ತಿಂಗಳಾದರೂ ಬಗೆಹರಿಯದ ಜಿಎಸ್‌ಟಿ ಗೊಂದಲ
Team Udayavani, Aug 1, 2017, 7:00 AM IST
ಬೆಂಗಳೂರು: “ಒಂದು ದೇಶ- ಒಂದು ತೆರಿಗೆ” ಪರಿಕಲ್ಪನೆಯಡಿ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಯಾಗಿ ತಿಂಗಳು ಕಳೆದಿದ್ದು, ವ್ಯಾಪಾರ- ವಹಿವಾಟು ಕ್ಷೇತ್ರದಿಂದ ಉತ್ತಮ ಸ್ಪಂದನೆ ದೊರೆತಿದೆಯಾದರೂ ಆಯ್ದ ಸರಕು ಸೇವೆಗಳ ವರ್ಗೀಕರಣ, ತೆರಿಗೆ ಪ್ರಮಾಣ, ಜಿಎಸ್‌ಟಿಯಡಿ ವ್ಯವಹಾರ ನಡೆಸುವಲ್ಲಿನ ಗೊಂದಲ ನಿವಾರಣೆಗೆ ಆದ್ಯತೆ ನೀಡಬೇಕೆಂಬ ಒತ್ತಾಯವೂ ವ್ಯಾಪಾರ-ವಹಿವಾಟು ವಲಯದಿಂದ ಕೇಳಿಬರುತ್ತಿದೆ.
ರಾಜ್ಯದಲ್ಲಿ ಈ ಹಿಂದೆ ವ್ಯಾಟ್‌ನಡಿ ವ್ಯವಹರಿಸುತ್ತಿದ್ದ ಬಹುತೇಕರು ಜಿಎಸ್‌ಟಿಗೆ ವರ್ಗಾವಣೆಗೊಂಡಿದ್ದಾರೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಹೇಳುತ್ತದೆ. ಆದರೆ ಬಹಳಷ್ಟು ಸರಕುಗಳನ್ನು ಯಾವ ಪ್ರವರ್ಗದಡಿ ಗುರುತಿಸಬೇಕು, ಅದಕ್ಕೆ ವಿಧಿಸಬೇಕಾದ ತೆರಿಗೆ
ಪ್ರಮಾಣದ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದಿರುವುದು ಗೊಂದಲ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಗ್ರಾಹಕರು ಪ್ರತಿ ಖರೀದಿಗೆ ರಸೀದಿ ಕೇಳಿ ಪಡೆಯುವ, ತೆರಿಗೆ ವಿವರ ಪರಿಶೀಲಿಸುವ, ಲೋಪವಿದ್ದರೆ ಪ್ರಶ್ನಿಸುವ/ ದೂರು ಕೊಡುವ ಗೋಜಿಗೆ ಹೋಗದ ಕಾರಣ ಬೆಲೆ ಇಳಿಕೆಯಾಗದಂತಾಗಿದೆ. ಆ ಮೂಲಕ ಜಿಎಸ್‌ಟಿಯ ಲಾಭ ಗ್ರಾಹಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬ ವಾದವೂ ಇದೆ.
ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಜವಳಿ ಕ್ಷೇತ್ರಕ್ಕೆ ಶೇ.5ರಷ್ಟು ತೆರಿಗೆ ವಿಧಿಸಿರುವುದು, ಸಿದಟಛಿ ಉಡುಪು ಉದ್ಯಮದಲ್ಲಿ ಶೇ.5ರಿಂದ ಶೇ.18ರವರೆಗೆ ತೆರಿಗೆ ವಿಧಿಸಿರುವುದು ಸೇರಿ ಇತರೆ ಕೆಲ ಕ್ಷೇತ್ರಗಳಲ್ಲಿ ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿರುವುದು ಹೊರತುಪಡಿಸಿದರೆ ಹೆಚ್ಚ ನ ಆಕ್ಷೇಪ ವ್ಯಕ್ತವಾಗಿಲ್ಲ.
ಇದರಿಂದ ಜಿಎಸ್‌ಟಿಯನ್ನು ವ್ಯಾಪಾರ ಕ್ಷೇತ್ರದ ಬಹುತೇಕ ವರ್ಗ ಒಪ್ಪಿಕೊಂಡು ಅಳವಡಿಸಿಕೊಂಡಿದೆ ಎಂಬುದು ಸ್ಪಷ್ಟ ಎಂದು ಅಧಿಕಾರಿಗಳು ಹೇಳುತ್ತಾರೆ.
