ಮೋದಿ ವಿರುದ್ಧ ನಡೆಸಬೇಕಿದೆ ಚಲೇ ಜಾವ್ ಮಾದರಿ ಹೋರಾಟ
Team Udayavani, Aug 3, 2017, 2:14 PM IST
ದಾವಣಗೆರೆ: ದೇಶದ್ಯಾಂತ ಹಿಂದುತ್ವ ಪ್ರತಿಪಾದನೆ, ಕೋಮುವಾದ ವಿಸ್ತರಣೆ ಜೊತೆಗೆ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚಲೇ ಜಾವ್… ಚಳವಳಿ ಮಾದರಿಯ ಹೋರಾಟ ರೂಪಿಸುವ ಕಾಲ ಬಂದೊದಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಡಿ. ಬಸವರಾಜ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಪಕ್ಷದವರನ್ನು ಮಾತ್ರವಲ್ಲ ಅವರದ್ದೇ ಪಕ್ಷದ ಅಡ್ವಾಣಿ, ಮುರುಳಿ ಮನೋಹರ್ ಜೋಷಿಯಂತಹವರನ್ನೂ ಮುಗಿಸಿದ್ದಾರೆ. ಜರ್ಮನಿಯ ಹಿಟ್ಲರ್ ಆಡಳಿತಕ್ಕಿಂತಲೂ ಕೆಟ್ಟದಾದ ಸರ್ವಾಧಿಕಾರಿ ಧೋರಣೆಯ ಆಡಳಿತ ನಡೆಸುತ್ತಿದ್ದಾರೆ. ಹಾಗಾಗಿ ಮೋದಿಯವರೇ ಅಧಿಕಾರ ಬಿಟ್ಟು ತೊಲಗಿ… ಎಂಬ ಹೋರಾಟ ರೂಪಿಸಬೇಕಿದ್ದು, ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಗಮನ ಹರಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ
ಮನವಿ ಮಾಡಿದರು. ಕಳೆದ ಮೂರುವರೆ ವರ್ಷದ ಆಡಳಿತದಲ್ಲಿ ಜನವಿರೋಧಿ ಕ್ರಮ ತೆಗೆದುಕೊಳ್ಳಲಾಗಿದೆ. ನೋಟು ಅಮಾನ್ಯದ ಮೂಲಕ ಡಿಜಿಟಲ್ ವಹಿವಾಟು ಹೆಚ್ಚಲಿದೆ ಎಂಬುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ನೋಟು ಅಮಾನ್ಯದ ನಂತರ ಡಿಜಿಟಲ್ ವ್ಯವಹಾರ 119.7 ಕೋಟಿಯಿಂದ 111 ಕೋಟಿಗೆ ಇಳಿದಿದೆ. ಅಲ್ಲದೆ, ಕರ್ನಾಟಕದಲ್ಲಿ 1,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಆ ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ ಬಹು ರಾಷ್ಟ್ರೀಯ ಕಂಪನಿಗಳ ಸಾಲ ಮನ್ನಾ ಮಾಡುತ್ತಿದೆ. ವಿದೇಶಿ ಕಂಪನಿಗಳಿಗೆ ಅನುಕೂಲ ಆಗುವ ನೀತಿ ರೂಪಿಸುವ ಸರ್ಕಾರ ಈಗ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ಸಹಾಯ ಧನ ರದ್ದುಪಡಿಸುವ ಮೂಲಕ 81ಕೋಟಿ ಜನ ಫಲಾನುಭವಿಗಳಿಗೆ ತೊಂದರೆ ಉಂಟು ಮಾಡಲು ಹೊರಟಿದೆ ಎಂದು ದೂರಿದರು.
ಐಟಿ, ಇಡಿ ಹಾಗೂ ಸಿಬಿಐ ಮುಂತಾದ ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ರಾಜ್ಯದ ಇಂಧನ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಬುಧವಾರ ಐಟಿ ದಾಳಿ ನಡೆದಿರುವುದೇ ಸಾಕ್ಷಿ. ಫ್ಯಾಸಿಸ್ಟ್ ,ಕ್ರೂರನೀತಿ ಅನುಸರಿಸುವ ಅವರು ಪ್ರಜಾಪ್ರಭುತ್ವದ ಮುಖವಾಡದೊಂದಿಗೆ ಸರ್ವಾಧಿಕಾರ ತೋರುತ್ತಿದ್ದಾರೆ. ಕರ್ನಾಟಕದೊಂದಿಗೆ ಸದಾ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ರಾಜ್ಯದ ರೈತರ ಸ್ಥಿತಿಯ ಬಗ್ಗೆ ತಿಳಿಸಿ, ಸಾಲ ಮನ್ನಾ ಮಾಡುವಂತೆ ಕೋರುವ ನೈತಿಕತೆಯನ್ನ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಳೆದುಕೊಂಡಿದ್ದಾರೆ ಎಂದು ದೂರಿದರು.
ಕೆಪಿಸಿಸಿ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ನನಗೆ ಬೆಂಗಳೂರು ಜಿಲ್ಲೆಯ ಕೆ.ಆರ್. ಪುರಂ, ಯಲಹಂಕ, ಸಿ.ವಿ. ರಾಮನ್ ನಗರ, ಮಹಾದೇವಪುರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಈ ತಿಂಗಳ ಎರಡನೇ ವಾರದಲ್ಲಿ ಕ್ಷೇತ್ರಗಳ ಎಲ್ಲ ಮನೆ ಮನೆಗೆ ತೆರಳಿ, ರಾಜ್ಯ ಸರ್ಕಾರ ಹಾಗೂ ಯುಪಿಎ ಸರ್ಕಾರದ ಸಾಧನೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ರಾಜ್ಯ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಮಿಷನ್-2018 ಪ್ಲಾನ್‌ನಂತೆ ಬೂತ್ ಮಟ್ಟದ ಸಮಿತಿ ರಚನೆ, ಸಭೆ ನಡೆಸಲಾಗುವುದು.
ಕಾಂಗ್ರೆಸ್ ನಡಿಗೆ ಮರಳಿ ಜನರ ಬಳಿಗೆ…
ಕಾರ್ಯಕ್ರಮವನ್ನ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು. ಮುಖಂಡರಾದ ಅಲ್ಲಾವಲಿ ಗಾಜಿಖಾನ್, ಯಾಸ್‌ಪೀರ್ ರಜ್ವಿ, ಎಚ್.ಜೆ. ಮೊಹನುದೀªನ್, ಬಿ.ಎನ್. ವಿನಾಯಕ್, ಅಶ್ರಫ್ ಅಲಿ, ಲಿಯಾಖತ್ ಅಲಿ, ಜಿ.ಸಿ. ಮಂಜು, ಎ. ರಾಜಶೇಖರ್,
ಆದಿತ್ಯಾ ಚಿಗಟೇರಿ, ರಮೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.