ತೇಜಸ್ವಿನಿಗೆ ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ: ನಾಳೆ ಪ್ರದಾನ
Team Udayavani, Aug 5, 2017, 12:55 PM IST
ಹುಬ್ಬಳ್ಳಿ: ಉದಯೋನ್ಮುಖ ಹಿಂದೂಸ್ತಾನಿ ಗಾಯಕಿ ತೇಜಸ್ವಿನಿ ಶ್ರೀಹರಿ (ಮಳಗಿ) ಅವರು ಡಾ| ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ದು, ಆ.6ರಂದು ಸಂಜೆ 6:00ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಡಾ| ಮಲ್ಲಿಕಾರ್ಜುನ ಪಾಟೀಲ ಅವರ ದತ್ತಿ ದಾನದಿಂದ ಉದಯೋನ್ಮುಖ ಸಂಗೀತ ಕಲಾವಿದರಿಗೆ ಪುರಸ್ಕಾರ ನೀಡಲಾಗುತ್ತಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ವಹಿಸಲಿದ್ದಾರೆ.
ಧಾರವಾಡ ಆಕಾಶವಾಣಿಯ ನಿವೃತ್ತ ಹಿರಿಯ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ| ನಂದಾ ಪಾಟೀಲ, ಡಾ| ಮಲ್ಲಿಕಾರ್ಜುನ ಪಾಟೀಲ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವಕುಮಾರ ಪಾಟೀಲ ಅವರ “ಜಗವೆಲ್ಲಾ ನಗುತಿರಲಿ’ ಧ್ವನಿಸುರಳಿ ಕೂಡ ಬಿಡುಗಡೆಯಾಗಲಿದೆ. ನಂತರ ಪ್ರಶಸ್ತಿ ಪುರಸ್ಕೃತೆ ತೇಜಸ್ವಿನಿ ಶ್ರೀಹರಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಲಾವಿದೆ ತೇಜಸ್ವಿನಿ ಪರಿಚಯ: ಡಾ| ನಂದಾ ಪಾಟೀಲ “ವಚನ ಸಂಗೀತ’ ಪುರಸ್ಕಾರಕ್ಕೆ ಭಾಜನರಾದ ತೇಜಸ್ವಿನಿ ಶ್ರೀಹರಿ (ಮಳಗಿ) ಅವರು ಹುಬ್ಬಳ್ಳಿಯ ಶೋಭಾ ಹಾಗೂ ಮುರಲೀಧರ ಮಳಗಿ ಅವರ ಪುತ್ರಿಯಾಗಿದ್ದು, ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
ನಾಡಿನ ಹೆಸರಾಂತ ಹಿಂದೂಸ್ತಾನಿ ಗಾಯಕ ಪಂ| ಬಾಲಚಂದ್ರ ನಾಕೋಡ ಅವರಿಂದ ಸಂಗೀತಾಭ್ಯಾಸ ಆರಂಭಿಸಿದ ತೇಜಸ್ವಿನಿ ಅವರು ನಂತರ ಪಂ| ಕೃಷ್ಣರಾವ್ ಇನಾಮದಾರ ಹಾಗೂ ಡಾ| ಗಂಗೂಬಾಯಿ ಹಾನಗಲ್ಲ ಗುರುಕುಲದ ವಿದುಷಿ ವಿಜಯಾ ಜಾಧವ ಅವರಿಂದಲೂ ಸಂಗೀತ ತರಬೇತಿ ಪಡೆದಿದ್ದಾರೆ.
ಅಲ್ಲದೇ ಪದ್ಮಶ್ರೀ ಡಾ| ವೆಂಕಟೇಶ ಕುಮಾರ ಅವರ ಮಾರ್ಗದರ್ಶನ ಪಡೆದಿದ್ದಾರೆ. ತೇಜಸ್ವಿನಿ ತಮ್ಮ 16ನೇ ವಯಸ್ಸಿನಲ್ಲಿ ಈ-ಟಿವಿ ಆಯೋಜಿಸಿದ್ದ “ವಾಯ್ಸ ಆಫ್ ಕರ್ನಾಟಕ’ ರಿಯಾಲಿಟಿ ಶೋದಲ್ಲಿ ಉತ್ತರ ಕರ್ನಾಟಕದಿಂದ ಪ್ರತಿನಿಧಿಸಿದ್ದರು. ಮೈಸೂರು ದಸರಾ ಹಾಗೂ ಹಂಪಿ ಉತ್ಸವಗಳಲ್ಲದೇ ಅನೇಕ ಜಿಲ್ಲಾ ಉತ್ಸವಗಳಲ್ಲಿ ಸೇರಿದಂತೆ ರಾಜ್ಯ-ಹೊರ ರಾಜ್ಯದ ಇನ್ನಿತರೆಡೆ ಸಂಗೀತ ಕಾರ್ಯಕ್ರಮ ನೀಡಿ ಜನಮನ ಸೂರೆಗೊಂಡಿದ್ದಾರೆ.
ಕಳೆದ ವರ್ಷ “ನಿನ್ನ ಅಂಗಳದೊಳಗೆ’ ಎಂಬ ದಾಸವಾಣಿ ಸಿಡಿ ಕೂಡ ಬಿಡುಗಡೆಗೊಂಡಿದೆ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ತೇಜಸ್ವಿನಿ ಸದ್ಯ ಬೆಂಗಳೂರಿನ ಅಂತಾರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದುಷಿ ಪೂರ್ಣಿಮಾ ಭಟ್ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.