ಬಗೆಹರಿಯದ ಗೊಂದಲ: ಜಿಎಸ್‌ಟಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ವ್ಯಾಪಾರ-ವಹಿವಾಟುದಾರರ ಬಗ್ಗೆ ಸಾಕಷ್ಟು ಗೊಂದಲವಿದೆ.ಆಯ್ದ ಸರಕು- ಸೇವೆಗಳ ವರ್ಗೀಕರಣ, ಅದಕ್ಕೆ ಪೂರಕವಾದ ತೆರಿಗೆ ಪ್ರಮಾಣದ ಬಗ್ಗೆ ಉತ್ಪಾದಕರು,ವಿತರಕರು, ವರ್ತಕರಿಗಷ್ಟೇ ಅಲ್ಲದೆ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಮೂಲ ಸರಕಿಗೆ ವಿಧಿಸುವ ತೆರಿಗೆ ಬಗ್ಗೆ ಸ್ಪಷ್ಟತೆಯಿದ್ದರೂ ಅದರ ಉಪ ಉತ್ಪನ್ನಗಳ ಕುರಿತು ಗೊಂದಲವಿದೆ. ಈ ಬಗ್ಗೆ ಪ್ರಶ್ನಿಸಿದರೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಕೆಲ ವಸ್ತುಗಳ ತೆರಿಗೆ ಪ್ರಮಾಣದಲ್ಲಿ ಏರಿಳಿತವಾಗಿದ್ದು, ಆ ಹೊರೆಯನ್ನು ವರ್ತಕರು ಇಲ್ಲವೇ ಗ್ರಾಹಕರು ಭರಿಸುವಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜವಳಿಗೆ ಶೇ.5ರಷ್ಟು ತೆರಿಗೆ ವಿಧಿಸುವ ಜತೆಗೆ ಸಿದ್ಧ ಉಡುಪಿನ ಬೆಲೆಗೆ ಅನುಗುಣವಾಗಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಇದರಿಂದ ಬೆಂಗಳೂರಿನಲ್ಲಿ ಬಹಳಷ್ಟು ಜವಳಿ, ಸಿದ್ದ ಉಡುಪು ಮಳಿಗೆದಾರರು ಜಿಎಸ್‌ಟಿ ಅಳವಡಿಕೆಗೆ ಆಸಕ್ತಿ ತೋರಿಲ್ಲ. ಕೆಲ ಮಳಿಗೆಗಳಲ್ಲಿ ರಸೀದಿ ಬೇಕಾದರೆ ಇಂತಿಷ್ಟು ಜಿಎಸ್‌ಟಿ ತೆರಿಗೆ, ರಸೀದಿ ಬೇಡವಾದರೆ ತೆರಿಗೆ ಇಲ್ಲ ಎಂದು ಹೇಳುವುದು ಕಂಡುಬಂದಿದೆ.
ರಸೀದಿ ಕೇಳದ ಗ್ರಾಹಕರು: 200ರೂ.ವರೆಗಿನ ಖರೀದಿಗೆ ವರ್ತಕರು ಕಡ್ಡಾಯವಾಗಿ ರಸೀದಿ ನೀಡುವಂತಿಲ್ಲ. ಆದರೆ ಗ್ರಾಹಕರು ಕೇಳಿದರೆ ನಿರಾಕರಿಸುವಂತಿಲ್ಲ. 200 ರೂ. ಮೇಲ್ಪಟ್ಟ ಪ್ರತಿ ಖರೀದಿಗೆ ರಸೀದಿನೀಡುವುದು ಕಡ್ಡಾಯ. ರಸೀದಿ ಪಡೆದು ತೆರಿಗೆ ಪ್ರಮಾಣ ಪರಿಶೀಲಿಸಿದರೆ ಗ್ರಾಹಕರಿಗೆ ಜಿಎಸ್‌ಟಿಯ ಲಾಭ ಗೊತ್ತಾಗುತ್ತದೆ. ಆದರೆ ಬಹುತೇಕ ಗ್ರಾಹಕರು ರಸೀದಿ ಕೇಳದಿರುವುರಿಂದ ದರ ಪರಿಷ್ಕರಣೆ ಬಗ್ಗೆ ಸ್ಪಷ್ಟತೆ ಸಿಗದಂತಾಗಿದೆ.
ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಎಲ್ಲರೂ ಸ್ವಯಂಪ್ರೇರಣೆಯಿಂದ ನೋಂದಾಯಿಸಿಕೊಳ್ಳಬೇಕು. ಸರಕು-ಸೇವೆಗಳ ಎಚ್‌ಎಸ್‌ಎನ್ ಕೋಡ್, ನೋಂದಣಿ ಪ್ರಕ್ರಿಯೆ, ಸರಕು- ಸೇವೆಗಳ ಸಾಗಣೆ ವೆಚ್ಚದ ಮರುಪಾವತಿ ಹೇಗೆ ಎಂಬ ಬಗ್ಗೆ ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ.
