಿಳಂಬಿತವಾಗಿ ಈ ವರ್ಷಾಂತ್ಯ ಅಂದರೆ ಮಾರ್ಚ್‌ 31, 2018ರವರೆಗೂ ಮಾಡಲು ಬರುತ್ತದೆ. (ಗಮನಿಸಿ: ಇದು ಸದ‌Âಕ್ಕೆ ಅನ್ವಯವಾಗುವ 2016 ಬಜೆಟಿನಲ್ಲಿ ಘೋಷಿತವಾದ ಹೊಸ ಕಾನೂನು. ಆ ಮೊದಲು ವಿಳಂಬಿತ ಸಲ್ಲಿಕೆಗೆ ಇನ್ನೂ ಒಂದು ವರ್ಷ ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತಿತ್ತು) ಆದರೆ ಅಂತಹ ವಿಳಂಬಿತ ರಿಟರ್ನ್ ಸಲ್ಲಿಕೆಯಲ್ಲಿ ಕೆಲ ಸಮಸ್ಯೆಗಳಿವೆ. ಅವನ್ನು ತಿಳಿದುಕೊಳ್ಳುವುದು ಮುಖ್ಯ.

1.ಪರಿಷ್ಕರಣೆ ಇಲ್ಲ
ಸಾಮಾನ್ಯವಾಗಿ ಒಮ್ಮೆ ರಿಟರ್ನ್ ಫೈಲಿಂಗ್‌ ಮಾಡಿದರೆ ಅದನ್ನು ಪರಿಷ್ಕರಿಸಲು ಅವಕಾಶವಿದೆ. ಕೆಲವೊಮ್ಮೆ 80ಸಿ ಅಥವಾ ಇನ್ನಿತರ ಅವಕಾಶಗಳನ್ನು ಗಣನೆಗೆ ತೆಗೆದುಕೊಳ್ಳಲು ಮರೆತಿದ್ದರೆ, ಆದಾಯದ ಲೆಕ್ಕಾಚಾರದಲ್ಲಿ ತಪ್ಪಿದ್ದರೆ ಅಥವಾ ಇನ್ನಾವುದೇ ರೀತಿಯ ಕೈತಪ್ಪು ನುಸುಳಿದ್ದರೆ ಅವನ್ನು ಸರಿಪಡಿಸಿಕೊಂಡಂತಹ ರಿವೈÓx… ರಿಟರ್ನ್ ಸಲ್ಲಿಕೆ ಮಾಡಲು ಬರುತ್ತದೆ. ಆದರೆ ಅಂತಹ ರಿವೈÓx… ರಿಟರ್ನ್ ಫೈಲಿಂಗಿನ ಅವಕಾಶ ಕೊನೆಯ ದಿನಾಂಕದ (ಜುಲೈ 31) ಒಳಗೆ ಸಕಾಲಿಕವಾಗಿ ಸಲ್ಲಿಸಿದವರಿಗೆ ಮಾತ್ರ ನೀಡಲಾಗಿದೆ. ವಿಳಂಬಿತ ರಿಟರ್ನ್ ಸಲ್ಲಿಕೆ ಮಾಡಿದವರಿಗೆ ಆ ರಿಟರ್ನ್ ಅನ್ನು ಪರಿಷ್ಕರಿಸುವ‌ ಅವಕಾಶ ಇಲ್ಲ. ಇದು ಬಹಳ ಮುಖ್ಯವಾದ ಅಂಶ. 

2.ಕ್ಯಾರಿ ಫಾರ್ವರ್ಡ್‌
 ವಿಳಂಬಿತ ರಿಟರ್ನ್ ಫೈಲಿಂಗ್‌ ಮಾಡುವವರಿಗೆ ಸದ್ರಿ ವರ್ಷದಲ್ಲಿ ಉಂಟಾಗಿರುವ ನಷ್ಟವನ್ನು (ಷೇರು, ಬಿಸಿನೆಸ್‌, ಇತ್ಯಾದಿ – ಹೌಸ್‌ ಪ್ರಾಪರ್ಟಿ ಹೊರತುಪಡಿಸಿ) ಮುಂದಿನ ವರ್ಷಕ್ಕೆ ಕೊಂಡೊಯ್ಯುವುದು ಸಾಧ್ಯವಾಗಲಾರದು. ಮುಂದಿನ ವರ್ಷಕ್ಕೆ ನಷ್ಟವನ್ನು ಕ್ಯಾರಿ ಫಾರ್ವರ್ಡ್‌ ಮಾಡಿ ಆ ವರ್ಷದ ಲಾಭದಿಂದ ಕಳೆಯುವ ಸೌಲಭ್ಯ ವಿಳಂಬಿತ ರಿಟರ್ನ್ ಫೈಲಿಗರಿಗೆ ಸಿಗಲಾರದು. ಹೆಚ್ಚಿನ ಜನಸಾಮಾನ್ಯರಿಗೆ ಈ ಸೌಲಭ್ಯದ ಅಗತ್ಯದ ಅಗತ್ಯ ಬೀಳುವುದಿಲ್ಲವಾದರೂ ಮೈಯೆಲ್ಲಾ ನಷ್ಟ ಎಳೆದುಹಾಕಿಕೊಳ್ಳುವ ಷೇರು-ನಾರು ಪಂಡಿತರಿಗೆ ಇದು ಅತ್ಯಗತ್ಯ. ಅಂತಹವರು ಜುಲೈ ಡೆಡ್‌ ಲೈನ್‌ ಮೀರಬಾರದು.

