ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: ಕಾರ್ಯಾಗಾರ ಉದ್ಘಾಟನೆ
Team Udayavani, Aug 6, 2017, 6:20 AM IST
ಬಂಟ್ವಾಳ : ಕರ್ನಾಟಕ ರಾಜ್ಯದಲ್ಲಿ ಶೇ. 22 ಅಂಶ ಅರಣ್ಯ ಸಂಪತ್ತಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ನೀರಿಗಾಗಿ ಅರಣ್ಯ ಎಂಬುದು ನಮ್ಮ ಇಂದಿನ ಘೋಷಣೆಯಾಗಿದೆ.ಜಾಗತಿಕ ತಾಪಮಾನ ಇಂದಿನ ಪ್ರಾಪಂಚಿಕ ಚರ್ಚೆಯ ವಿಷಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಆ. 5ರಂದು ಲೊರೆಟ್ಟೊ ಮಾತಾ ಸಭಾಭವನದಲ್ಲಿ ನಡೆದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಂಗವಾಗಿ ನಡೆದ ವೃತ್ತ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಪ್ರೋತ್ಸಾಹಧನ ಪ್ರಸ್ತುತ ಇರುವ ಅರಣ್ಯವನ್ನು ಉಳಿಸಿಕೊಂಡು ಭವಿಷ್ಯದಲ್ಲಿ ಅದನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರವು ಜಮೀನು ಇರುವಂತಹ ರೈತರಿಗೆ ಮೂರು ವರ್ಷದ ಹಂತದಲ್ಲಿ ಪ್ರತೀ ಗಿಡಕ್ಕೆ ನೂರು ರೂ. ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಒಬ್ಬ ವ್ಯಕ್ತಿ ಒಂದು ಸಾವಿರ ಗಿಡವನ್ನು ನೆಟ್ಟು ಮೂರು ವರ್ಷದ ತನಕ ಸಾಯದಂತೆ ಬೆಳೆಸಿ ಉಳಿಸಿದರೆ ಅವನಿಗೆ ಒಂದು ಲಕ್ಷ ರೂ. ದೊರೆಯಲಿದೆ ಎಂದರು.
ಅಡುಗೆ ಅನಿಲ ವಿತರಣೆ
ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಸುತ್ತಮುತ್ತಲಿನ ಕಾಡು ಪ್ರದೇಶದ ಮಂದಿಗೆ ಅಡುಗೆ ಅನಿಲ ವಿತರಿಸುವ ಯೋಜನೆಯು ಕಾರ್ಯಗತವಾಗಿದ್ದು ಕಟ್ಟಿಗೆಗಾಗಿ ಅರಣ್ಯವನ್ನು ಅವಲಂಬಿಸುವ ಒತ್ತಡ ಕಡಿಮೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಬಂಟ್ವಾಳ ವಲಯ ಧರ್ಮಗುರು ಅ| ವಂ| ಮ್ಯಾಕ್ಸಿಂ ಎಲ್. ನೊರೊನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಅರಣ್ಯ ನಮ್ಮ ಬದುಕನ್ನು ರೂಪಿಸಿದೆ. ಗಿಡಮರ ಹಸುರು ಹೊದಿಕೆ ಇಲ್ಲದಿದ್ದರೆ ಭೂಮಿ ಬರಡಾಗಬಹುದು. ಕೆಥೋಲಿಕ್ ಸಭಾ ಇಂತಹ ಒಳ್ಳೆಯ ಕೆಲಸಗಳಿಗೆ ಸದಾ ಪ್ರೋತ್ಸಾಹ ಬೆಂಬಲ ನೀಡುವುದು ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್ ಮಾತನಾಡಿ ಇಂದು ತೋಟಗಳಿಗೆ ಮಂಗಗಳ ಕಾಟ ಹೆಚ್ಚುತ್ತಿದೆ ಎನ್ನುತ್ತಾರೆ. ಅವುಗಳಿಗೆ ಅರಣ್ಯದಲ್ಲಿ ತಿನ್ನಲು ಯೋಗ್ಯವಾದ ಹಣ್ಣುಹಂಪಲಿನ ಮರಗಳ ನಾಶವಾಗುತ್ತಿದೆ. ಇದರಿಂದ ಅವುಗಳು ನಾಡಿಗೆ ಬಂದು ನಾವು ಕೃಷಿ ಉದ್ದೇಶದಿಂದ ಬೆಳೆಸಿದ ಬೆಳೆಗೆ ಹಾನಿ ಮಾಡುತ್ತವೆ ಎಂದರು.
