ಯಕ್ಷಲಹರಿಯ 27ನೇ ವರ್ಷದ ಯಕ್ಷಗಾನ ಪರ್ವ: ಕೃಷ್ಣಸ್ತು ಭಗವಾನ್‌ ಸ್ವಯಮ್‌

Team Udayavani, Aug 4, 2017, 1:15 PM IST

04-KALA-1.jpg

ಕಿನ್ನಿಗೋಳಿ ಒಂದು ಗ್ರಾಮೀಣ ಪ್ರದೇಶವಾದ್ದರೂ ಸಾಂಸ್ಕೃತಿಕವಾಗಿ ವಿಶೇಷ ಸ್ಥಾನ ಪಡೆದಿದೆ. ಇಲ್ಲಿನ ಯಕ್ಷಲಹರಿ (ರಿ.) – ಯುಗಪುರುಷ ಸಂಸ್ಥೆಗಳು ಸಂಯುಕ್ತವಾಗಿ ಕಳೆದ 26 ವರ್ಷಗಳಿಂದ ಯಕ್ಷಮಾತೆಯ ಸೇವಾ ಕೈಂಕರ್ಯವನ್ನು ನಿರಂತರ ನಡೆಸುತ್ತ ಬಂದಿವೆ. ಕೀರ್ತಿಶೇಷ ಇ. ಶ್ರೀನಿವಾಸ ಭಟ್‌ ಅವರು ಸಮಾನಾಸಕ್ತ ಯಕ್ಷಪ್ರೇಮಿಗಳ ಜತೆಗೂಡಿ 26 ವರ್ಷಗಳ ಹಿಂದೆ ಯಕ್ಷಲಹರಿಯನ್ನು ಆರಂಭಿಸಿದರು. ಯಶಸ್ವಿಯಾಗಿ ಮುನ್ನಡೆಯುತ್ತ ಬಂದ ಸಂಸ್ಥೆ ತನ್ನ ದಶಮಾನೋತ್ಸವ ಸಂದರ್ಭದಲ್ಲಿ ತಾಳಮದ್ದಳೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಬಳಿಕ 15ನೇ ವರ್ಷ, 20ನೇ ವರ್ಷಗಳ ಆಚರಣೆಯನ್ನು ಕೂಡ ವಿಶಿಷ್ಟ ರೀತಿಯಲ್ಲಿ ನಡೆಸಿತು. ಎರಡು ವರ್ಷಗಳ ಹಿಂದೆ ರಜತ ವರ್ಷದ ಆಚರಣೆಯೂ ನಡೆದಿದೆ. ಇವುಗಳಲ್ಲದೆ ಪ್ರತೀವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ ಅರ್ಹ ಕಲಾವಿದರಿಗೆ ಸಮ್ಮಾನದ ಜತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಕಾರ ನೀಡುವ ಕಾರ್ಯಕ್ರಮವನ್ನೂ ನಡೆಸುತ್ತಿದೆ. 

ಮಂಗಳೂರಿನ ಕರ್ಣಾಟಕ ಬ್ಯಾಂಕ್‌ ಮುಖ್ಯ ಪ್ರಾಯೋಜಕತ್ವದಲ್ಲಿ ಹಾಗೂ ಹಲವಾರು ಸಂಸ್ಥೆಗಳು- ಊರ, ಪರವೂರ ದಾನಿಗಳ ಸಹಕಾರದಿಂದ ಬೆಳೆದು ಬಂದ ಯಕ್ಷಲಹರಿ ಸಂಸ್ಥೆ ಇದೀಗ 27ನೇ ವರ್ಷದ ಯಕ್ಷಗಾನ ಕಲಾ ಪರ್ವದ ಹೊಸ್ತಿಲಲ್ಲಿದೆ. ಜು.31ರಿಂದ ಆಗಸ್ಟ್‌ 6ರ ತನಕ ತಾಳಮದ್ದಳೆ “ಕೃಷ್ಣಸ್ತು ಭಗವಾನ್‌ ಸ್ವಯಮ್‌’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿದೆ. ಪ್ರಸ್ತುತ ರೊ| ಪಿ. ಸತೀಶ್‌ ರಾವ್‌ ಅವರ ಅಧ್ಯಕ್ಷತೆಯಲ್ಲಿ, ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ ಅವರ ಸಹಕಾರದಲ್ಲಿ 14 ಜನ ಸದಸ್ಯರ ತಂಡ ಯಕ್ಷಲಹರಿಯಲ್ಲಿ ತೊಡಗಿಸಿಕೊಂಡಿದೆ. ಈ ವರ್ಷ ಹಿರಿಯ ಕಲಾವಿದರಾದ ವಸಂತ ಶೆಟ್ಟಿ ಮುಂಡ್ಕೂರು, ಉಮೇಶ್‌ ಶೆಟ್ಟಿ ಮಚ್ಚಾರು, ಉಮೇಶ್‌ ಮೊಯಿಲಿ, ಸುರೇಂದ್ರ ಪೈ ಸಂಪಿಗೆ, ಪೂರ್ಣಿಮಾ ಯತೀಶ್‌ ರೈ, ಅನಂತರಾಮ ರಾವ್‌ ಬೆಳ್ಳಾಯರು, ವಾಸುದೇವ ಆಚಾರ್ಯ ಕುಳಾಯಿ, ರವಿ ಭಟ್‌ ಪಡುಬಿದ್ರಿ ಅವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಹಿರಿಯ ಚೆಂಡೆ ವಾದಕ ಸುಬ್ರಾಯ ಭಟ್‌ ಮುಚ್ಚಾರು
ಎಲೆಮರೆಯ ಕಾಯಿಯಂತಿರುವ ಹಿರಿಯ ಚೆಂಡೆ ವಾದಕರು ಸುಬ್ರಾಯ ಭಟ್‌ ಮುಚ್ಚಾರು. ಪ್ರಾಥಮಿಕ ಶಾಲಾ ಹಂತದಲ್ಲಿ ಯಕ್ಷಗಾನದ ಕಡೆಗೆ ಆಕರ್ಷಿತರಾದರು. ಮೂಡಬಿದಿರೆಯ ಸಣ್ಣಪ್ಪನವರಿಂದ ಯಕ್ಷಗಾನ ನಾಟ್ಯಾಭ್ಯಾಸ, ಚೆಂಡೆ ಮದ್ದಲೆಯ ಪ್ರಾಥಮಿಕ ಪಾಠ ಕಲಿತು ಮುಂದೆ ಕೀರ್ತಿಶೇಷ ಹಿರಿಯ ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಸೂಕ್ಷ್ಮತೆಗಳನ್ನು ಕರಗತ ಮಡಿಕೊಂಡರು. ಮುಂದಕ್ಕೆ ಕುದ್ರೆಕೋಡ್ಲು ರಾಮ ಭಟ್‌ ಹಾಗೂ ಕತ್ತಲ್‌ಸಾರ್‌ ಅನಂತ ಶೆಣೈ ಮಾಸ್ತರ್‌ ಅವರಲ್ಲಿ ಚೆಂಡೆ ಮದ್ದಲೆಯ ವಾದನದ ಕೌಶಲವನ್ನು ಅರಿತುಕೊಂಡರು. 

