ಉತ್ತರ ಕನ್ನಡ-ಕಾಸರಗೋಡು ಜಿಲ್ಲೆಗಳ ಸಂಸ್ಕೃತಿ ಕುಶಲೋಪರಿಯ ಕಥನ


Team Udayavani, Aug 6, 2017, 7:40 AM IST

kathana.jpg

ಕಾಸರಗೋಡು: ಜೀವ ನದಿಗಳಿಗೆ ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಇನ್ನೊಂದಕ್ಕೆ ಬೆಸೆಯುವ ಸೆಲೆ ಇರುವುದು ಸಣ್ಣ ಸಂಗತಿಯಲ್ಲ. ನದಿ ಪಾತ್ರದ ಆಳದಲ್ಲಿ ಬಹು ಸಂಸ್ಕೃತಿ ಹುದುಗಿರುತ್ತದೆ ಎಂಬುದು ಲಾಗಾಯ್ತಿನಿಂದ ಅನುಭವಕ್ಕೆ ಬಂದ ಸತ್ಯ. ಇದು ಮತ್ತೂಮ್ಮೆ ಸಾಕ್ಷೀಕರಿಸಿದ್ದು ಇತ್ತೀಚೆಗೆ “ಕಾಳಿ ನದಿ ತೀರದಿಂದ ಚಂದ್ರಗಿರಿ ನದಿ ತೀರದವರೆಗೆ’ ಎಂಬ ಪರಿಕಲ್ಪನೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಷರ ಜೀವಿಗಳೆಲ್ಲ ಸೇರಿಕೊಂಡು ಕಾಸರಗೋಡಿಗೆ ಹೊರಟ ಪ್ರವಾಸದಲ್ಲಿ.  ಕಾಸರಗೋಡಿನ “ರಂಗ ಚಿನ್ನಾರಿ’ ಎಂಬ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಕಳೆದ ವಾರ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಗೌರವಪೂರ್ವ ಕವಾಗಿ ಆಮಂತ್ರಿಸಿ ಸಂಸ್ಕೃತಿ ಕುಶಲೋಪರಿ ನಡೆಸಿಕೊಟ್ಟ ಪರಿ ಅನನ್ಯ.

ಕರ್ನಾಟಕದ ಒಂದು ಭಾಗವೇ ಆಗಿದ್ದ ಅಚ್ಚಗನ್ನಡ ನೆಲ ಕಾಸರಗೋಡು ಎಂಬ ಮುದ್ದಾದ ಜಿಲ್ಲೆ ಇಂದು ಏಕೀಕರಣದ ವ್ಯವಸ್ಥೆಯ ಪರಿಣಾಮ ಕೇರಳ ರಾಜ್ಯಕ್ಕೆ ಸೇರಿ ಹೋಗಿದೆ. ಆದರೆ ಅಲ್ಲಿ ಇನ್ನೂ ಕನ್ನಡದ ಹೂಗಳು ಅರಳುತ್ತಲೇ ಇವೆ. ಮಲಯಾಳಿ ಮತ್ತು ಕನ್ನಡ ಭಾಷೆಯ ಬಾಂಧವ್ಯ ಕೂಡ ಅಷ್ಟೇ ಸುಮಧುರವಾಗಿವೆ. ಜೊತೆ ಜೊತೆಗೆ ಸಂಪಿಗೆ ಮೊಗ್ಗುಗಳಂತೆ ತುಳು, ಕೊಂಕಣಿ, ಬ್ಯಾರಿ ಬಾಷೆಗಳೂ ಕಂಪು ಸೂಸುತ್ತಿವೆ. ಇದು ಅಲ್ಲಿಯ ಎಲ್ಲ ಭಾಷಿಕರ ಹೂ ಮನಸುಗಳ ದ್ಯೋತಕವಾಗಿದ್ದುದು ಅಷ್ಟೇ ಸ್ಪಷ್ಟ.

