“ಕರೆಂಟ್” ಅಕೌಂಟ್‌ಗೆ ಐಟಿ ಲಾಕ್
Team Udayavani, Aug 3, 2017, 6:10 AM IST
ಬೆಂಗಳೂರು: ಗುಜರಾತ್ ಶಾಸಕರಿಗೆ ಈಗಲ್‌ಟನ್ ರೆಸಾರ್ಟ್‌ನಲ್ಲಿ ಆತಿಥ್ಯ ನೀಡಿದ ಬೆನ್ನಲ್ಲೇ ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್, ಸಂಬಂಧಿ ವಿಧಾ® ಪರಿಷತ್ ಸದಸ್ಯ ರವಿ, ಮಾವ ತಿಮ್ಮಯ್ಯ ಸೇರಿ ಸ್ನೇಹಿತರ ನಿವಾಸ, ಕಚೇರಿ ಸೇರಿ 60 ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ದಾಳಿ ನಡೆಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ “ಶಾಕ್’ ನೀಡಿದೆ. ಮಂಗಳವಾರ ಬೆಳ್ಳಂಬೆಳಗ್ಗೆ ದೆಹಲಿ,ಗೋವಾ, ಬೆಂಗಳೂರಿನ 80 ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಮೂರು ಸೂಟ್‌ಕೇಸ್‌ನಷ್ಟು ದಾಖಲೆ ಹಾಗೂ ಸುಮಾರು 10 ಕೋಟಿ ರೂ. ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಗದು ಬಗ್ಗೆ ಐಟಿ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದರೂ, ಚಿನ್ನಾಭರ ಣದ ಬಗ್ಗೆ ಅಧಿಕೃತವಾಗಿ ಹೇಳಿಲ್ಲ.
ಬುಧವಾರ ಬೆಳಗ್ಗೆ ಗಾಲ್ಫ್ ಆಡುವ ನೆಪದಲ್ಲಿ ಈಗಲ್‌ಟನ್ ರೆಸಾರ್ಟ್‌ಗೆ ಪ್ರವೇಶಿಸಿದ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರಿಗೆ ಆಘಾತ ನೀಡಿದರು. ದಾಳಿ ನಂತರ ಡಿಕೆಶಿ ಹಾಗೂ ಅವರ ಆಪ್ತ ಕೆಪಿಸಿಸಿ ಕಾರ್ಯದರ್ಶಿ
ವಿನಯ್ ಕಾರ್ತಿಕ್ ಹಾಗೂ ಆಪ್ತರು ಹಾಗೂ ಸ್ನೇಹಿತರನ್ನು ಮಧ್ಯರಾತ್ರಿವರೆಗೂ ವಿಚಾರಣೆಗೊಳಪಡಿಸಲಾಗಿದೆ. ದಾಳಿ ವೇಳೆ ವಶಕ್ಕೆ ಪಡೆದ ದಾಖಲೆ, ಹಣ ಮತ್ತಿತರ ವಸ್ತುಗಳ ಬಗ್ಗೆ ಹೇಳಿಕೆ ಸಹ ಪಡೆದರು ಎಂದು ಹೇಳಲಾಗಿದೆ. ಈ ಮಧ್ಯೆ,ಹೆಚ್ಚಿನ ವಿಚಾರಣೆಗೆ ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆದೊಯ್ಯುವ ಸಾಧ್ಯತೆಗಳೂ ಇವೆ ಎಂದು
ಹೇಳಲಾಗಿದೆ.
ಬೆಳಗ್ಗೆಯಿಂದ ಭಾರಿ ಪ್ರಮಾಣದ ಹಣ ವಶಕ್ಕೆ ಪಡೆಯಲಾಗಿದೆ, ಗುಜರಾತ್ ಶಾಸಕರು ಇರುವ ಪ್ರತಿ ಕೊಠಡಿಗಳ ಮೇಲೂ ದಾಳಿ ನಡೆಸಲಾಗಿದೆ ಎಂಬ ಮಾಧ್ಯಮಗಳ ಸುದ್ದಿ ಹಿನ್ನೆಲೆಯಲ್ಲಿ ಹೇಳಿಕೆ ಹೊರಡಿಸಿದ ಆದಾಯ ತೆರಿಗೆ ಇಲಾಖೆ, ಕರ್ನಾಟಕದ ಸಚಿವರೊಬ್ಬರ ನಿವಾಸ, ಅವರ ಸಂಬಂಧಿಕರು, ಆಪ್ತರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ಗುಜರಾತ್ ಶಾಸಕರ ಕೊಠಡಿಗಳನ್ನು ಪ್ರವೇಶಿಸಿಲ್ಲ ಎಂದು ಹೇಳಿದೆ.
