ಇಂಡಿಗೋ 11ನೇ ವಾರ್ಷಿಕೋತ್ಸವ:ಕೇವಲ 1,111 ರೂ.ವಿಮಾನ ಟಿಕೆಟ್ ಕೊಳ್ಳಿ
Team Udayavani, Aug 5, 2017, 7:26 PM IST
ಹೊಸದಿಲ್ಲಿ : ಕಡಿಮೆ ವೆಚ್ಚದ ವಿಮಾನಯಾನಕ್ಕೆ ಹೆಸರಾಗಿರುವ ಇಂಡಿಗೋ ಏರ್ ಲೈನ್ಸ್ ಸಂಸ್ಥೆ ತನ್ನ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಕೇವಲ 1,111 ರೂ.ಗಳಿಂದ ತೊಡಗುವ ವಿಮಾನ ಯಾನ ವೆಚ್ಚದ ವಿಶೇಷ ಕೊಡುಗೆಯನ್ನು ಸಾದರಪಡಿಸಿದೆ.
ಆಗಸ್ಟ್ 2ರಿಂದ ಆರಂಭಗೊಂಡಿರುವ ಈ ಕೊಡುಗೆಯು ಇದೇ ಭಾನುವಾರ ಆಗಸ್ಟ್ 6ರ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಐದು ದಿನಗಳ ವಿಶೇಷ ಮಾರಾಟದ ವೇಳೆ ಖರೀದಿಸಲಾಗುವ ವಿಮಾನ ಯಾನದ ಟಿಕೆಟುಗಳನ್ನು ಆಗಸ್ಟ್ 21ರಿಂದ ಮುಂದಿನ ವರ್ಷ ಮಾಚ್‌ರ 24ರ ವರೆಗಿನ ಅವಧಿಯಲ್ಲಿ ಬಳಸಬಹುದಾಗಿರುತ್ತದೆ.
ಈ ವಿಶೇಷ ಕೊಡುಗೆ ಯೋಜನೆಯಡಿ ಶ್ರೀನಗರ – ದಿಲ್ಲಿ ವಿಮಾನ ಪ್ರಯಾಣದ ದರ ರೂ. 1,611. ದಿಲ್ಲಿ – ಉದಯಪುರ ರೂ.1,411, ದಿಲ್ಲಿ ಮುಂಬಯಿ ರೂ.1,911, ಮುಂಬಯಿ – ಮಸ್ಕತ್ ರೂ. 5,711 ಮತ್ತು ಮುಂಬಯಿ – ದೋಹಾ ರೂ. 7,011.
ಈ ಕೊಡುಗೆಯು ಮೊದಲು ಬಂದವರಿಗೆ ಮೊದಲು ಎಂಬ ನೆಲೆಯಲ್ಲಿ ಇರುತ್ತದೆ; ಆದರೆ ಹಣ ಮರುಪಾವತಿ ಇರುವುದಿಲ್ಲ ಎಂದು ಏರ್ ಲೈನ್ಸ್ ಪ್ರಕಟನೆ ತಿಳಿಸಿದೆ.
ಈ ವಿಶೇಷ ಕೊಡುಗೆಯು ಆಯ್ದ ನಾನ್ ಸ್ಟಾಪ್ ಹಾರಾಟಗಳಾಗಿರುವ ಅಗರ್ತಲ, ಅಹ್ಮದಾಬಾದ್, ಅಮೃತ್‌ಸರ, ಬಾಗ್‌ದೋರಾ, ಬ್ಯಾಂಕಾಕ್, ಬೆಂಗಳೂರು, ಭುವನೇಶ್ವರ, ಚಂಡೀಗಢ, ಚೆನ್ನೈ, ಕೊಯಮುತ್ತೂರು, ಡೆಹರಾಡೂನ್, ದಿಲ್ಲಿ, ದೀಬ್ರೂಗಢ, ದೀಮಾಪುರ,ದೋಹಾ, ದುಬೈ, ಗೋವಾ, ಗುವಾಹಟಿ, ಹೈದರಾಬಾದ್, ಇಂಫಾಲ, ಇಂದೋರ್, ಜೈಪುರ, ಜಮ್ಮು, ಕೊಚ್ಚಿ, ಕೋಲ್ಕತ, ಕೋಯಿಕ್ಕೋಡ್, ಲಕ್ನೋ, ಮಧುರೆ, ಮಂಗಳೂರು, ಮುಂಬಯಿ, ಮಸ್ಕತ್, ನಾಗ್ಪುರ, ಪಟ್ನಾ, ಪೋರ್ಟ್ ಬ್ಲೇರ್, ಪುಣೆ, ರಾಯ್‌ಪುರ,ರಾಂಚಿ, ಶಾರ್ಜಾ, ಸಿಂಗಾಪುರ, ಶ್ರೀನಗರ, ತಿರುವನಂತಪುರ, ಉದಯ್‌ಪುರ, ವಡೋದರ, ವಾರಾಣಸಿ ಮತ್ತು ವಿಶಾಖಪಟ್ಟಣಕ್ಕೆ ಮಾತ್ರವೇ ಅನ್ವಯಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.