ಅರ್ಜುನ ಪೂಜಾರ, ಅಜಿಂಕ್ಯ ರಹಾನೆ ಅಜೇಯ ಶತಕ ವೈಭವ
Team Udayavani, Aug 4, 2017, 7:25 AM IST
ಕೊಲಂಬೊ: ಪಂದ್ಯದ ನಡುವಲ್ಲೇ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಸಿಹಿ ಸುದ್ದಿ ಆಲಿಸಿದ ಚೇತೇಶ್ವರ್ ಪೂಜಾರ ತಮ್ಮ 50ನೇ ಟೆಸ್ಟ್ ಪಂದ್ಯವನ್ನು ಅಜೇಯ ಶತಕದೊಂದಿಗೆ ಸ್ಮರಣೀಯಗೊಳಿಸಿದ್ದಾರೆ. ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೂಡ ಶತಕ ಸಂಭ್ರಮದೊಂದಿಗೆ ಕ್ರೀಸ್ ಆಕ್ರಮಿಸಿಕೊಂಡಿದ್ದಾರೆ. ಇವರಿಬ್ಬರ ದ್ವಿಶತಕದ ಜತೆಯಾಟದೊಂದಿಗೆ ಭಾರತ 3ಕ್ಕೆ 344 ರನ್ ಪೇರಿಸಿ ಮೊದಲ ದಿನವೇ ಶ್ರೀಲಂಕಾ ಎದುರಿನ ಕೊಲಂಬೊ ಟೆಸ್ಟ್ ಪಂದ್ಯ ದಲ್ಲಿ ಪ್ರಭುತ್ವ ಸಾಧಿಸಿದೆ.
ಚೇತೇಶ್ವರ್ ಪೂಜಾರ 128 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದು ಪ್ರಸಕ್ತ ಸರಣಿಯಲ್ಲಿ ಪೂಜಾರ ಹೊಡೆದ ಸತತ 2ನೇ ಶತಕವಾದರೆ, ಲಂಕಾ ನೆಲದಲ್ಲಿ ಬಾರಿಸಿದ ಹ್ಯಾಟ್ರಿಕ್ ಸೆಂಚುರಿ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು 153 ರನ್ ಪೇರಿಸಿದ್ದರು. ಇದಕ್ಕೂ ಮುನ್ನ 2015ರ ಪ್ರವಾಸದ ವೇಳೆ ಕೊಲಂಬೋದಲ್ಲೆ ಆಡಲಾದ ಕೊನೆಯ ಟೆಸ್ಟ್‌ನಲ್ಲಿ ಅಜೇಯ 145 ರನ್ ಹೊಡೆದು ಮಿಂಚಿದ್ದರು. ಒಟ್ಟಾರೆಯಾಗಿ ಇದು ಪೂಜಾರ ಅವರ 13ನೇ ಶತಕ. ಈ ಮೆರೆದಾಟದ ವೇಳೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಪೂರೈಸಿದರು.
ಕಳೆದ ಋತುವಿನಲ್ಲಿ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಅಜಿಂಕ್ಯ ರಹಾನೆ ದಿನದಾಟದ ಕೊನೆಯಲ್ಲಿ ಸೆಂಚುರಿ ಸಂಭ್ರಮದಲ್ಲಿ ಮಿಂದೆದ್ದರು. ಅಜಿಂಕ್ಯ ಕೊಡುಗೆ ಅಜೇಯ 103 ರನ್. ಇದು ಅವರ 9ನೇ ಶತಕ. ಕಳೆದ ಅಕ್ಟೋಬರ್‌ನಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಇಂದೋರ್‌ನಲ್ಲಿ 188 ರನ್ ಪೇರಿಸಿದ ಬಳಿಕ ಹೊಡೆದ ಮೊದಲ ಶತಕ. ಶ್ರೀಲಂಕಾ ವಿರುದ್ಧ ಎರಡನೆಯದು.
ಪೂಜಾರ-ರಹಾನೆ ಭರ್ತಿ 51.1 ಓವರ್‌ಗಳನ್ನು ನಿಭಾಯಿಸಿದ್ದು, ಮುರಿಯದ 4ನೇ ವಿಕೆಟಿಗೆ 211 ರನ್ ಒಟ್ಟುಗೂಡಿಸಿದ್ದಾರೆ. ಪೂಜಾರ 225 ಎಸೆತ ಎದುರಿಸಿದ್ದು, 10 ಬೌಂಡರಿ ಜತೆಗೆ ಒಂದು ಸಿಕ್ಸರ್ ಕೂಡ ಎತ್ತಿದ್ದಾರೆ. ರಹಾನೆ ಎದುರಿಸಿದ್ದು 168 ಎಸೆತ. ಇದರಲ್ಲಿ ಒಂದು ಡಜನ್ ಬೌಂಡರಿ ಸೇರಿದೆ.
ರಾಹುಲ್ ಸತತ 6ನೇ ಫಿಫ್ಟಿ
ಆರಂಭಕಾರ ಕೆ.ಎಲ್. ರಾಹುಲ್ ಭಾರತದ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್. ಸಂಪೂರ್ಣ ಚೇತರಿಸಿಕೊಂಡು ಆಡಲಿಳಿದ ರಾಹುಲ್ 57 ರನ್ ಹೊಡೆದು ರನೌಟಾದರು. ಇದು ರಾಹುಲ್ ಅವರ ಸತತ 6ನೇ ಅರ್ಧ ಶತಕ ಎಂಬುದೊಂದು ಸಾಧನೆ. 82 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಒಳಗೊಂಡಿತ್ತು. ರಾಹುಲ್-ಶಿಖರ್ ಧವನ್ ಮೊದಲ ವಿಕೆಟಿಗೆ 10.1 ಓವರ್‌ಗಳಲ್ಲಿ 56 ರನ್ ಪೇರಿಸಿದರು. ಧವನ್ ಗಳಿಕೆ 35 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸರ್). ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ ಮಾಡಿ ನಿರ್ಗಮಿಸಿದರು. 133ಕ್ಕೆ 3ನೇ ವಿಕೆಟ್ ಬಿದ್ದಾಗ ಲಂಕೆಗೆ ಮೇಲುಗೈ ಸಾಧಿಸುವ ಅವಕಾಶವೊಂದು ಎದುರಾಗಿತ್ತು. ಆದರೆ ಪೂಜಾರ-ರಹಾನೆ ಇದಕ್ಕೆ ದೊಡ್ಡ ತಡೆಯಾಗಿ ನಿಂತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಗಾಲೆಯ ಆಟವನ್ನೇ ಪುನರಾವರ್ತಿಸಿದ್ದು, ಮತ್ತೂಮ್ಮೆ ಬೃಹತ್ ಮೊತ್ತ ಪೇರಿಸಿದರೆ ಲಂಕೆಗೆ ಸರಣಿ ಸೋಲಿನ ಕಂಟಕ ಎದುರಾಗುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.