ಒಳ್ಳೆಯ ಕಥೆಯಲ್ಲಿ ಸಣ್ಣ ಪಾತ್ರವಾದರೂ ಓಕೆ!

Team Udayavani, Aug 2, 2017, 10:36 AM IST

sunil-raoh-as-MONI.jpg

ರತ್ನಜ ನಿರ್ದೇಶನದ “ಪ್ರೇಮಿಸಂ’ ಚಿತ್ರವೇ ಕೊನೆ. ಆ ನಂತರ “ಎಕ್ಸ್‌ಕ್ಯೂಸ್‌ ಮೀ’ ಖ್ಯಾತಿಯ ಸುನೀಲ್‌ ರಾವ್‌ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಸುಮಾರು ಏಳು ವರ್ಷದ ಗ್ಯಾಪ್‌ನ ನಂತರ ಅವರು “ಲೂಸ್‌ ಕನೆಕ್ಷನ್‌’ ಮೂಲಕ ವಾಪಸ್ಸು ಬರುತ್ತಿದ್ದಾರೆ. “ಲೂಸ್‌ ಕನೆಕ್ಷನ್‌’ ಎನ್ನುವುದು ಚಿತ್ರದ ಹೆಸರಲ್ಲ, ಅದೊಂದು ವೆಬ್‌ಸರಣಿ ಎಂಬುದು ಗೊತ್ತಿರಲಿ. ರೇಡಿಯೋ ಜಾಕಿ ಪ್ರದೀಪ ನಿರ್ಮಿಸುತ್ತಿರುವ ಈ ವೆಬ್‌ ಸರಣಿಯು ಇಂದು ಸಂಜೆ ಆರು ಗಂಟೆಗೆ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಲಿದೆ.

11 ಕಂತುಗಳ ಈ ಸರಣಿಯಲ್ಲಿ ಸುನೀಲ್‌ ಜೊತೆಗೆ ಸಿಂಧು ಲೋಕನಾಥ್‌, ಅನುಪಮ ಗೌಡ, ಗೌರಿ ನೀಲಾವರ್‌, ವಿನಾಯಕ್‌ ಜೋಷಿ, ಆರ್‌.ಜೆ ವಿಕ್ಕಿ, ಲಕ್ಷ್ಮೀ ಚಂದ್ರಶೇಖರ್‌, ಸುಂದರ್‌, ಬಾಬು ಹಿರಣ್ಣಯ್ಯ, ವೀಣಾ ಸುಂದರ್‌ ಮುಂತಾದವರು ನಟಿಸುತ್ತಿದ್ದಾರೆ. ಈ ಸರಣಿಯನ್ನು ಹಶೀನ್‌ ಖಾಣ್‌, ಎಶ್ಮಾನ್‌ ಖಾನ್‌ ಮತ್ತು ರಘು ಶಾಸಿ ನಿರ್ದೇಶಿಸುತ್ತಿದ್ದಾರೆ.ಸುನೀಲ್‌ಗೆ ನಟನೆಗೆ ವಾಪಸ್ಸಾಗಬೇಕು ಎಂಬ ಯಾವ ಉದ್ದೇಶ ಇರಲಿಲ್ಲ.

“ನಾನು ಸಿನಿಮಾ ಮಾಡುವಾಗ ಒಳ್ಳೆಯ ನಟ ಎಂದನಿಸಿಕೊಳ್ಳಬೇಕು ಎಂಬ ಚಟ ಇತ್ತು. ನಾನ್ಯಾವತ್ತೂ ಸ್ಟಾರ್‌ಪಟ್ಟಕ್ಕಾಗಿ ಕೆಲಸ ಮಾಡಲಿಲ್ಲ. ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು, ಒಳ್ಳೆಯ ಚಿತ್ರಗಳನ್ನು ಮಾಡಬೇಕು ಎಂಬ ಆಸೆಯಿಂದ ಮಾಡಿದೆ. ಈ ಮಧ್ಯೆ ಬೇರೆ ತರಹದ ಪಾತ್ರಗಳಿಗೆ ಕಾಯುತ್ತಿದ್ದೆ. ಆದರೆ, ಆಗ ಈ ನನ್ನ ಬಯಕೆಯ ಸಿನಿಮಾಗಳು ಬರುತ್ತಿರಲಿಲ್ಲ. ಒಂದೇ ತರಹ ಪಾತ್ರ ಮಾಡಿ ಸಾಕಾಗಿತ್ತು. ಒಂದು ಬ್ರೇಕ್‌ ಬೇಕಾಗಿತ್ತು.

