ಒಡಿಯೂರು ಶ್ರೀಗಳಿಂದ ನೆರೂಲ್‌ ಶ್ರೀ ಅಯ್ಯಪ್ಪ ಮಂದಿರದಲ್ಲಿ ಆಶೀರ್ವಚನ

Team Udayavani, Aug 3, 2017, 2:49 PM IST

01-Mum05a.jpg

ನವಿಮುಂಬಯಿ: ಸಂಘ-ಸಂಸ್ಥೆಗಳನ್ನು ಕಟ್ಟುವುದು ಮುಖ್ಯವಲ್ಲ. ಅದು ಸಮಾಜಕ್ಕಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಘಟನೆಗಳನ್ನು ಬೆಳೆಸಬೇಕು. ಒಳ್ಳೆಯ ಬದುಕಿಗಾಗಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳಗಿಸಬೇಕು ಎಂದು ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

ಜು. 30ರಂದು ನೆರೂಲ್‌ ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶ್ರೀ ಅಯ್ಯಪ್ಪ ಮಂದಿರದ ಶ್ರೀ ಗುರುದೇವಾನಂದ ಸಭಾಂಗಣದಲ್ಲಿ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಿವಿಧತೆಯಲ್ಲಿ ಏಕತೆಯಿರುವ ಈ ದೇಶದಲ್ಲಿ ಒಂದೇ ಮಾತರಂ ಎಲ್ಲರೂ ಹೆಮ್ಮೆಯಿಂದ ಹಾಡಬೇಕಾದ ದೇಶಭಕ್ತಿಗೀತೆಯಾಗಿದೆ. ಇದರ ಬಗ್ಗೆ ವಿವಾದವನ್ನು ಹುಟ್ಟಿಸುತ್ತಿರುವುದು ವಿಷಾದನೀಯ. ದೇಶದ ಒಳಿತಿಗಾಗಿ ನಾವು ಶ್ರಮಿಸಬೇಕು. ಹಾಗೂ ಮಕ್ಕಳಿಗೆ ದೇಶ ಪ್ರೇಮವನ್ನು ಮೂಡಿಸುವ ಕಾರ್ಯವನ್ನು ನಾವು ಮಾಡಬೇಕು. ದೇಶವು ಸ್ವತ್ಛ ಇರಬೇಕಾದರೆ ಎಲ್ಲರ ಪ್ರಯತ್ನಿಸಬೇಕು. ಜೀವನದಲ್ಲಿ ನಾವು ಸ್ವತ್ಛತೆಯನ್ನು ತಂದು, ಆ ಮೂಲಕ ಆತ್ಮಶುದ್ಧಿಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀ  ಕ್ಷೇತ್ರದಲ್ಲಿ ಗುರುಗಳು ಉದ್ಘಾಟಿಸಿದ ಶ್ರೀ ಗುರುದೇವಾನಂದ ಸಭಾಗೃಹಗಳು ನಿರಂತರ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಧರ್ಮಜಾಗೃತಿ ಕಾರ್ಯ ಜರಗುತ್ತಿರಲಿ ಎಂದರು. ಇದರ ದಾನಿಯಾದ ದಾಮೋದರ ಶೆಟ್ಟಿ ಅವರು ಸಮಾಜದ ಮೇಲಿನ ಪ್ರೀತಿಯಿಂದ ಸಮಾಜಕ್ಕೆ ಅರ್ಪಿಸಿದ್ದಾರೆ. ಇದೊಂದು ಪುಣ್ಯದ ಕಾರ್ಯವಾಗಿದೆ. ಇಂತಹ ಮನೋಭಾವ ಎಲ್ಲರೂ ಬೆಳೆಸಿಕೊಂಡಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ನುಡಿದರು.

ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಗುರುದೇವಾ ಸೇವಾ ಬಳಗದ ನವಿಮುಂಬಯಿ ಸದಸ್ಯರಾದ ಕರುಣಾಕರ ಆಳ್ವ ಅದ್ಯಪಾಡಿಗುತ್ತು ಅವರು ಗುರುಗಳ ಹೆಸರಿನಲ್ಲಿ ನಿರ್ಮಾಣವಾದ  ಸಭಾಗೃಹದ ಬಗ್ಗೆ ವಿವರಿಸಿದರು. ಪ್ರಾರಂಭದಲ್ಲಿ ಶ್ರೀಗಳು ದೀಪ ಪ್ರಜ್ವಲಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಕ್ಷೇತ್ರದ ಶ್ರೀ ಮಾತಾನಂದಮಯಿ ಅವರು ಪ್ರಾರ್ಥನೆಗೈದರು. ಹರೀಶ್‌ ಶೆಟ್ಟಿ ಅವರು ಶ್ರೀಗಳ ಪಾದಪೂಜೆಗೈದರು.

