ಮುದ್ದೇಬಿಹಾಳ: ರಸ್ತೆ ಅಪಘಾತದಲ್ಲಿ ಮಾಜಿ ಯೋಧ ಸಾವು
Team Udayavani, Aug 2, 2017, 3:03 PM IST
ಮುದ್ದೇಬಿಹಾಳ: ಎರಡು ದ್ವಿಚಕ್ರವಾಹಗಳ ನಡುವೆ ಸಂಭವಿಸಿದ ಮುಖಾಮುಖೀ ಡಿಕ್ಕಿಯಲ್ಲಿ ಒಂದು ಬೈಕ್‌ನಲ್ಲಿ ಬರುತ್ತಿದ್ದ ಮಾಜಿ ಯೋಧನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಯುವತಿಯರು ಹಾಗೂ ವ್ಯಕ್ತಿಯೊಬ್ಬನ
ಸ್ಥಿತಿ ಚಿಂತಾಜನಕವಾಗಿದೆ.
ಬಳವಾಟ ಗ್ರಾಮದ ಚಂದ್ರಶೇಖರ ಕೊಂಡಗೂಳಿ (45) ಮೃತ ಯೋಧ. ವನಹಳ್ಳಿ ಗ್ರಾಮದ ಬಸವರಾಜ ಹೊಸಮನಿ, ಗಿರಿಜಾ ಹೊಸಮನಿ ಮತ್ತು ಯಲ್ಲಮ್ಮ ಮೇಟಿ ಗಂಭೀರ ಗಾಯಗೊಂಡವರು. ಮೂವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಳಿದುಬಂದಿದೆ.
ಢವಳಗಿ ಗ್ರಾಮದಿಂಂದ ಮುದ್ದೇಬಿಹಾಳ ಪಟ್ಟಣ ಕಡೆಗೆ ಚಂದ್ರಶೇಖರ ಆಗಮಿಸುತ್ತಿದ್ದರು. ಅದೇ ರಸ್ತೆಯಲ್ಲಿ ಮುದ್ದೇಬಿಹಾಳದಿಂದ ಢವಳಗಿ ಕಡೆಗೆ ಬಸವರಾಜ ಇಬ್ಬರು ಯುವತಿಯರ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದನು. ನಂತರ ಬಸರಕೋಡ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಎರಡೂ ಬೈಕ್
ಗಳ ನಡುವೆ ಮುಖಾಮುಖೀ ಡಿಕ್ಕಿ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಮಾನವೀಯತೆ: ಘಟನೆ ವೇಳೆ ಇದೇ ಮಾರ್ಗದಲ್ಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆಗಮಿಸುತ್ತಿದ್ದರು.ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಸರ್ಕಾರಿ ಆಸ್ಪತ್ರೆಯ ಕರ್ತವ್ಯನಿರತ ವೈದ್ಯ ಡಾ| ಸಂಗಮೇಶ ಪಟ್ಟಣದ ಜೊತೆ ಚರ್ಚಿಸಿದರು. ಗಾಯಾಳು ಯುವತಿಯರ ಬಳಿ
ತೆರಳಿ ಎದೆಗುಂದದಂತೆ ಧೈರ್ಯ ತುಂಬಿದರು. ಬಾಗಲಕೋಟೆ ಜಿಲ್ಲೆಯ ಕೆರೂಡಿ ಆಸ್ಪತ್ರೆ ವೈದ್ಯರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ನಡಹಳ್ಳಿ ಬಸವರಾಜ ಹಾಗೂ ಇಬ್ಬರು ಮಹಿಳೆಯರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಚಿಕಿತ್ಸೆಗೆ ತಗಲುವ ಎಲ್ಲ ವೆಚ್ಚವನ್ನು ನೀಡಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
MUST WATCH
ಹೊಸ ಸೇರ್ಪಡೆ
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
ಪಾರ್ಟಿಯಲ್ಲಿ ಯುವತಿಯ ಮೇಲೆ ಅತ್ಯಾ*ಚಾರ: 10 ವರ್ಷ ಕಠಿನ ಕಾರಾಗೃಹ; 10 ಸಾವಿರ ರೂ. ದಂಡ
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.