ಕಾಸರಗೋಡಿನ “ರಂಗ ಚಿನ್ನಾರಿ’ ಜುಲೆ„ 29-30ರಂದು ಅಲ್ಲಿ ಶ್ರಾವಣ ಕುಶಲೋಪರಿ ಮತ್ತು ಸಂಸ್ಕೃತಿ ಕುಶಲೋ ಪರಿ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಸಂಯೋಜಿಸಿ ತಮ್ಮ ನೆಲಕ್ಕೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಘಟಕಕ್ಕೆ ಆಮಂತ್ರಣ ಕೊಟ್ಟು ಕರೆಸಿಕೊಂಡರು. ನಾನು ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷನಾಗಿ ಈ ಆಮಂತ್ರಣವನ್ನು ತುಂಬ ಜವಾಬ್ದಾರಿಯಿಂದ ಸ್ವೀಕರಿಸಿ ನನ್ನೊಟ್ಟಿಗೆ ಕೆಲ ಸಾಹಿತ್ಯಾಸಕ್ತರನ್ನು ಕರೆದುಕೊಂಡು ಮಧ್ಯರಾತ್ರಿ ಹನ್ನೆರಡುವರೆ ಗಂಟೆಗೆ ಕುಮಟಾ ರೈಲ್ವೇ ನಿಲ್ದಾಣದಿಂದ ಮಂಗಲಾ ಎಕ್ಸ್‌ಪ್ರೆಸ್‌ನಲ್ಲಿ ಹೊರಟೆ. ಇಲ್ಲಿ ತಲುಪುವಷ್ಟರಲ್ಲಿ ನಸುಕು ಐದು ಗಂಟೆ. ನಮಗಾಗಿ ವಸತಿ ಗೃಹಗಳಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿತ್ತು.

ರಂಗಚಿನ್ನಾರಿಯ ನಿರ್ದೇಶಕ, ನಾಡಿನ ಹಿರಿಯ ರಂಗ ಚಿಂತಕ ಕಾಸರಗೋಡು ಚಿನ್ನಾ ಅವರು ತಮ್ಮ ಸ್ನೇಹಿತರ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ತುಂಬ ಅಚ್ಚುಕಟ್ಟಾಗಿ ಸಂಯೋಜಿಸಿದ್ದರು. ಮುಂಜಾನೆ ನಮ್ಮನ್ನು ಖಾಸಗಿ ವಾಹನದಲ್ಲಿ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರ ಮನೆಗೆ ಕರೆದುಕೊಂಡು ಹೋದರು.

ಗೋವಿಂದ ಪೈಗಳ ಮನೆಯನ್ನು ಇದೀಗ ಸರಕಾರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ (ರಿ.) ಮಂಜೇಶ್ವರ ಎಂಬ ಹೆಸರಿನಲ್ಲಿ ನೋಡಿಕೊಳ್ಳುತ್ತಿದೆ. ಅದಕ್ಕೆ ಪೈಗಳ ಕವನಸಂಕಲನ “ಗಿಳಿವಿಂಡು’ ಹೆಸರನ್ನು ಅರ್ಥಪೂರ್ಣವಾಗಿ ಇಟ್ಟಿದ್ದಾರೆ. ಇಡೀ ಮನೆಯ ಆವರಣ ಹೇಗಿದೆ ಅಂದರೆ ಈಗಷ್ಟೇ ಗೋವಿಂದ ಪೈಗಳು ಎಲ್ಲೋ ಹೊರಗೆ ಹೋಗಿದ್ದಾರೆ ಅನ್ನುವ ಹಾಗೆ ಕಾಳಜಿಯಿಂದ ನಿರ್ವಹಣೆ ಮಾಡಲಾಗುತ್ತಿದೆ.
ಪೈಗಳ ಮನೆಯೊಳಗೆ ಶ್ರಾವಣ ಕುಶಲೋಪರಿ ಹಮ್ಮಿಕೊಳ್ಳಲಾಗಿತ್ತು. 

ಕಾಸರಗೋಡು ಚಿನ್ನಾ ಅವರು ಎರಡು ಜಿಲ್ಲೆಗಳ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ತುರ್ತಿನ ಬಗ್ಗೆ ಮಾತನಾಡಿದರು. ಸರಳ ಸುಂದರ ಕಾರ್ಯಕ್ರಮ. ಜೊತೆಗೆ ಅರ್ಥಪೂರ್ಣ ಕ್ಷಣ. ಅಲ್ಲಿ ನಾಡಿನ ಹಿರಿಯ ಕವಿಗಳ ಗೀತೆಯನ್ನು ಎರಡೂ ಜಿಲ್ಲೆಗಳ ಗಾಯಕರು ಹಾಡಿದರು.

