ಕಿಶೋರಿಯ ತಲ್ಲಣಗಳು


Team Udayavani, Aug 4, 2017, 12:04 PM IST

04-YUVA-9.jpg

ಹೊತ್ತಲ್ಲದ ಹೊತ್ತಿನಲ್ಲಿ ಪಕ್ಕದ ಮನೆಯ ವೈಶಾಲಿರವರ ಮಗಳು ಅಂಕಿತಾಳನ್ನು ಅವಳ ಕ್ಲಾಸ್‌ ಟೀಚರ್‌ ರಿಕ್ಷಾದಲ್ಲಿ ಕರೆದುಕೊಂಡು ಬಂದರು. ಆರನೇ ತರಗತಿ ಓದುತ್ತಿದ್ದ ಅಂಕಿತಾ ವೈಶಾಲಿಯವರನ್ನು ನೋಡುತ್ತಿದ್ದಂತೆ ಓಡಿ ಬಂದು ತಾಯಿಯನ್ನು ತಬ್ಬಿಕೊಳ್ಳುತ್ತಾ ಜೋರಾಗಿ ಅಳತೊಡಗಿದಳು. ನಾನು ಎಲ್ಲಿಗೋ ಹೊರಟವಳು ಅಂಕಿತಾ ಮತ್ತು ಅವಳ ಕ್ಲಾಸ್‌ ಟೀಚರನ್ನು ನೋಡಿ ಅವರ ಮನೆಯ ಬಳಿ ಬಂದೆ. ವೈಶಾಲಿಯವರು “”ಯಾಕೆ? ಏನಾಯ್ತು? ಯಾಕೆ ಅಳ್ತಾ ಇದ್ದೀಯಾ?” ಗಾಬರಿಯಿಂದ ಕೇಳಿದರು. ಕೂಡಲೇ ಅಂಕಿತಾಳ ಕ್ಲಾಸ್‌ ಟೀಚರ್‌, “”ತಲೆಕೆಡಿಸಿಕೊಳ್ಳುವ ವಿಚಾರ ಏನಿಲ್ಲ, ನಿಮ್ಮ ಮಗಳು ಪ್ರೌಢಾವಸೆœಗೆ ಬಂದಿದ್ದಾಳೆ, ಸ್ಕೂಲಲ್ಲಿ ತುಂಬಾ ಮಂಕಾಗಿದ್ಳು. ಅದಕ್ಕೆ ನಾನೇ ಕರ್ಕೊಂಡು ಬಂದೆ… ನಂಗೆ ಸ್ವಲ್ಪ ಕೆಲ್ಸಯಿದೆ. ನಾನು ಹೊರಡುತ್ತೇನೆ. ಅವಳಿಗೆ ನಿಧಾನವಾಗಿ ಕೂರಿಸಿ ಹೇಳಿ…” ಎಂದು ಹೇಳಿ ಹೊರಟು ಹೋದರು. ವೈಶಾಲಿ ಮಗಳ ಕೈ ಹಿಡಿಯುತ್ತ, “”ಅಳ್‌ಬೇಡ… ಗಾಬರಿ ಆಗುವಂತಹದ್ದು ಏನಿಲ್ಲ, ನೀನು ಚೆನ್ನಾಗಿ ತಿಂದು ಆರೋಗ್ಯವಾಗಿ ಇರಬೇಕು. ಇದು ಸಂತೋಷ ಪಡೋ ವಿಚಾರ” ಎಂದರು. ಅವಳು, “” ಅಮ್ಮ, ಕೆಲವು ಮಕ್ಕಳು ನನ್ನ ಬಟ್ಟೆಯನ್ನು ನೋಡಿ ಗುಸು ಗುಸು ಮಾತಾನಾಡ್ತ ನಗ್ತಿದ್ರು… ನಂಗೆ ತುಂಬಾ ಭಯವಾಗ್ತಿದೆ. ನಾನು ಸ್ಕೂಲಿಗೆ ಹೋಗಲ್ಲ. ಪ್ಲೀಸ್‌ ಅಮ್ಮ” ಎಂದಾಗ ತಾಯಿ ಎಷ್ಟು ಸಮಾಧಾನ ಮಾಡಿದರೂ ಆಕೆ ಸಮಾಧಾನವಾಗುವ ಸ್ಥಿತಿಯಲ್ಲಿ ಇರಲಿಲ್ಲ.