ದಾಖಲೆ ಹರಿದ ಡಿಕೆಶಿ: ಈಗಲ್ ಟನ್ ರೆಸಾರ್ಟ್‌ನಲ್ಲಿದ್ದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ. ಸುರೇಶ್, ಐಟಿ ಅಧಿಕಾರಿಗಳ ಆಗಮನ ವಾಗುತ್ತಿದ್ದಂತೆ, ಸ್ವಲ್ಪ ವಿಚಲಿತರಾದರೂ ಸಮಾಧಾನವಾಗಿಯೇ ಮಾತುಗಳನ್ನಾಡಿದ್ದಾರೆ. ಅಲ್ಲದೆ ಡಿಕೆಶಿ ತಮ್ಮ ಬಳಿಯಿದ್ದ ಕೆಲವು ದಾಖಲೆಗಳನ್ನು ಹರಿದಿದ್ದಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಹಣಕಾಸು ಸಚಿವ ಅರುಣ್
ಜೇಟಿÉ ಪ್ರಸ್ತಾಪಿಸಿದ್ದಾರೆ.
ಸಿಆರ್‌ಪಿಎಫ್ ನೆರವು: ಸಾಮಾನ್ಯವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಸ್ಥಳೀಯ ಪೊಲೀಸರ ಸಹಕಾರ ಪಡೆದು ಹೋಗು ತ್ತಾರೆ. ಆದರೆ, ಈ ದಾಳಿಗೆ ಸಿಆರ್μಎಫ್ ಯೋಧರ ನೆರವು ಪಡೆಯಲಾಗಿತು
ವದಂತಿ, ಡಿಕೆಶಿ ಗರಂ: ದಾಳಿ ಸಂದರ್ಭದಲ್ಲಿ ದೆಹಲಿಯ ನಿವಾಸದಲ್ಲಿ 11 ಕೋಟಿ ರೂ. ರೂ ದೊರೆತಿದೆ ಎಂದು ಕೆಲವು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಐಟಿ ಅಧಿಕಾರಿಗಳ ವಿಚಾರಣೆಯಲ್ಲಿದ್ದ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ದ್ದರಿಂದ ಕೆಲವೇ ಸಮಯದಲ್ಲಿ ಹಣ ವಶಕ್ಕೆ ಪಡೆದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿತು. ನಂತರ ಡಿ.ಕೆ.ಶಿವಕುಮಾರ್ ಅವರು ವಿಚಾರಣೆಗೆ ಸಹಕರಿಸಿ ಅಧಿಕಾರಿಗಳು ಕೇಳಿದ ಎಲ್ಲ ಮಾಹಿತಿ ನೀಡಿದರು.
ಅಂತೆ-ಕಂತೆಗಳ ಸಾಮ್ರಾಜ್ಯ: ಡಿ.ಕೆ.ಶಿವ ಕುಮಾರ್ ಕುಟುಂಬ ಹಾಗೂ ಅವರ ಆಪ್ತರು, ಸ್ನೇಹಿತರ ಮನೆ ಹಾಗೂ
ನಿವಾಸದ ಮೇಲಿನ ದಾಳಿ ಕುರಿತು ಇಡೀ ದಿನ ಅಂತೆ-ಕಂತೆಗಳದೇ ಸಾಮ್ರಾಜ್ಯವಾಗಿತ್ತು. ಅಲ್ಲಿ ಅಷ್ಟು ಹಣ ಮತ್ತು ಚಿನ್ನ ಪತ್ತೆಯಾಯಿತಂತೆ, ಇಲ್ಲಿ ಇಷ್ಟು ಕೋಟಿ ಸಿಕ್ಕಿತಂತೆ, ಐಟಿ ಅಧಿಕಾರಿಗಳು ಡಿಕೆಶಿ ಹಾಗೂ ಡಿ.ಕೆ.ಸುರೇಶ್ ಮೊಬೈಲ್ ಕಸಿದು ಕೊಂಡರಂತೆ, ಅದಕ್ಕೆ ಇಬ್ಬರೂ ಗರಂ ಆದರಂತೆ, ಐಟಿ ಅಧಿಕಾರಿಗಳ ವಿಚಾರಣೆಯಲ್ಲಿ ಸಾಕಷ್ಟು ಮಾಹಿತಿ ಸಿಕ್ಕಿದೆಯಂತೆ, ವಿದ್ಯುತ್ ಖರೀದಿ ಹಾಗೂ ಕಲ್ಲಿದ್ದಲು ಖರೀದಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರಂತೆ ಎಂಬಿತ್ಯಾದಿ ವದಂತಿಗಳು ಮಧ್ಯರಾತ್ರಿವರೆಗೂ ಹರಡುತ್ತಲೇ ಇದ್ದವು.
