ಪುನೀತ್ ಬ್ಯಾನರ್‌ಗೆ ಶಶಾಂಕ್ ಸಿನಿಮಾ
Team Udayavani, Aug 6, 2017, 10:25 AM IST
ಶಶಾಂಕ್ ನಿರ್ದೇಶಿಸಿದ ಕೊನೆಯ ಸಿನಿಮಾ “ಮುಂಗಾರು ಮಳೆ-2′. ಆ ಸಿನಿಮಾ ಬಂದು ಒಂದು ವರ್ಷವಾಗುತ್ತಾ ಬಂದಿದೆ. ಇಷ್ಟು ಸಮಯವಾದರೂ ಶಶಾಂಕ್ ಕಡೆಯಿಂದ ಯಾವುದೇ ಹೊಸ ಸಿನಿಮಾದ ಸುದ್ದಿ ಬಂದಿರಲಿಲ್ಲ. ಸಹಜವಾಗಿಯೇ ಅನೇಕರಿಗೆ ಒಂದು ಕುತೂಹಲವಿತ್ತು. ಶಶಾಂಕ್ ಮುಂದಿನ ಸಿನಿಮಾ ಯಾವುದು, ಯಾರು ಹೀರೋ ಎಂಬುದು. ಆದರೆ, ಶಶಾಂಕ್ ಮಾತ್ರ ಏನೂ ಮಾತನಾಡದೇ ತಮ್ಮ ಪಾಡಿಗೆ ಸ್ಕ್ರಿಪ್ಟ್ ಕೆಲಸದಲ್ಲಿ ಬಿಝಿಯಾಗಿದ್ದರು. ಈಗ ಶಶಾಂಕ್ ಮುಂದಿನ ಸಿನಿಮಾ ಯಾರ ಜೊತೆ ಎಂಬುದಕ್ಕೆ ಉತ್ತರ ಸಿಕ್ಕಿದೆ.
ಹೌದು, ಶಶಾಂಕ್ ಮುಂದಿನ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಈ ಮೂಲಕ ಶಶಾಂಕ್ ಮತ್ತೂಬ್ಬ ಸ್ಟಾರ್ ನಟನ ಸಿನಿಮಾ ಮಾಡಿದಂತಾಗುತ್ತದೆ. ಸದ್ಯ ಶಶಾಂಕ್ ಕಥೆಯಲ್ಲಿ ತೊಡಗಿದ್ದು, ಚಿತ್ರ ಜನವರಿಯಲ್ಲಿ ಆರಂಭವಾಗಲಿದೆ. ಪುನೀತ್ ರಾಜಕುಮಾರ್ ಸದ್ಯ “ಅಂಜನಿಪುತ್ರ’ ಚಿತ್ರೀಕರಣದಲ್ಲಿ ಬಿಝಿ. ಆ ಸಿನಿಮಾ ಮುಗಿಸಿಕೊಂಡು ಪುನೀತ್ ಬೇರೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. ಅದು ಮುಗಿದ ನಂತರ ಶಶಾಂಕ್ ಸಿನಿಮಾ. ಹಾಗಾಗಿ, ಶಶಾಂಕ್ ಹಾಗೂ ಪುನೀತ್ ಕಾಂಬಿನೇಶನ್‌ನ ಸಿನಿಮಾ ಜನವರಿಗೆ ಸೆಟ್ಟೇರಲಿದೆ.
ಈ ಚಿತ್ರದ ನಿರ್ಮಾಪಕರು ಯಾರು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಪುನೀತ್. ಹೌದು, ಈಗಾಗಲೇ ಪುನೀತ್ ರಾಜಕುಮಾರ್ ಅವರು “ಪಿಆರ್‌ಕೆ’ ಎಂಬ ಬ್ಯಾನರ್ ಹುಟ್ಟುಹಾಕಿದ್ದು ನಿಮಗೆ ಗೊತ್ತೇ ಇದೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ “ಕವಲು ದಾರಿ’ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಎರಡನೆಯ ಚಿತ್ರವಾಗಿ, ಈ ಬ್ಯಾನರ್‌ನಡಿ ಶಶಾಂಕ್ ನಿರ್ದೇಶನದ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ ಪುನೀತ್.
ಈ ಮೂಲಕ ಪುನೀತ್ ಬ್ಯಾನರ್‌ನಲ್ಲಿ ಪುನೀತ್ ಅವರಿಗೆ ಸಿನಿಮಾ ಮಾಡುವ ಮೊದಲ ಅವಕಾಶ ಶಶಾಂಕ್‌ಗೆ ಸಿಕ್ಕಿದೆ. ಇದೊಂದು ಫ್ಯಾಮಿಲಿ ಡ್ರಾಮಾ ಆಗಿದ್ದು, ಸದ್ಯ ಶೀರ್ಷಿಕೆ, ನಾಯಕಿ, ತಾಂತ್ರಿಕ ವರ್ಗ ಯಾವುದೂ ಅಂತಿಮವಾಗಿಲ್ಲ. ಈ ಹಿಂದೆ ಶಶಾಂಕ್, ಉಪೇಂದ್ರ ಅವರಿಗೆ ಸಿನಿಮಾ ಮಾಡುತ್ತಾರೆನ್ನಲಾಗಿತ್ತು. ಹಾಗಾದರೆ ಆ ಪ್ರಾಜೆಕ್ಟ್ ಏನಾಯಿತು ಎಂದು ನೀವು ಕೇಳಬಹುದು. ಪುನೀತ್ ಸಿನಿಮಾ ಮುಗಿದ ನಂತರ ಶಶಾಂಕ್, ಉಪೇಂದ್ರ ಅವರ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾ ಶಶಾಂಕ್ ಅವರ ಬ್ಯಾನರ್‌ನಲ್ಲೇ ತಯಾರಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.