ಕೆಸರುಮಯ ರಸ್ತೆ; ಸಂಚಾರ ಅಯೋಮಯ: ಮುಕ್ತಿಗೆ ಆಗ್ರಹ


Team Udayavani, Aug 1, 2017, 6:05 AM IST

3107kde1-2.jpg

ಕುಂದಾಪುರ: ಹಟ್ಟಿಕುದ್ರು ಜನರ  ಪ್ರಮುಖ ಬೇಡಿಕೆಗಳು ಪ್ರಸ್ತುತ ಇಲಾಖೆಯ ಹಾಗೂ  ಜನಪ್ರತಿನಿಧಿಗಳ ಕಡತದಲ್ಲಿದ್ದು,  ಅದರಲ್ಲಿ ಪ್ರಮುಖವಾಗಿ ಹಟ್ಟಿಕುದ್ರು-ಮೂಡುಕುದ್ರು ಸಂಪರ್ಕ ರಸ್ತೆಯ ಬಾಕಿ ಉಳಿದ  ಕಾಮಗಾರಿಯೂ ಸೇರಿದೆ. ಹಟ್ಟಿಕುದ್ರು- ಬಸ್ರೂರು ಸಂಪರ್ಕ ಸೇತುವೆ ಕಾಮಗಾರಿಗೆ ಜನರು ಬಹು ಕಾಲದಿಂದ ಬೇಡಿಕೆ  ಇಟ್ಟಿದ್ದರೂ ಸೇತುವೆ ಕಾಮಗಾರಿಗೆ  ಇನ್ನೂ ಹಸಿರು ನಿಶಾನೆ ದೊರಕಿಲ್ಲ.  ಈ ನಡುವೆ   ಜನರು ಹಟ್ಟಿಯಂಗಡಿಯ ಮೂಲಕ ತಮ್ಮ ದಿನ ನಿತ್ಯದ ವ್ಯವಹಾರವನ್ನು ಕಂಡುಕೊಳ್ಳುತ್ತಿದ್ದು  ಸುತ್ತಿ ಬಳಿಸಿ ಹೋಗುವ ಮಾರ್ಗ ಇದಾಗಿದ್ದರೂ ಕೂಡಾ ಹಟ್ಟಿಕುದ್ರು ಹಾಗೂ ಮೂಡುಕುದ್ರು ನಡುವೆ ಸಂಪರ್ಕ ರಸ್ತೆಯ ದುಃಸ್ಥಿತಿಯಿಂದಾಗಿ ಜನರು ಒದ್ದಾಡುವ ಪರಿಸ್ಥಿತಿ ಬಂದಿದೆ.

ರಸ್ತೆ ಕಾಮಗಾರಿ ಬಾಕಿ 
ಸುಮಾರು ನೂರರಷ್ಟು  ಕುಟುಂಬಗಳು ಈ ಪರಿಸರದಲ್ಲಿ  ವಿವಿಧ ಕೇರಿಗಳಲ್ಲಿ ವಾಸಿಸುತ್ತಿದ್ದು, ಇವರೆಲ್ಲರೂ ಈ ಮಾರ್ಗವನ್ನೇ ನೆಚ್ಚಿಕೊಂಡಿದ್ದಾರೆ. ರಸ್ತೆಯ ಆರಂಭ ಹಾಗೂ ಕೊನೆಯಲ್ಲಿ  ಮಾತ್ರ ಸ್ವಲ್ಪ ಮಟ್ಟಿಗೆ ಕಾಂಕ್ರೀಟಿಕರಣಗೊಂಡಿದ್ದು  ಮಧ್ಯದ ಸುಮಾರು ಮುನ್ನೂರು ಮೀಟರ್‌ ಕಾಂಕ್ರೀಟಿಕರಣ ಇನ್ನೂ ಅಗಬೇಕಾಗಿದೆ. ಈ ಕಾಂಕ್ರಿಟೀಕರಣ ಆಗದ ರಸ್ತೆಯಲ್ಲಿ  ಮಳೆಗಾಲದಲ್ಲಿ ನಡೆದಾಡದ ಪರಿಸ್ಥಿತಿ ಎದುರಾಗಿದೆ.  ಕಾಂಕ್ರೀಟಿಕರಣ ಅಸಾಧ್ಯವಾದರೆ ಕನಿಷ್ಠ ಡಾಮರೀಕರಣಗೊಳಿಸಬೇಕೆಂಬುದು ಸ್ಥಳೀಯರ ಬೇಡಿಕೆ. 

ಕಾಮಗಾರಿ ಆರಂಭವಾಗುವ ನಿರೀಕ್ಷೆ 
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈಗಾಗಲೇ ಈ ರಸ್ತೆಯ ಕಾಮಗಾರಿಗಾಗಿ ರೂ. 25ಲಕ್ಷ ರೂ. ಕಾಮಗಾರಿಯ ಪ್ರಾಸ್ತಾವನೆಯನ್ನು ಕಳುಹಿಸಿದ್ದು ನವೆಂಬರ್‌ ಅನಂತರ ಕಾಮಗಾರಿ ಆರಂಭವಾಗುವ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದಾರೆ.

