ವಲಸಿಗರಿಗೆ, ಜಾಗತೀಕರಣಕ್ಕೆ ಭಾಷೆ ತುತ್ತಾಗದಿರಲಿ


Team Udayavani, Jul 31, 2017, 11:54 AM IST

valasigaru-bhashe.jpg

ಬೆಂಗಳೂರು: ಒಂದೆಡೆ ವಲಸಿಗರ ಹಾವಳಿ, ಮತ್ತೂಂದೆಡೆ ಜಾಗತೀಕರಣದ ದಾಳಿಗೆ ತುತ್ತಾಗಿರುವ ನಗರದಲ್ಲಿ ಕನ್ನಡ ಉಳಿಸುವುದೇ ಈಗಿನ ದೊಡ್ಡ ಸವಾಲು ಎಂದು ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಸಮೂಹದ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ. ಕೃಷ್ಣ ಆತಂಕ ವ್ಯಕ್ತಪಡಿಸಿದರು. ನಗರದ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಿದರು. 

“ಎಲ್ಲ ಭಾಷಿಕರೂ ಇರುವ ಗಾಂಧಿನಗರದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಚಾರಕ್ಕೆ ಬಂದರೆ, ಇಲ್ಲಿ ಎರಡು ದೊಡ್ಡ ಸಮಸ್ಯೆಗಳು ಕಂಡುಬರುತ್ತವೆ. ಒಂದು ವಲಸಿಗರ ಹಾವಳಿ, ಮತ್ತೂಂದು ಜಾಗತೀಕರಣದ ದಾಳಿ. ಇವುಗಳ ಮಧ್ಯೆ ಕನ್ನಡ ಉಳಿಸುವುದೇ ದೊಡ್ಡ ಸವಾಲಾಗಿದೆ,’ ಎಂದರು.  

“ಕನ್ನಡದ ಮನಸ್ಸುಗಳ ಮುಂದಿರುವ ಮತ್ತೂಂದು ಸವಾಲು ತಾಂತ್ರಿಕತೆಯ ಭರಾಟೆ. ತಂತ್ರಜ್ಞಾನ ಇಂದು ಎಲ್ಲ ವಿಭಾಗಗಳಲ್ಲೂ ಆವರಿಸಿಕೊಂಡಿದೆ. ಯುವಮನಸ್ಸು ತಂತ್ರಜ್ಞಾನದಲ್ಲಿ ಮುಳುಗಿಬಿಟ್ಟಿದೆ. ಇಂತಹ ಯುವಕರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಾಂಪ್ರದಾಯಿಕ ಶೈಲಿಯಲ್ಲಿ ತಿಳಿಸುವುದು ಸೂಕ್ತವಲ್ಲ. ಆದ್ದರಿಂದ ತಾಂತ್ರಿಕತೆಯನ್ನು ಉಳಿಸಿಕೊಂಡು, ಹೇಗೆ ಕನ್ನಡತನ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ನಾವು ಆಲೋಚಿಸಬೇಕಿದೆ,’ ಎಂದರು.  

“ಕನ್ನಡ ಶಾಲೆಗಳನ್ನು ಉಳಿಸಬೇಕು. ಅದೇ ರೀತಿ, ರಾಜ್ಯದ ಗಡಿ ಭಾಗಗಳಲ್ಲೂ ಕನ್ನಡ ಗಟ್ಟಿಗೊಳಿಸಬೇಕಾಗಿದೆ ಎಂದ ಅವರು, ರಾಜ್ಯ ಸರ್ಕಾರ ಕನ್ನಡ ಉಳಿಸಲು ಮುಂದಾಗಿರುವುದು ಸ್ವಾಗತಾರ್ಹ,’ ಎಂದು ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ದಿನೇಶ್‌ ಗುಂಡೂರಾವ್‌, “ನಮ್ಮ ಮೆಟ್ರೋ’ದಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ.

ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು, ಹಿಂದಿ ತೆರವಿಗೆ ಮನವಿ ಮಾಡಿದ್ದಾರೆ. ಕನ್ನಡ ಭಾಷೆ ಉಳಿಸಿ, ಬೆಳಸಬೇಕು. ಹೊರರಾಜ್ಯಗಳ ಜನರು ಕನ್ನಡ ಕಲಿಯಲು ಮುಂದಾಗಬೇಕು. ಇದರಿಂದ ಸ್ಥಳೀಯ ಭಾಷೆಗಳು ಶಾಶ್ವತವಾಗಿ ಉಳಿಯಲಿವೆ,’ ಎಂದು ಹೇಳಿದರು. 

ಚಳವಳಿಗಾರರು ಒಟ್ಟಾಗಬೇಕು
ಮಾಜಿ ಸಚಿವೆ ಡಾ.ಲೀಲಾದೇವಿ ಆರ್‌. ಪ್ರಸಾದ್‌ ಮಾತನಾಡಿ, “ಕನ್ನಡದ ಬಗ್ಗೆ ನಿರ್ಲಕ್ಷ್ಯ ಮತ್ತು ಇಂಗ್ಲಿಷ್‌ ವ್ಯಾಮೋಹ ಇವೆರಡರ ಎಡಬಿಡಂಗಿ ಬದುಕು ನಮ್ಮದಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಉಳಿಯಬೇಕಾದರೆ, ಪ್ರತಿ ಮನೆಯಲ್ಲೂ ಒಬ್ಬ ಕನ್ನಡ ಕಾವಲು ಸಮಿತಿ ಅಧ್ಯಕ್ಷ ಹುಟ್ಟಬೇಕಿದೆ,’ ಎಂದರು.  “ಕನ್ನಡಕ್ಕಾಗಿ ವಿವಿಧ ರೀತಿಯಲ್ಲಿ ಹೋರಾಟಗಳು ನಡೆಯತ್ತಿವೆ. ಆದರೆ, ಎಲ್ಲ ಚಳವಳಿಗಾರರು ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ.

ಆಗ ಮಾತ್ರ ಕನ್ನಡಕ್ಕೆ ಶಕ್ತಿ ಬರುತ್ತದೆ ಎಂದ ಅವರು, ಸಮ್ಮೇಳನಗಳು ನಿಂತ ನೀರಾಗದೆ, ನಿರಂತರವಾಗಬೇಕು,’ ಎಂದು ಆಶಿಸಿದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾ ಶೇಖರ್‌, ಸಾಹಿತಿ ಬೈರಮಂಗಲ ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ, ಗಾಂಧಿನಗರ ಕಸಾಪ ಅಧ್ಯಕ್ಷೆ ಮಂಜುಮಹಾದೇವಮ್ಮ, ಪಾಲಿಕೆ ಸದ್ಯಸರಾದ ಆರ್‌.ಸಿ. ಸತ್ಯನಾರಾಯಣ, ಲತಾ ಮತ್ತಿತರರು ಹಾಜರಿದ್ದರು. 

ಇದಕ್ಕೂ ಮುನ್ನ ಸಮ್ಮೇಳನದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಮಲ್ಲೇ ಶ್ವರದ ಕುವೆಂಪು ಪ್ರತಿಮೆ ಬಳಿ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ “ಮುಖ್ಯಮಂತ್ರಿ’ ಚಂದ್ರು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತಿತರರು ಮೆರವಣಿಗೆಗೆ ಚಾಲನೆ ನೀಡಿದರು. 

ಟಾಪ್ ನ್ಯೂಸ್

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.