ಪೊಲೀಸ್ ಇಲಾಖೆಗೆ ಸರ್ಜರಿ; 21 ಐಪಿಎಸ್ ಅಧಿಕಾರಿಗಳ ವರ್ಗ
Team Udayavani, Aug 5, 2017, 7:00 AM IST
ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲರಾದ ಪೊಲೀಸ್ ಅಧಿಕಾರಿಗಳನ್ನು ಸಂಪೂರ್ಣವಾಗಿ ಎತ್ತಂಗಡಿ ಮಾಡಿರುವ ಸರ್ಕಾರ, ಶುಕ್ರವಾರ ರಾಜ್ಯಾದ್ಯಂತ ಒಟ್ಟು 21 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆ ವೇಳೆ ಪೊಲೀಸ್ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಪೊಲೀಸರನ್ನು ಸಂಪೂರ್ಣವಾಗಿ ಬದಲಿಸಿದ್ದು, ಉಡುಪಿ ಎಸ್ಪಿ, ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಎಸ್ಪಿ ವರ್ಗಾವಣೆಯಾಗಿದ್ದಾರೆ.
ಉಡುಪಿ ಎಸ್ಪಿಯಾಗಿದ್ದ ಕೆ.ಟಿ.ಬಾಲಕೃಷ್ಣ ಅವರನ್ನು ಬೆಂಗಳೂರು ಗೃಹರಕ್ಷಕ ದಳಕ್ಕೆ ವರ್ಗಾಯಿಸಲಾಗಿದ್ದು, ಅಲ್ಲಿಗೆ ಸಂಜೀವ್ ಎಂ.ಪಾಟೀಲ್ ಅವರನ್ನು ನಿಯೋಜಿಸಿದೆ. ಮಂಗಳೂರು ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಂ.ಶಾಂತರಾಜು ಅವರನ್ನು ಬೆಂಗಳೂರು ನಗರ ಗುಪ್ತಚರ ವಿಭಾಗದ ಡಿಸಿಪಿಯಾಗಿ ನಿಯೋಜಿಸಲಾಗಿದ್ದು, ಅವರ ಜಾಗಕ್ಕೆ ಪುಟ್ಟಮಾದಯ್ಯ ಅವರನ್ನು ವರ್ಗಾವಣೆ ಮಾಡಿದೆ. ಮಂಗಳೂರು ನಗರದ ಡಿಸಿಪಿ (ಅಪರಾಧ ಮತ್ತು ಸಂಚಾರ) ಹನುಮಂತರಾಯ ಅವರನ್ನು ರಾಮನಗರ ಜಿಲ್ಲೆ ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಆ ಹುದ್ದೆಗೆ ಯಾರನ್ನೂ ನಿಯೋಜಿಸಿಲ್ಲ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ ಅವರನ್ನು ಮೈಸೂರು ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹುದ್ದೆಗೆ ನಿಯೋಜಿಸಲಾಗಿದ್ದು, ಸದ್ಯ ಆ ಹುದ್ದೆ ಖಾಲಿ ಇದೆ.
ಕರಾವಳಿ ಭಾಗದಲ್ಲಿ ಕೋಮು ಗಲಭೆ ಸೇರಿ ಹಿಂಸಾಚಾರ ನಡೆದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದರೂ ಆ ಬಗ್ಗೆ
ಸಕಾಲದಲ್ಲಿ ಗುಪ್ತಚರ ಇಲಾಖೆ ಮಾಹಿತಿ ನೀಡಿಲ್ಲವೆಂದು ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಈ ಸುತ್ತಿನ ವರ್ಗಾವಣೆಯಲ್ಲೂ ಬೆಂಗಳೂರು ನಗರ ವಿಭಾಗದ ಗುಪ್ತಚರ ಇಲಾಖೆ ಡಿಸಿಪಿ ಟಿ.ಶ್ರೀಧರಅವರನ್ನು ಬೆಂಗಳೂರಿನಎಸಿಬಿಯ ಎಸ್ಪಿಯಾಗಿ ನೇಮಿಸಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ. ವರ್ಗಾವಣೆಗೊಂಡ ಇತರ ಅಧಿಕಾರಿಗಳ ಹೆಸರು, ನಿಯೋಜನೆಗೊಂಡ ಹುದ್ದೆಯ ವಿವರ ಹೀಗಿದೆ.
