ವೀರಶೈವ-ಲಿಂಗಾಯತ ಗೊಂದಲ ಸೃಷ್ಟಿಗೆ ಆಕ್ರೋಶ
Team Udayavani, Jul 31, 2017, 10:23 AM IST
ದಾವಣಗೆರೆ: ವೀರಶೈವ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾತೆ ಮಹಾದೇವಿ ಸಮಾಜ ಒಡೆಯುವ ಕೆಲಸಮಾಡುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಸಂಘರ್ಷ ಸಮಿತಿ ಕಾರ್ಯಕರ್ತರು ಭಾನುವಾರ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಅತಿದೊಡ್ಡ ಸಮಾಜ ವೀರಶೈವ- ಲಿಂಗಾಯತ ಸಮಾಜ ಒಡೆಯುವ ಹುನ್ನಾರ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನ ಅತ್ಯಂತ ಖಂಡನೀಯ ಎಂದು ದೂರಿದ ಪ್ರತಿಭಟನಾಕಾರರು ಮಾತೆ ಮಹಾದೇವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಅಣಕು ಶ್ರದ್ಧಾಂಜಲಿ ಅರ್ಪಿಸಿ, ಆಕ್ರೋಶ ಹೊರಹಾಕಿದರು. ಸಿದ್ದರಾಮಯ್ಯ ಕೇವಲ ಕಮಿಷನ್ ಮಠ, ವೀರಶೈವ ಲಿಂಗಾಯಿತ ಸಮಾಜಕ್ಕೆ ಸೇರದ ಮಾತೆ ಮಹಾದೇವಿಯರನ್ನು ಸೇರಿಸಿಕೊಂಡು ವೀರಶೈವ ಲಿಂಗಾಯತರನ್ನು ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನಿಜವಾಗಲೂ ಲಿಂಗಾಯತ, ವೀರಶೈವರ ಮೇಲೆ ಅನುಕಂಪ ಇಲ್ಲ ಎಂದರು.
ರಾಜ್ಯದಲ್ಲಿ ಭೀಕರ ಬರಗಾಲವಿದೆ. ನೀರಿಗಾಗಿ ಹಾಹಾಕಾರ ಇದೆ. ಬೆಳೆ ಇಲ್ಲದೆ ರೈತರು ಸಾವಿನ ಹಾದಿ ತುಳಿಯುತ್ತಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಜಾತಿ ರಾಜಕೀಯದ ಮೂಲಕ ಎಲ್ಲವನ್ನೂ ಮರೆಮಾಚುವ ಯತ್ನ ಮಾಡುತ್ತಿದ್ದಾರೆ. ಮಂಗಳೂರು ಕೋಮು ಗಲಭೆ ಮತ್ತು ಕಾರಾಗೃಹ ಹಗರಣಗಳ ವಿಷಯ ತಣ್ಣಗಾಗಿಸಲು ಈಗ ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ವಿಷಯ ತೂರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಸಮಿತಿಯ ಎಂ. ಪ್ರಶಾಂತ್, ಉಮೇಶ್ ಕತ್ತಿ, ಮಹಾತೇಂಶ ಒಣರೊಟ್ಟಿ, ಬಿ.ಬಿ. ಗಣೇಶ್, ಮಲ್ಲಿಕಾರ್ಜುನ, ಕೆ.ವಿ. ಗುರು, ದಯಾನಂದ, ಬದ್ರಿನಾಥ್, ವಿರೂಪಾಕ್ಷ ಬೇಕರಿ, ಮಂಜುನಾಥ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.