ಸಿರಿಧಾನ್ಯ-ಬರಗು ವೈವಿಧ್ಯ


Team Udayavani, Aug 4, 2017, 11:38 AM IST

04-YUVA-8.jpg

ಹೊಂಬಣ್ಣದ ಬರಗು ಹಲವಾರು ಉತ್ತಮ ಔಷಧೀಯ ಗುಣಗಳನ್ನು ಹೊಂದಿದ್ದು ಪ್ರೊಟೀನ್‌, ನಾರಿನಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಆರೋಗ್ಯವರ್ಧಕವಾದ ಇದರ ಸೇವನೆಯಿಂದ ಬೊಜ್ಜು, ರಕ್ತದೊತ್ತಡ, ಮಧುಮೇಹ ಹಾಗೂ ಹೃದಯಸಂಬಂಧೀ ಕಾಯಿಲೆಗಳ ನಿವಾರಣೆಗೆ ಸಹಕಾರಿ. ನಿತ್ಯ ಜೀವನದಲ್ಲಿ ಬರಗುವನ್ನು ಹಲವಾರು ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು. ಇಲ್ಲಿವೆ ಕೆಲವು ರಿಸಿಪಿಗಳು.

ಬರಗು ಪೊಂಗಲ್‌
ಬೇಕಾಗುವ ಸಾಮಗ್ರಿ: ಬರಗು – ಒಂದು ಕಪ್‌, ಬೆಳ್ತಿಗೆ ಅಕ್ಕಿ – ಅರ್ಧ ಕಪ್‌, ಹೆಸರುಬೇಳೆ – ಅರ್ಧ ಕಪ್‌, ಹಾಲು – ಎರಡು ಕಪ್‌, ಬಾದಾಮಿ, ಗೋಡಂಬಿ, ದ್ರಾಕ್ಷಿ – ತಲಾ ನಾಲ್ಕು ಚಮಚ, ಕ್ಯಾರೆಟ್‌ ತುರಿ – ಆರು ಚಮಚ, ಬೆಲ್ಲದ ಪುಡಿ – ಆರು ಚಮಚ, ಶುಂಠಿ – ಅರ್ಧ ಇಂಚು, ಕಾಳುಮೆಣಸಿನ ಪುಡಿ – ಒಂದು ಚಮಚ, ಜೀರಿಗೆ- ನಾಲ್ಕು ಚಮಚ, ತೆಂಗಿನ ತುರಿ – ಎಂಟು ಚಮಚ, ಹಸಿಮೆಣಸು – ಎರಡು, ಏಲಕ್ಕಿ ಪುಡಿ – ಸುವಾಸನೆಗಾಗಿ, ಉಪ್ಪು ರುಚಿಗೆ ಬೇಕಷ್ಟು.

ಸಿಹಿ ಪೊಂಗಲ್‌
ತಯಾರಿಸುವ ವಿಧಾನ: ಬರಗನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಹೆಸರುಬೇಳೆ ಮತ್ತು ಅಕ್ಕಿಯನ್ನು ಸ್ವಲ್ಪ$ಬೆಚ್ಚಗೆ ಮಾಡಿ. ಇದಕ್ಕೆ ನೆನೆಸಿದ ಬರಗನ್ನು ಸೇರಿಸಿ ಕುಕ್ಕರ್‌ನಲ್ಲಿ ಎರಡು ಕಪ್‌ ಹಾಲು ಮತ್ತು ಎರಡೂವರೆ ಕಪ್‌ ನೀರು ಸೇರಿಸಿ ಬೇಯಲು ಇಡಿ. ಒಂದು ವಿಶಲ್‌ ಬಂದ ಮೇಲೆ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ಬೆಲ್ಲಕ್ಕೆ ಸ್ವಲ್ಪ$ನೀರು ಸೇರಿಸಿ ಪಾಕ ಮಾಡಿ. ಇದಕ್ಕೆ ಕಾಯಿತುರಿ, ಕಾಳುಮೆಣಸಿನ ಪುಡಿ, ಶುಂಠಿತುರಿ ಮತ್ತು ಏಲಕ್ಕಿ ಪುಡಿ ಹಾಕಿ, ಕುದಿಸಿ ಇದಕ್ಕೆ ಬೇಕಷ್ಟು ಬೇಯಿಸಿಟ್ಟುಕೊಂಡ ಬರಗುವನ್ನು ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಇಳಿಸಿ. ನಂತರ ತುಪ್ಪದಲ್ಲಿ ಹುರಿದ ಬಾದಾಮಿ ತರಿ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಮಿಶ್ರಮಾಡಿ ಸರ್ವ್‌ ಮಾಡಬಹುದು.

ಖಾರ ಪೊಂಗಲ್‌
ತಯಾರಿಸುವ ವಿಧಾನ: ಬಾಣಲೆಗೆ ತುಪ್ಪಹಾಕಿಕೊಂಡು ಇದರಲ್ಲಿ ಕೆಂಪುಮೆಣಸು, ಸಾಸಿವೆ, ಜೀರಿಗೆ, ಕರಿಬೇವು ಸಿಡಿಸಿ. ನಂತರ ಇದಕ್ಕೆ ಹೆಚ್ಚಿದ ಹಸಿ ಮೆಣಸಿನಕಾಯಿ, ಶುಂಠಿ ತರಿ, ಕಾಳುಮೆಣಸಿನ ಪುಡಿ, ತುರಿದ ಕ್ಯಾರೆಟ್‌ ಮತ್ತು ರುಚಿಗೆ ಬೇಕಷ್ಟು ಉಪ್ಪು$ಸೇರಿಸಿ, ಬಾಡಿಸಿ, ಬೇಯಿಸಿಟ್ಟುಕೊಂಡ ಬರಗು ಸೇರಿಸಿ ಮಿಶ್ರಮಾಡಿ ಸರ್ವ್‌ ಮಾಡಬಹುದು.