ಸಿ.ವಂಶಿಕೃಷ್ಣ- ನಿರ್ದೇಶಕರು, ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು. ನಿಖಂ ಪ್ರಕಾಶ್ ಅಮ್ರಿತ್- ಕಾರಾಗೃಹ ಮುಖ್ಯ ಅಧೀಕ್ಷಕ, ಕೇಂದ್ರ ಕಾರಾಗೃಹ, ಪರಪ್ಪನ ಅಗ್ರಹಾರ, ಬೆಂಗಳೂರು. ಅರುಣ್ ರಂಗರಾಜನ್- ಎಸ್ಪಿ, ಗುಪ್ತಚರ ಇಲಾಖೆ, ಬೆಂಗಳೂರು. ಜೋಶಿ ಶ್ರೀನಾಥ್ ಮಹದೇವ್- ಎಸ್ಪಿ, ಚಿತ್ರದುರ್ಗ. ಡಿ.ದೇವರಾಜ್-ಎಸ್ಪಿ, ಬೀದರ್. ಡಿ.ಆರ್.ಸಿರಿಗೌರಿ-ಎಸ್ಪಿ, ಎಸ್‌ಸಿಆರ್‌ಬಿ,
ಬೆಂಗಳೂರು. ಸವಿತಾ- ಎಐಜಿಪಿ, ಕೇಂದ್ರ ಕಚೇರಿ, ಬೆಂಗಳೂರು. ಸಿ.ಕೆ.ಬಾಬು-ಡಿಸಿಪಿ, ಅತಿ ಗಣ್ಯರ ಭದ್ರತೆ, ಬೆಂಗಳೂರು. ಎಸ್.ಗಿರೀಶ್- ಡಿಸಿಪಿ, ಈಶಾನ್ಯ ವಿಭಾಗ,ಬೆಂಗಳೂರು. ಎಂ.ಅಶ್ಚಿನಿ- ಎಐಜಿಪಿ, ಅಪರಾಧ, ಬೆಂಗಳೂರು. ಎ.ಎನ್.ಪ್ರಕಾಶ್ ಗೌಡ-ಎಸ್ಪಿ, ನಿರ್ದೇಶಕ (ಭದ್ರತೆ ಮತ್ತು ನಿಗಾ), ಬಿಎಂಟಿಸಿ. ಟಿ.ಪಿ.ಶಿವಕುಮಾರ್-ಡಿಸಿಪಿ, ಸಂಚಾರ (ಪಶ್ಚಿಮ) ಬೆಂಗಳೂರು.
ಕೆ.ಪರಶುರಾಮ- ಎಸ್ಪಿ, ಹಾವೇರಿ. ಎಚ್.ಡಿ.ಆನಂದಕುಮಾರ್- ಎಸ್ಪಿ, ಸಿಐಡಿ,ಬೆಂಗಳೂರು.
ಕೆಎಎಸ್ ಅಧಿಕಾರಿಗಳು…
ಎ.ಬಿ.ಬಸವರಾಜು- ಜಂಟಿ ಆಯುಕ್ತ, ಪಶ್ಚಿಮ ವಲಯ, ಬಿಬಿಎಂಪಿ. ಎಂ.ಸತೀಶ್ ಕುಮಾರ್- ಉಪ ಕಾರ್ಯದರ್ಶಿ (ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. ಶಾಂತಾ ಎಲ್.ಹುಲ್ಮನಿ- ಹೆಚ್ಚುವರಿ ಜಿಲ್ಲಾಧಿಕಾರಿ, ಹಾವೇರಿ. ಎಂ.ಕೆ.ಜಗದೀಶ್-ಉಪವಿಭಾಗಾಧಿಕಾರಿ, ಬೆಂಗಳೂರು ಉತ್ತರ ಉಪವಿಭಾಗ, ಬೆಂಗಳೂರು.ರಂಗನಾಥ್-ವಿಶೇಷ ಭೂಸ್ವಾಧೀನಾಧಿಕಾರಿ, ಬಿಡಿಎ, ಬೆಂಗಳೂರು. ಆರ್.
