ನಟ ಉಪೇಂದ್ರಗೆ ಹೈಕೋರ್ಟ್ ರಿಲೀಫ್
Team Udayavani, Aug 1, 2017, 11:33 AM IST
ಬೆಂಗಳೂರು: ತಾವರೆಕೆರೆ ಹೋಬಳಿಯಲ್ಲಿ 2005ರಲ್ಲಿ ಕೃಷಿ ಭೂಮಿ ಖರೀದಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಚಿತ್ರನಟ ಉಪೇಂದ್ರ ಅವರಿಗೆ ಹೈಕೋರ್ಟ್‌ನಿಂದ ರಿಲೀಫ್ ದೊರೆತಿದೆ. ಬೆಂಗಳೂರು ದಕ್ಷಿಣ ತಾಲೂಕು ಬ್ಯಾಲಾಳು ಗ್ರಾಮದಲ್ಲಿ 17 ಎಕರೆ 10 ಗುಂಟೆ ಜಮೀನು ಕಾನೂನು ಬದ್ಧವಾಗಿದೆ ಎಂದು ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ರಾಜ್ಯಸರ್ಕಾರದ ಮೇಲ್ಮನವಿ ಅರ್ಜಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದೆ.
ರಾಜ್ಯಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಪ್ರತಿವಾದಿಯ ( ಉಪೇಂದ್ರ) ವಿರುದ್ಧ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾಲದಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನಟ ಉಪೇಂದ್ರ ಅವರಿಗೆ ಕೃಷಿಯೇತರ ಆದಾಯ 2ಲಕ್ಷಕ್ಕಿಂತ ಹೆಚ್ಚಿದೆ ಹೀಗಾಗಿ ಅವರು 2005ರಲ್ಲಿ ಬ್ಯಾಲಾಳು ಗ್ರಾಮದಲ್ಲಿ 17 ಎಕರೆ 10 ಗುಂಟೆ ಜಮೀನು ಖರೀದಿ ನಿಯಮಬಾಹಿರವಾಗಿದೆ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹಾಯಕ ಆಯುಕ್ತರು ಆದೇಶಿಸಿದ್ದರು.
ಈ ಆದೇಶ ಪ್ರಶ್ನಿಸಿ ಉಪೇಂದ್ರ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಅರ್ಜಿದಾರರು ಜಮೀನು ಖರೀದಿ ಪ್ರಕ್ರಿಯೆ ಭೂ ಕಾಯಿದೆ 2015ರಲ್ಲಿ ತರಲಾದ ತಿದ್ದುಪಡಿಯ ಪೂರ್ವಾನ್ವಯಕ್ಕೆ ಅನ್ವಯವಾಗಲಿದೆ. ಹೀಗಾಗಿ ಅರ್ಜಿದಾರರ ಜಮೀನು ಖರೀದಿ ನಿಯಮಬಾಹಿರವಾಗಿಲ್ಲ ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ರಾಜ್ಯಸರ್ಕಾರ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.