ಕ್ಷಾಮ ಡಂಗೂರ ನಾವು,ನೀವು,ನೀರು


Team Udayavani, Aug 5, 2017, 4:20 PM IST

569.jpg

ಕರ್ನಾಟಕದಲ್ಲಿ ಕೃಷಿಯನ್ನು ಅವಲಂಬಿಸಿರುವ ರೈತರು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ. ಅನೇಕ ವಿದ್ಯಾವಂತರು ವ್ಯವಸಾಯ ಮಾಡಲು ತಯಾರಾಗಿದ್ದಾರೆ. ಆದರೆ ಸವಲತ್ತಿನಿಂದ ವಂಚಿತರಾಗಿ ಪಟ್ಟಣದತ್ತ ಮುಖ ಮಾಡಿದ್ದಾರೆ. ಒಂದು ಕಾಲದಲ್ಲಿ, ನಮ್ಮಲ್ಲೇ ಬೆಳೆದ ಧಾನ್ಯಗಳು ನಾಡಿನ ಜನರಿಗೆ ಸಾಕಾಗುತ್ತಿತ್ತು. ಇಂದಿನ ದಿನಗಳಲ್ಲಿ ಬೇರೆಲ್ಲೋ ಬೆಳೆದ ದವಸಧಾನ್ಯಗಳನ್ನು ಕೊಂಡುತಂದು ಬದುಕುವ ಸ್ಥಿತಿ ಒದಗಿದೆ. ಹಾಗೆಂದ ಮಾತ್ರಕ್ಕೆ ರೈತರು ಬೆಳೆ ಬೆಳೆಯುತ್ತಿಲ್ಲ ಎಂದು ಅರ್ಥವಲ್ಲ. ಸಾಗುವಳಿ ಮಾಡಲಾಗದೆ ಅನೇಕ ರೈತರು ಹತಾಶೆಯಿಂದ ಭೂಮಿಯನ್ನು ಬಂಜರನ್ನಾಗಿಸಿ ಕೈಕಟ್ಟಿ ಕುಳಿತುಬಿಟ್ಟಿದ್ದಾರೆ. ಬಹಳಷ್ಟು ರೈತರು ಫ‌ಲವತ್ತಾದ ನೆಲವನ್ನು ಮಾರಿ ನಗರದತ್ತ ವಲಸೆ ಬರುತ್ತಿದ್ದಾರೆ.  ಇದಕ್ಕೆ ಕಾರಣ ನೀರಿನ ಕ್ಷಾಮ. 

ಇಂದಿನ ದಿನಗಳಲ್ಲಿ ಬೆಳೆ ಬೆಳೆಯಲು ಅತ್ಯವಶ್ಯಕವಾದ ನೀರು ರೈತರ ಪಾಲಿಗೆ ಮರೀಚಿಕೆ. ಗ್ರಾಮಾಂತರ ಪ್ರದೇಶಗಳ ಹಲವಷ್ಟು ಹಳ್ಳಿಗಳ ಜನರಿಗಂತೂ ಕುಡಿಯುವ ನೀರಿನಗೂ ಗತಿಯಿಲ್ಲದಂತಾಗಿದೆ.  ಒಂದು ವೇಳೆ ಕೊಳವೆ ಬಾವಿಗಳ ಭೂಜಲ ಸಿಕ್ಕರೂ ಆರೋಗ್ಯಕ್ಕೆ ಹಾನಿ ಮಾಡುವಂಥ ರಾಸಾಯನಿಕಗಳು ಇರುತ್ತವೆ. ಸರ್ಕಾರ ಇಂತಹ ವಿಷಮ ಸ್ಥಿತಿಯಲ್ಲಿ ನೆರವು ನೀಡಿ ಅಷ್ಟೋ ಇಷ್ಟೋ ನೀರಿಗೆ ವ್ಯವಸ್ಥೆ ಮಾಡುತ್ತದೆ. ಆದರೆ ಅಂತಹ ನೆರವು ಬಹಳ ದಿನ ಇರುವುದಿಲ್ಲ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಜನ ಪ್ರಲಾಪಿಸುತ್ತಾರೆ.  ಶಾಶ್ವತ ನೀರಿನ ಬವಣೆಯನ್ನು ತಪ್ಪಿಸಲು ಹಿಂದಿನ ಎಲ್ಲಾ ಸರ್ಕಾರಗಳು ಕ್ರಮ ಕೈಗೊಳ್ಳದೆ ಇರುವುದು ವಿಷಾದವೆನಿಸುತ್ತದೆ.

