ಕಟಕ ಸಿನಿಮಾದಲ್ಲಿ ಬಾಲ ನಟಿ ಶ್ಲಾಘಾ ಸಾಲಿಗ್ರಾಮ
Team Udayavani, Aug 4, 2017, 8:40 AM IST
ತೆಕ್ಕಟ್ಟೆ: ಮೂಲತಃ ಕುಂದಾಪುರ ತಾಲೂಕಿನ ರವಿ ಬಸ್ರೂರು ನಿರ್ದೇಶನದ ಬಹು ನಿರೀಕ್ಷೆಯ 14 ಹಾಲಿವುಡ್ ಕಂಪೆನಿಗಳ ತಂತ್ರಜ್ಞಾನವನ್ನು ಬಳಸಿರುವ ಕನ್ನಡ ಸಿನಿಮಾ ಕಟಕ . ಈ ಸಿನಿಮಾವು ಪವರ್‌ಸ್ಟಾರ್ ಪುನೀತ್‌ರಾಜ್ ಕುಮಾರ್ ಅವರ ಪ್ರೋತ್ಸಾಹದೊಂದಿಗೆ ಓಂಕಾರ್ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತೆಕ್ಕಟ್ಟೆ ವಿಶ್ವವಿನಾಯಕ ಸಿಬಿಎಸ್‌ಇ ಸ್ಕೂಲ್‌ನ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6 ವರ್ಷದ ಬಾಲ ನಟಿ ಶ್ಲಾಘಾ ಸಾಲಿಗ್ರಾಮಳ ಮನೋಜ್ಞ ಅಭಿನಯ ಹಾಗೂ ಚಿತ್ರದ ಟಿಸರ್‌ನಲ್ಲಿ ಕೇಂದ್ರ ಬಿಂದುವಾಗಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಅಂಗಣಕ್ಕೆ ಕಾಲಿರಿಸಿದ್ದಾಳೆ.
ಆಗಸ್ಟ್‌ನಲ್ಲಿ ಬಿಡುಗಡೆ
ಉಡುಪಿ ಜಿಲ್ಲೆಯ ಸಾಲಿಗ್ರಾಮ ರಾಘವೇಂದ್ರ ಆಚಾರ್ಯ ಹಾಗೂ ಮಾಲ ಆಚಾರ್ಯ ದಂಪತಿಗಳ ಪುತ್ರಿಯಾಗಿರುವ ಶ್ಲಾಘ ಬಾಲ್ಯದಿಂದಲೂ ಅತ್ಯಂತ ಚುರುಕು ಸ್ವಭಾವದಿಂದಾಗಿ ಸಂಗೀತ,ನೃತ್ಯ,ಚಿತ್ರಕಲೆ ಹೀಗೆ ಹಲವು ಬಗೆಯ ಕಲಾ ಪ್ರಾಕಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಈಗಾಗಲೇ ಹಲವು ನೃತ್ಯ ಪ್ರದರ್ಶನ,ಅಮ್ಮ ಎನ್ನುವ ಕಿರುಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಸದಾ ಮಂದಸ್ಮಿತಳಾಗಿ ಕುಂದಗನ್ನಡದಲ್ಲಿ ಉದ^ರಿಸುವ ಈ ಪುಟಾಣಿ ಎಂಥವರನ್ನು ಆಕರ್ಷಿಸಬಲ್ಲ ವಿಭಿನ್ನವಾದ ಕೌಶಲವನ್ನು ಹೊಂದಿದ್ದಾಳೆ. ಚಿತ್ರವು ಇದೇ ಬರುವ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು ಕನ್ನಡ ಸಿನಿಮಾವೊಂದು ಹಾಲಿವುಡ್ ತಂತ್ರಜ್ಞಾನವನ್ನು ಒಳಗೊಂಡಿರುವುದೇ ವಿಶೇಷ .
14 ಹಾಲಿವುಡ್ ಕಂಪೆನಿಗಳ ತಂತ್ರಜ್ಞಾನ: ಕಟಕ ಚಿತ್ರದ ಮೂಲಕ ಮುಖ್ಯವಾಹಿನಿಯ ಕನ್ನಡ ಚಿತ್ರ ನಿರ್ದೇಶನಕ್ಕೆ ಇಳಿದಿರುವ ರವಿ ಬಸ್ರೂರು ಈ ಹಿಂದೆ ಉಗ್ರಂ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ನೀಡಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ.