ಇಲ್ಲಿನ ಜನರು ದೈನಂದಿನ ಚಟುವಟಿಕೆಗೆ ಬಸೂÅರನ್ನೇ ಅವಲಂಬಿಸಿದ್ದು ದೋಣಿಯಲ್ಲಿಯೇ ಸಂಚರಿಸಬೇಕು. ಮಳೆಗಾಲದಲ್ಲಿ ಅದೂ ಕಷ್ಟಕರ. ಈ ಹಿನ್ನೆಲೆಯಲ್ಲಿ ಜನರು ಹಟ್ಟಿಯಂಗಡಿಯ ಮೂಲಕ ಸುತ್ತು ಬಳಸಿ ಸಂಚರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ  ಕುದ್ರು ಒಳಗಡೆಯ ಸಂಪರ್ಕ ರಸ್ತೆಯೂ ಸಂಚಾರಕ್ಕೆ ಅಯೋಗ್ಯವಾಗಿ ಕಂಡು ಬಂದಿರುವುದು ಗ್ರಾಮಸ್ಥರ ಬೇಡಿಕೆಗೆ ಕಾರಣ.

ಶಾಲಾ ಮಕ್ಕಳಿಂದ ಶ್ರಮದಾನ
ಹಟ್ಟಿಯಂಗಡಿ ಮೊದಲಾದೆಡೆ ಶಾಲಾ ಮಕ್ಕಳು ದಿನನಿತ್ಯ ಸಂಚರಿಸುತ್ತಿದ್ದು,  ಮಳೆಗಾಲದಲ್ಲಿ ರಸ್ತೆ ಹೊಂಡಗುಂಡಿಗಳಿಂದ ಕೂಡಿ ಸಂಚಾರಕ್ಕೆ ಅಯೋಗ್ಯವಾಗಿದೆ. ಇದರಿಂದ‌ ಶಾಲಾ ಮಕ್ಕಳು ಹಾಗೂ ಸ್ಥಳೀಯರು ಸೇರಿ ಸೋಮವಾರ ದುರಸ್ತಿ ಕಾರ್ಯಕ್ಕೆ ಮುಂದಾದರು. ಆದರೂ ಸಹ ರಸ್ತೆ ಕೆಸರುಮಯವಾಗಿ ರಾಡಿ ಎದ್ದಿದ್ದು, ರಾತ್ರಿ ವೇಳೆ ಸಂಚರಿಸುವವರಿಗೆ ಅಪಾಯ ಕಟ್ಟಿrಟ್ಟ ಬುತ್ತಿಯಾಗಿದೆ.

ಹಟ್ಟಿಕುದ್ರು-ಮೂಡುಕುದ್ರು ನಡುವೆ ಇರುವ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಈ ಮಾರ್ಗದಲ್ಲಿ ವಾಹನಸಂಚಾರ ಅಸಾಧ್ಯವಾಗಿದೆ. ಶಾಲಾ ವಾಹನಗಳಿಗೆ ತೊಂದರೆಯಾಗಿದ್ದು, ರಿಕ್ಷಾಗಳವರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟ  ಇಲಾಖೆ  ಆದಷ್ಟು ಶೀಘ್ರ ಈ ರಸ್ತೆ ಕಾಂಕ್ರೀಟೀಕರಣಗೊಳಿಸಿ ಸ್ಥಳೀಯರ ಕಷ್ಟಕ್ಕೆ ಸ್ಪಂದಿಸಬೇಕು.
– ಸುಧೀಂದ್ರ, ಸ್ಥಳೀಯರು’

ಹಟ್ಟಿಕುದ್ರು ಸಾಕಷ್ಟು ಜನಸಂಖ್ಯೆ ಇರುವ ಪ್ರದೇಶ.  ಉದ್ಯೋಗ, ಶಿಕ್ಷಣ ಸೇರಿದಂತೆ ತಮ್ಮ ಅಗತ್ಯತೆಗೆ ಬಸೂÅರು ಗ್ರಾಮವನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಇಲ್ಲಿಗೆ ಸಂಪರ್ಕ ಸೇತುವೆ ಮೊದಲ ಆದ್ಯತೆಯಾಗಿದೆ. ಬಳಿಕ ಹಟ್ಟಿಕುದ್ರು-ಮೂಡುಕುದ್ರು ನಡುವೆ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಬಾಕಿ ಇದೆ. ಈಗಾಗಲೇ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸುಮಾರು ಮುನ್ನೂರು ಮೀಟರ್‌ ರಸ್ತೆ ಕಾಂಕ್ರಿಟೀಕರಣಕ್ಕೆ  ಪ್ರಸ್ತಾವನೆಯನ್ನು ಇಲಾಖೆಯ ಮೂಲಕ ಕಳುಹಿಸಿದ್ದು, ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ನವೆಂಬರ್‌ನಲ್ಲಿ  ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದಾರೆ.
– ಹಟ್ಟಿಕುದ್ರು ಬಾಬು ಪೂಜಾರಿ, ತಾ.ಪಂ.ಮಾಜಿ ಸದಸ್ಯ

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Maharashtra Elections: 22 ಮಹಿಳೆ ಆಯ್ಕೆ, ವಿಪಕ್ಷದಿಂದ ಒಬ್ಬರೇ!

Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.