24 ಕೆಜಿ ತೂಗುವ ಕುಂಬಳ
Team Udayavani, Aug 4, 2017, 8:15 AM IST
ಮಡಿಕೇರಿ: ಚೆಟ್ಟಳ್ಳಿಯ ಈರಳೆವಳಮುಡಿ ಗ್ರಾಮದ ಬಲ್ಲಾರಂಡ ಕವನ್ ತಿಮ್ಮಯ್ಯ ನವರ ತೋಟದಲ್ಲಿ ಸುಮಾರು 24 ಕೆ.ಜಿ. ತೂಕದ ಭಾರೀ ಗಾತ್ರದ ಸಿಹಿ ಕುಂಬಳ ಕಾಯಿ ಬೆಳೆದು ಆಶ್ಚರ್ಯವನ್ನು ಉಂಟುಮಾಡಿದೆ.
ಕವನ್ ಕಾರ್ಯಪ್ಪನವರ ತೋಟದಲ್ಲಿರುವ ಅಸ್ಸಾಂ ಮೂಲದ ಕಾರ್ಮಿಕರು ಕೆಲಸ ಕ್ಕೆಂದು ಇವರಲ್ಲಿಗೆ ಬರುವ ಸಂದರ್ಭ ತಮ್ಮ ಊರಿನಿಂದ ತಂದಿದ್ದ ಸಿಹಿ ಕುಂಬಳಕಾಯಿಯ ಬೀಜ ಹಾಗೂ ಸೋರೆಕಾಯಿಯ ಬೀಜವನ್ನು ತೋಟದಲ್ಲಿ ಬಿತ್ತಿದ್ದರು.
ಅನಂತರದ ದಿನಗಳಲ್ಲಿ ತೋಟದಲ್ಲಿ ಕುಂಬಳ ಬಳ್ಳಿ ಸುಪುಷ್ಟವಾಗಿ ಬೆಳೆದು ಸುಮಾರು ಮೂವತ್ತಕ್ಕೂ ಹೆಚ್ಚಿನ ಕಾಯಿಗಳನ್ನು ಬಿಟ್ಟಿತ್ತು. ಇವುಗಳನ್ನು ಕೊಯ್ದು ಬಳಸಲಾಗಿತ್ತಾದರೆ ಇತ್ತೀಚೆಗೆ ಬಳ್ಳಿಯಲ್ಲಿದ್ದ ಮೂರು ಕುಂಬಳ ಕಾಯಿಗಳನ್ನು ಹಾಗೆಯೇ ಬೆಳೆಯಲು ಬಿಡಲಾಗಿತ್ತು. ಅದರಲ್ಲಿ ಒಂದು ಬೃಹತ್ತಾಗಿ ಬೆಳೆದು ಸಾರ್ವಜನಿಕರ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್
Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು
Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್.ರಾಜಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.