ಹಾಗಾಗಿ ಒಂದು ವರ್ಷ ಬ್ರೇಕ್‌ ತೆಗೆದುಕೊಳ್ಳೋಣ ಅಂದುಕೊಂಡೆ. ಆ ಬ್ರೇಕ್‌ ದೊಡ್ಡದಾಯಿತು. ಈ ಮಧ್ಯೆ ಮುಂಬೈಗೆ ಹೋಗಿ ಒಂದಿಷ್ಟು ಕೆಲಸ ಮಾಡಿದೆ. ಗಾಯನದಲ್ಲಿ ತೊಡಗಿಕೊಂಡೆ. ಅಷ್ಟರಲ್ಲಿ ನಟನೆಯ ಒಲವು ಕಡಿಮೆ ಆಗಿತ್ತು. ನಿಜ ಹೇಳಬೇಕೆಂದರೆ, ನಾನೇನು ಅಷ್ಟು ಮಿಸ್‌ ಮಾಡಿಕೊಳ್ಳುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಒಂದಿಷ್ಟು ವಿಭಿನ್ನ ಕಾನ್ಸೆಪ್ಟ್ನ ಸಿನಿಮಾಗಳು ಬರುತ್ತಿವೆ. “ತಿಥಿ’, “ರಂಗಿತರಂಗ’, “ಶುದ್ಧಿ’, “ಕಿರಿಕ್‌ ಪಾರ್ಟಿ’ ಚಿತ್ರಗಳನ್ನು ಜನ ಮೆಚ್ಚುವುದರ ಜೊತೆಗೆ, ದೊಡ್ಡ ಹಿಟ್‌ ಸಹ ಹಾಗಿದ್ದವು.

ಇಮೇಜ್‌ ಇಲ್ಲದ ಹೀರೋಗಳು, ನಿರ್ದೇಶಕರು ಸಹ ಕ್ಲಿಕ್‌ ಆಗುತ್ತಿವೆ. ಇಂತಹ ಸಂದರ್ಭದಲ್ಲಿ ನಾನು ಇರಬೇಕು ಎಂದನಿಸಿತು. ಆದರೆ, ನಾನು ಯಾರನ್ನು ಕೇಳುವುದಕ್ಕೆ ಹೋಗಿರಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಅಷ್ಟರಲ್ಲಿ ಪ್ರದೀಪ್‌ ಬಂದು ವೆಬ್‌ ಸೀರೀಸ್‌ ಬಗ್ಗೆ ಹೇಳಿದರು. ನಿಜ ಹೇಳಬೇಕೆಂದರೆ, ನನಗೆ ವೆಬ್‌ ಸರಣಿ ಬಗ್ಗೆ ಗೊತ್ತಿರಲಿಲ್ಲ. ಅವರು ವಿವರಿಸಿದಾಗ, ಯಾಕೆ ಒಂದು ಟ್ರೈ ಮಾಡಬಾರದು ಎಂದನಿಸಿತು. ಜೊತೆಗೆ ನಾನು ಬಯಸುತ್ತಿದ್ದ ಪಾತ್ರಗಳು ಸಹ ಸಿಕ್ಕಿತ್ತು. ಹಾಗಾಗಿ ವಾಪಸ್ಸು ಬಂದೆ’ ಎನ್ನುತ್ತಾರೆ ಸುನೀಲ್‌.

ಕಳಪೆ ಕಥೆಯಲ್ಲಿ ಹೀರೋ ಆಗುವುದಕ್ಕಿಂತ, ಒಳ್ಳೆಯ ಕಥೆಯಲ್ಲಿ ಸಣ್ಣ ಪಾತ್ರವಾದರೂ ಸರಿ ಎನ್ನುತ್ತಾರೆ ಸುನೀಲ್‌. “ನನಗೆ ಅವಕಾಶ ಬರಲಿಲ್ಲ ಎಂದಲ್ಲ. ಬಂದಿದ್ದರಲ್ಲಿ ಆಸಕ್ತಿ ಮೂಡಿಸಿದ ಕಥೆಗಳು ಬಹಳ ಕಡಿಮೆ ಎಂದರೆ ತಪ್ಪಿಲ್ಲ. ಹಾಗಾಗಿ ಸುಮ್ಮನಿದ್ದೆ. ನನ್ನ ಪ್ರಕಾರ, ಕಳಪೆ ಕಥೆಯಲ್ಲಿ ಹೀರೋ ಆಗುವುದಕ್ಕಿಂತ, ಒಳ್ಳೆಯ ಕಥೆಯಲ್ಲಿ ಸಣ್ಣ ಪಾತ್ರವಾದರೂ ಮಾಡುವುದಕ್ಕೆ ನಾನು ತಯಾರು. ಹಾಗಾಗಿ ಒಳ್ಳೆಯ ಕಥೆ ಬೇಕು ನನಗೆ’ ಎನ್ನುತ್ತಾರೆ ಸುನೀಲ್‌.

ಟಾಪ್ ನ್ಯೂಸ್

1-wwewqewq

Delhi;ಕಾಂಗ್ರೆಸ್ ನೊಂದಿಗೆ ಮೈತ್ರಿ?: 2 ರಾಜ್ಯಗಳ ಫಲಿತಾಂಶದ ಬಳಿಕ ಆಪ್ ಹೇಳಿದ್ದೇನು?

