ರೈತರ ಹೋರಾಟಕ್ಕೆ ಬೆಂಬಲ: ಶ್ರೀನಿವಾಸ್
Team Udayavani, Aug 4, 2017, 2:24 PM IST
ಧರ್ಮಪುರ: ಫಿಡರ್ ಚಾನಲ್ ಮತ್ತು ಧರ್ಮಪುರ ತಾಲೂಕು ಕೇಂದ್ರ ಘೋಷಣೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್ ಹೇಳಿದರು.
ಇಲ್ಲಿನ ನಾಡ ಕಚೇರಿ ಮುಂಭಾಗದಲ್ಲಿ ರೈತರು ನಡೆಸುತ್ತಿರುವ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರೈತರು ಪ್ರತಿನಿತ್ಯ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮೌನ ತಾಳಿದೆ. ಹಿರಿಯೂರು ಶಾಸಕರ ಇಚ್ಛಾಶಕ್ತಿ ಕೊರತೆಯಿಂದಾಗಿ ತಾಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಶಾಸಕರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆಯೇ ವಿನಃ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು. ಮನಸ್ಸು ಮಾಡಿದರೆ ಧರ್ಮಪುರ ಕೆರೆಗೆ ನೀರು ತರುವುದು ದೊಡ್ಡ ಕೆಲಸವೇನಲ್ಲ. ರೈತರು ಅನ್ನ ನೀಡದಿದ್ದರೆ ಎಲ್ಲರ ಬದುಕು ಅಯೋಮ ಯವಾಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು. ರೈತರು ಬರದಿಂದ ತತ್ತರಿಸುತ್ತಿದ್ದರೆ ಶಾಸಕರು ಹಣದ ಮದದಿಂದ ಮೆರೆಯುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸಿ. ಶಿವು ಯಾದವ್ ಅವರು ಶಾಮಿಯಾನಾ ವೆಚ್ಚಕ್ಕೆ 25 ಸಾವಿರ ರೂ. ನೆರವು ನೀಡಿದರು. ನಂತರ ಮಾತನಾಡಿದ ಅವರು, ನಮ್ಮ ಹೋರಾಟ ಉಗ್ರವಾಗಿರಬೇಕು. ನೀರು ಬರುವವರೆಗೂ ಹೋರಾಟವನ್ನು ನಿಲ್ಲಿಸಬಾರದು ಎಂದರು. ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಎಲ್. ಗುಣ್ಣಯ್ಯ, ಹೋಬಳಿ ಘಟಕದ ಅಧ್ಯಕ್ಷ ಹಾರ್ಡ್‌ವೇರ್ ಶಿವಣ್ಣ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ವಿ.ಎಸ್. ಫಯಾಜ್, ಹಿರಿಯೂರು ವಿಶ್ವನಾಥ್, ರಾಜ್‌ಕುಮಾರ್, ಪಿ.ಡಿ. ಕೋಟೆ ಮುರಳಿ, ನಿರಂಜನ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಯ್ಯ, ಡಾ| ನರಸಿಂಹಯ್ಯ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.