ಕರ್ನಾಟಕವು 30 ಜಿಲ್ಲೆ, 176 ತಾಲ್ಲೂಕುಗಳನ್ನು ಒಳಗೊಂಡ 1,91,799 ಚದರ ಕಿಲೋ ಮೀಟರ್‌ ವಿಸ್ತೀರ್ಣವುಳ್ಳ ರಾಜ್ಯ.  ಇಲ್ಲಿ ವ್ಯವಸಾಯಕ್ಕೆ ಯೋಗ್ಯವಾದ 1,03,890 ಚದರ ಕಿಲೋ ಮೀಟರ್‌ನಷ್ಟು ಪ್ರದೇಶದ ಫ‌ಲವತ್ತಾದ ನೆಲವಿದೆ. ಈ ವಿಸ್ತೀರ್ಣವನ್ನು ಅಂದಾಜು ಮಾಡಿದರೆ ಶೇ.25 ರಷ್ಟು ಭಾಗ ಮಾತ್ರ ವ್ಯವಸ್ಥಿತ ನೀರಾವರಿಗೆ ಒಳಪಟ್ಟಿರುವುದು ತಿಳಿಯುತ್ತದೆ.  ಉಳಿದ ಜಮೀನಿನಲ್ಲಿ ಸಮರ್ಪಕ ವ್ಯವಸಾಯ ಮಾಡುವುದು ರೈತರ ಪಾಲಿಗೆ ದುಸ್ತರ.

ಬರಗಾಲದ ಬವಣೆ
ರಾಜ್ಯದಲ್ಲಿರುವ ನದಿಗಳ ಎದುರಿಗೆ ಕಟ್ಟಿದ ಜಲಾಶಯಗಳಲ್ಲಿ ನಿಲ್ಲುವ ನೀರು ಕಾಲುವೆ ಮೂಲಕ ಹರಿಯುವುದು ಶೇಕಡ 25 ರಷ್ಟು ಭೂಮಿಗೆ ಮಾತ್ರ. ಅಂದರೆ ಅಂದಾಜು 25,750 ಚದರ ಕಿಲೋ ಮೀಟರ್‌ ಭೂಮಿ ಒದ್ದೆಯಾಗುತ್ತದೆ. ಉಳಿದ ಶೇಕಡ 75% ರಷ್ಟು ಭೂಮಿ ಅಂದರೆ 77,250 ಚದರ ಕಿಲೋ ಮೀಟರ್‌ ನೆಲ ಒಣ ಬಯಲು. ಇಂತಹ ಒಣ ಭೂಮಿ ಬಯಲು ಸೀಮೆಗಳಲ್ಲಿ ಹೆಚ್ಚಾಗಿ ಗೋಚರವಾದರೂ ಮಳೆ ಬೀಳುವ ಮಲೆನಾಡು ಪ್ರದೇಶಗಳಲ್ಲೂ ಒಣಭೂಮಿಯಾಗಿ ಮಾರ್ಪಟ್ಟಿವೆ. ಶುಷ್ಕ ವಾತಾವರಣದಲ್ಲಿ ಕೃಷಿಗಾರಿಕೆಯನ್ನು ನೆಚ್ಚಿ ಕೂತಿರುವ ರೈತರು ಬೀಳುವ ಮಳೆಯನ್ನೇ ಅವಲಂಬಿಸಬೇಕು.

