ಮರ ಬಿದ್ದು ತೂಗು ಸೇತುವೆಗೆ ಹಾನಿ
Team Udayavani, Aug 6, 2017, 7:55 AM IST
ಸುಳ್ಯ: ಅರಂತೋಡು ಗ್ರಾಮದ ಕುಕ್ಕುಂಬಳ-ಅಂಗಡಿಮಜಲು ಬಳಿ ಬಲಾ°ಡು ಹೊಳಗೆ ನಿರ್ಮಿಸಿದ ತೂಗುಸೇತುವೆಗೆ ಶುಕ್ರವಾರ ರಾತ್ರಿ ಮರವೊಂದು ಬಿದ್ದು ಹಾನಿ ಸಂಭವಿಸಿದೆ.
ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಬಿಳಿಯಾರು-ಕಲ್ಲುಮುಟ್ಲು ರಸ್ತೆಯ ಬಳಿ ಇರುವ ಈ ತೂಗುಸೇತುವೆ ಅಡ್ಕಬಳೆ, ಬಾಜಿನಡ್ಕ, ನಡ, ಕಳಬೈಲು, ಗುಂಡ್ಲ, ದೇರಾಜೆ ಹಾಗೂ ಮರ್ಕಂಜ ಭಾಗದ 300ಕ್ಕೂ ಅಧಿಕ ಮನೆಗಳ ಮಂದಿಗೆ ಅರಂತೋಡಿಗೆ ಸಂಪರ್ಕ ಸೇತುವಾಗಿದೆ.
ಮರ ಬಿದ್ದ ಪರಿಣಾಮ ತೂಗುಸೇತುವೆಯ ಪಿಲ್ಲರ್‌ಗೆ ಹಾನಿಯಾಗಿದೆ. ಸ್ಥಳಕ್ಕೆ ಶನಿವಾರ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಗ್ರಾ.ಪಂ.
ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಸ್ತಿ ಕುರಿತಂತೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಎರಡು ಊರುಗಳ ಮಧ್ಯೆ ಸಂಪರ್ಕಕ್ಕಾಗಿ 1996ರಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಬಿಳಿಯಾರು-ಕಲ್ಲುಮುಟ್ಲು ರಸ್ತೆಯ ಪಿಂಗಾರ್‌ತೋಟದ ಕುಕ್ಕುಂಬಳ ಅಂಗಡಿಮಜಲು ಬಳಿ ಈ ತೂಗು ಸೇತುವೆ ನಿರ್ಮಿಸಲಾಗಿತ್ತು.
ಸುತ್ತಾಟ ತಪ್ಪಿತ್ತು
ಮಳೆಗಾಲದಲ್ಲಿ ಅರಂತೋಡಿಗೆ ಬರಲು ಈ ಊರಿನ ಮಂದಿ ಕಲ್ಲುಮುಟ್ಲು – ಬಿಳಿಯಾರು ರಸ್ತೆಯಲ್ಲಿ 7 ಕಿ.ಮೀ. ದೂರ ಸಂಪರ್ಕಿಸಬೇಕಿತ್ತು. ತೂಗು ಸೇತುವೆ ನಿರ್ಮಾಣದಿಂದ ಆ ದೂರ 1.5 ಕಿ.ಮೀ.ಗೆಇಳಿಕೆಯಾಗಿದೆ. ಬೇಸಗೆಯಲ್ಲಿ ಈ ಹೊಳೆಯಲ್ಲೇ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರೆ, ಮಳೆಗಾಲದಲ್ಲಿ ಸುಳ್ಯ, ಕೊಡಗು ಮೊದಲಾದೆಡೆ ಶಾಲಾ-ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ, ಪೇಟೆಗೆ ಬರುವ ಗ್ರಾಮಸ್ಥರಿಗೆ ಈ ತೂಗು ಸೇತುವೆ ಆಧಾರವಾಗಿದೆ.
4.5 ಲಕ್ಷ ರೂ.ನಲ್ಲಿ ದುರಸ್ತಿ
ಕೆಲ ದಿನಗಳ ಹಿಂದೆಯಷ್ಟೇ 4.5 ಲಕ್ಷ ರೂ. ವೆಚ್ಚದಲ್ಲಿತೂಗು ಸೇತುವೆ ದುರಸ್ತಿಪಡಿಸಲಾಗಿತ್ತು. ಆದರೆ ಹೊಳೆ ಬದಿಯಲ್ಲಿ ಸೇತುವೆಗೆ ತಾಗಿಕೊಂಡಿದ್ದ ಬೃಹತ್ ಗಾತ್ರದ ಮರವೊಂದು ಶುಕ್ರವಾರ ಸೇತುವೆ ಮೇಲೆ ಬಿದ್ದಿತ್ತು. ಪರಿಣಾಮ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಆಧಾರ ಕಂಬದ ಬುಡ ಸಡಿಲಗೊಂಡಿದೆ. ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣವೂ ಅಧಿಕವಾಗಿದ್ದು, ಇಲ್ಲಿ ಸಂಚರಿಸುವುದು ಅಪಾಯಕಾರಿ ಎನಿಸಿದೆ.
ದ್ವಿಚಕ್ರ ವಾಹನಕ್ಕಿಲ್ಲ ಅವಕಾಶ
ತೂಗುಸೇತುವೆ ಮೂಲಕ ದ್ವಿ ಚಕ್ರ ವಾಹನಸಂಚರಿಸಲು ಸಾಧ್ಯವಿತ್ತು. ಒಮ್ಮೆಗೆ ಒಂದು ಬೈಕ್‌ಗೆ ಸಂಚರಿಸಲು ಮಾತ್ರ ಅವಕಾಶ. ಒಂದು ಬೈಕ್ ಸಂಚಾರ ಪೂರ್ಣಗೊಳಿಸುವ ಮೊದಲು ಇನ್ನೊಂದು ತೆರಳಿದರೆ ದಂಡ ವಿಧಿಸಲಾಗುತ್ತದೆ ಎಂಬ ಪಂಚಾಯತ್ ಎಚ್ಚರಿಕೆ ಫಲಕವನ್ನು ಹಾಕಲಾಗಿದೆ. ಮರ ಬಿದ್ದ ಪರಿಣಾಮ ಈಗ ದ್ವಿಚಕ್ರ ವಾಹನ ಸಂಚರಿಸಲು ಸಾಧ್ಯವಿಲ್ಲ. ವಾಹನ ಸಂಚರಿಸ
ದಂತೆ ಎರಡೂ ಬದಿಯ ಪ್ರವೇಶದಲ್ಲಿ ಪರಿಕರ ಅಡ್ಡ ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.