ಮಹಿಳೆಯರ ಕಣ್ಣೀರು ಒರೆಸಲು ಉಜ್ವಲ ಯೋಜನೆ ಸಹಕಾರಿ
Team Udayavani, Aug 2, 2017, 2:59 PM IST
ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರು ಹಮ್ಮಿಕೊಳ್ಳುತ್ತಿರುವ ಪ್ರತಿ ಯೋಜನೆಗಳು ಸುವರ್ಣಾಕ್ಷರದಲ್ಲಿ ಬರೆದಿಡುವಂತ ಯೋಜನೆಗಳಾಗಿವೆ ಎಂದು ರಮೇಶ ಭೂಸನೂರ ಹೇಳಿದರು.
ಮಂಗಳವಾರ ತಾಲೂಕಿನ ಗುಬ್ಬೇವಾಡ ಗ್ರಾಮದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅಯ್ಕೆ ಮಾಡಿದ ಫಲಾನುಭವಿಗಳಿಗೆ ಗ್ಯಾಸ್ ಒಲೆ, ಸಿಲಿಂಡರ್ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು. ದೇಶ ಹಳ್ಳಿಗಳಿಂದ ಕುಡಿದ ದೇಶವಾಗಿದೆ. ಸಾಕಷ್ಟು ಹಳ್ಳಿಗಳು ಹಿಂದುಳಿದಿವೆ. ಆರ್ಥಿಕತೆ ಕೊರತೆಯಿಂದ ಮಹಿಳೆಯರು ಇನ್ನು ಸೌದೆ ಬಳಸಿ ಅಡುಗೆ ಮಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಮರಳಿ ಬರುವ ಸಂದರ್ಭದಲ್ಲಿ ಕಟ್ಟಿಗೆ ಆರಿಸಿ ತಂದು ಅಡುಗೆ ಮಾಡುವ ಕುಟುಂಬಗಳು ಸಾಕಷ್ಟಿವೆ. ಅಂತಹ ಕುಟುಂಬದ ಮಹಿಳೆಯರ ಸ್ಥಿತಿ ಅರಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಡು ಬಡವ ಕುಟುಂಬದ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಗ್ಯಾಸ್ ಒಲೆ ಮತ್ತು ಸಿಲಿಂಡರ್ ನೀಡಲು ಮುಂದಾಗಿದ್ದಾರೆ ಎಂದರು.
ದೇಶದಲ್ಲಿ ಸೌದೆ ಬಳಸಿ ಒಲೆಯ ಮೇಲೆ ಅಡುಗೆ ಮಾಡುವ ಸಂದರ್ಭದಲ್ಲಿ ಹೊಗೆಯಿಂದ ಕಣ್ಣಿರಿಡುವ ಗ್ರಾಮೀಣ ಮಹಿಳೆಯರ ಕಣ್ಣಿರು ಒರೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಯೋಜನೆ ಕೊಡಮಾಡಿದ್ದಾರೆ. 2019ರೊಳಗಾಗಿ ದೇಶದ 5 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಎಲ್‌ಪಿಸಿ ಗ್ಯಾಸ್ ಮತ್ತು ಸಿಲಿಂಡರ್ ನೀಡಲಾಗುವುದು ಎಂದರು.
ಬಿಜೆಪಿ ಯುವ ಧುರೀಣ ಸಂತೋಷ ಪಾಟೀಲ ಡಂಬಳ ಮಾತನಾಡಿ, ಪ್ರಧಾನಮಂತ್ರಿ ಉಜ್ವಲ ಯೋಜನೆ ಬಡ ಹೆಣ್ಣು ಮಕ್ಕಳ ಕಣ್ಣಿರು ಒರೆಸುವ ಮತ್ತು ಆರೋಗ್ಯ ವೃದ್ಧಿ ಮಾಡುವ ಯೋಜನೆಯಾಗಿದೆ. ಈ ಯೋಜನೆ ಬಡಕುಟುಂಬದ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ ಎಂದರು. ಪ್ರಧಾನಮಂತ್ರಿ ಉಜ್ವಲ ಯೋಜನೆ ಮೊದಲ ಹಂತದಲ್ಲಿ 5 ಕೋಟಿ ಫಲಾನುಭವಿ ಕುಟುಂಬಗಳಿಗೆ ಎಲ್‌ಪಿಜಿ ಗ್ಯಾಸ್ ಒಲೆ ಮತ್ತು ಸಿಲಿಂಡರ್ ನೀಡಿದ ನಂತರ ಎರಡನೇ ಹಂತದಲ್ಲಿ 5 ಕೋಟಿ ಫಲಾನುಭವಿ ಕುಟುಂಬಗಳಿಗೆ ಒಟ್ಟು
ದೇಶದ 10 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ನೀಡುವ ಗುರಿ ಹೊಂದಿದೆ. ಇದರಿಂದ ದೇಶದ ಎಲ್ಲ ನಾಗರಿಕರಿಗೂ ಎಲ್‌ಪಿಜಿ ಸಂಪರ್ಕ ಸಿಕ್ಕಂತಾಗುತ್ತದೆ ಎಂದರು.
ಮುತ್ತು ಹರನಾಳ, ಶಿವರಾಮ ಇಜೇರಿ, ರಾಜು ಅಡವಿ, ರಾಜು ಮದರಖಾನಿ, ಮುತ್ತು ಪಾಟೀಲ, ಮಂಜು ನಾಯೊಡಿ, ಸಿದ್ದು ಮೇಲಿನಮನಿ, ಬಸವರಾಜ ಮಂಗಲಗಿ, ಮಂಜುನಾಥ ನಾಯೊಡಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
MUST WATCH
ಹೊಸ ಸೇರ್ಪಡೆ
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.