ಸಾಧನೆ ಹಿಂದೆ ಗುರು ಎಂಬ ಶಕ್ತಿ
Team Udayavani, Aug 1, 2017, 11:33 AM IST
ಬೆಂಗಳೂರು: ಏಕದಿನ ವಿಶ್ವ ಕಪ್ ಕ್ರಿಕೆಟ್ ಫೈನಲ್ಸ್ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೋತು ರನ್ನರ್ಅಪ್ ಆಗಿ ಭಾರತಕ್ಕೆ ಮರಳಿದರೂ, ನಮ್ಮನ್ನು ಗೆದ್ದ ತಂಡದಂತೆ ಅದ್ಧೂರಿಯಾಗಿ ಸ್ವಾಗತಿಸಿರುವುದು ಜೀವಮಾನದಲ್ಲಿ ಮರೆಯಲಾರದ ಸಂಗತಿ ಎಂದು ಭಾರತೀಯ ತಂಡದ ಪ್ರತಿಭಾನ್ವಿತ ಕ್ರಿಕೆಟ್ಪಟು ವೇದಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಸೋಮವಾರ ಸಿಂಡಿಕೇಟ್ ಬ್ಯಾಂಕ್ ವಲಯ ಕೇಂದ್ರ ಕಚೇರಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಡ್ಸ್ನಲ್ಲಿ ನಡೆದ 2017ರ ವಿಶ್ವ ಕಪ್ ಫೈನಲ್ಸ್ನಲ್ಲಿ ಸೋಲನುಭವಿಸಿ ತಾಯ್ನಾಡಿಗೆ ವಾಪಸಾದ ಮೇಲೂ ಜನತೆ ನಮ್ಮನ್ನು ಪ್ರೀತಿ, ಗೌರವದಿಂದ ಸ್ವಾಗತಿಸಿದರು. ಇದು ನಮಗೆ ಹೆಮ್ಮೆ ಎನಿಸುತ್ತದೆ. ಅದೇ ರೀತಿ ಪ್ರಥಮ ಬಾರಿಗೆ ಸಿಂಡಿಕೇಟ್ ಬ್ಯಾಂಕ್ ನಮ್ಮನ್ನು ಇಷ್ಟು ಪ್ರೀತ್ಯಾದರಗಳಿಂದ ಸನ್ಮಾನಿಸುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು.
ಯಾರೇ ಒಬ್ಬ ಸಾಧಕ, ಸಾಧಕಿಯ ಹಿಂದೆ ಒಂದು ಶಕ್ತಿ ಇರುತ್ತದೆ. ಅದೇ ಗುರು. ಆ ಅದ್ಭುತ ಶಕ್ತಿಯನ್ನು ಬಹಳಷ್ಟು ಮಂದಿ ಗುರುತಿಸುವುದಿಲ್ಲ. ಇಂದು ನಮ್ಮ ಜೊತೆ ಅವರನ್ನು ಸಿಂಡಿಕೇಟ್ ಬ್ಯಾಂಕ್ ಗುರ್ತಿಸಿ ಸನ್ಮಾನಿಸುತ್ತಿರುವುದಕ್ಕೆ ಬಹು ದೊಡ್ಡ ನಮಸ್ಕಾರ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒಮೆಲ್ವಿನ್ ರೆಗೋ ಅವರು ಮಾತನಾಡಿ, ಇಂದಿನ ಹೀರೋಗಳು ವೇದಾ ಮತ್ತು ರಾಜೇಶ್ವರಿ ಅವರಿಗೆ ಬ್ಯಾಂಕ್ ವತಿಯಿಂದ ತುಂಬು ಹೃದಯದ ವಂದನೆಗಳು. ಇಂದು ಅವರು ನಮ್ಮ ದೇಶಕ್ಕೆ ತಂದಿರುವ ಗೌರವ ಹಾಗೂ ಮಹಿಳಾ ಕ್ರಿಕೆಟ್ಗೆ ನೀಡಿರುವ ಕೊಡುಗೆ ಭಾರತೀಯರಾದ ನಾವು ಎಂದೆಂದಿಗೂ ಮರೆಯುವಂತಿಲ್ಲ. ನಿಮ್ಮ ಸಾಧನೆ ಮಹಿಳಾ ಕ್ರಿಕೆಟ್ನಲ್ಲಿ ಅಚ್ಚಳಿಯದೆ ಉಳಿಯಲಿದೆ.