ಬರಗು ಇಡ್ಲಿ 
ಬೇಕಾಗುವ ಸಾಮಗ್ರಿ: ಬರಗು- ಎರಡು ಕಪ್‌, ಸಬ್ಬಕ್ಕಿ – ಕಾಲು ಕಪ್‌, ತೆಂಗಿನ ತುರಿ- ಅರ್ಧ ಕಪ್‌, ಮೊಸರು- ಎರಡು ಕಪ್‌, ಕಾಳುಮೆಣಸು – ಒಂದು ಚಮಚ, ಕ್ಯಾರೆಟ್‌ ತುರಿ – ಅರ್ಧ ಕಪ್‌, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಮಿಕ್ಸಿಯಲ್ಲಿ ಬರಗು ಮತ್ತು ಸಬ್ಬಕ್ಕಿಯನ್ನು ಸಣ್ಣ ತರಿಯಾಗಿಸಿಕೊಂಡು ಮಿಕ್ಸಿಂಗ್‌ ಬೌಲ್‌ಗೆ ಹಾಕಿ. ಬಾಣಲೆಯಲ್ಲಿ ಸಾಸಿವೆ, ಕರಿಬೇವಿನ ಒಗ್ಗರಣೆ ಸಿಡಿಸಿ ಇದಕ್ಕೆ ಕಾಳುಮೆಣಸು ತರಿ ಮತ್ತು ಕ್ಯಾರೆಟ್‌ ತುರಿ ಸೇರಿಸಿ ಬಾಡಿಸಿಕೊಂಡು ಮಿಕ್ಸಿಂಗ್‌ ಬೌಲ್‌ಗೆ ಸೇರಿಸಿ. ನಂತರ ಇದಕ್ಕೆ ಮೊಸರು, ಕಾಯಿತುರಿ, ಉಪ್ಪು ಸೇರಿಸಿ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಇಪ್ಪತ್ತು ನಿಮಿಷ ಇಡಿ. ನಂತರ ಇಡ್ಲಿ ಸ್ಟಾಂಡ್‌ಗೆ ಎಣ್ಣೆ ಹಚ್ಚಿ ಹಿಟ್ಟು ಹಾಕಿ ಆವಿಯಲ್ಲಿ ಹತ್ತು ನಿಮಿಷ ಬೇಯಿಸಿ. ಕಾಯಿಚಟ್ನಿಯೊಂದಿಗೆ ಸರ್ವ್‌ ಮಾಡಬಹುದು.

ಖೀಚಡಿ 
ಬೇಕಾಗುವ ಸಾಮಗ್ರಿ: ಬರಗು – ಒಂದು ಕಪ್‌, ಬೆಳ್ತಿಗೆ ಅಕ್ಕಿ- ಅರ್ಧ ಕಪ್‌, ಹೆಸರುಬೇಳೆ – ಕಾಲು ಕಪ್‌, ಹೆಚ್ಚಿದ ಬೀನ್ಸ್‌, ಕ್ಯಾರೆಟ್‌, ಆಲೂಗಡ್ಡೆ, ನೆನೆಸಿದ ಬಟಾಣಿ – ತಲಾ ಕಾಲು ಕಪ್‌, ಜೀರಿಗೆಪುಡಿ – ಒಂದು ಚಮಚ, ಕಾಳುಮೆಣಸಿನ ಪುಡಿ- ಒಂದು ಚಮಚ, ಕೆಂಪುಮೆಣಸಿನ ಪುಡಿ – ಒಂದು ಚಮಚ, ಸಾರಿನ ಪುಡಿ – ಎರಡು ಚಮಚ, ಶುಂಠಿ – ಅರ್ಧ ಇಂಚು, ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ – ಒಂದು, ಉಪ್ಪು ರುಚಿಗೆ ಬೇಕಷ್ಟು.

ತಯಾರಿಸುವ ವಿಧಾನ: ಕುಕ್ಕರ್‌ನಲ್ಲಿ ಎರಡು ಚಮಚ ತುಪ್ಪಹಾಗೂ ಎಣ್ಣೆ ಹಾಕಿ ನೀರುಳ್ಳಿ , ಟೊಮೆಟೋ, ಹಸಿಮೆಣಸು ಇತ್ಯಾದಿಗಳನ್ನು ಬಾಡಿಸಿಕೊಂಡು ಇದಕ್ಕೆ ಚಿಟಿಕಿ ಹಳದಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಗೂ ಮೇಲೆ ತಿಳಿಸಿದ ತರಕಾರಿಗಳು ಮತ್ತು ಪುಡಿಗಳನ್ನು ಸೇರಿಸಿ ಮಿಶ್ರಮಾಡಿ. ನಂತರ ಇದಕ್ಕೆ ಬರಗು, ಅಕ್ಕಿ, ಹೆಸರು ಬೇಳೆಗಳನ್ನು ಸೇರಿಸಿ ನಾಲ್ಕು ಕಪ್‌ ನೀರು ಸೇರಿಸಿ ಬೇಯಿಸಿ. ಒಂದು ವಿಶಲ್‌ ಕೂಗಿಸಿ ಹತ್ತು ನಿಮಿಷ ಬೇಯಿಸಿ. ನಂತರ ಮೇಲಿನಿಂದ ಕಾಯಿತುರಿ ಮತ್ತು ಕೊತ್ತಂಬರಿಸೊಪ್ಪು$ಹರಡಿ ಸರ್ವ್‌ ಮಾಡಬಹುದು.

ಗೀತಸದಾ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.