ಯಕ್ಷಗಾನ ಆಸಕ್ತಿಯ ಜತೆಗೆ ಸುಬ್ರಾಯ ಭಟ್ಟರು ಸಂಗೀತದತ್ತಲೂ ತೀವ್ರ ಸೆಳೆತವನ್ನು ಹೊಂದಿದ್ದರು. ಉಡುಪಿ ವಾಸುದೇವ ಭಟ್‌ ಅವರ “ನಾದವೈಭವಂ’ ಸಂಸ್ಥೆಯಲ್ಲಿ ಕೊಳಲು, ಮೃದಂಗ, ಹಾರ್ಮೋನಿಯಂನಂತಹ ಪಕ್ಕವಾದ್ಯಗಳ ವಾದನವನ್ನು ಅಭ್ಯಾಸ ಮಾಡಿದರು. ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರೂ ಆದರು. ಕಟೀಲು ಮೇಳದಲ್ಲಿ ಬದಲಿ ಚೆಂಡೆವಾದಕನಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಇರಾ ಗೋಪಾಲಕೃಷ್ಣ ಭಾಗವತರಿಗೆ ಹಿಮ್ಮೇಳ ವಾದಕನಾಗಿ ತಿರುಗಾಟ ನಡೆಸಿದ್ದಾರೆ. ತನ್ನ ಸಹೋದರನ ಜತೆಗೆ ಮುಚ್ಚಾರು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಮೇಳವನ್ನು ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ಮೇಳ ನಷ್ಟಕ್ಕೊಳಗಾದ ಬಳಿಕ ದೂರದ ಮುಂಬಯಿಗೆ ಪ್ರಯಾಣ ಬೆಳೆಸಿ, ಹೊಟೇಲು ಉದ್ಯಮ ನಡೆಸುತ್ತಿ ದ್ದಾಗಲೂ ಅಲ್ಲಿದ್ದ ಊರ ಕಲಾವಿದರಿಗೆ ಆಸರೆಯನ್ನಿತ್ತು ಕಲಾ ಪೋಷಣೆ ಯನ್ನು ಮಾಡಿದ್ದಾರೆ. ಈಗಿನ ಯುವಕರ ಚೆಂಡೆ – ಮದ್ದಲೆ ವಾದನ ಕಸರತ್ತು ಇಷ್ಟವಾಗುವುದಿಲ್ಲ ಎನ್ನುತ್ತ, ಗತಕಾಲದ ಹಿತಮಿತ ಹಿಮ್ಮೇಳ ವಾದನದ ದಿನಗಳನ್ನು ಸುಬ್ರಾಯ ಭಟ್ಟರು ನೆನಪಿಸಿಕೊಳ್ಳುತ್ತಾರೆ. ಅವರ ಕಲಾ ಸೇವೆಯನ್ನು ಗುರುತಿಸಿ ಯಕ್ಷಲಹರಿ ತನ್ನ 27ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮ್ಮಾನಿಸಲಿದೆ. 

ರಘುನಾಥ ಕಾಮತ್‌ ಕೆಂಚನಕೆರೆ

ಟಾಪ್ ನ್ಯೂಸ್

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

Mumbai: ಬ್ರೇಕಪ್‌ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Mangaluru: ಹೊಸ ವರ್ಷದ ಪಾರ್ಟಿಗಳಿಗೆ ನಿರ್ಬಂಧ ಹೇರಲು ವಿಹಿಂಪ, ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.