ಮಿನುಗುವ ಗಡಿನಾಡ ರಂಗಭೂಮಿಯ ರಾಜಕುಮಾರಿ(ರ)


Team Udayavani, Aug 5, 2017, 7:15 AM IST

3bdk01d.jpg

ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸಿ ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ಹಲವಾರು ಕಲಾವಿದರನ್ನು ಕಾಣಬಹುದು. ಅಭಿನಯ ಚತುರತೆ, ಮಾತಿನ ಸೊಗಸು, ಬರಹದ ಮೋಡಿಯಲ್ಲಿ ಜನಮನ ಗೆದ್ದ ಕೆಲವೇ ಕೆಲವು ಕಲಾವಿದರಲ್ಲಿ ರಾಜೇಶ್‌ ಮುಗುಳಿಯು ಒಬ್ಬರು. ರಂಗಭೂಮಿಯ ಪ್ರಬುದ್ಧ ನಟನಾಗಿ, ನಟನಾಸಕ್ತರನ್ನು ಪಳಗಿಸುವ ನಿರ್ದೇಶಕನಾಗಿ, ನಾಟಕಗಳಿಗೆ ಸಾಹಿತ್ಯದ ಸೊಬಗನ್ನು ತುಂಬುವ ಬರಹಗಾರನಾಗಿ ಮಿನುಗುತ್ತಿರುವ ಉದಯೋನ್ಮುಖ ಕವಿಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ರಾಜೇಶ್‌ ಮುಗುಳಿ ವರ್ಕಾಡಿಯ ಕೊಡ್ಡಮೊಗರು ಗ್ರಾಮದ ಮುಗುಳಿಯ ಬಾಬು ಕುಲಾಲ್‌ ಸುಮತಿ  ದಂಪತಿಯ ಪುತ್ರ. ಶಾಲಾ ಕಾಲೇಜುಗಳಲ್ಲಿ ತನ್ನ ನಟನಾಸಕ್ತಿಗೆ ವೇದಿಕೆಯನ್ನು ಕಂಡುಕೊಂಡು ರಾಜೇಶ್‌ ಅನಂತರದ ದಿನಗಳಲ್ಲಿ ರಂಗಭೂಮಿಯನ್ನೇರುವಲ್ಲಿ ಯಶಸ್ವಿಯಾದರು. 


ಕಾಲೇಜು ಶಿಕ್ಷಣದ ಕೊನೆಯ ಸಂದರ್ಭದಲ್ಲಿ ಅಭಿನಯಿಸಿದ “ಗುಟ್ಟು ರಟ್ಟಾನಗ’‌ ನಾಟಕದ ಸ್ತ್ರೀ ಪಾತ್ರವು ಇವರ ಕಲಾ ಬದುಕಿಗೆ ಹೊಸ ತಿರುವನ್ನು ನೀಡಿತು. 2005ರಲ್ಲಿ ಕೃಷ್ಣ ಜೆ. ಮಂಜೇಶ್ವರ ಅವರ ಶಾರದಾ ಆರ್ಟ್ಸ್ ಕಲಾವಿದೆರ್‌ ತಂಡದಲ್ಲಿ “ಜ್ವಾಲಮುಖೀ’ ಎಂಬ ನಾಟಕದ ಮೂಲಕ ತಮ್ಮ ವೃತ್ತಿಪರ ಕಲಾವಿದನಾಗಿ ಸೇರ್ಪಡೆಗೊಂಡು ಇವರು ತನ್ನನ್ನು ಕಲಾಸೇವೆಗೆ ಮುಡಿಪಾಗಿಟ್ಟರು. ರಾಜೇಶ್‌ ಮುಗುಳಿ ಅಭಿನಯದ “ಬರುವೆರಾ’,”ಅಕ್ಕ ಬತ್ತಿ ಬೊಕ್ಕ ಒಟ್ಟಿಗೆ ಪೋಯಿ’,”ಸಾದಿ ತಪ್ಪೊಡಿ’, “ಎಡ್ಡೆಡುಪ್ಪುಗ’, “ಸುದ್ದಿ ತಿಕ್‌Rಂಡ್‌’, “ಆರ್‌ ಪನ್ಲಕ’ ಮೊದಲಾದ ನಾಟಗಳ ನಾಯಕಿ, ಖಳನಾಯಕಿ, ಹಾಸ್ಯ ಸ್ತ್ರೀ ಪಾತ್ರಗಳಿಗೆ ಕಲಾಭಿಮಾನಿಗಳ ಅಭಿಮಾನ ಹಾಗೂ ಪ್ರೋತ್ಸಾಹವನ್ನೂ ಗಳಿಸಿಕೊಂಡು ರಂಗಭೂಮಿಯಲ್ಲಿ ಮಿನುಗತೊಡಗಿದರು. ಇವರು ಪಾತ್ರವನ್ನು ಕೇವಲ ಸ್ತ್ರೀ ಪಾತ್ರಗಳಿಗೆ ಮೀಸಲಿಡದೆ 2016ರಲ್ಲಿ “ನಿತ್ಯೆ ಬನ್ನಗ’ ಎಂಬ ನಾಟಕದ ಮೂಲಕ ವಿಭಿನ್ನವಾದ ಪುರುಷ ಪಾತ್ರದಲ್ಲೂ ಅಭಿನಯಿಸಿ ತನ್ನ ಅಭಿನಯ ಚಾತುರ್ಯತೆಯನ್ನು ತೆರೆದಿಟ್ಟು ಜನ ಪ್ರಶಂಸೆಗಳಿಸಿದರು. ತನ್ನ ನಟನಾ ಕೌಶಲ್ಯದಿಂದ ಹಲವಾರು ಬಹುಮಾನಗಳನ್ನೂ ಗಳಿಸಿದ್ದಾರೆ.