ಕೊಳವೆಬಾವಿ ಮೂಲಕ ಅಂತರ್ಜಲವನ್ನು ಬಳಸಿದ ಪರಿಣಾಮ ಇಂದು ಅಂತರ್ಜಲದ ಮಟ್ಟ ಬಹಳಷ್ಟು ಪ್ರದೇಶಗಳಲ್ಲಿ ಪಾತಾಳಕ್ಕೆ ಕುಸಿದಿದೆ. ಕೆಲವು ಕಡೆ ಅಂತರ್ಜಲದ ಸೆಲೆ ಬತ್ತಿ ಬರಿದಾಗಿದೆ. ರಾಜ್ಯದ ಬಹಳಷ್ಟು ತಾಲ್ಲೂಕುಗಳಲ್ಲಿ ಆಂತರ್ಜಲವನ್ನು ಶೇ. 85% ರಷ್ಟು ಬಳಸಿರುವುದರಿಂದ ನಬಾರ್ಡ್‌ ಅಂತಹ ಪ್ರದೇಶಗಳನ್ನು ಕಪ್ಪು ವಲಯ ಎಂದು ಅಧಿಸೂಚನೆ ಹೊರಡಿಸಿದೆ. ಇಂತಹ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ನಿರ್ಮಿಸಲು ಯಾವುದೇ ಬ್ಯಾಂಕ್‌ ಆರ್ಥಿಕ ನೆರವನ್ನು ನಿಲ್ಲಿಸಿಬಿಟ್ಟಿದೆ. ಜೀವನೋಪಾಯಕ್ಕೆ ಕೃಷಿಗಾರಿಕೆ ನಂಬಿದ ರೈತರು ಜಲವಿಜ್ಞಾನದ ಅರಿವಿಲ್ಲದೆ ಕೊಳವೆ ಬಾವಿಗಳನ್ನು ಕೊರೆದು ಕೈಸುಟ್ಟುಕೊಂಡಿದ್ದಾರೆ. 

ಜಲಕ್ರಾಂತಿ ನಡೆ
ನೀರಿನ ತೊಂದರೆಗೆ ಪರಿಣಾಮಕಾರಿಯಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ಸರ್ಕಾರ ಒಂದಂಶದ ಯೋಜನೆ ರೂಪಿಸಬೇಕು. ಅದುವೇ ಜಲಕ್ರಾಂತಿ. ಇದು ಹಸಿರು ಕ್ರಾಂತಿಗೂ ನಾಂದಿಯಾಗಬಲ್ಲದು. ನಮ್ಮ ರಾಷ್ಟ್ರದಲ್ಲಿ ಬರಗಾಲ ಪೀಡಿತ ಪ್ರದೇಶಗಳು ಎಂದು ಕರೆಸಿಕೊಂಡ ರಾಜಾಸ್ಥಾನ, ಗುಜರಾತ್‌ ಅನುಕ್ರಮವಾಗಿ ಮೊದಲೆರಡು ರಾಜ್ಯಗಳಾಗಿದ್ದು ಅಲ್ಲಿಯ ಸರ್ಕಾರ, ಸಾರ್ವಜನಿಕರು (ರಾಜೇಂದ್ರಸಿಂಗ್‌ನಂತಹ ಜಲ ಶೋಧಕರು) ಜಲಕ್ರಾಂತಿಗೆ ಪ್ರೇರಣೆ ನೀಡಿದ ಪರಿಣಾಮ ಆ ಎರಡು ರಾಜ್ಯಗಳ ನೆಲಗಟ್ಟು ಹಸಿರಿನಿಂದ ನಳನಳಿಸುತ್ತಿವೆ.  ಜಲಕ್ರಾಂತಿ ಅಂದರೆ ಜಲ ಆಂದೋಲನ. ಸರ್ಕಾರ ಮತ್ತು ಸಾರ್ವಜನಿಕರು ಪರಸ್ಪರ ಕೈ ಜೋಡಿಸಿದರೆ ಈ ಯೋಜನೆ ಯಶಸ್ವಿಯಾಗಿ ನೀರಿನ ಬರವನ್ನು ಅಧಿಕಮಟ್ಟದಲ್ಲಿ ನಿವಾರಿಸಲು ಸಾಧ್ಯ. ಜಲಕ್ರಾಂತಿ ಸಮಾಜದ ಕಳಕಳಿಯನ್ನು ಹೋಗಲಾಡಿಸಬಲ್ಲ ಒಂದಂಶದ ಕೃತಾರ್ಥತೆ. ಇದರ ಬಗ್ಗೆ ಸರ್ವರೂ ದನಿ ಎತ್ತಬೇಕು. 