ಹಿಂದಿನ ಕಾಲದಲ್ಲಿ ಹೆಣ್ಣು ಮಗಳು ಪ್ರಥಮಬಾರಿಗೆ ಋತುಮತಿಯಾದಾಗ ಊರು ಮತ್ತು ಊರಿನ ಎಲ್ಲಾ ಸಂಬಂಧಿಕರನ್ನು, ಹಿತೈಷಿಗಳನ್ನು ಮತ್ತು ಹಿರಿಯರನ್ನು ಕರೆದು ಅದನ್ನು ಸಂಭ್ರಮವೆಂದು ಭಾವಿಸಿ ದೊಡ್ಡ ಸಮಾರಂಭವನ್ನೇ ಏರ್ಪಡಿಸುತ್ತಿದ್ದರು. 

ಆ ಸಮಾರಂಭ ಮಾಡಲು ಹಿರಿಯರೇ ಕೊಡುವ ಮೂರು ಮುಖ್ಯ ಕಾರಣವೆಂದರೆ-

  • ಹೆಣ್ಣು ಮಗಳು ಮಾನಸಿಕವಾಗಿ ಗಟ್ಟಿಗೊಳ್ಳಲು ಹಾಗೂ ನಾವೆಲ್ಲ ನಿನ್ನ ಜೊತೆ ಇದ್ದೇವೆ ಎಂದು ಆಕೆಗೆ ಅರ್ಥ ಮಾಡಿಸಲು.
  •  “ನೀನೀಗ ಈ ಮನೆಯಿಂದ ಮತ್ತೂಂದು ಮನೆಗೆ ಹೋಗಿ ಸಂಸಾರದ ಭಾರ ಹೊರಲು ಸಮರ್ಥಳು’ ಎಂದು ತಿಳಿಸಲು.
  •  ಆ ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ ನಿಮ್ಮ ಮನೆಯಲ್ಲಿ ಗಂಡುಮಕ್ಕಳಿದ್ದರೆ ಮದುವೆ ಮಾತುಕತೆಗೂ ಈ ಮೂಲಕ ಆಹ್ವಾನಿಸುತ್ತಿದ್ದೇವೆ ಎಂದು ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಕರೆ ನೀಡಲು.

ಮನೆಮಗಳು ಮೊದಲ ಬಾರಿಗೆ ಋತುಮತಿಯಾದಾಗ ಸಣ್ಣ ಸಮಾರಂಭ ಮಾಡಿ ಆ ಹೆಣ್ಣು ಮಗಳಿಗೂ ಹೆಣ್ತನದ ವಿಶೇಷ ಅನುಭವದ ಸ್ವರ್ಶವನ್ನು ಅನುಭವಿಸಲು ಅವಕಾಶ ನೀಡಿದಂತಾಗಿತ್ತು ಮತ್ತು ಹೆಣ್ತನವನ್ನು ಜಾಗೃತಾವಸ್ಥೆಗೆ ತರುವ ಕೆಲಸ ಈ ಸಮಾರಂಭದಿಂದ ಆಗುತ್ತಿತ್ತು.

ಆಧುನಿಕ ಕಾಲದಲ್ಲಿ
ಈ ಯಾಂತ್ರಿಕ ಯುಗದಲ್ಲಿ ಮಗಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಟ್ಟರೆ ಮನೆಯವರನ್ನು ಹೊರತುಪಡಿಸಿ ತೀರಾ ಆತ್ಮೀಯ ಸಂಬಂಧಿಕರಿಗೂ ತಿಳಿಸುವ ಅಗತ್ಯವಾಗಲಿ,  ಮನಸ್ಥಿತಿಯಾಗಲಿ ಈಗಿಲ್ಲ. ಅದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಟ್ಟು ಎಲ್ಲರನ್ನು ಕರೆಯುವ ಆವಶ್ಯಕತೆ ಇಲ್ಲವೆನ್ನುವ ಅಭಿಪ್ರಾಯ ಅನೇಕ ಪೋಷಕರದ್ದು. ಇಲ್ಲಿ ಅದು ಸರಿ ತಪ್ಪು ಎನ್ನುವ ತರ್ಕ ಅನಾವಶ್ಯಕ. ಅದು ಅವರವರ ಮನೋಭಾವಕ್ಕೆ ಬಿಟ್ಟ ವಿಚಾರ. ಆದರೆ, ಅದನ್ನು ಯಾವ ಮನಸ್ಥಿತಿಯಲ್ಲಿ ಮಕ್ಕಳು ಸ್ವೀಕರಿಸಬೇಕೆಂದು ಅರ್ಥೈಸಿಕೊಳ್ಳುವಂತೆ ಮಾಡುವ ಕೆಲಸ ಪೋಷಕರದ್ದು.