ಅನಂತರ ನಮ್ಮನ್ನು ಗಡಿನಾಡ ಕವಿ ಕಯ್ನಾರ ಕಿಞ್ಞಣ್ಣ ರೈ ಗಳ ಮನೆಗೆ ಕರೆದು ಕೊಂಡು ಹೋದದ್ದು ಒಂದು ಅಪೂರ್ವ ಅನುಭವ. ರೈಗಳ ಮನೆ ಕವಿತಾ ಕುಟೀರ ದಲ್ಲಿ ಅವರ ಮಗ ಪ್ರಸನ್ನ ರೈ ತಂದೆ ಬರೆದ ಗೀತೆಯೊಂದನ್ನು ಹಾಡಿದರು. ರೈಗಳ ಪ್ರಶಸ್ತಿ ಫಲಕ, ಅವರ ಗ್ರಂಥಾಲಯ, ಅವರು ಓಡಾಡಿದ ಸ್ಥಳ ಎಲ್ಲವನ್ನೂ ತೋರಿಸಿದರು. ಇದು ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ತಂಡಕ್ಕೆ ಅಪರೂಪದ ಅನುಭವ. ಅಲ್ಲಿಯೂ ಕೇರಳ ಸರಕಾರ ರೈಗಳ ಸ್ಮಾರಕ ಭವನವನ್ನು ನಿರ್ಮಿಸಲು ಮುಂದಾಗಿದೆ.  ಅಲ್ಲಿಂದ ಹೊರಟು ಚಂದ್ರಗಿರಿ ನದಿ ತೀರ, ಬೇಕಲ್‌ ಕೋಟೆ ಮತ್ತಿತರ ಕಡೆ ಸುತ್ತಾಡಿ ಬರುವಷ್ಟರಲ್ಲಿ ಸೂರ್ಯ ಮುಳುಗಿದ್ದ. ರಾತ್ರಿ ಬಹುಹೊತ್ತಿನವರೆಗೂ ಕಾಸರಗೋಡು ಚಿನ್ನಾ ಅವರ ಮನೆಯಲ್ಲಿ ಗೀತಗಾಯನ, ಸಂಸ್ಕೃತಿ ಪರಿಚಯ, ಊಟ ಇತ್ಯಾದಿಗಳು ನಡೆದವು.

ಮರುದಿನ ಕಾಸರಗೋಡಿನ ಕರೆಂದ ಕ್ಕಾಡಿನ ಪದ್ಮಗಿರಿ ಕುಟೀರದಲ್ಲಿ ಹಿರಿಯ ಸಾಹಿತಿ ಡಾ| ನಾ. ದಾಮೋದರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಸ್ಕೃತಿ ಕುಶಲೋಪರಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರವåವನ್ನು ಉದ್ಘಾಟಿಸಿ ಮಾತನಾಡಿದ ನಾನು, ಇಲ್ಲಿ ಕನ್ನಡ ಮಾಧ್ಯಮಕ್ಕಾಗಿ ಹೋರಾಡುವುದಕ್ಕಿಂತ ಇಲ್ಲಿನ ಕನ್ನಡತನವನ್ನು ಇದ್ದಂತೆ ಇರುವಂತೆ ಮಾಡಲು ಕಾಳಜಿ ವಹಿಸಬೇಕಾಗಿದೆ. ಅದು ಇಂದಿನ ಸವಾಲು ಎಂದರು.
ಇಲ್ಲಿಯ ಜನರ ಮಾತೃಬಾಷೆ ಬೇರೆಯಾದರೂ ಕನ್ನಡಕ್ಕೆ ಮಿಡಿಯುವ ಪರಿ ಹೃದ್ಯವಾಗಿದೆ. ಕಾಸರಗೋಡಿನ ಸಾಹಿತ್ಯಾಸಕ್ತರನ್ನೂ ಸದ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಗೆ ಕರೆಸಿಕೊಳ್ಳುತ್ತೇವೆ ಎಂದು ಅನಿಸಿಕೆ ಹಂಚಿಕೊಂಡೆ.

ಇದೇ ಸಂದರ್ಭದಲ್ಲಿ ಸಂತ ಶಿಶುನಾಳ ಷರೀಫ ಪ್ರಶಸ್ತಿ ಪುರಸ್ಕೃತ ವೈ. ಕೆ.ಮುದ್ದುಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಡಾ| ನಾ. ದಾಮೋದರ ಶೆಟ್ಟಿ ಅವರು ಭಾಷೆಗೆ ಪ್ರತಿಷ್ಠೆಯ ಹಂಗು ಇರುವುದಿಲ್ಲ ಎಂದರು.
ಅದು ನದಿಯಂತೆ ಸದಾ ನಿರ್ಮಲ ವಾಗಿ ಹರಿಯುತ್ತದೆ. ಹಾಗೆಯೇ ಕಾಸರಗೋಡಿನ ಜನ ಆ ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ. 