ಕಟಕ ಎನ್ನುವ ಶಬ್ದ ವಿನ್ಯಾಸದಲ್ಲಿ ಸ್ಯಾಂಡಲ್ ಟ್ರ್ಯಾಕ್ ಬ್ರಾಮ್ಸ್, ಎಲೆಕ್ಟ್ರಾನಿಕ್ ಸ್ಪಾರ್ಕ್ಸ್, ಆಡಿಯೋ ಇಂಪೀರಿಯಾ ಎಪಿಕ್, ಮಾರ್ಪ್‌ರಪ್ಟರ್, ಪ್ಯೂಚರ್ ವೆಫನ್ಸ್, ಟೈಮ್ಸ್ ಪ್ಲಕ್ಸ್, ಸಿಂಡಸ್ಟ್‌ವಾರ್, ಮೆಕ್‌ಡಿಎಸ್‌ಸಿ ಪ್ಯೂಚರ್ ಸೌಂಡ್ ಪ್ರೊಡಕ್ಷನ್ ಮುಂತಾದ 14 ಹಾಲಿವುಡ್ ಕಂಪೆನಿಗಳು ಈ ಚಿತ್ರದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಚಿತ್ರದ ಹೈಲೆಟ್ ಅಂದರೆ ಸೌಂಡಿಂಗ್ ತುಂಬಾ ಆಕರ್ಷಕ ಹಾಗೂ ವಿಭಿನ್ನವಾಗಿ ಮೂಡಿ ಬಂದಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯಲ್ಲಿರುವ ರವಿ ಬಸ್ರೂರು ಈಗಾಗಲೇ ಗರ್‌ಗರ್ ಮಂಡ್ಲ, ಬಿಲಿಂಡರ್ ಎನ್ನುವ ಕುಂದಾಪ್ರ ಕನ್ನಡದಲ್ಲಿ ನಿರ್ದೇಶನ ಮಾಡಿ ಸ್ಯಾಂಡಲ್‌ವುಡ್ ಚಿತ್ರಕ್ಕೆ ನಾವೇನೂ ಕಮ್ಮಿ ಇಲ್ಲ ಎನ್ನುವಂತೆ ಕರಾವಳಿಯಲ್ಲಿ ತನ್ನದೆಯಾದ ಫ್ಯಾನ್ ಫಾಲೊವರ್ ಸೃಷ್ಟಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕರಾವಳಿಯಲ್ಲಿ ಚಿತ್ರೀಕರಣ: ವಾಮಾಚಾರದ ಸುತ್ತ ನಡೆಯುವ ಸಿನಿಮಾ ಕಟಕ ನೈಜ ಘಟನೆಯನ್ನು ಆಧರಿಸಿದ ಸಿನಿಮಾ 6 ವರ್ಷದ ಬಾಲಕಿಯೊಬ್ಬಳ ಮೇಲೆ ವಾಮಾಚಾರ ಪ್ರಯೋಗವಾದಾಗ ಏನೆಲ್ಲ ಘಟನೆಗಳು ಸಂಭವಿಸುತ್ತವೆ ಎನ್ನುವ ಮೂಲ ಅಂಶವನ್ನು ಆಧಾರವಾಗಿರಿಸಿಕೊಂಡು ಹೆಣೆಯಲ್ಲಾದ ಈ ಚಿತ್ರವನ್ನು “ಗುಡ್ಡದ ಭೂತ ಧಾರಾವಾಹಿಯಲ್ಲಿ ಚಿತ್ರೀಕರಿಸಿದ ಯಡಾಡ್ತಿಯಲ್ಲಿನ ಹಳೆಯ ಮನೆಯಿಂದ ಹಿಡಿದು ಕರಾವಳಿಯ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಣ ನಡೆದಿದ್ದು ಬಹುತೇಕ ಹೊಸಬರೆ ನಟಿಸಿರುವ ಈ ಚಿತ್ರವನ್ನು ಎನ್.ಎಸ್.ರಾಜ್‌ಕುಮಾರ್ ನಿರ್ಮಿಸಿದ್ದು ಚಿತ್ರಕ್ಕೆ ಸಚಿನ್ ಬಸ್ರೂರು ಛಾಯಾಚಿತ್ರಗ್ರಹಣವಿದೆ.
ಕರಾವಳಿ ಕರ್ನಾಟಕದ ಸುಂದರ ನೈಸರ್ಗಿಕ ಸೊಬಗು ಇಲ್ಲಿನ ಬದುಕು ಭಾವನೆಗಳಿಗೆ ಪೂರಕವಾಗಿ ನೈಜ ಕಥಾ ಹಂದರವನ್ನು ಇರಿಸಿಕೊಂಡು ತೆರೆಯ ಮುಂದೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಲಾಗಿದ್ದು ವಿಭಿನ್ನ ತಂತ್ರಜ್ಞಾನವನ್ನು ಬಳಸಿಕೊಂಡು ಶಬ್ಧ ವಿನ್ಯಾಸವನ್ನು ಮಾಡಲಾಗಿದೆ . ಸಂಗೀತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
– ರವಿ ಬಸ್ರೂರು, ನಿರ್ದೇಶಕ
ಕಲಿಕೆಯೊಂದಿಗೆ ಇನ್ನಿತರ ಪಾಠೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪುಟಾಣಿ ಶ್ಲಾಘಾ ಸಾಲಿಗ್ರಾಮ ಸ್ಯಾಂಡಲ್ ವುಡ್ ಪ್ರವೇಶಿಸಿರುವುದು ಹೆಮ್ಮೆ ತಂದಿದೆ ಇವಳ ಮುಂದಿನ ಕಲಾ ಭವಿಷ್ಯ ಉಜ್ವಲವಾಗಲಿ.
– ಆಗಸ್ಟಿನ್ ಕೆ.ಎ.,
ವಿಶ್ವ ವಿನಾಯಕ ಸಿಬಿಎಸ್‌ಇ ಸ್ಕೂಲ್ ತೆಕ್ಕಟ್ಟೆ ಯ ಪ್ರಾಂಶುಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.