ಇಂದು ಆರ್ಬಿಐ ನೀತಿ ಪರಾಮರ್ಶೆ: ನಿಫ್ಟಿ ದಾಖಲೆ
Team Udayavani, Aug 2, 2017, 8:40 AM IST
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶೆ ಮಂಗಳವಾರದಿಂದಲೇ ಆರಂಭವಾಗಿದ್ದು, ಬುಧವಾರ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ. ಇದು ಷೇರುಪೇಟೆ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದ್ದು, ಮಂಗಳವಾರ ಹೂಡಿಕೆದಾರರು ಷೇರು ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರಿದರು. ಪರಿಣಾಮ ನಿಫ್ಟಿ ಮತ್ತೂಂದು ಮೈಲುಗಲ್ಲು ತಲುಪಿದ್ದು, 37 ಅಂಕ ಏರಿಕೆಯಾಗಿ, ದಿನಾಂತ್ಯಕ್ಕೆ 10,114ರಲ್ಲಿ ವಹಿವಾಟು ಕೊನೆಗೊಳಿಸಿತು.
ಮಧ್ಯಂತರ ವಹಿವಾಟಿನ ವೇಳೆ ಒಂದು ಹಂತದಲ್ಲಿ ನಿಫ್ಟಿ 62 ಅಂಕ ಏರಿಕೆಯಾಗಿತ್ತು. ಇನ್ನು ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 60 ಅಂಕ ಏರಿಕೆ ದಾಖಲಿಸಿ, 32,575 ರಲ್ಲಿ ಕೊನೆಗೊಂಡಿತು. ಆರ್ಬಿಐ ಪರಾಮರ್ಶೆಯ ಜೊತೆಗೆ ಕಾರ್ಪೊರೆಟ್ ಕಂಪೆನಿಗಳ ಆದಾಯದಲ್ಲಿನ ಹೆಚ್ಚಳವೂ ಷೇರು ಮಾರುಕಟ್ಟೆ ಏರುಗತಿಯಲ್ಲಿ ಸಾಗಲು ಕಾರಣವಾಯಿತು. ಇದೇ ವೇಳೆ, ಇದು ರೂಪಾಯಿ ಮೇಲೂ ಪರಿಣಾಮ ಬೀರಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯವೂ 12 ಪೈಸೆಯಷ್ಟು ಏರಿಕೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.