– ಬಿ.ಟಿ.ಮನೋಹರ್, ರಾಜ್ಯ ಸರ್ಕಾರದ
ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ
ಜಿಎಸ್‌ಟಿ ಜಾರಿಯಾದ ಜು.1ರ ನಂತರ ಉತ್ಪಾದನೆಯಾದ ಆಯ್ದ ಸರಕುಗಳ ಬೆಲೆ ಇಳಿಕೆಯಾಗಿದೆ. ಮುಖ್ಯವಾಗಿ ಕ್ಷಿಪ್ರ ಮಾರಾಟವಾಗುವ ಬಹುತೇಕ ಸರಕುಗಳ (ಎಫ್ಎಂಜಿ) ಬೆಲೆಯೂ ಇಳಿಕೆಯಾಗಿದೆ. ಆದರೆ ಹೋಟೆಲ್ ತಿಂಡಿ- ತಿನಿಸಿನ ಬೆಲೆಗಳಲ್ಲಿ ಇಳಿಕೆಯಾಗದಿರುವುದು ಅಚ್ಚರಿ ಮೂಡಿಸಿದೆ. ಬ್ರಾಂಡೆಡ್ ವಸ್ತುಗಳ ಬೆಲೆ ನಿಗದಿ, ಸರಕುಗಳ ವರ್ಗೀಕರಣದಲ್ಲಿ ಗೊಂದಲಗಳಿದ್ದು, ಅಧಿಕಾರಿಗಳ ಸ್ಪಷ್ಟತೆ ನೀಡಬೇಕಿದೆ.
– ಆರ್.ಜಿ.ಮುರಳೀಧರ್, ಆರ್ಥಿಕ ತಜ್ಞ
ಜಿಎಸ್‌ಟಿ ವ್ಯವಸ್ಥೆಯಡಿ ವ್ಯವಹಾರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದರೂ ಬಹಳಷ್ಟು ಸರಕುಗಳ ವರ್ಗೀಕರಣ, ತೆರಿಗೆ ವಿವರದ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲ ಸರಕುಗಳನ್ನು ಯಾವ ವರ್ಗೀಕರಣದಡಿ ಪರಿಗಣಿಸಬೇಕೆಂಬ ಬಗ್ಗೆ ಇಲಾಖೆಗೂ ಸ್ಪಷ್ಟತೆ ಇದ್ದಂತಿಲ್ಲ.
– ಕೆ.ರವಿ, ಎಫ್ಕೆಸಿಸಿಐ ಅಧ್ಯಕ್ಷ
ಜಿಎಸ್‌ಟಿ ವ್ಯವಸ್ಥೆ ಉತ್ತಮವಾಗಿದ್ದರೂ ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ. ಜವಳಿಗೆ ಶೇ.5ರಷ್ಟು ತೆರಿಗೆಯಿದ್ದರೆ ಸಿದ್ಧ ಉಡುಪುಗಳ ಜಾಬ್ ವರ್ಕ್‌ಗೆ ಶೇ.18ರಷ್ಟು ತೆರಿಗೆ ಇದೆ. ಜವಳಿ ಮತ್ತು ಸಿದ್ಧ
ಉಡುಪು ಕ್ಷೇತ್ರದ ತೆರಿಗೆ ಕುರಿತೂ ಗೊಂದಲಗಳಿವೆ.
– ಹನುಮಂತೇಗೌಡ, ಕಾಸಿಯಾ ಅಧ್ಯಕ್ಷ
ಜಿಎಸ್‌ಟಿಯನ್ನು ಸ್ವಾಗತಿಸುತ್ತೇವೆ. ಆದರೆ ಸಿದ್ಧ ಉಡುಪುಗಳ ಬೆಲೆಗೆ ಅನುಗುಣವಾಗಿ ಶೇ.5ರಿಂದ ಶೇ.18ರವರೆಗೆ ತೆರಿಗೆ ಇದೆ. ಅಲ್ಲದೇ ಇನ್‌ಪುಟ್ ಸಬ್ಸಿಡಿ ಮೊತ್ತವನ್ನು ಮಾಸಿಕ, ತ್ತೈಮಾಸಿಕ ಇಲ್ಲವೇ ವಾರ್ಷಿಕವಾಗಿ ನೀಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
– ದಿಲೀಪ್ ಜೈನ್, ಕರ್ನಾಟಕ ಹೊಸೈರಿ ಮತ್ತು
ಗಾರ್ಮೆಂಟ್ಸ್ ಸಂಘದ ಅಧ್ಯಕ್ಷ
– ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.