2010ರಲ್ಲಿ ಜರಗಿದ ಅಂತ ರ್ಜಿಲ್ಲಾ ನಾಟಕ ಸ್ಪರ್ಧೆಯಲ್ಲಿ “ಎಲ್ಲೆ ಗೊತ್ತಾವು’ ನಾಟಕದ ಕಥಾ ನಾಯಕಿ ಪಾತ್ರಕ್ಕೆ ಬಹುಮಾನ 2011ರಲ್ಲಿ ಕುತ್ತಾರಿನಲ್ಲಿ ಜರಗಿದ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಬಹುಮಾನ 2017ರಲ್ಲಿ “ಆರ್‌ ಪನ್ಲಕ’ ನಾಟಕದಲ್ಲಿ ಉತ್ತಮ ಪೋಷಕ ನಟಿ ಬಹುಮಾನ ಮಾತ್ರವಲ್ಲದೆ ಇವರು ಅಭಿನಯಿಸಿದ ನಮ್ಮ ಟಿವಿಯಲ್ಲಿ ಯಶಸ್ವಿ ಯಾಗಿ ಜನಮನಗೆದ್ದ “ಬಲೆತೆಲಿಪಾಲೆ’ ಕಲರ್ಸ್‌ ಸೂಪರ್‌ ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರವಾಗುವ ಮಜಾಭಾರತ ಕಾರ್ಯಕ್ರಮದಲ್ಲಿಯೂ ಮಿಂಚಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೇ ಯಕ್ಷಗಾನ ರಂಗದಲ್ಲಿಯೂ ತಾನು ಸೈ ಎನಿಸಿಕೊಂಡ ಈ ಕಲಾವಿದ ಈಗಾಗಲೇ “ಮೋಕೆದ ಆರಿಯಣ್ಣೆ’ ಎಂಬ ತುಳು ಹಾಗೂ “ಒಂದು ಮೊಟ್ಟೆಯ ಕಥೆ’ ಎಂಬ ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