ಇಲ್ಲಿ ಹೆತ್ತ‌ವರ ಜವಾಬ್ದಾರಿ ಏನು?
ಇತ್ತೀಚೆಗೆ ಹೆಣ್ಣುಮಗಳಿಗೆ ಒಂಬತ್ತು, ಹತ್ತು ವರ್ಷ ತುಂಬಿತೆಂದರೆ ಎಲ್ಲಾ ಪೋಷಕರಿಗೂ ಇನ್ನೇನು  ಮಗಳು ಪ್ರೌಢಳಾಗಬಹುದೆ? ಎನ್ನುವ ಯೋಚನೆ ಕಾಡುತ್ತಿರುತ್ತದೆ. ಈ ವಯಸ್ಸಿಗೆ ಪ್ರೌಢಳಾದರೆ ಕಲಿಕೆಗೆ ತೊಂದರೆಯಾಗಬಹುದೆ?ಆಕೆಗೆ ಯಾವ ರೀತಿಯ ಆಹಾರ ಕೊಡಬೇಕು? ಯಾವ ರೀತಿಯ ಆಹಾರ ಕೊಡಬಾರದು? ಆ ಎಳೆಯ ಮನಸ್ಸಿಗೆ ಈ ವಿಷಯದ ಬಗ್ಗೆ ಯಾವ ರೀತಿ ತಿಳಿ ಹೇಳುವುದು? ಹೀಗೆ ಒಂದರ ಹಿಂದೆ ಒಂದು ಇಂತಹ ಅನೇಕ ಪ್ರಶ್ನೆಗಳು ಕಾಡಬಹುದು. ಇದಕ್ಕೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ, ತಮ್ಮೊಂದಿಗೆ ಮಕ್ಕಳು ಅದನ್ನು ಹೇಗೆ ನಿಭಾಯಿಸಿಕೊಳ್ಳಬೇಕೆಂದು ಪೂರ್ವತಯಾರಿ ಪೋಷಕರು ಮಾಡಿಕೊಂಡಿರಬೇಕು.

