ಸಲಹೆ ಕೊಡದಿರುವುದೇ ಉತ್ತಮ
Team Udayavani, Aug 1, 2017, 10:55 AM IST
ತೆಲುಗು ನಟ ಜೆಡಿ ಚಕ್ರವರ್ತಿ ಈಗ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಂತ ಅದು ಕೇವಲ ಕನ್ನಡ ಸಿನಿಮಾಗಳಲ್ಲ. ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ತಯಾರಾಗುತ್ತಿರುವ ಚಿತ್ರ. ಈಗಾಗಲೇ ಪೂಜಾಗಾಂಧಿ ನಿರ್ಮಾಣದ ಚಿತ್ರದಲ್ಲಿ ನಟಿಸಿ, ನಿರ್ದೇಶಿಸುತ್ತಿರುವ ಜೆಡಿ ಈಗ “ಕಾಂಟ್ರ್ಯಾಕ್ಟ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ನಟಿಸಲು ಮುಖ್ಯ ಕಾರಣ ಅವರ ಶಿಷ್ಯ ಎಂದರೆ ತಪ್ಪಲ್ಲ. “ಕಾಂಟ್ರ್ಯಾಕ್ಟ್’ ಚಿತ್ರವನ್ನು ಜೆಡಿ ಚಕ್ರವರ್ತಿಯವರ ಶಿಷ್ಯ ಸಮೀರ್ ನಿರ್ದೇಶಿಸುತ್ತಿದ್ದಾರೆ. ಸಮೀರ್, ಜೆಡಿ ಚಕ್ರವರ್ತಿ ಜೊತೆ ಸಹಾಯ ನಿರ್ದೇಶಕರಾಗಿದ್ದವರು. ಈಗ “ಕಾಂಟ್ರ್ಯಾಕ್ಟ್’ ಮೂಲಕ ನಿರ್ದೇಶಕರಾಗಿದ್ದಾರೆ. ಶಿಷ್ಯನ ಸಿನಿಮಾದಲ್ಲಿ ನಟಿಸುತ್ತಿರುವ ಜೆಡಿ, ಅವರಿಗೆ ಏನು ಸಲಹೆ ಕೊಡುತ್ತಾರೆ ಎಂಬ ಕುತೂಹಲ ಇರುತ್ತದೆ. ಅದಕ್ಕೆ ಜೆಡಿ ಉತ್ತರಿಸಿದ್ದಾರೆ.
“ಸಲಹೆ ಕೊಡದೇ ಇರುವುದೇ ಉತ್ತಮ ಸಲಹೆ’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. “ಪ್ರತಿಯೊಬ್ಬ ನಿರ್ದೇಶಕನಿಗೂ ಅವನದೇ ಆದ ಕಲ್ಪನೆಗಳಿರುತ್ತದೆ. ಪ್ರತಿ ದೃಶ್ಯವನ್ನು ಆತ ಕನಸು ಕಂಡಿರುತ್ತಾನೆ. ಹೀಗಿರುವಾಗ ಯಾರೋ ಒಬ್ಬರು ಬಂದು ಸಲಹೆ ಕೊಡೋದು ಅಥವಾ ಮೂಗು ತೂರಿಸೋದು ಮಾಡಿದಾಗ ಸಹಜವಾಗಿಯೇ ಆತನಿಗೆ ಇರುಸುಮುರುಸಾಗುತ್ತದೆ.
ಹಾಗಾಗಿ, ನಾನು ಯಾರಿಗೂ ಏನು ಸಲಹೆ ಕೊಡೋದಿಲ್ಲ. ನನ್ನ ಪ್ರಕಾರ, ಸಲಹೆ ಕೊಡದೇ ಇರೋದು ಉತ್ತಮ ಸಲಹೆ. ಈಗ ನಾನು ಸ್ವತಂತ್ರವಾಗಿ ನಿರ್ದೇಶನ ಮಾಡುವಾಗ ನನ್ನ ಗುರುಗಳಾದ ರಾಮ್ಗೊàಪಾಲ್ ವರ್ಮಾ ಅವರು ಸಲಹೆ ಕೊಡೋದು ಅಥವಾ ಅವರ ಕಲ್ಪನೆಯನ್ನು ಹೇಳಲು ಬಂದರೆ ನನಗೆ ಇಷ್ಟವಾಗುತ್ತಾ? ಖಂಡಿತಾ ಇಲ್ಲ.
ಅದೇ ತರಹ ನನ್ನ ಶಿಷ್ಯಂದಿರಿಗೂ ನಾನು ಸಲಹೆ ಕೊಡಲು ಹೋದರೆ ಅದು ಅವರಿಗೆ ಇಷ್ಟವಾಗಲಿಕ್ಕಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾನಿಲ್ಲಿ ಒಬ್ಬ ನಟನಾಗಿ ಬಂದಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಸಮೀರ್ಗೆ ತಾನು ಏನು ಮಾಡುತ್ತೇನೆಂಬ ಬಗ್ಗೆ ಸ್ಪಷ್ಟ ಕಲ್ಪನೆ ಇದೆ’ ಎನ್ನುವುದು ಜೆಡಿ ಮಾತು. ಇನ್ನು “ಕಾಂಟ್ರ್ಯಾಕ್ಟ್’ ಚಿತ್ರದಲ್ಲಿ ಅವರ ಕ್ಯಾರೆಕ್ಟರ್ ಏನು ಎಂದರೆ “ಕ್ಯಾರೆಕ್ಟರ್ಲೆಸ್ ಹುಡುಗ’ ಎಂದು ನಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.