ವಿಸ್ತರಿತ ವ್ಯಾಪ್ತಿಯೊಳಗೆ ಸುಳ್ಯದ ಎರಡು ಗ್ರಾಮಗಳ ಕಂದಾಯ ಭೂಮಿ?
Team Udayavani, Aug 3, 2017, 6:20 AM IST
ಸುಳ್ಯ : ಕಸ್ತೂರಿ ರಂಗನ್ ವರದಿ ಜಾರಿ ಭೀತಿಯಿಂದ ತತ್ತರಿಸಿರುವ ಪಶ್ಚಿಮ ತಪ್ಪಲಿನ ಕೊಡಗು ಗಡಿಭಾಗದ ದ.ಕ. ಜಿಲ್ಲೆಗೆ ಒಳಪಟ್ಟ ಕಲ್ಮಕಾರು, ಬಾಳುಗೋಡು ಗ್ರಾಮದ ಕಂದಾಯ ಪ್ರದೇಶವು ಕೇಂದ್ರದ ವನ್ಯ ಜೀವಿಧಾಮ (ವೈಲ್ಡ್ ಲೈಪ್) ವಿಸ್ತರಿತ ವ್ಯಾಪ್ತಿಯೊಳಗೆ ಸೇರ್ಪಡೆಗೊಳ್ಳುವ ಸಂಗತಿ ಗ್ರಾಮಸ್ಥರಲ್ಲಿ ತಲ್ಲಣ ಸೃಷ್ಟಿಸಿದೆ.
ಕಂದಾಯ ಭೂಮಿ ಇದರ ವ್ಯಾಪ್ತಿಗೆ ಒಳಪಟ್ಟರೆ, ಅಲ್ಲಿ ಯೋಜನೆಯ ಉದ್ದೇಶಿತ ಚಟುವಟಿಕೆ ಅನುಷ್ಠಾನಗೊಂಡು ಜನರು ಗುಳೇ ಹೋಗಬೇಕಾದ ಅಪಾಯವಿದೆ. ವಾಣಿಜ್ಯ ಆಧಾರಿತ ಕಸುಬುಗಳಿಗೆ ನಿಷಿದ್ಧ ಇರುವುದರಿಂದ ಪರ್ಯಾಯ ದಾರಿ ಹುಡುಕಬೇಕಿದೆ.
ಕೊಡಗು ವ್ಯಾಪ್ತಿಗೆ ಸೇರಿದ ಪುಷ್ಪಗಿರಿ ವನ್ಯ ಧಾಮದೊಳಗಿನ ವನ್ಯ ಜೀವಿಧಾಮ ಗಡಿಯಿಂದ 1.8 ಕಿ.ಮೀ. ದೂರದ ವಿಸ್ತರಿತ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ವ್ಯಾಪ್ತಿಗೆ ಸೇರಿಸುವ ಕುರಿತು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಜೂ. 27ರಂದು ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ಕೊಡಗಿನ 5, ದ.ಕ. ಜಿಲ್ಲೆಯ 2 ಗ್ರಾಮಗಳು ಸೇರಿವೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆಯ ಅನ್ವಯ ರಾಜ್ಯ ಸರಕಾರ ಯೋಜನೆ ರೂಪಿಸಲಿದೆ.
ಎರಡು ವರ್ಷದ ಗಡು
ಮಾಸ್ಟರ್ ಪ್ಲ್ರಾನ್‌ನ್ನು ರಾಜ್ಯ ಸರಕಾರ ಎರಡು ವರ್ಷದೊಳಗೆ ರೂಪಿಸಬೇಕು. ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರಕಾರದ ಕಾನೂನು-ನಿಯಮ ಮೀರಬಾರದು. ಪರಿಸರ, ಅರಣ್ಯ, ವನ್ಯಜೀವಿ, ಕೃಷಿ, ಕಂದಾ ಯ, ನಗರಾಭಿವೃದ್ಧಿ, ಪ್ರವಾಸೋದ್ಯಮ ಲೊಕೋಪಯೋಗಿ, ಗ್ರಾಮೀಣಾಭಿವೃದ್ಧಿ ನೀರಾ ವರಿ ಪಂಚಾಯತ್‌ರಾಜ್ ಇಲಾಖೆಗಳು ಯೋಜನೆ ರೂಪಿಸುವುದರಲ್ಲಿ ಪಾಲ್ಗೊಳ್ಳಬೇಕಿದೆ.