ಮಕ್ಕಳಿಗೆ ಪೋಷಕರು ತಿಳಿಸಲೇಬೇಕಾದ ಅಂಶಗಳು

  • ಮಗಳು ಪ್ರೌಢಾವಸ್ಥೆಯ ಹೊಸ್ತಿಲಿಗೆ ಇನ್ನೇನು ಕಾಲಿಡಬಹುದು ಎಂಬ ಯೋಚನೆ ನಿಮ್ಮಲ್ಲಿ ಮೂಡಿದಾಗ ಅದರ ಬಗ್ಗೆ ವಿವರಿಸುತ್ತಾ ಅವಳನ್ನು ಮಾನಸಿಕವಾಗಿ ಸಿದ್ಧ ಮಾಡಿ.
  • ಅದರ ಜೊತೆಗೆ ಅದನ್ನು ಅವಳು ಸಕಾರಾತ್ಮಕವಾಗಿ ಸ್ವೀಕರಿಸುವಂತೆ ನೋಡಿಕೊಳ್ಳಿ.
  • ಪ್ರಕೃತಿ ಹೆಣ್ಣಿಗೆ ಕೊಟ್ಟ ವಿಶೇಷ ಸುಂದರ ವರದಾನ ಇದು… ಎಂದು ಮನದಟ್ಟು ಮಾಡಿಕೊಡಿ. 
  • ಆ ಸಂದರ್ಭದಲ್ಲಿ ತನ್ನ ಸ್ವತ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು? ಋತುಮತಿಯಾದಾಗ ಬರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂದು ಮೊದಲೇ ತಿಳಿಸಿರಿ.
  • ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಆಕೆ ಅನುಭವಿಸುವ ಮಾನಸಿಕ ಗೊಂದಲಗಳನ್ನು ಅರಿತು ಸೂಕ್ತವಾದ ಸಮಾಧಾನ ಹೇಳಲು ಪ್ರಯತ್ನಿಸಿ.
  • ಅವರ ಪ್ರತಿಯೊಂದು ಪ್ರಶ್ನೆಗಳಿಗೂ ಅತ್ಯಂತ ತಾಳ್ಮೆಯಿಂದ ವಿವೇಚನೆಯಿಂದ ಉತ್ತರಿಸಿ.
  • ಮಗಳು ಪ್ರೌಢಾವಸ್ಥೆಗೆ ಕಾಲಿಟ್ಟ ಮೇಲೆ ಪುರುಷ ಸಮಾಜದ ಜೊತೆ ಹೇಗೆ ನಡೆದುಕೊಳ್ಳಬೇಕು? ಅವಳಿಗೆ ಅಪಾಯವಾಗುವ ಸಂದರ್ಭ ಬಂದರೆ ಅವಳನ್ನು ಅವಳೇ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದನ್ನು ನಿಮಗೆ ತಿಳಿದ ಮಟ್ಟಿಗಾದರೂ ಸಲಹೆ ನೀಡಿ.
  • ಸಾಧ್ಯವಾದಷ್ಟು ಅವಳಿಗೆ ಉತ್ತಮ ಆಹಾರ ನೀಡುವುದರ ಜೊತೆಗೆ ಹೆಚ್ಚಿನ ಮಾನಸಿಕ ಸ್ಥೈರ್ಯ ತುಂಬಿ.
  • ಪರೀಕ್ಷೆಯ ಸಂದರ್ಭದಲ್ಲೂ ಋತುಮತಿಯಾದಾಗ ಅದನ್ನು ಹೇಗೆ ನಿಭಾಯಿಸಬೇಕೆಂದು ಮನದಟ್ಟಾಗುವಂತೆ ತಿಳಿ ಹೇಳಿ.

ಮಗಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಕಾಲಿಟ್ಟರೆ, ಕೇವಲ ಹೆತ್ತವರ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಶಿಕ್ಷಕರ ಪಾತ್ರವೂ ಜವಾಬ್ದಾರಿಯುತವಾಗಿರಬೇಕು. ಈಗಿನ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಇದಕ್ಕೆ ಸಂಬಂಧಿತ ವಿಚಾರಗಳನ್ನು ಮಕ್ಕಳಿಗೆ ಶಾಲೆಯಲ್ಲೇ ತಿಳಿ ಹೇಳಲಾಗುತ್ತಿದೆ. ಇಂತಹ ಕೆಲಸ ಇನ್ನೂ ಉತ್ತಮ ರೀತಿಯಲ್ಲಿ ಆಗಬೇಕು. ಅವಳನ್ನು ಅವಳು ಹೇಗೆ ರಕ್ಷಿಸಿಕೊಳ್ಳಬೇಕೆಂದು ಅರ್ಥೈಸುವಂತೆ ಹೇಳಿಕೊಡಬೇಕು. 

ಹೆಣ್ಣು ಭೂತಾಯಿಯ ಪ್ರತೀಕ. ಮಣ್ಣು ಫ‌ಲವತ್ತತೆಯಾದಾಗ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಅದೇ ರೀತಿ ಹೆಣ್ಣು ಪ್ರೌಢಳಾದಾಗ ಸಮಾಜಕ್ಕೆ ಹೊಸ ಫ‌ಲವತ್ತತೆಯನ್ನು ಪ್ರಕೃತಿಯೇ ನೀಡುತ್ತದೆ. ಇದರಿಂದ ಮನುಕುಲದ ಉಗಮಕ್ಕೆ ನಾಂದಿಯಾಗುತ್ತದೆ.

ಪೋಷಕರು, ಸಮಾಜ, ಶಿಕ್ಷಣಸಂಸ್ಥೆ, ಎಲ್ಲರೂ ಸೂಕ್ತ ಸಂದರ್ಭದಲ್ಲಿ ಜೊತೆಗಿದ್ದು ಕಿಶೋರಿಯರನ್ನು ಸಶಕ್ತ ನಾಗರಿಕರ‌ಳನ್ನಾಗಿ ಮಾಡುವ ಹೊಣೆಯನ್ನು ವಹಿಸಬೇಕಾಗಿದೆ.

ಶ್ವೇತಾ ನಿಹಾಲ್‌ ಜೈನ್‌

ಟಾಪ್ ನ್ಯೂಸ್

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.