“ಅಪಹರಣ ಕಟ್ಟುಕತೆ’ : ದಿಲೀಪ್‌ ಪರ ಜಾರ್ಜ್‌ ಮತ್ತೆ ಬ್ಯಾಟಿಂಗ್‌


Team Udayavani, Aug 2, 2017, 8:05 AM IST

dilip.jpg

ಆಲಪ್ಪುಳ: ನಟಿ ಅಪಹರಣ ಪ್ರಕರಣದಲ್ಲಿ ಮೊದಲಿನಿಂದಲೂ ದಿಲೀಪ್‌ ಬೆಂಬಲಕ್ಕೆ ನಿಂತವರು ಪೂಂಜಾರ್‌ನ ಶಾಸಕ ಪಿ. ಸಿ. ಜಾರ್ಜ್‌ ಮಾತ್ರ. ಇದೀಗ ಅವರು ಮತ್ತೂಮ್ಮೆ ನಟಿಯ ಅಪಹರಣ ಘಟನೆಯ ಸಾಚಾತನವನ್ನು ಪ್ರಶ್ನಿಸುವ ಮೂಲಕ ದಿಲೀಪ್‌ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾತನಾಡಿದ ಜಾರ್ಜ್‌ ಅಪ ಹರಣಕ್ಕೊಳಗಾಗಿರುವ ನಟಿ ಮರು ದಿನವೇ ಶೂಟಿಂಗ್‌ಗೆ ಹೋಗಿದ್ದಾರೆ. ಬರ್ಬರ ಹಲ್ಲೆಯಾಗಿರುವ ಮಹಿಳೆ ಮರುದಿನವೇ ಎದ್ದುಕೊಂಡು ಕೆಲಸಕ್ಕೆ ಹೋಗುವುದು ಹೇಗೆ ಸಾಧ್ಯ? ಹೀಗಾಗಿ ಈ ಘಟನೆಯ ಸಾಚಾತನದ ಕುರಿತು ಅನುಮಾನಗಳಿವೆ ಎಂದಿದ್ದಾರೆ.

ನಟ  ದಿಲೀಪ್‌ ಅವರನ್ನು   ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ ಎಂದು ಮತ್ತೂಮ್ಮೆ  ಪ್ರತಿಪಾದಿಸಿದ ಅವರು ಪೊಲೀ ಸರ ಕಟ್ಟುಕತೆಗಳನ್ನು ನಂಬಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವುದು ಪುರುಷರ ಮೇಲಿ ದೌರ್ಜನ್ಯ. ಇನ್ನೂ ಹಲವು ಪ್ರಮುಖ  ನಟ ನಟಿಯರು ಅಕ್ರಮ ಭೂ ವ್ಯವಹಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕು ಎಂದಿದ್ದಾರೆ. 

ಸಾಕ್ಷ್ಯಾಧಾರ ಹುಡುಕುವುದು ಪೊಲೀಸರ ಕೆಲಸ
ಇಡೀ ಪ್ರಕರಣವೇ ಒಂದು ಕಟ್ಟುಕತೆ ಯಂತಿದೆ. ದಿಲೀಪ್‌ ವಿರುದ್ಧ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿದ್ದರೂ ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀ ಸರು ತನ್ನನ್ನು ಪ್ರಶ್ನಿಸುವ ಸಾಧ್ಯತೆಯ ಬಗ್ಗೆ  ಮಾತನಾಡಿದ ಜಾರ್ಜ್‌ ನಾನು ಪೊಲೀಸರಿಗೆ ಯಾವುದೇ ಸಾಕ್ಷ್ಯಾಧಾರ ನೀಡುವುದಿಲ್ಲ. ಸಾಕ್ಷ್ಯಾಧಾರ ಹುಡುಕು ವುದು ಪೊಲೀಸರ ಕೆಲಸ. ಆದರೆ ನನಗೆ ಗೊತ್ತಿರುವುದನ್ನು ಹೇಳುತ್ತೇನೆ ಎಂದರು. 

ಭಾಗ್ಯಲಕ್ಷ್ಮೀ ತಿರುಗೇಟು 
ಖ್ಯಾತ ಡಬ್ಬಿಂಗ್‌ ಕಲಾವಿದೆ ಜಾರ್ಜ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಕೆಂಡ ಕಾರಿದ್ದಾರೆ. ಜಾರ್ಜ್‌ ಸಂತ್ರಸ್ತ ನಟಿಯನ್ನು ಅವಮಾನಿಸಿರುವುದು ಮಾತ್ರವಲ್ಲದೆ ತನಿಖೆಯನ್ನೂ ಅಣಕಿಸಿದ್ದಾರೆ. ಜನ ಪ್ರತಿನಿಧಿಯಾಗಿ ಜಾರ್ಜ್‌ ಇಷ್ಟು ಕೀಳುಮಟ್ಟದಲ್ಲಿ ಚಿಂತಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ. 

ಅತ್ಯಾಚಾರಕ್ಕೊಳಗಾದ ಅಥವಾ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆ  ಜೀವಮಾನವಿಡೀ ಮನೆಯಲ್ಲಿ ಕುಳಿತು ಕಣ್ಣೀರು ಸುರಿಸಬೇಕೇ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಒಬ್ಬ ಜನಪ್ರತಿನಿಧಿ ಯಾಗಿ ಜಾರ್ಜ್‌ ಯಾವ  ಸಂದೇಶ ನೀಡಲು ಬಯಸಿದ್ದಾರೆ? ಇದೆಲ್ಲ ಅವರಿಗೆ ತಮಾಷೆಯಂತೆ ಕಾಣಿಸುತ್ತಿದೆಯೆ? ಅವರ ಮಗಳಿಗೆ ಈ ಗತಿಯಾಗಿದ್ದರೆ ಅವರು ಈ ರೀತಿ ಪ್ರತಿಕ್ರಿಯಿಸುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.