ಇಲ್ಲಿ ಭೂ ಪರಿವರ್ತನೆಗೆ ಅವಕಾಶ ಇಲ್ಲ. ಕೃಷಿ, ತೋಟಗಾರಿಕೆ, ಪಾರ್ಕ್, ಮನೋ ರಂಜನೆಗೆ ಕಾದಿರಿಸಿದ ಸ್ಥಳವನ್ನು ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ರಾಜ್ಯ ಸರಕಾರದ ಪೂರ್ವ ಅನುಮತಿ ಪಡೆದು ರಸ್ತೆ ಅಗಲ, ಮಾಲಿನ್ಯ ರಹಿತ ಕೈಗಾರಿಕೆ, ಗುಡಿ ಕೈಗಾರಿಕೆ, ಪೌರ ಮೂಲ ಸೌಕರ್ಯಗಳಿಗೆ, ಪರಿಸರ ಪ್ರವಾಸೋದ್ಯಮ, ಹೋಂಸ್ಟೇಗಳಿಗೆ ಅವಕಾಶ ಕಲ್ಪಿಸಬಹುದು. ವನ್ಯಜೀವಿಧಾಮ ವ್ಯಾಪ್ತಿಗೆ ಸೇರುವ ಗ್ರಾಮದೊಳಗೆ, ಅಸಂಸ್ಕರಿತ ತ್ಯಾಜ್ಯಗಳನ್ನು ನೀರಿಗೆ ಬಿಡುವುದು.
ಸಣ್ಣ ಬೃಹತ್ ಖನಿಜಗಳ ಗಣಿಗಾರಿಕೆ, ಕ್ರಶರ್‌ಗಳು, ಮಾಲಿನ್ಯಕಾರಕ ಕೈಗಾರಿಕಾ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ, ಜಲವಿದ್ಯುತ್ ಉತ್ಪಾದನ ಘಟಕ, ಅಪಾಯಕಾರಿ ವಸ್ತುಗಳ ಸಂಸ್ಕರಣಾ ಘಟಕ ಸ್ಥಾಪನೆ, ಹೊಸದಾಗಿ ಘನತ್ಯಾಜ್ಯ ಸಂಸðರಣ ಘಟಕ ನಿರ್ಮಿಸುವುದು, ಕೈಗಾರಿಕೆ, ಆಸ್ಪತ್ರೆ, ಇತ್ಯಾದಿಗಳಿಂದ ಬರುವ ಘನತ್ಯಾಜ್ಯವನ್ನು ಸುಡುವ ಘಟಕ, ಬೃಹತ್ ಗಾತ್ರದ ಕೋಳಿ ಫಾರಂ, ಇಟ್ಟಿಗೆ ನಿರ್ಮಾಣ ಘಟಕ, ಮರದ ಮಿಲ್ ಮೊದಲಾದವುಗಳ ಸ್ಥಾಪನೆಗೆ ಅವಕಾಶ ಇಲ್ಲ.
ಕಂದಾಯ ವ್ಯಾಪ್ತಿಯ ಆತಂಕ
ವಿಸ್ತರಿತ ವ್ಯಾಪ್ತಿ ನಿರ್ಧರಿಸುವುದು ಹೇಗೆಂದರೆ ಕೊಡಗು ಅರಣ್ಯ ( ಪುಷ್ಪಧಾಮ)ದ ಗಡಿ ಭಾಗದಿಂದ 1.8 ಕಿ.ಮೀ ವ್ಯಾಪ್ತಿ ವನ್ಯಜೀವಿ ಧಾಮದೊಳಗೆ ಸೇರ್ಪಡೆಗೊಳಿಸುವುದು. ಈ ವಿಸ್ತರಿತ ವ್ಯಾಪ್ತಿ ದ.ಕ. ಗಡಿ ಭಾಗಕ್ಕೆ ತಾಗಿರುವ ಕಲ್ಮಕಾರು, ಬಾಳುಗೋಡು ಗ್ರಾಮದ ಕಂದಾಯ ಪ್ರದೇಶವನ್ನು ಒಳಗೊಂಡಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಯೋಜನೆಯ ವ್ಯಾಪ್ತಿಯಲ್ಲಿ ಜನವಸತಿ, ಕೃಷಿ ಭೂಮಿ ಇದೆಯೋ ಎಂಬ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.