3.ರಿಫ‌ಂಡ್‌ ಮೇಲೆ ಬಡ್ಡಿ
 ನೀವು ರಿಟರ್ನ್ ಫೈಲಿಂಗ್‌ ಮಾಡಿ ಸರಕಾರದಿಂದ ನಿಮಗೆ ದುಡ್ಡು ರಿಫ‌ಂಡ್‌ ಬರುವುದಿದ್ದಲ್ಲಿ ಸ್ವಾಭಾವಿಕವಾಗಿ ಸರಕಾರವು ಅದರ ಮೇಲೆ ಬಡ್ಡಿ ಕೂಡ ನೀಡುತ್ತದೆ. ಹೆಚ್ಚುವರಿ ಟಿಡಿಎಸ್‌ ಅಥವಾ ಎಡ್ವಾನ್ಸ್‌ ಟ್ಯಾಕ್ಸ್‌ ಪಾವತಿ ಮಾಡಿದ್ದಿದ್ದಲ್ಲಿ ರಿಟರ್ನ್ ಫೈಲಿಂಗ್‌ ಮೂಲಕವೇ ನೀವು ಅದರ ವಾಪಸಾತಿಗಾಗಿ ಅರ್ಜಿ ಹಾಕಿರುತ್ತೀರಿ. (ಇದಕ್ಕಾಗಿ ಪ್ರತ್ಯೇಕ ಫಾರ್ಮ್-ಗೀರ್ಮ್ ಇತ್ಯಾದಿ ಕ್ರಮಾವಳಿ ಇಲ್ಲ, ರಿಟರ್ನ್ ಫೈಲಿಂಗ್‌ ಮಾತ್ರವೇ ಸಾಕಾಗುತ್ತದೆ. ಅಂತಹ ರಿಫ‌ಂಡ್‌ ದುಡ್ಡಿನ ಮೇಲೆ ವಿತ್ತ ವರ್ಷಾಂತ್ಯದ ಮರುದಿನದಿಂದ ಅಂದರೆ ಎಪ್ರಿಲ್‌ 1 ತಾರೀಖೀನಿಂದ ಅನ್ವಯಿಸುವಂತೆ ಸರಕಾರವು ನಿಮಗೆ 0.5% ಬಡ್ಡಿ ಪ್ರತಿ ಮಾಸಿಕ ನೀಡುತ್ತದೆ. ವಿಳಂಬಿತ ರಿಟ®Õ…ì ಸಲ್ಲಿಕೆಯ ಸಂದರ್ಭದಲ್ಲಿ ಈ ಬಡ್ಡಿ ಏಪ್ರಿಲ್‌ 1ರ ಬದಲಾಗಿ ರಿಟರ್ನ್ ಸಲ್ಲಿಕೆಯ ದಿನದಿಂದ ಮಾತ್ರವೇ ಲಾಗೂ ಆಗುತ್ತದೆ. ಇದರಿಂದಾಗಿ ರಿಟರ್ನ್ ಸಲ್ಲಿಕೆಯನ್ನು ತಡವಾಗಿ ಮಾಡುವವರಿಗೆ ಕನಿಷ್ಠ ನಾಲ್ಕು ತಿಂಗಳ ಬಡ್ಡಿಯ ನಷ್ಟ ಉಂಟಾದೀತು.