ಗಡಿನಾಡ ಕಲಾ ಜಗತ್ತಿಗೆ ನೀಡಿದ ಕೊಡುಗೆ ಆಪಾರ ಸಾಧನೆಯ ಹಾದಿಯಲಿ ಮಾರ್ಗದರ್ಶಕ ರಾಗಿ, ಬೆನ್ನೆಲುಬಾಗಿ ಈ ಮಟ್ಟಕ್ಕೆ ಬೆಳೆಯಲು ಪ್ರೀತಿಯಿಂದ ಕೈಹಿಡಿದು ಮುನ್ನಡೆಸಿದ ಕೃಷ್ಣ ಜೆ. ಮಂಜೇಶ್ವರ ಇವರನ್ನು ಪೂಜನೀಯ ಭಾವದಿಂದ ಸ್ಮರಿಸಿಕೊಳ್ಳುತ್ತಾರೆ ರಾಜೇಶ್‌ ಮುಗುಳಿ. ಆದುದರಿಂದಲೇ ನಟನಾಗಿ, ನಿರ್ದೇಶಕನಾಗಿ, ಸಾಹಿತ್ಯ ಗಾರನಾಗಿ ತುಳುರಂಗಭೂಮಿ ಯಲ್ಲಿ ಸಕ್ರಿಯವಾಗಿರುವ ರಾಜೇಶ್‌ ಮುಗುಳಿಯವರ ಕಿರಿಯ ವಯಸ್ಸಿನ ಹಿರಿಯ ಸಾಧನೆ ಅಭಿನಂದನಾರ್ಹ. ರಂಗಮಿತ್ರೆರ್‌ ಪೆರ್ಮುದೆ ಇವರು ತುಳುನಾಡ ಕದಿಕೆ ಬಿರುದನ್ನು ನೀಡಿ ಗೌರವಿಸಿದ್ದಾರೆ.ಈ ಗಡಿನಾಡಿನ ಮಿನುಗುವ ರಾಜಕುಮಾರಿ (ರ)ಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿ. ಪ್ರಶಸ್ತಿ ಗೌರವಗಳ ಗರಿ ಇವರನ್ನು ಅಲಂಕರಿಸಲಿ.

ಶಾರದಾ ತಂಡದ ಪ್ರಭಾವಿ ಕಲಾವಿದರಲ್ಲಿ ಒಬ್ಬರಾದ ರಾಜೇಶ್‌ ಮುಗುಳಿಯವರು ಶಾಂತ ಸ್ವಭಾವದ, ಪ್ರಬುದ್ದ ಕಲಾವಿದ. ತನ್ನ ಪಾತ್ರಗಳಿಗೆ ಜೀವ ತುಂಬುವ ಅವರ ನೈಜ, ಮನಮೋಹಕ ಅಭಿನಯ ಇವರ ಆಸ್ತಿ. ಎಲ್ಲರಿಗೂ ಆತ್ಮೀಯನಾಗಿರುವ ರಾಜೇಶ್‌ ತಂಡದಲ್ಲಿ ತೋರುವ ಕಾಳಜಿ ಹಾಗೂ ಇತರ ಕಲಾವಿದರೊಂದಿಗೆ ಪ್ರೀತಿ ಗೌರವದಿಂದ ಬೆರೆಯುವ ರೀತಿ ಮೆಚ್ಚತಕ್ಕದ್ದು. ಇವರು ಕಲಾವಿದನಾಗಿ ಇನ್ನೂ ಎತ್ತರಕ್ಕೆ ಬೆಳೆಯುವಂತೆ ಕಲಾಮಾತೆ ಆನುಗ್ರಹಿಸಲಿ.
– ಗಡಿನಾಡ ಕಲಾನಿಧಿ ಕೃಷ್ಣ ಜಿ . ಮಂಜೇಶ್ವರ

ಕಲೆಯ ಬೀಡಾದ ಕಾಸರಗೋಡಿನಲ್ಲಿ ಇಂತಹ ಪ್ರಬುದ್ಧ 
ಕಲಾವಿದ ಬೆಳೆದುಬರುತ್ತಿರು ವುದು ಸಂತೋಷದ ವಿಷಯ. ಸರಳ ವ್ಯಕ್ತಿತ್ವದ ಇವರ ಹಲವಾರು ನಾಟಕಗಳನ್ನು ನೋಡುವ ಭಾಗ್ಯ ನಮಗೆ ದೊರೆತಿದೆ.ಇವರಂತಹ ಕಲಾವಿದ ಬಹಳ ಆಪರೂಪ ಇವರ ಸಾಧನೆ ಹೀಗೆ ಮುಂದುವರಿದು ಕೀರ್ತಿಶಾಲಿಯಾಗಲಿ

-ಎ.ಆರ್‌ ಸುಬ್ಬಯ್ಯ ಕಟ್ಟೆ ಕೈರಳಿ ಪ್ರಕಾಶನ

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

Kumbla: ಬುರ್ಖಾಧಾರಿ ಯುವಕ ಪೊಲೀಸ್‌ ವಶಕ್ಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.