ಜಾನಿ ಮೇರಾ ನಾಮ್‌: ಬರ್ಗರ್‌ ಮತ್ತು ಮಿಲ್ಕ್ ಶೇಕ್‌ ನನ್ನ ಕಾಮ್‌


Team Udayavani, Aug 5, 2017, 5:07 PM IST

10140.jpg

ನಾವು ಬೆಂಗಳೂರಿಗರು, ಸದಾ ಹೊಸ ರುಚಿಯ ಅನ್ವೇಷಣೆಯಲ್ಲಿರುವವರು. ಹೊಸರುಚಿಯ ಹೋಟೆಲ್ಲೋ, ರೆಸ್ಟೋರೆಂಟೋ, ಖಾನಾವಳಿಯೋ ಸಿಕ್ಕಿದರೆ ರುಚಿ ನೋಡುವವರೆಗೆ ಸಮಾಧಾನ ಇರೋದಿಲ್ಲ. ನಮ್ಮಲ್ಲಿ ಬರ್ಗರ್‌ ಜಾಯಿಂಟುಗಳಿಗೇನೂ ಬರವಿಲ್ಲ. ಆದರೆ ಬರ ಇರೋದು ಒಳ್ಳೆಯ ಬರ್ಗರ್‌ ಜಾಯಿಂಟುಗಳಿಗೆ. ಆ ಹುಡುಕಾಟಕ್ಕೆ ಫ‌ುಲ್‌ಸ್ಟಾಪ್‌ ಹೇಳುವಂತೆ ಅಮೆರಿಕದ ಪ್ರಖ್ಯಾತ ಬರ್ಗರ್‌ ರೆಸ್ಟೋರೆಂಟ್‌ ಸರಣಿಯಾದ “ಜಾನಿ ರಾಕೆಟ್ಸ್‌’ ದಕ್ಷಿಣಭಾರತದಲ್ಲಿಯೇ ಪ್ರಥಮ ಶಾಖೆಯನ್ನು ಬೆಂಗಳೂರಿನಲ್ಲಿ ತೆರೆದಿದೆ. 

ಜಾನಿ ರಾಕೆಟ್ಸ್‌ ಅಮೆರಿಕದ ಸಾಂಪ್ರದಾಯಿಕ ಅಡುಗೆ ಶೈಲಿ ಮತ್ತು ರುಚಿಗೆ ಹೆಸರಾದ ರೆಸ್ಟೋರೆಂಟ್‌. 1986ರಲ್ಲಿ, ಲಾಸ್‌ ಎಂಜೆಲೀಸ್‌ ನಗರದಲ್ಲಿ ಮೊದಲ ರೆಸ್ಟೋರೆಂಟು ಶುರುವಾಗಿತ್ತು. ಸದ್ಯ ಪ್ರಪಂಚದಾದ್ಯಂತ 320ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಯಲ್ಲೂ ಗುಣಮಟ್ಟ, ಶುಚಿ, ರುಚಿ ಕಾಯ್ದಿರಿಸಿಕೊಳ್ಳುವಿಕೆ ಮತ್ತು ಗ್ರಾಹಕರ ಸೇವೆಗಾಗಿ ಜಾನಿ ರಾಕೆಟ್ಸ್‌ ಹೆಸರುವಾಸಿ. 