ಲೋಕನಾಥ್-ಉಪ ಕಾರ್ಯದರ್ಶಿ-4, ಬಿಡಿಎ, ಬೆಂಗಳೂರು. ಬಸವರಾಜ್ ಆರ್.ಸೋಮಣ್ಣನವರ್, ವಿಶೇಷ ಭೂಸ್ವಾಧೀನಾಧಿಕಾರಿ, ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲ್ವೆ ಯೋಜನೆ, ತುಮಕೂರು. ಎಸ್.ಎಂ.ಮಂಗಳಾ- ಸಹಾಯಕ ಆಯುಕ್ತರು, ಕೆಐಎಡಿಬಿ, ಬೆಂಗಳೂರು.
7 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು: ಏಳು ಐಎಎಸ್ ಅಧಿಕಾರಿಗಳು ಹಾಗೂ ನಾಲ್ವರು ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಐಎಎಸ್: ಸಂದೀಪ್ ದವೆ- ಡೈರೆಕ್ಟರ್ ಜನರಲ್ ಆಡಳಿತ ಮತ್ತು ತರಬೇತಿ ಸಂಸ್ಥೆ, ಮೈಸೂರು, ಎಂ.ಲಕ್ಷ್ಮೀ ನಾರಾಯಣ್- ಅಪರ ಕಾರ್ಯದರ್ಶಿ,ಸಮಾಜ ಕಲ್ಯಾಣ ಇಲಾಖೆ, ಮನೀಶ್ ಮೌದ್ಗಿಲ್-ಕಂದಾಯ ಇಲಾಖೆಯ ಭೂ ದಾಖಲೆಗಳ ಸರ್ವೇ ಮತ್ತು ಭೂ ದಾಖಲೆಗಳ ಆಯುಕ್ತ, ವಿ.ಪಿ.ಇಕ್ಕೇರಿ-ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದಿಟಛಿ ನಿಗಮ ವ್ಯವಸ್ಥಾಪಕ ನಿರ್ದೇಶಕ, ಮಂಜುನಾಥ ಜೆ- ಯಾದಗಿರಿ ಜಿಲ್ಲಾಧಿಕಾರಿ, ಪಿ ಮಣಿವಣ್ಣನ್- ವಾರ್ತಾ ಮತ್ತು ಸಾರ್ವಜನಿಕ ಸಂರ್ಪರ್ಕ ಇಲಾಖೆ ಕಾರ್ಯದರ್ಶಿ ಹಾಗೂ ಕೆಶಿಫ್ ಮುಖ್ಯ ಯೋಜನಾ ಅಧಿಕಾರಿ(ಹೆಚ್ಚುವರಿ), ಹೇಮಲತಾ ಪಿ.-ಸಹಕಾರ ಇಲಾಖೆ ಕಾರ್ಯದರ್ಶಿ.
ಕೆಎಎಎಸ್: ಕೆಎಎಸ್( ಹಿರಿಯಶ್ರೇಣಿ) ಅಧಿಕಾರಿಗಳಾದ ಎಚ್.ಬಸವರಾಜೇಂದ್ರ, ಕೊಡಗು ಜಿಲ್ಲಾಪಂಚಾಯಿತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಾನಕಿ ಕೆ.ಎಂ- ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಶಿವಾನಂದ ಕಾಪಶಿ – ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಲತಾ.ಆರ್- ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.