ಆ.5: ಆಧಾರ್ ವಿವರ ಜೋಡಿಸಲು ಗಡು
Team Udayavani, Aug 2, 2017, 3:40 AM IST
ತಾಲೂಕಿನ ನಾಲ್ಕು ಸಾವಿರ ಮನೆಗಳ ಅನುದಾನ ಸ್ಥಗಿತ
ಪುತ್ತೂರು: ವಿವಿಧ ವಸತಿ ಯೋಜನೆಗಳಡಿ ನಿವೇಶನ, ವಸತಿ ಸೌಲಭ್ಯ ಪಡೆದ 4,871 ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್‌ನ ವಿವರವನ್ನು ಇಲಾಖೆಯ ದಾಖಲಾತಿಗಳೊಂದಿಗೆ ಜೋಡಿಸದ ಕಾರಣ ಅನುದಾನವನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ತಡೆ ಹಿಡಿದಿದೆ. ಬಸವ ವಸತಿ, ಡಾ| ಬಿ.ಆರ್. ಅಂಬೇಡ್ಕರ್, ಇಂದಿರಾ ಆವಾಸ್ ವಸತಿ ಯೋಜನೆಯಡಿ ವಸತಿ ಸೌಲಭ್ಯ ಪಡೆದ ಫಲಾನುಭವಿಗಳ ಆಧಾರ್ ಕಾರ್ಡ್‌ನ ವಿವರಗಳನ್ನು ಜೋಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
2005-06ನೇ ಸಾಲಿನ ಬಳಿಕ ಎಲ್ಲ ಮನೆಗಳ ಪರಿಶೀಲನೆಗೆ ಮುಂದಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಪುತ್ತೂರು ತಾಲೂಕಿನ 4,871 ಮನೆಗಳ ಆಧಾರ್ ಲಿಂಕ್ ಆಗದೇ ಇರುವುದನ್ನು ಪತ್ತೆ ಹಚ್ಚಿದೆ. ಮಾತ್ರವಲ್ಲ, ಈ ಪಟ್ಟಿಯಲ್ಲಿರುವ ಮನೆಗಳ ಮಾಲಕರ ಹೆಸರು ಪುನರಾವರ್ತನೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಮನೆಗಳಿಗೆ ಅನುದಾನವನ್ನು ತಡೆಹಿಡಿದಿದೆ. ಆಗಸ್ಟ್ ಐದರೊಳಗೆ ಸಂಬಂಧಪಟ್ಟವರು ತಮ್ಮ ಆಧಾರ್ ವಿವರವನ್ನು ಒದಗಿಸಲು ಸೂಚಿಸಲಾಗಿದೆ.
2010-11ರ ಅನಂತರದಲ್ಲಿ ಮಂಜೂರಾದ ಎಲ್ಲ ಮನೆಗಳ ಪಟ್ಟಿಯನ್ನು ಪರಿಶೀಲಿಸಿದಾಗ ಒಂದೇ ಹೆಸರಿನ ವ್ಯಕ್ತಿ 2-3 ಮಂದಿ ಇರುವುದು ಪತ್ತೆಯಾಗಿದೆ. ಇವರಿಗೆ ಅನುದಾನ ನೀಡುವುದು ಅಸಾಧ್ಯ ಎಂದು ಪರಿಗಣಿಸಿದ ನಿಗಮ, ಈ ಎಲ್ಲ ಮನೆಗಳಿಗೆ ಆಧಾರ್ ಲಿಂಕ್ ಮಾಡುವಂತೆ ಸೂಚಿಸಿತು. ಮನೆ ಕೆಲಸ ಪೂರ್ತಿಯಾಗಿ, ಎಲ್ಲ ಅನುದಾನವನ್ನು ಪಡೆದುಕೊಂಡ ಫಲಾನುಭವಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಮೇಯವೇ ಇರುವುದಿಲ್ಲ. 2010ರ ಬಳಿಕ ತಾಲೂಕಿನಲ್ಲಿ ಒಟ್ಟು 14,830 ನಿವೇಶನಗಳನ್ನು ವಿವಿಧ ಯೋಜನೆಗಳಡಿ ನೀಡಲಾಗಿತ್ತು.