ಮೆನುನಲ್ಲಿ ಏನೇನಿದೆ?
ಮೊದಲಿಗೆ ಸ್ಟಾರ್ಟರ್ನಲ್ಲಿ ನೀರುಳ್ಳಿ ರಿಂಗ್ಸ್‌, ಚೀಸ್‌ ಫ್ರೈಯನ್ನು ಆರಿಸಿಕೊಳ್ಳಬಹುದು. ನಾನ್‌ವೆಜ್‌ ಪ್ರಿಯರಿಗೆ ಚಿಕನ್‌ ಖಾದ್ಯಗಳೂ ಇಲ್ಲಿ ಲಭ್ಯ. ನಂತರ ಇಲ್ಲಿನ ವೆಚಿಟೇರಿಯನ್‌ ಸಲಾಡ್‌ಗಳ ರುಚಿ ನೋಡಬಹುದು. ಎರಡು ಥರಹದ ಸಲಾಡ್‌ಗಳು ಇಲ್ಲಿ ಸಿಗುತ್ತವೆ. ಗಾರ್ಡನ್‌ ಸಲಾಡ್‌ ಮತ್ತು ಸೀಸರ್‌ ಸಲಾಡ್‌ಗಳು. ಎರಡರಲ್ಲೂ ಬೇರೆ ಬೇರೆ ಬಗೆಯ ತರಕಾರಿಗಳನ್ನು ಹಾಕಲಾಗಿರುತ್ತದೆ. ನಿಮಗಿಷ್ಟವಾದುದನ್ನು ನೀವು ಆರಿಸಿಕೊಳ್ಳಬಹುದು. ನಿಮಗೆ ಇಲ್ಲಿನ ಸಲಾಡ್‌ ಕೌಂಟರ್‌ ಬಗ್ಗೆ ಹೇಳಲೇಬೇಕು. ಅಲ್ಲಿನ ಎರಡು ಸಲಾಡ್‌ಗಳು ಇಷ್ಟವಾಗದಿದ್ದರೆ ನ ಈವೇ ಖುದ್ದು ಇಲ್ಲಿನ ಸಲಾಡ್‌ ಕೌಂಟರ್‌ಗೆ ತೆರಳಿ ನಿಮಗೆ ಬೇಕಾದ ಹಾಗೆ ಸಲಾಡ್‌ಗಳನ್ನು ತಯಾರಿಸಿ ಸೇವಿಸಬಹುದು.

ಈಗ ಬರ್ಗರ್‌ ಸರದಿ. ಇಲ್ಲಿ ಜಾನಿ ರಾಕೆಟ್ಸ್‌ನ ಸಾಂಪ್ರದಾಯಿಕ ಬರ್ಗರ್‌ ಶ್ರೇಣಿಯಲ್ಲಿ ಹತ್ತಾರು ಥರದ ಬರ್ಗರ್‌ಗಳು ಸಿಗುತ್ತವೆ. ಜೊತೆಗೆ ನಿಮಗೆ ಬೇಕೆನಿಸಿದ ಹಾಗೆ ಬರ್ಗರ್‌ಅನ್ನು ತಯಾರಿಸಲು ಸೂಕ್ತ ನಿರ್ದೇಶನಗಳನ್ನು ನೀಡಬಹುದು. ನೀವು ಇಷ್ಟಪಟ್ಟ ರೀತಿಯಲ್ಲೇ ಬರ್ಗರ್‌ ತಯಾರಾಗಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಮುಂದಿರುತ್ತದೆ. ಬರ್ಗರ್‌ನಲ್ಲಿ ರೆಗ್ಯುಲರ್‌ ಮತ್ತು ಲಾರ್ಜ್‌ ಎಂದು ಎರಡು ಗಾತ್ರಗಳಿವೆ. ಮಕ್ಕಳು ಪುಟ್ಟದಾದ ಮಿನಿ ಆವೃತ್ತಿಯ ಬರ್ಗರ್‌ಅನ್ನು ಸೇವಿಸಬಹುದು. 

ಬರ್ಗರ್‌ ಸಮಾರಾಧನೆಯ ನಂತರ ಜಾನಿ ರಾಕೆಟ್ಸ್‌ನ ಪ್ರಸಿದ್ಧ ಮಿಲ್ಕ್ ಶೇಕ್‌ಗಳ ರುಚಿ ನೋಡಲು ಖಂಡಿತ ಮರೆಯದಿರಿ. ದೊಡ್ಡ ಗಾತ್ರದ ಗಾಜಿನ ಲೋಟದಲ್ಲಿ ಹೊಟ್ಟೆ ತುಂಬುವಂತೆ ಬಾಯಲ್ಲಿ ನೀರೂರಿಸುವ, ಕುಡಿದರೆ ಮತ್ತೆ ಕುಡಿಯಬೇಕೆನ್ನಿಸುವಂತೆ ತುಂಬಿಕೊಡುತ್ತಾರೆ. ಸ್ಟ್ರಾಬೆರ್ರಿ, ಚಾಕಲೇಟ್‌, ಓರಿಯೊ, ಕ್ಯಾಡ್‌ಬರಿ ಜೆಮ್ಸ್‌ ಫ್ಲೇವರ್‌ಗಳಲ್ಲಿ ಶೇಕ್‌ಗಳು ಸಿಗುತ್ತವೆ.