4.ಕರದ ಮೇಲೆ ಬಡ್ಡಿ
ಕೊನೆಯ ದಿನಾಂಕದ ಬಳಿಕ ಉಂಟಾಗುವ ವಿಳಂಬದ ಸಂದರ್ಭದಲ್ಲಿ ತೆರಿಗೆ ಕಟ್ಟಲು ಬಾಕಿ ಇದ್ದ ತೆರಿಗೆದಾರರಿಗೆ ಪ್ರತಿ ತಿಂಗಳು (ಮತ್ತು ಅದರ ಭಾಗಕ್ಕೆ) 1% ಬಡ್ಡಿ ಹಾಕಲಾಗುತ್ತದೆ. ಇದು ತೆರಿಗೆ ಕಟ್ಟಲು ಬಾಕಿ ಇದ್ದಲ್ಲಿ ಮಾತ್ರ, ಸಂಪೂರ್ಣ ತೆರಿಗೆಯನ್ನು ಕಟ್ಟಿ ಮುಗಿಸಿ ಕೇವಲ ಫೈಲಿಂಗಿನಲ್ಲಿ ತಡ ಮಾಡಿದವರಿಗೆ ಬಡ್ಡಿ ಬೀಳುವುದಿಲ್ಲ. ಆದರೂ ತೆರಿಗೆ ಬಾಕಿ ಇರುವವರು ಗಡು ದಿನಾಂಕದ ಒಳಗೇನೇ ಅದನ್ನು ಕಟ್ಟಿ ರಿಟರ್ನ್ ಫೈಲಿಂಗ್‌ ಕೂಡಾ ಮಾಡುವುದೊಳ್ಳೆಯದು. (ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತೆರಿಗೆ ಬಾಕಿ ಇರುವವರು ಮಾರ್ಚ್‌ 31ರ ಒಳಗೇನೇ ತಮ್ಮ ಎಲ್ಲ ತೆರಿಗೆಯನ್ನೂ ತ್ತೈಮಾಸಿಕ ವೇಳಾ ಪಟ್ಟಿ ಅನುಸಾರ ಕಟ್ಟುವುದೊಳ್ಳೆಯದು. ಇಲ್ಲದಿದ್ದಲ್ಲಿ ಇನ್ನೆರಡು ಪ್ರತ್ಯೇಕ ಸೆಕ್ಷನ್ನುಗಳ ಅಡಿಯಲ್ಲಿ ಬಾಕಿ ತೆರಿಗೆಯ ಮೇಲೆ ಇನ್ನೊಂದಿಷ್ಟು ಮಾಸಿಕ 1% ಬಡ್ಡಿ ಬೀಳುತ್ತದೆ) ಈ ರೀತಿ ವಿಳಂಬಿತ ರಿಟರ್ನ್ ಫೈಲಿಂಗ್‌ ಅನ್ನು ಅಸೆಸೆ¾ಂಟ್‌ ವರ್ಷದ ಕೊನೆಯವರಗೆ ಅಂದರೆ ಈಗಿನ ಸಂದರ್ಭದಲ್ಲಿ ಮಾರ್ಚ್‌ 2018ರ ವರೆಗೆ ಮಾಡಬಹುದಾಗಿದೆ. ಈ ಮಾಸಿಕ 1% ಬಡ್ಡಿಯ ಹೊರತಾಗಿ ಅತಿ ವಿರಳ ಸಂದರ್ಭಗಳಲ್ಲಿ ಕರ ಅಧಿಕಾರಿಯ ವಿವೇಚನೆಗೆ ಹೊಂದಿಕೊಂಡು ರೂ 5000ದ ಪೆನಾಲ್ಟಿ ಕೂಡಾ ವಿಧಿಸಬಹುದಾಗಿದೆ. (ಈ ವಿಚಾರದಲ್ಲಿ 2017ರ ಬಜೆಟ್ಟಿನಲ್ಲಿ ರೂ 10000 ದವರೆಗೆ ಪೆನಾಲ್ಟಿಯ ಪ್ರಸ್ತಾಪ ಬಂದಿದೆ. ಇದು ಡಿಸೆಂರ್ಬ 31 ವರೆಗೆ ರೂ 5000 ಹಾಗೂ ಮಾರ್ಚ್‌ 31 ವರೆಗೆ ರೂ 10000. ರೂ 5 ಲಕ್ಷದ ಒಳಗಿನ ಆದಾಯದವರಿಗೆ ಇದು ರೂ 1000 ಮಾತ್ರ. ಆದರೆ ಅದು ಮುಂದಿನ ವರ್ಷಕ್ಕೆ ಸಂಬಂಧ ಪಡುವ ವಿಚಾರ. ಸಧ್ಯಕ್ಕೆ ಅದರ ಗೊಡವೆ ಬೇಡ)ಹಾಗಾಗಿ ಎಲ್ಲ ಕರವನ್ನೂ ಸಕಾಲಿಕವಾಗಿ ಕಟ್ಟಿದ್ದು ಯಾವುದೇ ಕರಬಾಕಿ ಇಲ್ಲದವರಿಗೆ, ಕ್ಯಾರಿ ಫಾರ್ವರ್ಡ್‌ ಇಲ್ಲದವರಿಗೆ, ತಪ್ಪಿಲ್ಲದೆ ರಿಟರ್ನ್ ಫೈಲಿಂಗ್‌ ಮಾಡುವವರಿಗೆ ಕೇವಲ ಫೈಲಿಂಗಿನಲ್ಲಿ ಕೆಲ ದಿನ ವಿಳಂಬವಾದರೆ ವಿಶೇಷವಾದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ.

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.