2018ರ ಜನವರಿಯಲ್ಲಿ ಸಂಗೀತ ರಥಯಾತ್ರೆ: ಮುದ್ದುಕೃಷ್ಣ
Team Udayavani, Aug 3, 2017, 6:35 AM IST
ಹೊಸಂಗಡ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸದಿಂದ 2018ರ ಜನವರಿ ತಿಂಗಳಲ್ಲಿ “ಸಂಗೀತ ರಥ ಯಾತ್ರೆ’ ಹೊರಡಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಹದಿನೆಂಟು ವರ್ಷಗಳ ಅನಂತರ ಮತ್ತೂಮ್ಮೆ ಸಂಗೀತ ರಥದ ಮುಖಾಂತರ ಕಾಸರಗೋಡು ಕನ್ನಡಿಗರ ಸಾಂಸ್ಕೃತಿಕ ಮನಸ್ಸನ್ನು ಮತ್ತಷ್ಟು ಗಟ್ಟಿಯಾಗಿಸುವ ಪ್ರಯತ್ನ ಮಾಡಲಾಗುವುದೆಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಗೌರವಾ ಧ್ಯಕ್ಷ ವೈ.ಕೆ. ಮುದ್ದುಕೃಷ್ಣ ತಿಳಿಸಿದರು.
ಅವರು ಕಾಸರಗೋಡಿನ ಸಾಹಿತ್ಯಿಕ- ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ, ಗೋವಿಂದ ಪೈ ಸ್ಮಾರಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಏರ್ಪಡಿಸಿದ “ಶ್ರಾವಣ ಕುಶಲೋಪರಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಲಾವಿದರು ಹಾಗೂ ಸಾಹಿತಿ ಗಳು ಕಾಸರಗೋಡಿಗೆ ಆಗಮಿಸಿ ಪರಸ್ಪರ ಚಟುವಟಿಕೆಗಳನ್ನು ಹಂಚಿಕೊಳ್ಳುವ ಮುಖಾಂತರ ಹತ್ತಿರವಾಗುತ್ತಿರುವುದು ಖುಷಿ ತಂದಿದೆ. ಈಗಿನ ಕಾಲಘಟ್ಟದಲ್ಲಿ ಇದರ ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ “ರಂಗಚಿನ್ನಾರಿ’ಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಅಂದರು. ಕೇರಳ ಸರಕಾರ ಕನ್ನಡಿಗರ ಮೇಲೆ ಮಲಯಾಳ ಭಾಷೆಯನ್ನು ಹೇರುತ್ತಿರುವುದನ್ನು ಅವರು ಕಠಿನ ಭಾಷೆಯಲ್ಲಿ ವಿರೋಧಿಸಿದರು.
ಕಾರ್ಯಕ್ರಮವನ್ನು ಶ್ರೀಮತ್ ಅನಂತೇಶ್ವರ ದೇವಸ್ಥಾನ ಆಡಳಿತ ಮೊಕ್ತೇ ಸರರೂ ಖ್ಯಾತ ವೈದ್ಯರೂ ಆಗಿರುವ ಡಾ| ಅನಂತ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ನಾಟಕಕಾರ ಡಾ| ನಾ. ದಾಮೋದರ ಶೆಟ್ಟಿ ಅವರು ಅತಿಥಿಯಾಗಿ ಭಾಗವಹಿಸಿ ಸಾಹಿತ್ಯದ ಮನಸ್ಸುಗಳು ಹತ್ತಿರವಾಗುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ ಉತ್ತರ ಕನ್ನಡದ ಕಾಳೀ ನದೀ ತೀರದಿಂದ ಕಾಸರಗೋಡು ಚಂದ್ರಗಿರಿ ನದಿ ತನಕ ಎಂಬ ಪರಿಕಲ್ಪನೆಯೇ ವಿಶಿಷ್ಟ ರೀತಿಯದ್ದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್‌ನ ಜತೆ ಕಾರ್ಯದರ್ಶಿ ಎಂ.ಜೆ. ಕಿಣಿ ಮಾತನಾಡಿ “ಗಿಳಿವಿಂಡು’ ಸ್ಮಾರಕದಲ್ಲಿ ಪ್ರತೀ ತಿಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆಯಲ್ಲದೆ, ಮತ್ತಷ್ಟು ಸಾಹಿತ್ತಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಎಲ್ಲರ ಸಹಕಾರ ಕೋರುತ್ತಿದ್ದೇವೆ ಎಂದರು.
ಖ್ಯಾತ ವೈದ್ಯ ಡಾ| ರಮಾನಂದ ಬನಾರಿ, ಪಂಚಾಯತ್ ವಾರ್ಡ್ ಸದಸ್ಯೆ ಸುಪ್ರಿಯಾ ಪೈ, ಬಿ.ವಿ. ಕಕ್ಕಿಲ್ಲಾಯ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಸತ್ಯನಾರಾಯಣ ಕೆ., ಕಾಸರಗೋಡು ಚಿನ್ನಾ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಆರ್. ಜಯಾನಂದ ಸ್ವಾಗತಿಸಿದರು. ಖ್ಯಾತ ಗಾಯಕಿ ಪ್ರಭಾ ನಾಯಕ್ ತಂಡದವರಿಂದ ಪ್ರಾರ್ಥನೆ ಹಾಡಲಾಯಿತು.
ಪ್ರಖ್ಯಾತ ಸುಗಮ ಸಂಗೀತ ಗಾಯಕರಾದ ವೈ.ಕೆ.ಮುದ್ದುಕೃಷ್ಣ ಸೀಮಾ ರಾಯ್ಕರ್, ಕಿಶೋರ್ ಪೆರ್ಲ, ಉಮೇಶ್ ಮುಂಡಳ್ಳಿ, ಪೃಥ್ವೀ ನಾಯಕ್, ಪ್ರಜ್ಞಾ ನಾಯಕ್, ಶ್ವೇತಾ ಪೈ, ಪ್ರಭಾ ನಾಯಕ್ ಮುಂತಾದವರು ಭಾವ, ಭಕ್ತಿ, ಜಾನಪದ ಗೀತೆಗಳನ್ನು ಹಾಡಿದರು.
ಪ್ರಾಸ್ತಾವಿಕ ಮಾತನಾಡಿದ ರಂಗ ಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ದಿನಗಳಲ್ಲಿ ರಂಗಚಿನ್ನಾರಿಯು ಮಂಜೇಶ್ವರ ತಾಲೂಕಿನ ವಿವಿಧ ಹಳ್ಳಿ ಪ್ರದೇಶಗಳಲ್ಲಿ ಕಾರ್ಯ ಕ್ರಮಗಳನ್ನು ಏರ್ಪಡಿಸುವ ಮಾಹಿತಿ ಯನ್ನು ನೀಡಿ, ರಂಗಚಿನ್ನಾರಿಯ ಚಟು ವಟಿಕೆಗಳನ್ನು ಹೇಳಿದರು. ಗೋವಿಂದ ಪೈ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ| ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು. ಶ್ರೀಮದ್ ಅನಂತೇಶ್ವರ ದೇವಸ್ಥಾನದ ವತಿಯಿಂದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಶಂಕರ ಪಿ. ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.