ಕಡೆಯದಾಗಿ ಪುಟ್ಟ ಗಾಜಿನ ಗ್ಲಾಸ್‌ನಲ್ಲಿ ನೀಡಲಾಗುವ ಡೆಸರ್ಟ್‌ ಸೇವಿಸಿದರೆ ಅಲ್ಲಿಗೆ ಜಾನಿ ರಾಕೆಟ್‌ನ ಮೀಲ್‌ ಕಂಪ್ಲೀಟ್‌ ಆದಂತೆಯೇ. ಇಲ್ಲಿನ ಖಾದ್ಯಗಲನ್ನು ಪ್ರತ್ಯೇಕವಾಗಿಯೂ ಆರ್ಡರ್‌ ಮಾಡಬಹುದಾಗಿದೆ, ಅಥವಾ ಮೀಲ್ಸ್‌ ಅನ್ನೂ ತೆಗೆದುಕೊಳ್ಳಬಹುದು. ಮೀಲ್ಸ್‌ನಲ್ಲಿ ಮೇಲೆ ವಿವರಿಸಿದ ಖಾದ್ಯಗಳೆಲ್ಲವೂ ಒಳಗೊಂಡಿರುತ್ತದೆ. ಮೀಲ್ಸ್‌ನ ವೈಶಿಷ್ಟéವೆಂದರೆ ಅನ್‌ಲಿಮಿಟೆಡ್‌ ಬರ್ಗರ್‌ಗಳು ಮತ್ತು ಶೇಕ್‌ಗಳನ್ನು ಸೇವಿಸುವ ಭರ್ಜರಿ ಅವಕಾಶ! ಒಂದೇ ಕಂಡೀಷನ್‌ ಎಂದರೆ ಮೀಲ್ಸನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವಂತಿಲ್ಲ. ಒಬ್ಬರೇ ಸೇವಿಸಬೇಕು!

ಗ್ರಾಹಕ ಸ್ನೇಹಿ ಸಿಬ್ಬಂದಿ
ಇಷ್ಟೆಲ್ಲಾ ಹೇಳಿ ಜಾನಿ ರಾಕೆಟ್ಸ್‌ನ ಗ್ರಾಹಕ ಸೇವೆಯ ಕುರಿತು ಹೇಳದಿದ್ದರೆ ಅಪೂರ್ಣವಾದೀತು. ಮೊದಲ ಬಾರಿ ಭೇಟಿ ನೀಡಿದ ಗ್ರಾಹಕರು ಇಲ್ಲಿನ ಮೆನು ನೋಡಿ ಗಾಬರಿ ಬೀಳುವ ಅಗತ್ಯವಿಲ್ಲ. ಎಲ್ಲಿ ತಮ್ಮನ್ನು ಗುಗ್ಗುಗಳೆಂದುಕೊಳ್ಳುತ್ತಾರೋ ಎನ್ನುವ ಭಯವೂ ಬೇಡ. ಇಲ್ಲಿನ ಸಿಬ್ಬಂದಿ ವರ್ಗ ನಿಜಕ್ಕೂ ಗ್ರಾಹಕ ಸ್ನೇಹಿ. ಏನಾದರೂ ಮಾಹಿತಿ  ನೇರವಾಗಿ ಅವರಲ್ಲೇ ಕೇಳಬಹುದು. ಅವರು ನಗುಮುಖದಂದಲೇ ಮಾಹಿತಿ ಒದಗಿಸುತ್ತಾರೆ. ಇಲ್ಲಿನ ನೌಕರರು ಹಸನ್ಮುಖೀಗಳು. ಎಂಥಹುದೇ ಬಿಗು ಪರಿಸ್ಥಿತಿಯನ್ನು ತಿಳಿಯಾಗಿ ನಿರ್ವಹಿಸಿ ಗ್ರಾಹಕರ ಮೆಚ್ಚುಗೆ ಪಡೆಯಬಲ್ಲರು. ಆವಾಗಾವಾಗ ಇಲ್ಲಿನ ಸಿಬ್ಬಂದಿ ವರ್ಗ ರೆಸ್ಟೋರೆಂಟಿನ ಕಳೆ ಹೆಚ್ಚಿಸಲು, ಸಾಮೂಹಿಕವಾಗಿ ಡ್ಯಾನ್ಸ್‌ ಮಾಡುವುದೂ ಇದೆ. ಒಟ್ಟಿನಲ್ಲಿ ಸಾಂಪ್ರದಾಯಿಕ ಬರ್ಗರ್‌ ರುಚಿ ಮತ್ತು ಅಮೆರಿಕನ್‌ ಅನುಭವವನ್ನು ಪಡೆಯಲಿಚ್ಛಿಸುವವರು ಇಲ್ಲಿಗೆ ಒಮ್ಮೆ ಭೇಟಿ ನೀಡಬಹುದು.

