ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಸ್ಪಂದಿಸಿ
Team Udayavani, Aug 6, 2017, 6:00 AM IST
ಬೆಳ್ತಂಗಡಿ:5 ವರ್ಷದ ಪುಟ್ಟ ಬಾಲಕ ಅಶ್ವಿತ್ ರಕ್ತದ ಕ್ಯಾನ್ಸರ್‌ನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಶಿರ್ತಾಡಿಯ ಬೋರುಗುಡ್ಡೆ ನಿವಾಸಿಗಳಾದ ಮಹಾವೀರ ಮತ್ತು ಜಯಂತಿ ಯಾನೆ ಲಕ್ಷ್ಮತಿ ದಂಪತಿಯ ಏಕೈಕ ಪುತ್ರ ಅಶ್ವಿತ್ ಚಿಕಿತ್ಸೆಗೆ 8 ಲಕ್ಷ ರೂ. ಬೇಕಾಗಬಹುದು ಎಂದು ವೈದ್ಯರು ವರದಿ ನೀಡಿದ್ದಾರೆ. ಈಗಾಗಲೇ ಸಾವಿರಾರು ರೂ. ಖರ್ಚು ಮಾಡಿ ಅಲ್ಪ ಸ್ವಲ್ಪ ಚಿಕಿತ್ಸೆ ಕೊಡಿಸಿರುವ ಈ ದಂಪತಿ ಮುಂದಿನ ಹಾದಿ ಕಾಣದೆ ಕಂಗಾಲಾಗಿದೆ.
ಮುಂಡಾಜೆ ಗ್ರಾಮದ ಶಾರದಾ ನಗರದಲ್ಲಿ ಹಿಂದೆ ನೆಲೆಸಿದ್ದ ಕುಟುಂಬ ಈಗ ಶಿರ್ತಾಡಿಯಲ್ಲಿದೆ. ಮಗುವಿನ ಚಿಕಿತ್ಸೆಗೆ ದಾನಿಗಳ ನೆರವಿನ ಅಗತ್ಯವಿದೆ. ಸಹಾಯ ಮಾಡ ಬಯಸುವವರು ಖಾತೆ ಸಂಖ್ಯೆ: 520101039282925, ಕಾರ್ಪೊರೇಶನ್ ಬ್ಯಾಂಕ್ ಶಿರ್ತಾಡಿ, IFSC code CORP 0000231 ಲಕ್ಷ್ಮತಿ ಅವರ ಖಾತೆಗೆ (ಬಾಲಕನ ತಾಯಿ) ದೇಣಿಗೆ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೆ„ಲ್: 9008710369, 9008220403 ನಂಬರನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.