150 ಕಾರುಗಳ ಬಳಕೆ: ಈ ದಾಳಿಯ ಸಲುವಾಗಿಯೇ ಖಾಸಗಿ ಟ್ರಾವೆಲ್ಸ್‌ನಿಂದ ಐಟಿ ಅಧಿಕಾರಿಗಳು 150
ಕಾರುಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಸರ್ಕಾರಿ ಕಾರುಗಳಲ್ಲಿ ಬಂದರೆ ಅನುಮಾನ ಬರಬಹುದು ಎಂದು ಖಾಸಗಿ ವ್ಯಕ್ತಿಗಳ ಸೋಗಿನಲ್ಲಿ ಎಲ್ಲೆಡೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಡಿ.ಕೆ.ಸುರೇಶ್ ಉಸ್ತುವಾರಿ: ಡಿ.ಕೆ.ಶಿವಕುಮಾರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದುಕೊಂಡು
ಬಂದಿದ್ದರಿಂದ ಈಗಲ್‌ಟನ್ ರೆಸಾರ್ಟ್ ನಲ್ಲಿರುವ ಗುಜರಾತ್ ಶಾಸಕರ ಆತಿಥ್ಯದ ಹೊಣೆಗಾರಿಕೆ ಸಂಸದ ಡಿ.ಕೆ.
ಸುರೇಶ್ ವಹಿಸಿಕೊಂಡಿದ್ದಾರೆ. ಐಟಿ ಅಧಿಕಾರಿಗಳ ದಾಳಿ ನಂತರವೂ ಸುರೇಶ್ ಅವರು ಈಗಲ್‌ಟನ್ ರೆಸಾಟ್ìನಲ್ಲೇ ಉಳಿದರು.
ಕುಂದಿದ ಕಳೆ, ಕೈ ಬೀಸಿದ ಡಿಕೆಶಿ: ಈಗಲ್‌ಟನ್ ರೆಸಾರ್ಟ್‌ನಿಂದ ಸದಾಶಿನಗರದ ಕೆಂಕೇರಿ ನಿವಾಸಕ್ಕೆ ವಿಚಾರಣೆಗಾಗಿ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಕರೆತಂದಾಗ, ಮನೆಯ ಎದುರು ಜಮಾಯಿಸಿದ್ದ ಕಾರ್ಯಕರ್ತರತ್ತ
ಕೈ ಬೀಸಿದ ಡಿ.ಕೆ.ಶಿವಕುಮಾರ್, ಏನೂ ಆಗಲ್ಲ ಎಂದು ಸಮಾಧಾನದ ಭಾವ ಪ್ರದರ್ಶಿಸಿದರು. ಆದರೆ, ದಾಳಿಯಿಂದ
ಅವರ ಮುಖದಲ್ಲಿ ದುಗುಡ ಇದ್ದದ್ದು ಕಂಡುಬಂದಿತು. ಅವರ ಮುಖದಲ್ಲಿ ಎಂದಿನ ಕಳೆ ಇರಲಿಲ್ಲ.