ನೀವು ನಿಮ್ಮ ತೋಟದ ಸುತ್ತಲೂ ಹಣ್ಣುಹಂಪಲು ಗಿಡಗಳನ್ನು ಬೆಳೆಸಿ, ಅವುಗಳಲ್ಲಿ ಫಲ ಬಂದಾಗ ನಿಮ್ಮ ತೋಟಕ್ಕೆ ಪ್ರಾಣಿಪಕ್ಷಿಗಳ ಉಪಟಳ ಆಗುವುದಿಲ್ಲ. ತೋಟದಲ್ಲಿ ಇರುವ ಮರಗಳ ಫಲವನ್ನು ತಿಂದು ಅವು ಮರಳಿ ಕಾಡಿಗೆ ಹೋಗುತ್ತವೆ.
ವೇದಿಕೆಯಿಂದ ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಲೊರೆಟ್ಟೊ ಚರ್ಚ್ ಧರ್ಮಗುರು ವಂ| ಎಲಿಯಾಸ್ ಡಿ’ಸೋಜ, ಅಗ್ರಾರ್ ಚರ್ಚ್ ಧರ್ಮಗುರು ವಂ| ಗ್ರೆಗರಿ ಡಿ’ಸೋಜ ಸಭೆ ಉದ್ದೇಶಿಸಿ ಮಾತನಾಡಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಅಮಾrಡಿ ತಾ.ಪಂ. ಸದಸ್ಯೆ ಮಲ್ಲಿಕಾ ಶೆಟ್ಟಿ, ಬೇಬಿ ಕೃಷ್ಣಪ್ಪ, ಅಮಾrಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಮಂಗಳೂರು ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಲನ್, ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ರಿಚ್ಚರ್ಡ್ ಮಿನೇಜಸ್, ಲಯನ್ಸ್ ಅಧ್ಯಕ್ಷ ರೋಯ್ ಕಾರ್ಲೊ, ಅಗ್ರಾರ್ ಕಥೋಲಿಕ್ ಅಧ್ಯಕ್ಷ ಆ್ಯಂಟನಿ ಸಿಕ್ವೇರಾ, ಉದಯ ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷಿ$¾à ಸಿ. ಬಂಗೇರ, ಪುರಸಭಾ ಸದಸ್ಯ ಜಗದೀಶ ಕುಂದರ್, ಪ್ರಮುಖರಾದ ಎಂ. ಪರಮೇಶ್ವರ, ಮುಖ್ಯಶಿಕ್ಷಕಿ ಸಿ| ಶಾಂತಿ ವೇದಿಕೆಯಲ್ಲಿದ್ದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂಜಯ್ ಎಸ್. ಬಿಜೂjರ್ ಪ್ರಸ್ತಾವನೆ ನೀಡಿ ಅರಣ್ಯದ ಮಹತ್ವದ ಬಗ್ಗೆ ತಿಳಿಸಿದರು. ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷ ಸ್ಟಾನಿ ಕಾರ್ಲೊ ಸ್ವಾಗತಿಸಿ, ಶಿಕ್ಷಕಿ ಸ್ಟಾನಿ ಕಾರ್ಲೊ ವಂದಿಸಿದರು. ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಪರಿಸರ ಉಳಿಸಿ
ಪರಿಸರ ಉಳಿಸದಿದ್ದರೆ ಮಾನವ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ತಾಪಮಾನ ಹೆಚ್ಚಾದರೆ ಸಮುದ್ರಮಟ್ಟ ಹೆಚ್ಚಾಗಿ ಕರಾವಳಿ ಪ್ರದೇಶಗಳು ನೀರಲ್ಲಿ ಮುಳುಗುವುವು, ಮಾಲ್ದೀವ್ ದ್ವೀಪ ಮುಳುಗಿ ಹೋಗಿರುವುದು ಅಂತಹ ಘಟನೆಗೆ ಒಂದು ಉದಾಹರಣೆ.
-ರಮಾನಾಥ ರೈ , ಅರಣ್ಯ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.