ನಾನು ಒಬ್ಬ ಕ್ರೀಡಾಪಟು ನನಗೂ ಗೊತ್ತು. ಕ್ರಿಕೆಟ್ ಎಂದರೆ ಕೇವಲ ಪುರುಷರು ಆಡುವ ಕ್ರೀಡೆ ಎಂದು ಗುರ್ತಿಸುವ ಕಾಲವಿತ್ತು. ಆದರೆ, ಇಂದು ವಿಶ್ವ ಮಹಿಳಾ ಕ್ರಿಕೆಟ್ ಬಗ್ಗೆ ತಲೆಎತ್ತಿ ಮಾತನಾಡುವಂತಾಗಿದೆ ಹಾಗೂ ಮಹಿಳಾ ಕ್ರಿಕೆಟಿಗರೂ ಮಾಡಿರುವ ಸಾಧನೆ ನೆನೆಯುವಂತಾಗಿದೆ. ಆ ಪ್ರಾಮುಖ್ಯತೆ ಈಗ ಬಂದಿದೆ. ಭಾರತೀಯ ಮಹಿಳಾ ಕ್ರಿಕೆಟ್ಗೆ ಗೌರವ ತಂದುಕೊಟ್ಟ ಶಾಂತಾ ರಂಗಸ್ವಾಮಿ ಮುಂತಾದವರನ್ನು ಇಂದಿಗೂ ನೆನೆಯುತ್ತೇವೆ.
ಸಾಧನೆ ವಿಶ್ವಕ್ಕೆ ಮಾದರಿ: ಇಂಗ್ಲೆಂಡ್ನಲ್ಲಿ ಮಿತಾಲಿ ರಾಜ್ ನೇತೃತ್ವದ ಮಹಿಳಾ ಏಕದಿನ ಕ್ರಿಕೆಟ್ ತಂಡ, ತೋರಿದ ಸಾಧನೆ ವಿಶ್ವಕ್ಕೆ ಮಾದರಿ. ಕ್ರಿಕೆಟ್ ಕಾಶಿ ಎಂದೇ ಹೆಸರಾದ ಲಾರ್ಡ್ಸ್ ಮೈದಾನದಲ್ಲಿ ಫೈನಲ್ಸ್ ನಲ್ಲಿ ಬಂದ ಫಲಿತಾಂಶ ಅಭಿಮಾನಿಗಳಿಗೆ ಒಂದು ಕ್ಷಣ ಆಘಾತಕಾರಿ ಎನಿಸಿದ್ದರೂ ಬೇಸರವಂತೂ ಆಗಿಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಕೋಚ್ ಕಲ್ಪನಾ ಹಾಗೂ ಅವರ ಕೋಚ್ ಇರ್ಫಾನ್ ಸೇಟ್ ಅವರು ಮಾತನಾಡಿದರು. ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಪಾಂಡೆ, ಎಸ್.ಎಸ್. ಮಲ್ಲಿಕಾರ್ಜುನರಾವ್, ಮಹಾಪ್ರಬಂಧ ಭಾಸ್ಕರ್ ಹಂಡೆ ಹಾಗೂ ಇತರರು ಭಾಗವಹಿಸಿದ್ದರು.
ವಿಜಯಪುರದಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು ಕ್ರಿಕೆಟ್ ಕಲಿತು, ಭಾರತೀಯ ಮಹಿಳಾ ತಂಡದಲ್ಲಿ ಸ್ಥಾನ ಪಡೆದು ವಿಶ್ವ ಕಪ್ ಫೈನಲ್ನಲ್ಲಿ ಆಡಿದ್ದು ನನ್ನ ಜೀವಮಾನದ ಸಾಧನೆ. ಇಂಗ್ಲಿಷ್ ಭಾಷೆ ಬರದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಗುರು ಕಲ್ಪನಾ ಮೇಡಂಗೆ ಧನ್ಯವಾದಗಳು.
-ರಾಜೇಶ್ವರಿ ಗಾಯಕ್ವಾಡ್, ನಂತರ ಎಡಗೈ ಸ್ಪಿನ್ನರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.