ಶ್ರೀ ಕ್ಷೇತ್ರ ಅಯ್ಯಪ್ಪ ಮಂದಿರದ ಪದಾಧಿಕಾರಿಗಳಾದ  ಕಿಶೋರ್‌ ಎಂ. ಶೆಟ್ಟಿ, ಕೆ. ಡಿ. ಶೆಟ್ಟಿ, ಸದಾನಂದ ಶೆಟ್ಟಿ, ಸಂಜೀವ ಶೆಟ್ಟಿ, ಸಂತೋಷ್‌ ಡಿ.ಶೆಟ್ಟಿ, ಸುರೇಶ್‌ ಜಿ. ಶೆಟ್ಟಿ, ಮೋಹನ್‌ದಾಸ್‌ ರೈ, ಶ್ಯಾಮ್‌ ಎನ್‌. ಶೆಟ್ಟಿ, ಗೋಪಾಲ್‌ ಶೆಟ್ಟಿ, ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಕೃಷ್ಣ ಶೆಟ್ಟಿ,  ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ರೇವತಿ ವಾಮಯ್ಯ ಶೆಟ್ಟಿ, ಸುಹಾಸಿನಿ ಶೆಟ್ಟಿ, ನವಿಮುಂಬಯಿ ಗುರು ಭಕ್ತರಾದ ದಾಮೋದರ ಶೆಟ್ಟಿ, ಕರುಣಾಕರ ಆಳ್ವ ಆದ್ಯಪಾಡಿಗುತ್ತು, ಹರ್ಷವರ್ಧನ್‌ ಹೆಗ್ಡೆ, ಅನಿಲ್‌ ಕುಮಾರ್‌ ಹೆಗ್ಡೆ, ಹರೀಶ್‌ ಶೆಟ್ಟಿ, ವಿ. ಕೆ. ಸುವರ್ಣ, ಜಗದೀಶ್‌ ಶೆಟ್ಟಿ ಪನ್ವೆಲ್‌, ಸಚಿನ್‌ ಶೆಟ್ಟಿ, ಆನಂದ ಹೆಗ್ಡೆ, ರಾಮಚಂದ್ರ ಕಾಂಚನ್‌, ಜಗದೀಶ್‌ ಶೆಟ್ಟಿ ಬೆಳ್ಮಣ್‌, ಬಾಲಕೃಷ್ಣ ಆದ್ಯಪಾಡಿ, ಹರಿ ಎಲ್‌. ಶೆಟ್ಟಿ, ಹರೀಶ್‌ ಎನ್‌. ಶೆಟ್ಟಿ, ತಾರನಾಥ ಪುತ್ತೂರು, ಪ್ರದೀಪ್‌ ಶೆಟ್ಟಿ, ರಾಜೇಶ್‌ ಶೆಟ್ಟಿ, ಮೋಹನ್‌ದಾಸ್‌ ರೈ, ಪ್ರಕಾಶ್‌ ಶೆಟ್ಟಿ ನೆರೂಲ್‌, ಪುನೀತ್‌ ಶೆಟ್ಟಿ, ಸುರೇಂದ್ರ ಪೂಜಾರಿ,  ಶ್ರೀಧರ ಪೂಜಾರಿ, ಸತೀಶ್‌ ಎರ್ಮಾಳ್‌ ಮೊದಲಾದವರು ಉಪಸ್ಥಿತರಿದ್ದರು. ಭಕ್ತಾದಿಗಳು, ಗುರುಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ 13-0 ಗೋಲು ಜಯ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ 13-0 ಗೋಲು ಜಯ

SOMANNA-2

Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ

1st T20I: ಆಸ್ಟ್ರೇಲಿಯ ವಿರುದ್ಧ ಪಾಕಿಸ್ಥಾನಕ್ಕೆ 29 ರನ್‌ ಸೋಲು

1st T20I: ಆಸ್ಟ್ರೇಲಿಯ ವಿರುದ್ಧ ಪಾಕಿಸ್ಥಾನಕ್ಕೆ 29 ರನ್‌ ಸೋಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

Pro Kabaddi League: ತಮಿಳ್‌ ಉರುಳಿಸಿದ ಯು ಮುಂಬಾ

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Ranji Trophy: ಕರ್ನಾಟಕ ಬಿಗಿ ಹಿಡಿತ; ಕೆ. ಶ್ರೀಜಿತ್‌ ಶತಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ 13-0 ಗೋಲು ಜಯ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತಕ್ಕೆ 13-0 ಗೋಲು ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.