Haryana: ಇಬ್ಬರು ಪಕ್ಷೇತರ ಶಾಸಕರು ಸೇರ್ಪಡೆ… ಬಿಜೆಪಿ ಸಂಖ್ಯಾ ಬಲ 50ಕ್ಕೆ ಏರಿಕೆ

Haryana: ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರ್ಪಡೆ… ಸಂಖ್ಯಾ ಬಲ 50ಕ್ಕೆ ಏರಿಕೆ

Shivamogga: ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಹಿತ ಕೊಚ್ಚಿ ಹೋದ ವ್ಯಕ್ತಿ

Shivamogga: ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಹಿತ ಕೊಚ್ಚಿ ಹೋದ ವ್ಯಕ್ತಿ

Chandan Shetty: ʼಸಲಗʼ ನಟಿ ಸಂಜನಾ ಜತೆ ಚಂದನ್‌ 2ನೇ ಮದುವೆ?‌ ರ್‍ಯಾಪರ್ ಹೇಳಿದ್ದೇನು?

Chandan Shetty: ʼಸಲಗʼ ನಟಿ ಸಂಜನಾ ಜತೆ ಚಂದನ್‌ 2ನೇ ಮದುವೆ?‌ ರ್‍ಯಾಪರ್ ಹೇಳಿದ್ದೇನು?

1-kumb

Prayagraj: ಕುಂಭಮೇಳದಲ್ಲಿ ಮಳಿಗೆಗೆ ಸನಾತನೇತರರಿಗೆ ಅವಕಾಶ ಇಲ್ಲ: ಅಖಾರ ಪರಿಷತ್

PM Modi

Congress ಬೇಜವಾಬ್ದಾರಿ ಪಕ್ಷ, ದ್ವೇಷ ಹರಡುವ ಕಾರ್ಖಾನೆ : ಪ್ರಧಾನಿ ಮೋದಿ ಕಿಡಿ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

Watch Video: ಲಖೀಂಪುರ್‌ ನ ನಡುಬೀದಿಯಲ್ಲಿ ಬಿಜೆಪಿ ಶಾಸಕ ವರ್ಮಾಗೆ ಕಪಾಳಮೋಕ್ಷ, ರಂಪಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chandan Shetty: ʼಸಲಗʼ ನಟಿ ಸಂಜನಾ ಜತೆ ಚಂದನ್‌ 2ನೇ ಮದುವೆ?‌ ರ್‍ಯಾಪರ್ ಹೇಳಿದ್ದೇನು?

Chandan Shetty: ʼಸಲಗʼ ನಟಿ ಸಂಜನಾ ಜತೆ ಚಂದನ್‌ 2ನೇ ಮದುವೆ?‌ ರ್‍ಯಾಪರ್ ಹೇಳಿದ್ದೇನು?

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

Sanju Weds Geetha 2: ‘ಸಂಜು ವೆಡ್ಸ್‌ ಗೀತಾ-2’

Sanju Weds Geetha 2: ‘ಸಂಜು ವೆಡ್ಸ್‌ ಗೀತಾ-2’

12

Bhuvanam Gaganam Movie: ಹೃದಯವೇ ಚೂರು ನಿಲ್ಲು…

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

Dhruva Sarja: ಮಾರ್ಟಿನ್‌ ನನ್ನ ಕೆರಿಯರ್‌ನ ಬೆಸ್ಟ್‌  ಆ್ಯಕ್ಷನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-wwewqewq

Delhi;ಕಾಂಗ್ರೆಸ್ ನೊಂದಿಗೆ ಮೈತ್ರಿ?: 2 ರಾಜ್ಯಗಳ ಫಲಿತಾಂಶದ ಬಳಿಕ ಆಪ್ ಹೇಳಿದ್ದೇನು?

Haryana: ಇಬ್ಬರು ಪಕ್ಷೇತರ ಶಾಸಕರು ಸೇರ್ಪಡೆ… ಬಿಜೆಪಿ ಸಂಖ್ಯಾ ಬಲ 50ಕ್ಕೆ ಏರಿಕೆ

Haryana: ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರ್ಪಡೆ… ಸಂಖ್ಯಾ ಬಲ 50ಕ್ಕೆ ಏರಿಕೆ

Geethanjali Silks ಉಡುಪಿ ಪುರುಷರ ಬಟ್ಟೆಗಳ ವಿಶಾಲ ವಿಭಾಗ ಉದ್ಘಾಟನೆ

Geethanjali Silks ಉಡುಪಿ ಪುರುಷರ ಬಟ್ಟೆಗಳ ವಿಶಾಲ ವಿಭಾಗ ಉದ್ಘಾಟನೆ

10-sirsi

Sirsi ವಿಜ್ಞಾನ ಪ್ರಶ್ನೆ ಪತ್ರಿಕೆಯ ರಚನೆಯಲ್ಲಿ ಸೂಕ್ತ ಬದಲಾವಣೆಗೆ ಮನವಿ

Shivamogga: ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಹಿತ ಕೊಚ್ಚಿ ಹೋದ ವ್ಯಕ್ತಿ

Shivamogga: ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಹಿತ ಕೊಚ್ಚಿ ಹೋದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.