ಕಾಂಗ್ರೆಸ್ ಭಾರಿ ಆಕ್ರೋಶ: ದಾಳಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆಯಲ್ಲಿ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಇದೊಂದು ಬಿಜೆಪಿ ಷಡ್ಯಂತ್ರ ಎಂದಿದ್ದಾರೆ. ಮತ್ತೂಂದೆಡೆ ಖುದ್ದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಎದೆಗುಂದದೆ
ಧೈರ್ಯವಾಗಿ ಎದುರಿಸುವಂತೆ ಸೂಚಿಸಿದ್ದಾರೆ. ಗುಜರಾತ್‌ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಹಮದ್ ಪಟೇಲ್ ಸಹ ಟÌàಟ್ ಮಾಡಿ, ಇದೊಂದು ಬಿಜೆಪಿ ದ್ವೇಷ ರಾಜಕಾರಣದ ಕ್ರಮ ಎಂದು ಕಿಡಿ ಕಾರಿದರು. ಕೇವಲ
ಒಂದೇ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಇಷ್ಟೆಲ್ಲಾ ಕಸರತ್ತುಗಳು ನಡೆಯುತ್ತಿವೆ ಎಂದು ಅಹ್ಮದ್ ಪಟೇಲ್ ವ್ಯಂಗ್ಯವಾಡಿದ್ದಾರೆ.
ಅಲ್ಲದೆ ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಪರ ಪಕ್ಷ ಗಟ್ಟಿಯಾಗಿ ನಿಲ್ಲಬೇಕು ಎಂಬ ಸಂದೇಶವನ್ನೂ ಹೈಕಮಾಂಡ್
ನಿಂದಲೇ ರವಾನಿಸಲಾಯಿತು.
ವ್ಯವಸ್ಥಿತ ಕಾರ್ಯಾಚರಣೆ: ಡಿ.ಕೆ.ಶಿವಕುಮಾರ್ ಅವರ ಕುಟುಂಬ, ಆಪ್ತರು, ಸ್ನೇಹಿತರ ನಿವಾಸ ಹಾಗೂ ಕಚೇರಿಗಳ
ಮೇಲೆ ವ್ಯವಸ್ಥಿತ ಕಾರ್ಯಾಚರಣೆ ರೂಪದಲ್ಲಿ ದಾಳಿ ನಡೆದಿದೆ. ಕಳೆದ 48 ಗಂಟೆಗಳಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿ
ಮಂಗಳವಾರ ಮಧ್ಯರಾತ್ರಿಯೇ ಈಗಲ್‌ಟನ್ ರೆಸಾರ್ಟ್, ಕನಕಪುರದ ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಸದಾಶಿನಗರದ
ನಿವಾಸಗಳ ಮುಂದೆ ನಿಗಾ ಇರಿಸಿ ಚಲನವಲನ ಗಮನಿಸಲಾಗಿದೆ.
ಮಧ್ಯರಾತ್ರಿವರೆಗೂ ವಿಚಾರಣೆ: ಈಗಲ್‌ಟನ್ ರೆಸಾರ್ಟ್‌ನಿಂದ ಬೆಳಿಗ್ಗೆ 11 ಗಂಟೆ ವೇಳೆಗೆ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿನಗರ ನಿವಾಸಕ್ಕೆ ಕರೆತರಲಾಯಿತು. ಅಲ್ಲಿ ವಿಚಾರಣೆ ಪ್ರಾರಂಭಿಸಿದ ಅಧಿಕಾರಿಗಳು ಮಧ್ಯ ರಾತ್ರಿವರೆಗೂ ಮಾಹಿತಿ ಸಂಗ್ರಹಿಸಿದರು. ಸದಾಶಿನಗರದಲ್ಲಿದ್ದ ಎಲ್ಲ ಬೀರುವಿನ ಲಾಕರ್‌ಗಳನ್ನು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲೇ ತೆರೆಯಲಾಯಿತು. ಲಾಕರ್‌ಗಳಲ್ಲಿ ಚಿನ್ನಾಭರಣ, ದಾಖಲೆ ಪತ್ತೆಯಾದವು. ಪತ್ನಿ ಉಷಾ ಹಾಗೂ ಮನೆಯಲ್ಲಿದ್ದ ಕೆಲಸದವರ ಮೊಬೈಲ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು ಎಂದು ಹೇಳಲಾಗಿದೆ.