ಎಂದಿನಂತೆ ಈ ವರ್ಷದ ಆಯವ್ಯಯದಲ್ಲಿ ಜಲಸಂಪತ್ತಿಗೆ ಸರ್ಕಾರ 15,929 ಕೋಟಿ ಹಣವನ್ನು ಮೀಸಲಿಟ್ಟಿದೆ. ಇದರ ಜೊತೆಗೆ ಸಣ್ಣ ನೀರಾವರಿ ಇಲಾಖೆಗೆ 2,099 ಕೋಟಿ, ಮೋಡ ಬಿತ್ತನೆಗೆ 30 ಕೋಟಿ, ಚಕ್‌ ಡ್ಯಾಂ ನಿರ್ಮಾಣಕ್ಕೆ 50 ಕೋಟಿ ಮೀಸಲಿಟ್ಟಿದೆ. ನಾಲ್ಕು ವರ್ಷಗಳಲ್ಲಿ 48,096 ಕೋಟಿ ಜಲಸಂಪತ್ತಿಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸಾಧಿಸಿದ ಪ್ರಗತಿಯ ಬಗ್ಗೆಯು ಸಹ ಜನರಿಗೆ ಮನವರಿಕೆ ಮಾಡಿಕೊಡಬೇಕು. 

ಅಂತರ್ಜಲದ ಅಭಿವೃದ್ಧಿ ಒಂದು ಹೆಜ್ಜೆ
ಹರಿಯುವ ನೀರಿಗೆ ಎದುರಾಗಿ ಚೆಕ್‌ಡ್ಯಾಂ ನಿರ್ಮಿಸಿ ನೆಲದಾಳಕ್ಕೆ ನೀರು ಇಂಗಿಸಿ ಅಂತರ್ಜಲ ಅಭಿವೃದ್ಧಿಗೆ ಮೀಸಲಿಟ್ಟ 50 ಕೋಟಿ ರೂಪಾಯಿ ಏನೇನೂ ಸಾಲದು. ಬೀದರ್‌, ಹಾವೇರಿ, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮಾತ್ರ ಅಂತರ್ಜಲ ಮಟ್ಟ ಕುಸಿದಿಲ್ಲ. ಕೋಲಾರ, ತುಮಕೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಇಪ್ಪತ್ತು ಜಿಲ್ಲೆಗಳಿಗೂ ಹೆಚ್ಚು ಪ್ರದೇಶದಲ್ಲಿ ಭೂ ಜಲದ ಮಟ್ಟ ಕುಸಿದಿದೆ. ಅಂತರ್ಜಲದ ಅಭಿವೃದ್ಧಿ ಜಲಕ್ರಾಂತಿಯ ಒಂದು ಹೆಜ್ಜೆ. ರಾಜ್ಯದ ನೀರಾವರಿ ಕ್ಷೇತ್ರ ಅಭಿವೃದ್ಧಿ ಜಲಕ್ರಾಂತಿಯ ಒಂದು ಹೆಜ್ಜೆ. ಸರ್ಕಾರ ಅಂತರ್ಜಲ ಅಭಿವೃದ್ಧಿಗೆ ಪ್ರತ್ಯೇಕವಾಗಿ ಹಣವನ್ನು ಮುಡುಪಿಡಬೇಕು. 

