ಗ್ರಾಮಸ್ಥರ ಭಾವೈಕ್ಯ ಹೆಮ್ಮೆಯ ವಿಷಯ
Team Udayavani, Jul 31, 2017, 12:46 PM IST
ಉಪ್ಪಿನಬೆಟಗೇರಿ: ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಗಳನ್ನು ಎಲ್ಲ ಧರ್ಮದವರು ಅಚ್ಚುಕಟ್ಟಾಗಿ ಮಾಡುವ ಮೂಲಕ ಭಾವೈಕ್ಯ ಮೆರೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು.
ಇಲ್ಲಿನ ಹಳೆಯ ಬಸ್‌ನಿಲ್ದಾಣ ಬಳಿ ಶ್ರೀ ದುರ್ಗಾದೇವಿ ದೇಗುಲದ ಗರ್ಭಗುಡಿ ಉದ್ಘಾಟನೆ ಹಾಗೂ ಶ್ರೀ ಮೈಲಾರಲಿಂಗೇಶ್ವರ ಶಿಬಾರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮದಲ್ಲಿ 3.5 ಕೋಟಿ ವೆಚ್ಚದಲ್ಲಿ ಸಿಸಿರಸ್ತೆ, ಹನುಮನಹಾಳ ಗ್ರಾಮಕ್ಕೆ ಸಿಸಿ ರಸ್ತೆ, ಹನುಮನಕೊಪ್ಪ ಗ್ರಾಮವಿಕಾಸ ಯೋಜನೆಗೆ 75 ಲಕ್ಷ, ಶ್ರೀ ಕಲ್ಮೇಶ್ವರ ದೇವಸ್ಥಾನ ನವೀಕರಣಕ್ಕೆ 35 ಲಕ್ಷ,
ಅಂಬಾಭವಾನಿ ದೇವಸ್ಥಾನಕ್ಕೆ 5 ಲಕ್ಷ, ಮೂರು ಪ್ರಾಥಮಿಕ ಶಾಲೆಗಳ ಶತಮಾನೋತ್ಸವಕ್ಕೆ 45 ಲಕ್ಷ, ಮಸೀದಿಗಳಿಗೆ 25 ಲಕ್ಷ, ಶಾದಿಮಹಲ್ ಗೆ 50 ಲಕ್ಷ, ಸಮುದಾಯ ಭವನಕ್ಕೆ 12 ಲಕ್ಷ, ಗುಡ್ಡದ ಮೇಲಿರುವ ಕೊಳ್ಳ ಮುಚ್ಚಿ ಸಮತಟ್ಟಾದ ಮೈದಾನ ಮಾಡಲು 1.ಕೋಟಿ, ಹನುಮನಕೊಪ್ಪ ಗ್ರಾಮದಲ್ಲಿ ಅಂಬೇಡ್ಕರ್ ಭವನಕ್ಕೆ 10 ಲಕ್ಷ ರೂ. ನೀಡಲಾಗಿದೆ ಎಂದರು. ಜಿಪಂ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವರು 2.06 ಲಕ್ಷ ರೂ. ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಶ್ರೀ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಪ್ರಪಂಚದಲ್ಲಿ ಎಲ್ಲಾ ತರಹದ ಗಿಡ-ಮರಗಳು ಗುಡ್ಡಗಳಲ್ಲಿ ಬೆಳೆಯುತ್ತವೆ.
ಅದರಲ್ಲಿ ಶ್ರೀಗಂಧದ ಮರ ಮಾತ್ರ ಅಪರೂಪದಲ್ಲಿ ಅಪರೂಪ. ಸಮಾಜದ ಸಲುವಾಗಿ ಎಲ್ಲ ಧರ್ಮದವರು ದೇವಸ್ಥಾನ ಕಟ್ಟಡಕ್ಕಾಗಿ ಒಗ್ಗಟ್ಟಾಗಿ ಶ್ರಮ ವಹಿಸಿದರೆ ದೇವರು ಸಮೃದ್ಧ ಮಳೆ-ಬೆಳೆ ನೀಡಿ ಎಲ್ಲರನ್ನು ದಯಪಾಲಿಸುತ್ತಾನೆ ಎಂದರು. ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು.
ದೇವರ ಗುಡ್ಡದ ಸ್ವಾಮೀಜಿ, ಜುಂಜಪ್ಪ ಆಡೂರ, ತಾಪಂ ಸದಸ್ಯೆ ಶಾಂತವ್ವ ಸಂಕಣ್ಣವರ, ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ವಿಜಾಪುರ, ತಾಪಂ ಮಾಜಿ ಸದಸ್ಯ ಬಾಬಾ ಮೊಹಿದ್ದೀನ ಚೌಧರಿ, ಮೀನಾಕ್ಷಿ ದೊಡಮನಿ, ಹೆಬ್ಬಳ್ಳಿ ಜಿಪಂ ಸದಸ್ಯ ಕರೆಪ್ಪ ಮಾದರ , ರಾಮಲಿಂಗಪ್ಪ ನವಲಗುಂದ, ರವೀಂದ್ರ ಯಲಿಗಾರ, ಬಾಬು ಮಕಾಂದಾರ, ವೀರಣ್ಣ ಪರಾಂಡೆ, ಪ್ರಶಾಂತ ಕೇಕರೆ, ಗಂಗಪ್ಪ ಜವಳಗಿ,
-ಚನಬಸಪ್ಪ ಮಸೂತಿ, ಸುರೇಶಬಾಬು ತಳವಾರ, ಅರ್ಜುನ ಪತ್ರೆಣ್ಣವರ, ಮಹೇಶ ಹುಲೆಣ್ಣವರ, ಬಸವರಾಜ ಬೇವಿನಮರದ, ಸಂಗಮೇಶ ಮಾದರ, ಮಂಜುನಾಥ ಹೊಸಮನಿ, ಜಗದೀಶ ದೊಡಮನಿ, ದುರ್ಗಪ್ಪ ದೊಡಮನಿ ಇತರರಿದ್ದರು. ಅಶೋಕ ದೊಡಮನಿ ಸ್ವಾಗತಿಸಿದರು. ಎ.ಎಸ್. ಕೋಳಿ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.