ಪುತ್ತೂರು2 ಪ್ರಕರಣ ಪತ್ತೆ:ಜಾಗ್ರತೆ ವಹಿಸಲು ಪಿಡಿಒಗಳಿಗೆ ತಾ.ಪಂ.ಸೂಚನೆ
Team Udayavani, Aug 3, 2017, 6:25 AM IST
ಯಂತ್ರ ಬಳಸಿ ಉದ್ಯೋಗ ಖಾತ್ರಿ ಯೋಜನೆ ದುರುಪಯೋಗ
ಪುತ್ತೂರು: ಉದ್ಯೋಗ ಖಾತ್ರಿ ಯೋಜನೆ ಯಡಿ ಜೇಸಿಬಿ ಮೂಲಕ ಕೆಲಸ ಮಾಡಿಸಿದ ಪ್ರಕರಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಅಡಿಕೆ ಮರಗಳನ್ನು ನಡೆಲು ಗುಂಡಿ ತೋಡುವುದಕ್ಕೂ ಯಂತ್ರಗಳನ್ನು ಬಳಸಿದ ಪ್ರಸಂಗಗಳು ನಡೆದಿವೆ. ಈ ಸಂಬಂಧ ಎರಡು ದೂರುಗಳು ತಾಲೂಕು ಪಂಚಾಯತ್‌ಗೆ ಬಂದಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ.ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಸಣ್ಣ-ಪುಟ್ಟ ಅವಕಾಶ ಸಿಕ್ಕರೂ. ಯಂತ್ರಗಳನ್ನು ಬಳ ಸಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬಂದಿತ್ತು. ರಾಜ್ಯದ ಕೆಲವೆಡೆ ಹಲವು ಪ್ರಕರಣ ಗಳೂ ನಡೆದಿದ್ದವು. ಈಗ ಅಂಥ ಪ್ರಕರಣಗಳು ಪುತ್ತೂರು ತಾಲೂಕಿನಲ್ಲೂ ನಡೆದಿವೆ.
ದೂರುಗಳ ಹಿನ್ನೆಲೆಯಲ್ಲಿ ತಾಲೂಕು ಪಂಚಾ ಯಿತ್ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ಕರೆದು ಕಟ್ಟು ನಿಟ್ಟಿನ ಸೂಚನೆ ನೀಡಿದೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆದವರ ಹೆಸ ರನ್ನು ದಾಖಲಿಸಿ, ಜೇಸಿಬಿ, ಹಿಟಾಚಿ ಯಂತ್ರದಲ್ಲಿ ಕೆಲಸ ಮಾಡಿಸುವಂತಿಲ್ಲ.
ಇಲ್ಲಿ ಮಾನವ ಶ್ರಮವೇ ಮುಖ್ಯ. ನಿಯಮ ಉಲ್ಲಂಘನೆ ಆಗದಂತೆ ಪಿಡಿಒ ಗಳು ಗಮನ ಹರಿಸಬೇಕು. ಈಗಾಗಲೇ ದೂರು ಬಂದಿದ್ದು, ಪುನರಾವರ್ತನೆಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಎಲ್ಲರಿಗೂ ಕನಿಷ್ಠ ಉದ್ಯೋಗದ ಖಾತ್ರಿ ಸಿಗಬೇಕೆಂಬ ಉದ್ದೇಶದಿಂದಲೇ ಈ ಯೋಜನೆಯನ್ನು 2005ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿತು. 2006ರಿಂದ ಅನುಷ್ಠಾನಕ್ಕೆ ಬಂದಿತ್ತು.
ಹದಿನೆಂಟು ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಯೋಜನೆಯಡಿ ಜಾಬ್ ಕಾರ್ಡ್ ಮಾಡಿಸಿಕೊಳ್ಳಬಹುದು. ಸಾರ್ವಜನಿಕ ಕೆಲಸ ಮಾತ್ರವಲ್ಲದೆ ತನ್ನ ಜಮೀನಿನಲ್ಲಿ ಮಾಡುವ ಕೆಲಸಗಳನ್ನೂ ಇಲ್ಲಿ ಮಾಡಿಸಿ ಕೊಳ್ಳಬಹುದು. ಕೆಲಸ ಮಾಡಿದ ದಾಖಲೆಯನ್ನು ನೀಡಿದ ಬಳಿಕ ಅದನ್ನು ಗ್ರಾಮ ಪಂಚಾಯತ್ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಇದಕ್ಕೆ ಸಲ್ಲುವ ಮೊತ್ತ ಕಾರ್ಡ್ ದಾರರ ಖಾತೆಗೆ ಜಮೆಯಾಗುತ್ತದೆ.
