ಚಿಕ್ಕಮಗಳೂರಲ್ಲಿ ಜೀಪು ಮಾರಾಟ ಜಾಲ ಪತ್ತೆ
Team Udayavani, Jul 31, 2017, 1:54 PM IST
ಚಿಕ್ಕಮಗಳೂರು: ನಗರದಲ್ಲಿ ಜೀಪುಗಳ ಮಾರಾಟ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದು, ಮಾಲೀಕರಿಂದ ಜೀಪುಗಳನ್ನು ಖರೀದಿಸಿ ಅವುಗಳ ಚಾರ್ಸಿ ಮತ್ತು ಇಂಜಿನ್‌ಗಳನ್ನು ಬೇರೆ ವಾಹನಗಳಿಗೆ ಅಳವಡಿಸಿ ಅವುಗಳ ಸಂಖ್ಯೆಯನ್ನು ಬದಲಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿ 4 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಇಂಜಿನ್ ಮತ್ತು ಚಾರ್ಸಿ ನಂಬರ್ ಬದಲಾಯಿಸಿ ನಕಲಿ ದಾಖಲೆ ಸೃಷ್ಟಿಸಿ, ಹಲವಾರು ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಕೆಲವು ಗ್ಯಾರೇಜ್‌ಗಳ ಸಹಕಾರವೂ ಇರುವುದು ತನಿಖೆಯಲ್ಲಿ ತಿಳಿದುಬಂದಿದೆ. ನಗರದ 60 ಅಡಿ ರಸ್ತೆಯಲ್ಲಿ ಬಿಳಿಬಣ್ಣದ ಜೀಪ್‌ವೊಂದು ಪತ್ತೆಯಾಗಿದ್ದು, ಅದನ್ನು ಅತ್ತಿಗುಂಡಿ ವಾಸಿ ಮಕ್ಸೂದ್ ಬೇರೆ ಎಲ್ಲಿಂದಲೋ ತಂದು ಇಂಜಿನ್ ಮತ್ತು ಚಾರ್ಸಿಗಳನ್ನು ಬದಲಿಸಿ ಮಾರಾಟ ಮಾಡಲು ಪ್ರಯತ್ನಿಸಿದ ಪ್ರಕರಣದ ಮೂಲಕ ಈ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಳಿಬಣ್ಣದ ಜೀಪೊಂದನ್ನು ಪರಿಶೀಲಿಸಲು ಪೊಲೀಸರು ಹೋದಾಗ ಆ ವ್ಯಕ್ತಿ ಅಲ್ಲಿಂದ ಹೋಗಲು ಪ್ರಯತ್ನಿಸಿದ್ದು, ತಕ್ಷಣ ಆತನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಮಕ್ಸೂದ್ ಅಹಮದ್ ಎಂದು ಜೀಪ್ ಮಾರುವ ಕೆಲಸ ಮಾಡುತ್ತಿದ್ದು, ಅತ್ತಿಗುಂಡಿ ವಾಸಿ ಎಂದು ತಿಳಿಸಿದ್ದಾನೆ. ಆ
ತಕ್ಷಣ ಪೊಲೀಸರು ಜೀಪನ್ನು ಪರಿಶೀಲಿಸಿದಾಗ ದಾಖಲೆಗಳು ಸಿಗದೆ ನೆಪಗಳನ್ನು ಹೇಳಿದ್ದು, ನಂತರ ಈ ಜೀಪನ್ನು ಎರಡು ತಿಂಗಳ ಹಿಂದೆ ಕಲುºರ್ಗಿಯ ಆಳಂದದ ಸುಶೀಲ್‌ಕುಮಾರ್ ಅವರಿಂದ ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯನ್ನು ತೀವ್ರಗೊಳಿಸಿದಾಗ ಮಹೀಂದ್ರ ಪಿಕಪ್ ವಾಹನದ ಚಾರ್ಸಿಯನ್ನು ಕಳವು ಮಾಡಿ ಈ ಜೀಪಿಗೆ ಜೋಡಿಸಲಾಗಿತ್ತು. ನಂತರ 1.30 ಲಕ್ಷ ರೂ. ನೀಡಿ, ಈ ವಾಹನ ಖರೀದಿಸಿ, ರಾಮನಹಳ್ಳಿಯ ಅಪ್ಸರ್ ಅವರ ಮೂಲಕ ರಿಪೇರಿ ಮಾಡಿಸಿ ಅಜ್ಜು ಅವರಿಂದ ನಂಬರ್ ಬದಲಾವಣೆ ಮಾಡಿಸಲಾಗಿದೆ ಎಂದು ತಿಳಿದುಬಂತೆಂದು ಪೊಲೀಸರು ವಿವರಿಸಿ, ಇದೇ ರೀತಿ ನಾಲ್ಕೈದು ವಾಹನಗಳನ್ನು ಮಾರಾಟ ಮಾಡಿರುವುದು ಪತ್ತೆಯಾಯಿತೆಂದು ಹೇಳಿದ್ದಾರೆ.
ಈ ಪ್ರಕರಣವನ್ನು ದಾಖಲಿಸಿಕೊಂಡು ಮಕ್ಸೂದ್, ಅಹಮದ್, ಸುಶೀಲ್‌ಕುಮಾರ್, ಫೈರೋಜ್, ಕರುಅಣ್ಣ, ಅಪ್ಸರ್ ಮತ್ತು ಅಜ್ಜು ಅವರು ಆರೋಪಿಗಳೆಂದು ತೀರ್ಮಾನಿಸಿ ಅವರಲ್ಲಿ ಮಕ್ಸೂದ್, ಅಹಮದ್, ಅಪ್ಸರ್ ಮತ್ತು ಅಜ್ಜು ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.