ವಿಸ್ತರಣೆಯ ಉದ್ದೇಶ
ಸಾವಯವ ಕೃಷಿ, ಮಳೆ ನೀರು ಕೊಯ್ಲು, ಗುಡಿ ಕೈಗಾರಿಕೆ, ನವೀಕರಿಸಬಹುದಾದ ಇಂಧನಗಳ ಬಳಕೆ, ಕೃಷಿ ಅರಣ್ಯ ಪರಿಸರ ಸ್ನೇಹಿ ಸಾರಿಗೆ ಹಡಿಲು ಬಿದ್ದ ಭೂಮಿಯ ಪುನಾರುಜ್ಜೀವನಕ್ಕೆ ಉತ್ತೇಜನ ನೀಡಬೇಕು ಅನ್ನುವುದು ಯೋಜನೆಯ ಅಂಶ.
ಇನ್ನೊಂದು ಅಂಶವೆಂದರೆ, ವಲಯದ 1.ಕಿ.ಮೀ ವ್ಯಾಪ್ತಿಯೊಳಗೆ ರಾಜ್ಯ ಸರಕಾ ರದಿಂದ ಅನುಮತಿ ಇಲ್ಲದೆ ಸರಕಾರಿ ಅಥವಾ ಖಾಸಗಿ ಜಾಗದಲ್ಲಿ ಮರ ಕಡಿ ಯುವ ಹಾಗೂ ಟ್ಯಾಪಿಂಗ್ ಮಾಡು ವಂತಿಲ್ಲ.ಅರಣ್ಯ ಉತ್ಪನ್ನಗಳ ಸಂಗ್ರಹ, ವಿದ್ಯುತ್ ಮಾರ್ಗ ರಚನೆಯನ್ನು ನಿಯಮ ಅನುಸಾರ ನಿಯಂತ್ರಿಸಬೇಕು ಅನ್ನುತ್ತದೆ ಅಧಿಸೂಚನೆಯಲ್ಲಿನ ಅಂಶಗಳು.
ಯಾವ-ಯಾವ ಪ್ರದೇಶ
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಕುಮಾರಳ್ಳಿ, ಕೊತನಳ್ಳಿ, ಸರ್ಲಬ್ಬಿ, ಮಡಿಕೇರಿ ತಾಲೂಕಿನ ಹಮ್ಲಿಯಾಳ, ಕಾಲೂರು, ಗಾಳಿಬೀಡು ಮತ್ತು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಮತ್ತು ಬಾಳುಗೋಡು ಗ್ರಾಮಗಳು ಇಎಸ್‌ರkುಡ್ ವ್ಯಾಪ್ತಿಗೆ ಒಳ ಪಟ್ಟಿದೆ. ಸುಬ್ರಹ್ಮಣ್ಯ, ಕಿರಿಭಾಗ, ನಾಲ್ಕೂರು ಮೀಸಲು ಅರಣ್ಯದ ಕೆಲ ಭಾಗಗಳು, ಕೊಡಗು, ಹಾಸನ ಜಿಲ್ಲೆಯ ಬಿಸಿಲೆ ಮೊದಲಾದಿ ಪ್ರದೇಶಗಳನ್ನು ಇದರೊಳಗೆ ಸೇರಿಸಲಾಗಿದೆ.
ಜನವಸತಿಗೆ ಸಂಚಕಾರ
ವನ್ಯಜೀವಿಧಾಮ ವ್ಯಾಪ್ತಿಯ ಕಾಡಿನೊಳಗೆ ಈಗಾಗಲೇ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದೆ. ಅಲ್ಲಿ ಜನರಿಗೆ ಪ್ರವೇಶ ಇಲ್ಲ. ಹಾಗಾಗಿ ಈ ಯೋಜನೆಯನ್ನು ಕಂದಾಯ ಭೂಮಿಯ ವ್ಯಾಪ್ತಿಯೊಳಗೆ ವಿಸ್ತರಿಸಬಾರದು. ವಿಸ್ತರಿಸಿದರೆ ಜನರಿಗೆ ಬದುಕಲು ಸಾಧ್ಯವಿಲ್ಲ. ಅಧಿಸೂಚನೆಯಲ್ಲಿ ಕಲ್ಮಕಾರು ಹಾಗೂ ಬಾಳುಗೋಡು ವನ್ಯ ಜೀವಿಧಾಮ ವ್ಯಾಪ್ತಿಗೆ ಸೇರಿರುವ ಅಂಶ ಉಲ್ಲೇಖವಾಗಿದೆ. ಅದು ಕಂದಾಯ ಪ್ರದೇಶದ ವ್ಯಾಪ್ತಿಯೇ ಅನ್ನುವುದು ಸ್ಪಷ್ಟವಾಗಬೇಕಿದೆ.
– ಹಮೀದ್ ಇಟ್ನೂರು,
ಅಧ್ಯಕ್ಷರು, ರೈತ ಹಿತ ರಕ್ಷಣಾ ವೇದಿಕೆ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.