ಬಹುಮಾನ ವಂಚನೆ: ಹೇಳಿದ್ದು ಬೆಳ್ಳಿನಾಣ್ಯ, ಕಳುಹಿಸಿದ್ದು ಕಬ್ಬಿಣದತುಂಡು
Team Udayavani, Aug 2, 2017, 8:00 AM IST
ಕೋಟ: ಅದೃಷ್ಟ ಡ್ರಾದಲ್ಲಿ ನಿಮಗೆ ಮೊಬೈಲ್, ಬೆಳ್ಳಿನಾಣ್ಯ ಬಹುಮಾನ ಬಂದಿದೆ; ಪೋಸ್ಟಲ್ ಚಾರ್ಜ್ ನೀಡಿ ಬಹುಮಾನ ಪಡೆದುಕೊಳ್ಳಿ ಎಂದು ಕಬ್ಬಿಣದ ಯಂತ್ರದ ತುಂಡುಗಳನ್ನು ಪೋಸ್ಟ್ ಮೂಲಕ ಕಳುಹಿಸಿ ವಂಚಿಸಿದ ಘಟನೆ ಕೋಟದಲ್ಲಿ ಪರಿಸರದಲ್ಲಿ ಇತ್ತೀಚೆಗೆ ಸಂಭವಿಸಿದೆ. ಇಲ್ಲಿನ ನಿವಾಸಿ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್ ಅವರ ಮೊಬೈಲ್‌ಗೆ ಪ್ರತಿಷ್ಠಿತ ಮೊಬೈಲ್ ಕಂಪೆನಿಯೊಂದರ ಹೆಸರಲ್ಲಿ 9071735842, 9844193580 ಸಂಖ್ಯೆಯಿಂದ ಬೆಂಗಳೂರಿನಿಂದ ಕರೆ ಬಂದಿದ್ದು, ನೀವು ನಮ್ಮ ಸಂಸ್ಥೆಯ ಅದೃಷ್ಟ ಗ್ರಾಹಕರಾಗಿ ಆಯ್ಕೆಯಾಗಿದ್ದೀರಿ. ನಾವು ನಿಮಗೆ ಪೋಸ್ಟ್ ಮೂಲಕ ಬಹುಮಾನ ಕಳುಹಿಸುತ್ತೇವೆ. ಪೋಸ್ಟ್ ಚಾರ್ಜ್ ನೀಡಿ ಬಹುಮಾನ ಪಡೆದುಕೊಳ್ಳಿ ಎಂದು ನಂಬಿಸಲಾಗಿತ್ತು.
ಹಿಂದೊಮ್ಮೆ ಅದೇ ಕಂಪೆನಿಯ ಮೊಬೈಲ್ ಅನ್ನು ಅವರು ಖರೀದಿಸಿದ್ದರಿಂದ ಹಾಗೂ ಕರೆ ಮಾಡಿದವರು ಅದೇ ವಿಳಾಸವನ್ನು ಹೇಳಿದ್ದರಿಂದ ನಿವೃತ್ತ ಮ್ಯಾನೇಜರ್ ಬಹುಮಾನವನ್ನು ಸ್ವೀಕರಿಸಲು ಮುಂದಾದರು. ಅನಂತರ ಎರಡು-ಮೂರು ದಿನಗಳಲ್ಲೇ ಪೋಸ್ಟ್ ಮೂಲಕ ಬಹುಮಾನ ಕೂಡ ಬಂತು. 1,800 ರೂ, ನೀಡಿ ಪಾರ್ಸೆಲ್ ಬಿಡಿಸಿಕೊಳ್ಳಲು ಹೇಳಿದಾಗ ಸ್ವಲ್ಪ ಅನುಮಾನಗೊಂಡರು. ಕುತೂಹಲದಿಂದ ಪಾರ್ಸೆಲ್ ಪಡೆದು ಬಿಚ್ಚಿ ನೋಡಿದಾಗ ಅದರಲ್ಲಿ ಮೊಬೈಲ್ ಹಾಗೂ ಬೆಳ್ಳಿ ನಾಣ್ಯಗಳ ಬದಲಿಗೆ ಕಬ್ಬಿಣದ ಹಳೆಯ ಯಂತ್ರದ ತಂಡುಗಳು, ದೇವರ ಮೂರ್ತಿಗಳು ಇತ್ತು. ಅನಂತರ ಆ ನಂಬರ್‌ಗೆ ಕರೆ ಮಾಡಿದಾಗ ಒಂದು ಸಂಖ್ಯೆ ಸ್ವಿಚ್ಡ್ ಆಫ್ ಆಗಿತ್ತು ಹಾಗೂ ಇನ್ನೊಂದು ಸಂಖ್ಯೆಯಲ್ಲಿ ಕರೆ ಸ್ವೀಕರಿಸಿದರು ಸರಿಯಾದ ಉತ್ತರ ನೀಡಲಿಲ್ಲ. ಇದೇ ರೀತಿ ಅನೇಕ ಮಂದಿಗೆ ಕರೆಗಳು ಬರುತ್ತಿದ್ದು, ಜನರನ್ನು ಮೋಸಗೊಳಿಸಲು ವ್ಯವಸ್ಥಿತ ಜಾಲವೊಂದು ಕಾರ್ಯಾಚರಿಸುತ್ತಿದೆ. ಸಾರ್ವಜನಿಕರು ಈ ಕುರಿತು ಎಚ್ಚರದಿಂದಿರಬೇಕು ಎಂದು ಮೋಸಕ್ಕೊಳಗಾದ ಅವರು ಪತ್ರಿಕೆಗೆ ತಿಳಿಸಿದ್ದಾರೆ ಹಾಗೂ ಪೊಲೀಸರಿಗೆ ದೂರು ನೀಡುವ ಕುರಿತು ಚಿಂತನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.