ಇಲ್ಲಿಗೆ ಬಂದು ಬರ್ಗರ್‌ ಮತ್ತು ತಂಬಿಗೆಯಂಥ ದೊಡ್ಡ ಗಾತ್ರದ ಗಾಜಿನ ಲೋಟದಲ್ಲಿ ನೀಡುವ ರುಚಿ ರುಚಿಯಾದ ಮಿಲ್ಕ್ಶೇಕ್‌ ಸೇವಿಸದೇ ಇರಬೇಡಿ.

ಆರ್ಡರ್‌ ಅನ್ನು ಗ್ರಾಹಕರ ಮುಂದಿರಿಸುವಾಗ ಖಾಲಿ ಬಿಳಿ ಪ್ಲೇಟ್‌ ಮೇಲೆ ಕೆಚಪ್‌ನಲ್ಲಿ ಸೆ¾„ಲಿಯನ್ನು ಬಿಡಿಸುವುದು ಜಾನಿ ರಾಕೆಟ್ಸ್‌ನ ಸಿಗ್ನೇಚರ್‌ ಸ್ಟೈಲ್‌.

ಆಹಾರಪ್ರಿಯರಿಗೆ ನೀರೂರಿಸುವಂಥ ಸುದ್ದಿ. ಇಲ್ಲಿ ಅನ್‌ಲಿಮಿಟೆಡ್‌ ಮೀಲ್ಸ್‌ ಸಿಗುತ್ತೆ. ಎಷ್ಟು ಬೇಕಾದರೂ ತಿನ್ನಬಹುದು. ಆದರೆ, ಒಬ್ಬರೇ ತಿನ್ನಬೇಕು! 

ಜಾನಿ ರಾಕೆಟ್ಸ್‌ ಮೊದಲ ಬಾರಿಗೆ ಅಮೆರಿಕದಲ್ಲಿ ಸಾಮಾನ್ಯವಾದ ಡ್ಯಾನ್ಸ್‌ ಕಲ್ಚರ್‌ ಅನ್ನು ಬೆಂಗಳೂರಿಗೆ ಪರಿಚಯಿಸುತ್ತಿದೆ. ಸಿಬ್ಬಂದಿಗಳಿಗೆ ಮನಸ್ಸು ಬಂದಾಗ ಡ್ಯಾನ್ಸ್‌ ನಂಬರ್‌ ಅನ್ನು ಸ್ಪೀಕರ್‌ನಲ್ಲಿ ಹಾಕುತ್ತಾರೆ. ಅಷ್ಟೇ ಅಲ್ಲ, ಅಲ್ಲಿನ ಸಿಬ್ಬಂದಿ ವರ್ಗ ಆ ಹಾಡಿಗೆ ಡ್ಯಾನ್ಸ್‌ ಮಾಡುತ್ತಾರೆ. ಇಲ್ಲಿನ ಓಪನ್‌ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದವರು ಸಹ ಒಮ್ಮೆ ಕೆಲಸವನ್ನು ಬದಿಗಿಟ್ಟು ಹಾಡಿಗೆ ಸ್ಟೆಪ್ಪು ಹಾಕುತ್ತಾರೆ. ಮುಂಚಿತವಾಗಿಯೇ ತರಬೇತಿ ನೀಡಿರುವುದರಿಂದ ಡ್ಯಾನ್ಸ್‌ ಪ್ರದರ್ಶನ ಗ್ರಾಹಕರ ಮನರಂಜಿಸುವುದು ಖಂಡಿತ. 

ಟಾಪ್ ನ್ಯೂಸ್

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

12

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.