ಎರಡೂ ಜಿಲ್ಲೆಯ ಜನ ಕಾಳಿ, ಚಂದ್ರಗಿರಿ ನದಿಯಂತೆ ಸದಾ ಜೀವಂತಿಕೆ ಉಳಿಸಿಕೊಂಡು ಹರಿಸುತ್ತಿರೋಣ ಅಂದರು.
ಉತ್ತರ ಕನ್ನಡ ಸಾಹಿತ್ಯ-ಸಂಸ್ಕೃತಿಯ ಕುರಿತು ಕವಿ ನಾಗರಾಜ ಹರಪನಹಳ್ಳಿ, ಕಾಸರಗೋಡು ಸಾಹಿತ್ಯ-ಸಂಸ್ಕೃತಿಯ ಬಗ್ಗೆ ಕವಿ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡಿದರು.

ಮಂಜೇಶ್ವರ ಮತ್ತು ಕರಂದಕ್ಕಾಡು ಈ ಎರಡೂ ಸ್ಥಳಗಳಲ್ಲಿ ನಡೆದ ಭಾವ ಲಹರಿ ಕಾರ್ಯಕ್ರಮದಲ್ಲಿ ವೈ.ಕೆ. ಮುದ್ದುಕೃಷ್ಣ, ಸೀಮಾ ರಾಯ್ಕರ್‌, ರವೀಂದ್ರ ಪ್ರಭು, ಉಮೇಶ ಮುಂಡಳ್ಳಿ, ಕಿಶೋರ ಪೆರ್ಲ ಮುಂತಾದವರು ತಮ್ಮ ಗಾನಸುಧೆಯ ಸಿಂಚನಗೈದರು.

ಕಾಳಿ ನದಿ ತೀರದಿಂದ ಚಂದ್ರಗಿರಿ ನದಿ ತೀರದವರೆಗಿನ ಸಂಸ್ಕೃತಿ ಕುಶ ಲೋಪರಿ ಪಯಣದಲ್ಲಿ ಉತ್ತರ ಕನ್ನಡದಿಂದ ಉಮೇಶ ಮುಂಡಳ್ಳಿ, ನಾಗರಾಜ ಹರಪನಹಳ್ಳಿ, ಡಾ| ಶ್ರೀಧರ ಉಪ್ಪಿನ ಗಣಪತಿ, ಡಾ.ಪ್ರಕಾಶ ನಾಯಕ, ಡಾ| ಸುರೇಶ ಎನ್‌. ನಾಯ್ಕ, ಎಂ.ಜಿ. ನಾಯ್ಕ, ಜನಾರ್ದನ ಹರನೀರು, ಪ್ರಶಾಂತ ಹೆಗಡೆ ಮೂಡಲಮನೆ, ರೇಷ್ಮಾ ಉಮೇಶ್‌, ಕಲ್ಪನಾ ಹೆಗಡೆ, ಚಿದಾನಂದ ಭಂಡಾರಿ, ತಿಲೋತ್ತಮೆ ಗೊಂಡ, ಕೃತಿ ಹೆಗಡೆ ಮುಂತಾದವರು ತೆರಳಿದ್ದರು.

ಟಾಪ್ ನ್ಯೂಸ್

KTR Formula Race Case Abolished: High Court Reserves Verdict

KTR ಫಾರ್ಮುಲಾ ರೇಸ್‌ ಕೇಸ್‌ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ; ವ್ಯಕ್ತಿ ಮೇಲೆ ಹಲ್ಲೆ

Kodagu: ಕಾಫಿ ತೋಟಕ್ಕೆ ಅಕ್ರಮ ಪ್ರವೇಶ; ವ್ಯಕ್ತಿ ಮೇಲೆ ಹಲ್ಲೆ

arrested

Kasaragod: ಪತ್ನಿಯ ಹಂತಕನಿಗೆ 10 ವರ್ಷ ಕಠಿನ ಸಜೆ

drowned

Kasaragod: ಬೆಂಗಳೂರಿನ ವ್ಯಕ್ತಿ ನೀರುಪಾಲು

1-katte

Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ

Mulleriya: ಆಟವಾಡುವ ವೇಳೆ ವಿದ್ಯುತ್‌ ತಂತಿ ತಗುಲಿ ಮೂರುವರೆ ವರ್ಷದ ಮಗು ಸಾವು

Mulleriya: ಆಟವಾಡುವ ವೇಳೆ ವಿದ್ಯುತ್‌ ತಂತಿ ತಗುಲಿ ಮೂರುವರೆ ವರ್ಷದ ಮಗು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KTR Formula Race Case Abolished: High Court Reserves Verdict

KTR ಫಾರ್ಮುಲಾ ರೇಸ್‌ ಕೇಸ್‌ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.