ಉಲ್ಲಂಘನೆ ಹೇಗೆ?
ಓರ್ವ ವ್ಯಕ್ತಿಯ ಹೆಸರಿನಲ್ಲಿ 20 ಸಾವಿರ ರೂ.ಗಳ ಕೆಲಸ ಮಾಡಿದ್ದರೆ, ಆ ಹಣ ನೇರವಾಗಿ ಆತನ ಖಾತೆಗೆ ಜಮೆ ಆಗುತ್ತದೆ. ಆದರೆ, ಜಾಬ್ ಕಾರ್ಡ್ ಹೊಂದಿರುವ ಖಾತಾದಾರನ ಒಪ್ಪಿಗೆ ಇಲ್ಲದೇ, ಯಂತ್ರದ ಮೂಲಕ ಮಾಡಿಸಿದ ಕೆಲಸದ ಹಣ ವನ್ನು ಖಾತೆಗೆ ಸ್ವೀಕರಿಸಲ ಸಾಧ್ಯವಿಲ್ಲ.
ಕಾರಣ ಕೆಲಸ ಮಾಡಿದ ದಿನದ ಹಾಜರಾತಿಯನ್ನು ಆಯಾ ವ್ಯಕ್ತಿಯೇ ದಾಖಲಿಸಬೇಕು. ಆದ್ದರಿಂದ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಬಳಸಿ, ಅವರ ಹಾಜರಾತಿ ತೋರಿಸಿ ಯಂತ್ರದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎನ್ನಲಾಗಿದೆ.
ಕಾಮಗಾರಿ ನಡೆಯುತ್ತಿರುವ ವೇಳೆ ಆಯಾ ಗ್ರಾ.ಪಂ. ಕಾರ್ಯದರ್ಶಿ ಅಥವಾ ಪಿಡಿಒ ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ಕಾಮಗಾರಿಯ ಫೋಟೋ ದಾಖಲೆ, ಜಿಪಿಎಸ್ ದಾಖಲೆ ನೀಡಲೇಬೇಕು. ಹೀಗಿದ್ದರೂ. ಉಲ್ಲಂಘನೆ ಆಗಿದೆ. ಗ್ರಾ.ಪಂ. ಸಿಬಂದಿ ಜತೆ ಹೊಂದಾಣಿಕೆ ಮಾಡಿಕೊಂಡು, ಇಂತಹ ಕಾರ್ಯಕ್ಕೆ ಕೈ ಹಾಕಲಾಗಿದೆ ಎಂಬುದು ಆರೋಪ.
ಕೆಲವೆಡೆ ಜೇಸಿಬಿ ಬಳಸಲಾಗಿದೆ
ಅಡಕೆ ಗಿಡಗಳಿಗೆ ಗುಂಡಿ ತೋಡಲೂ ಮಾನವ ಶ್ರಮವನ್ನೇ ಬಳಸಿಕೊಳ್ಳಬೇಕು. ಆದರೆ ಕೆಲವು ಕಡೆ ಜೆಸಿಬಿ ಬಳಸಿದ ಉದಾಹರಣೆ ಇದೆ. ಇಂತಹ ಪ್ರಕರಣಗಳು ಪುತ್ತೂರು ತಾಲೂಕಿನಲ್ಲಿ ಪತ್ತೆ ಹಚ್ಚಿದ್ದು, ಅವುಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಒಟ್ಟಿನಲ್ಲಿ ಇದು ನಿರುದ್ಯೋಗಿಗಳಿಗೆ ಕೆಲಸ ನೀಡಬೇಕೆಂಬ ಆಶಯದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ.
– ಜಗದೀಶ್ ಎಸ್. ಇಒ,
ಪುತ್ತೂರು ತಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.