ಮಳೆಯ ನೀರು ಬಳಕೆ
ಜಲಕ್ರಾಂತಿಗೆ ಮುಖ್ಯ ಅಸ್ತ್ರ ಬೀಳುವ ಮಳೆಯ ನೀರು. ಭೂಮಿಯ ಮೇಲ್ಜಲ ಮತ್ತು ಭೂಜಲ ಸಂಪತ್ತಿಗೆ ಬೀಳುವ ಮಳೆಯೇ ಕಾರಣ. ಕಷ್ಟ ಪಡದೆ ಸರ್ವರಿಗೂ ಸುಲಭವಾಗಿ ಕೈಗೆಟುಕಬಲ್ಲ ನಿಸರ್ಗದ ಜಲಸಂಪತ್ತು ಅಂದರೆ ಅದು ಮಳೆಯ ನೀರು ಮಾತ್ರ. ಮಳೆಯ ನೀರನ್ನು ವ್ಯರ್ಥವಾಗಿ ಹರಿಯಲು ಬಿಟ್ಟು ಅದನ್ನೇ ನೋಡುತ್ತಾ ಕುಳಿತುಕೊಳ್ಳುವುದು ಅಕ್ಷಮ್ಯ ಅಪರಾಧ. ಗ್ರಾಮಾಂತರ ಪ್ರದೇಶಗಳಲ್ಲಿ ಹರಿಯುವ ಜಲ ಮೂಲಗಳಿಗೆ ಒಡ್ಡು, ಚೆಕ್‌ ಡ್ಯಾಂಗಳನ್ನು ನಿರ್ಮಿಸಿ, ನೀರನ್ನು ನಿಲ್ಲಿಸಿ ಭೂಮಿಯ ಒಳಗೆ ಇಂಗಿಸುವುದು ಜಲಕ್ರಾಂತಿಯ ಮೊದಲ ಹೆಜ್ಜೆ. ರಾಜ್ಯದ ಶೇಕಡ 70% ರಷ್ಟು ಒಣ ಭೂಮಿಯ ರೈತರು ಬೇಸಾಯಕ್ಕೆ ಅವಲಂಬಿಸಿರುವುದು ಅಂತರ್ಜಲ ನಿಧಿಯನ್ನು. ಜಲಕ್ರಾಂತಿ ಆಂದೋಲನವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಜಲಾಶಯ, ಚೆಕ್‌ ಡ್ಯಾಂ, ಬಿಡ್ಡುಗಳಲ್ಲಿ ನಿಂತ ನೀರು ಜಮೀನುಗಳಿಗೆ ಕೆರೆಗಳಿಗೆ ಹರಿಯಬೇಕು. ಮಳೆಯ ನೀರನ್ನು ನೆಲದಾಳಕ್ಕೆ ಇಂಗಿಸುವ ಕಾರ್ಯಕ್ರಮ ವ್ಯಾಪಕವಾಗಿ ಜಾರಿಗೆ ಬರಬೇಕು. ತುಮಕೂರಿನ  ಶಿರಾ ತಾಲ್ಲೂಕಿನಲ್ಲಿ ಹರಿಯುವ 18 ಹಳ್ಳಿಗಳಿಗೆ ಚೆಕ್‌ಡ್ಯಾಂ ನಿರ್ಮಿಸಿದ ಪರಿಣಾಮ ಆ ತಾಲ್ಲೂಕಿನಲ್ಲಿನ ವಿಫ‌ಲ ಬಾವಿ, ಕೊಳವೆ ಬಾವಿಗಳಿಗೆ ಪುನರ್‌ಚೇತನ ಸಿಕ್ಕಿದೆ ಎಂದು ಸಚಿವ ಜಯಚಂದ್ರ ಹೇಳುತ್ತಾರೆ. ಹೀಗೆ ಜಲಕ್ರಾಂತಿ ರಾಜ್ಯದ ಅಭಿವೃದ್ಧಿಗೆ ಕಾರಣವಾಗಲಿದೆ.

“ರಾಜ್ಯದಲ್ಲಿ ಹರಿಯುವ ಸಾವಿರಾರು ಸಣ್ಣ ಜಲ ಮೂಲಗಳನ್ನು ಸೇರಿಸಿ ಸಾಧಾರಣ ದೊಡ್ಡ ಜಲ ಮೂಲಗಳ ಎದುರಿಗೆ ಹಳ್ಳಗಳ ಪಾತ್ರದಲ್ಲಿ ನಿಲ್ಲಿಸುವಷ್ಟು ನೀರಿಗೆ ತಡೆ ಒಡ್ಡು, ಚೆಕ್‌ಡ್ಯಾಂ ಇತ್ಯಾದಿ ರಚನೆಗಳನ್ನು ನಿರ್ಮಿಸಬೇಕು. ಒಂದು ಫ‌ರಾÉಂಗಿನ ಉದ್ದದಲ್ಲಿ ನೀರು ಹರಿಯುವ ಪ್ರಮಾಣಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಅಣೆಗಳನ್ನು ನಿರ್ಮಿಸಿ ಅಲ್ಲಿ ನಿಂತ ನೀರನ್ನು ಹತ್ತಿರದ ಕೆರೆಗಳಿಗೆ, ಜಮೀನುಗಳಿಗೆ ಮಳೆಗಾಲದಲ್ಲಿ ಸಮೃದ್ಧವಾಗಿ ಹರಿಸಲು ಸಾಧ್ಯ. ಅಲ್ಲಿ ನಿಂತ ನೀರು ನೆಲದಾಳಕ್ಕೆ ಇಂಗಿ ಅಂತರ್ಜಲ ಸೆಲೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಹಿರಿಯ ಭೂ ಜಲ ವಿಜ್ಞಾನಿ  ಟಿ.ಎಂ. ಶಿವಶಂಕರ್‌.

 ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.