ಅಸ್ಸಾಂನಲ್ಲಿ ಭಾರೀ ಮಳೆ: ನೆರೆಯಬ್ಬರಕ್ಕೆ 91 ಪ್ರಾಣಿಗಳು ಬಲಿ
Team Udayavani, Aug 1, 2017, 9:31 AM IST
ಹೊಸದಿಲ್ಲಿ: ಇತ್ತ ದಕ್ಷಿಣ ಭಾರತದಲ್ಲಿ ಈ ಬಾರಿಯೂ ಬರಗಾಲದ ಛಾಯೆ ಆವರಿಸಿದ್ದರೆ, ಅಸ್ಸಾಂ, ಗುಜರಾತ್‌ನಂಥ ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹವು ಜನಜೀವನವನ್ನು ತತ್ತರಿಸುವಂತೆ ಮಾಡಿದೆ. ಈಶಾನ್ಯ ರಾಜ್ಯದಲ್ಲಿ ಪ್ರಸಕ್ತ ವರ್ಷ ಮಳೆಯಿಂದಾಗಿ ಸುಮಾರು 70 ಮಂದಿ ಸಾವಿಗೀ ಡಾಗಿ ದ್ದಾರೆ. ಅಷ್ಟೇ ಅಲ್ಲ, ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನ ವನ ದಲ್ಲಿದ್ದ 90ಕ್ಕೂ ಹೆಚ್ಚು ಪ್ರಾಣಿಗಳು ವರುಣನ ಅಬ್ಬರಕ್ಕೆ ಬಲಿಯಾಗಿವೆ.
ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಅವರೇ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಪ್ರಶ್ನೆ ಯೊಂದಕ್ಕೆ ಲಿಖೀತ ಉತ್ತರ ನೀಡಿದ ಹರ್ಷವರ್ಧನ್, “ಮಳೆ, ಪ್ರವಾಹದಿಂದಾಗಿ 7 ಘೇಂಡಾಮೃಗಗಳು, 84 ಜಿಂಕೆಗಳು ಸಾವಿಗೀಡಾಗಿವೆ. ಅಸ್ಸಾಂನ 29 ಜಿಲ್ಲೆಗಳಲ್ಲಿನ 25 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತವು ಇಲ್ಲಿ 1,098 ಪರಿಹಾರ ಶಿಬಿರಗಳನ್ನು ನಿರ್ಮಿಸಿದ್ದು, ಜನರಿಗೆ ತೊಂದರೆ ಯಾಗ ದಂತೆ ಕ್ರಮ ಕೈಗೊಳ್ಳುತ್ತಿದೆ,’ ಎಂದು ಹೇಳಿದ್ದಾರೆ.
2 ಲಕ್ಷ ಪರಿಹಾರ ಘೋಷಣೆ: ಅಸ್ಸಾಂ ಮತ್ತು ರಾಜಸ್ಥಾನದಲ್ಲಿ ಮಳೆ, ಪ್ರವಾಹದಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಮೋದಿ ಅವರು ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯ ಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿಯೂ ಹೇಳಿದ್ದಾರೆ.
ಇಂದು ಪ್ರಧಾನಿ ಭೇಟಿ
ಪ್ರವಾಹಪೀಡಿತ ಅಸ್ಸಾಂಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಪ್ರತಿ ವರ್ಷ ಪ್ರವಾಹದಿಂದಾಗುವ ಸಮಸ್ಯೆಗಳ ಕುರಿತು ಚರ್ಚಿಸಿ, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಚಿವರ ಸಮಿತಿ ಮತ್ತು ರಾಜ್ಯದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಅಸ್ಸಾಂನ ಹಣಕಾಸು ಸಚಿವ ಹಿಮಾಂತ ಬಿಸ್ವಾ ಸರ್ಮಾ ಹೇಳಿದ್ದಾರೆ.
13 ಗಂಟೆ ಬಳಿಕ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧೆಯ ರಕ್ಷಣೆ
ಪಶ್ಚಿಮ ಬಂಗಾಳದ ದಾಮೋದರ ನದಿಯಲ್ಲಿ ಕೊಚ್ಚಿ ಹೋಗಿದ್ದ 62 ವರ್ಷದ ತಪಥಿ ಚೌಧರಿ ಎಂಬ ಮಹಿಳೆಯನ್ನು ಭಾನುವಾರ ರಕ್ಷಿಸಲಾಗಿದೆ. 13 ಗಂಟೆಗಳ ಕಾಲ ತಪಥಿ ನೀರಲ್ಲಿದ್ದರೂ, ಸಾವಿನ ಜತೆ ಹೋರಾಡಿ ಗೆದ್ದಿದ್ದಾರೆ. ಶನಿವಾರ ಸಂಜೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಅವರನ್ನು 13 ಗಂಟೆಗಳ ಬಳಿಕ ಅಂದರೆ ಭಾನುವಾರ ಬೆಳಗ್ಗೆ 80 ಕಿ.ಮೀ. ದೂರದಲ್ಲಿ ಮೀನುಗಾರರು ರಕ್ಷಿಸಿದ್ದಾರೆ.
ದೇಶದ ಪ್ರವಾಹ ಪೀಡಿತ ಪ್ರದೇಶ ಗಳು, ಸಂಕಷ್ಟದಲ್ಲಿರುವ ಜನರ ಬಗ್ಗೆ ಸರಕಾರಕ್ಕೆ ಸೂಕ್ಷ್ಮ ಸಂವೇದನೆಯೇ ಇಲ್ಲ. ಸಚಿವರೆಲ್ಲ ಬೇರೆ ಪಕ್ಷಗಳ ಶಾಸಕ ರನ್ನು ಪಕ್ಷಾಂತರ ಮಾಡಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ.
ಗುಲಾಂ ನಬಿ ಆಜಾದ್, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ
Speeding Truck : ಟ್ರಕ್ ನಡಿ ಸಿಲುಕಿದ ಬೈಕ್ ಸವಾರರನ್ನು 1ಕಿ.ಮೀ ದೂರ ಎಳೆದೊಯ್ದ ಚಾಲಕ…
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.