ವಸತಿ ಯೋಜನೆಯಡಿ ಫೌಂಡೇಶನ್‌ಗೆ 29,800 ರೂ., ಗೋಡೆಗೆ 30,000 ರೂ., ಹಂಚಿಗೆ 30,000 ರೂ., ಪೂರ್ಣಗೊಂಡ ಬಳಿಕ 30,000 ರೂ. ನೀಡುತ್ತಿದೆ. ಇದಲ್ಲದೇ ಶೌಚಾಲಯಕ್ಕೆ 12,000 ರೂ. ನೀಡಲಾಗುತ್ತಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಒಟ್ಟು 1.50 ಲಕ್ಷ ರೂ. ಜತೆಗೆ ಶೌಚಾಲಯಕ್ಕೆ 15,000 ರೂ. ನೀಡುತ್ತಿತ್ತು. ಕಾಮಗಾರಿ ಪ್ರಗತಿಯಲ್ಲಿರುವ ಮನೆಗಳು ಕೂಡಲೇ ಆಧಾರ್ ಕಡ್ಡಾಯ ಮಾಡಿಕೊಂಡು ಮುಂದುವರಿಯಬೇಕಿದೆ.
ಆಗಸ್ಟ್ ಐದರವರೆಗೆ ಗಡು
ಆಧಾರ್ ಲಿಂಕ್ ಮಾಡಲು ಆಗಸ್ಟ್ 5ನೇ ತಾರೀಕಿನವರೆಗೆ ಗಡು ನೀಡಲಾಗಿದೆ. ಅದಕ್ಕೆ ಮೊದಲು ಆಧಾರ್ ಲಿಂಕ್ ಮಾಡಿಸುವುದು ಆಯಾ ಗ್ರಾಮ ಪಂಚಾಯತ್‌ಗಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್‌ನಿಂದ ಸೂಚನೆ ನೀಡಿದ್ದು, ಆಂದೋಲನ ಹಮ್ಮಿಕೊಳ್ಳಬೇಕು. ಎಲ್ಲ ಮನೆಗಳ ಆಧಾರ್ ವಿವರವನ್ನು ತತ್‌ಕ್ಷಣ ಪಡೆಯಬೇಕು. ಇದಕ್ಕಾಗಿ ಆಧಾರ್ ಕ್ಯಾಂಪ್ ಹಮ್ಮಿಕೊಳ್ಳುವ ಬಗ್ಗೆಯೂ ಸೂಚಿಸಲಾಗಿದೆ. ಒಂದು ವೇಳೆ ವಿವರ ಜೋಡಿಸದಿದ್ದರೆ ಈ ಮನೆಗಳ ಅನುದಾನ ಶಾಶ್ವತವಾಗಿ ನಿಲ್ಲುವ ಸಾಧ್ಯತೆ ಇದೆ.
ಆಧಾರ್ ಕಡ್ಡಾಯ
ಒಬ್ಬ ಫಲಾನುಭವಿ ಹಲವು ಮನೆಗಳನ್ನು ಪಡೆದುಕೊಂಡರೆ ಯೋಜನೆ ದುರುಪಯೋಗ ಆಗುತ್ತದೆ. ಇದನ್ನು ತಡೆಗಟ್ಟಲು ರಾಜ್ಯ ಸರಕಾರ, ಒಂದೇ ಹೆಸರಿನ ಹಲವು ಫಲಾನುಭವಿಗಳ ನಿವೇಶನಗಳ ಅನುದಾನವನ್ನು ಸ್ಥಗಿತಗೊಳಿಸಿದೆ. ಆಧಾರ್ ಕಡ್ಡಾಯ ಮಾಡಿದರೆ ಯೋಜನೆ ದುರುಪಯೋಗ ಆಗುವುದನ್ನು ತಡೆಗಟ್ಟಬಹುದು. ಆಧಾರ್ ವಿವರ ಜೋಡಿಸಲು ಆಗಸ್ಟ್ 5 ಕೊನೆ ದಿನವೆಂದು ಎಲ್ಲ ಗ್ರಾ.ಪಂ. ಗಳಿಗೆ ಸೂಚಿಸಲಾಗಿದೆ.
– ಜಗದೀಶ್, ಇಒ, ತಾ.ಪಂ., ಪುತ್ತೂರು
– ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.