ಸಿಎಂ ಕೆಂಡಾಮಂಡಲ:
ಐಟಿ ದಾಳಿ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಸಿಎಂ ಸಿದ್ದರಾಮಯ್ಯ ನೇರವಾಗಿಯೇ ಆರೋಪ ಮಾಡಿದ್ದಾರೆ. ಸರ್ಕಾರದ ವಿರುದಟಛಿ ಮಾತನಾಡುವವರನ್ನೇ ಗುರಿಯಾಗಿಸಿ ಕೊಂಡು ಇಂಥ ದಾಳಿಗಳನ್ನು
ಬ್ರಹ್ಮಾಸOಉದ ರೀತಿ ಉಪಯೋಗಿಸಲಾಗುತ್ತಿದೆ ಎಂದು ದೂರಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇರುವುದು ಜಗಜ್ಜಾಹೀರಾಗಿದೆ ಎಂದು ದೂರಿದ್ದಾರೆ.
ಸಿಆರ್‌ಪಿಎಫ್ ಬಳಕೆ ಸಹಜ ಪ್ರಕ್ರಿಯೆ
ಐಟಿ ದಾಳಿ ವೇಳೆ ಸ್ಥಳೀಯ ಪೊಲೀಸರನ್ನೇ ಬಳಸಿಕೊಳ್ಳಬೇಕು, ಸಿಆರ್‌ಪಿಎಫ್ ಯೋಧರನ್ನು ಭದ್ರತೆಗೆ ನಿಯೋಜಿಸಿಕೊಳ್ಳಬಾರದು ಎಂಬ ನಿಯಮವೇನು ಇಲ್ಲ. ದಾಳಿಯ ತೀವ್ರತೆಗೆ ಪೂರಕವಾಗಿ ಭದ್ರತೆಗೆ ಪೂರಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಭದ್ರತೆಗೆ 200-300 ಮಂದಿ ನಿಯೋಜಿಸಿಕೊಳ್ಳಬೇಕಾದ ಅಗತ್ಯವಿದ್ದಾಗ,
ಅಷ್ಟೂ ಸಂಖ್ಯೆ ಸ್ಥಳೀಯ ಪೊಲೀಸರು ತಕ್ಷಣಕ್ಕೆ ಸಿಗದಿರಬಹುದು. ಅಲ್ಲದೇ ದಾಳಿ ವೇಳೆಗೆ ಭದ್ರತೆ ಒದಗಿಸಲು ನಿರಾಕರಿಸಿದರೆ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ. ಆ ಹಿನ್ನೆಲೆಯಲ್ಲಿ ತಕ್ಷಣ ಸೇವೆಗೆ ಲಭ್ಯವಾಗುವ ಸಿಆರ್‌ಪಿಎಫ್ ಯೋಧರನ್ನು ಭದ್ರತೆಗೆ ನಿಯೋಜಿಸಿಕೊಳ್ಳಲಾಗುತ್ತದೆ ಎಂದು ಭಾರತೀಯ ಕಂದಾಯ ಸೇವೆಗೆ ಸೇರಿದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೇಶದ ಎರಡನೇ ಶ್ರೀಮಂತ ಸಚಿವ!
ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಚಿವರ ಪೈಕಿ ಡಿಕೆಶಿ 2ನೇ ಅತಿ ದೊಡ್ಡ ಶ್ರೀಮಂತ ಸಚಿವ! 2016ರಲ್ಲಿ ಸಚಿವರ ಶ್ರೀಮಂತಿಕೆ ಕುರಿತು ಆಂಗ್ಲ ಪತ್ರಿಕೆಯೊಂದು ಸಮೀಕ್ಷೆ ನಡೆಸಿತ್ತು. ಆಗ 251 ಕೋಟಿ ರೂ. ಮೌಲ್ಯದ ಆಸ್ತಿ ಒಡೆಯರಾಗಿದ್ದ ಡಿಕೆಶಿ, ದೇಶದ ಶ್ರೀಮಂತ ಸಚಿವರ ಪೈಕಿ 2ನೇ ಸ್ಥಾನದಲ್ಲಿದ್ದರು. ಹಾಗೇ 2013ರ
ವಿಧಾನಸಭೆ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್, ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರು. 2008ರ ಚುನಾವಣೆಗೆ ಹೋಲಿಸಿದರೆ 2013ರಲ್ಲಿ ಅವರ ಆಸ್ತಿ ಮೌಲ್ಯದಲ್ಲಿ 178. ಕೋಟಿ ರೂ. ಹೆಚ್ಚಳವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.