ಮುಖ್ಯಮಂತ್ರಿ ಸಿಟಿ ರೌಂಡ್ಸ್
Team Udayavani, Aug 6, 2017, 11:49 AM IST
ಬೆಂಗಳೂರು: ಬಹಳ ದಿನಗಳ ವಿರಾಮದ ಬಳಿಕ ಶನಿವಾರ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಮೂರುವರೆ ತಾಸು ಪಾಲಿಕೆಯಿಂದ ಕೈಗೊಂಡಿರುವ ಹಲವು ಕಾಮಗಾರಿಗಳನ್ನು ಪರಿಶೀಲಿಸಿದರು. ಜತೆಗೆ ಗಡುವಿನೊಳಗೆ ಕಾಮಗಾರಿ ಮುಗಿಸದಿದ್ದರೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ ಅವರು, ಕರ್ತವ್ಯಲೋಪ ಆರೋಪದ ಮೇಲೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ನ್ನು ಅಮಾನತುಗೊಳಿಸಲು ಆದೇಶಿಸಿದ ಪ್ರಸಂಗವೂ ನಡೆಯಿತು.
ರಾಜ್ಯ ಸರ್ಕಾರ ಬಿಬಿಎಂಪಿಗೆ 7300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ಮೊದಲಿಗೆ ನಗರದ ಎಂ.ಜಿ. ರಸ್ತೆಯಲ್ಲಿ ಪಾದಚಾರಿ ಮೇಲ್ದರ್ಜೆ ಕಾಮಗಾರಿ ವೀಕ್ಷಿಸಿದ ಅವರು, ಪಾದಚಾರಿ ಮಾರ್ಗದ ಮಧ್ಯೆ ಅಲ್ಲಲ್ಲಿ ಗಿಡ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದೇ ಮಾರ್ಗದಲ್ಲಿರುವ ಕಾವೇರಿ ಎಂಪೋರಿಯಂ ಕರಕುಶಲ ವಸ್ತುಗಳ ಮಳಿಗೆಗೆ ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸಿದರು.
ಆನಂತರದ ಚರ್ಚ್‌ಸ್ಟ್ರೀಟ್ ರಸ್ತೆಯ ಟೆಂಡರ್‌ಶ್ಯೂರ್ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಪಾಲಿಕೆಯ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಅವರು ಸೇವಾಜಾಲಗಳ ಸ್ಥಳಾಂತರ ಕಾರ್ಯ ನಡೆಸಲಾಗುತ್ತಿದ್ದು, ರಸ್ತೆಯಲ್ಲಿ 30 ಕಾರು ಹಾಗೂ 130 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ರಸ್ತೆಯಲ್ಲಿ ಕಸೂತಿ ಕಲೆಯ ಪ್ರದರ್ಶನವಾಗಲಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಗರಂ ಆದ ಸಚಿವ ಕೆ.ಜೆ.ಜಾರ್ಜ್, ಇನ್ನು ಎಷ್ಟು ದಿನಗಳು ಬೇಕು ಕಾಮಗಾರಿ ಪೂರ್ಣಗೊಳಿಸಲು ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಕೆ.ಟಿ.ನಾಗರಾಜ್, ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಮುಖ್ಯಮಂತ್ರಿಗಳು ತಿಂಗಳು ಬೇಡ ಮರಾಯ, ಮೂರು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.
ಬಳಿಕ ಹೊಸೂರು ರಸ್ತೆಯ ಅಡುಗೋಡಿ ಬಳಿಯ ಮಳೆನೀರು ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ವಿಸ್ತರಣೆ ಹಾಗೂ ಕಾಲುವೆಯಲ್ಲಿ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಅವರು, ನಗರದಲ್ಲಿ ಈಗಾಗಲೇ ಚಾಲನೆ ನೀಡಿರುವ ಮಳೆನೀರು ಗಾಲುವೆ ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವಂತೆ ಮಳೆನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದರು.
ಪ್ರದಕ್ಷಿಣೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕರಾದ ಎನ್.ಎ.ಹ್ಯಾರೀಸ್, ಬಿ.ಎನ್.ವಿಜಯ್‌ಕುಮಾರ್, ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಎಂ.ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಉಚಿತ ಮನೆ ನಿರ್ಮಾಣ
ಕೋರಮಂಗಲದ ರಾಜೇಂದ್ರನಗರ ಕೊಳೆಗೇರಿ ಜನತೆಗೆ ಉಚಿತ ಮನೆಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ ಅವರು, ನಗರದಲ್ಲಿ ಒಟ್ಟು 18 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಜತೆಗೆ ರಾಜೇಂದ್ರ ನಗರ ಭಾಗದಲ್ಲಿ 625 ಮನೆಗಳನ್ನು ನಿರ್ಮಿಸುವ ಯೋಜನೆ ಚಾಲನೆ ನೀಡಲಾಗಿದೆ. ಮನೆ ನಿರ್ಮಾಣಕ್ಕೆ 4.50 ಲಕ್ಷ ರೂ.ಗಳನ್ನು ಸರ್ಕಾರ ನೀಡಲಾಗುತ್ತಿದ್ದು, ರಾಮಲಿಂಗಾರೆಡ್ಡಿ ಅವರ ಮನವಿಯಂತೆ ಉಳಿದ 50 ಸಾವಿರ ಮೊತ್ತವನ್ನು ಬಿಬಿಎಂಪಿ ಭರಿಸಲಿದೆ ಎಂದು ತಿಳಿಸಿದರು.
ಉಳಿಕೆ ಅನುದಾನ ಕೆರೆ ಅಭಿವೃದ್ಧಿಗೆ ಬಳಸಿ
ಅಲ್ಲಿಂದ ಪಾಲಿಕೆಯಿಂದ ಅಭಿವೃದ್ದಿಪಡಿಸಲಾಗುತ್ತಿರುವ ಮೇಸಿಪಾಳ್ಯ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು, ಪಾಲಿಕೆಯಿಂದ ಕೆರೆಯ ಅಭಿವೃದ್ಧಿಗೆ 7 ಕೋಟಿ ರೂ. ಮೀಸಲಿಡಲಾಗಿದೆ. ಆ ಪೈಕಿ 3 ಕೋಟಿ ಉದ್ಯಾನ ಅಭಿವೃದ್ಧಿಗೆ ಖರ್ಚಾಗಿದೆ. ಉಳಿದ 4 ಕೋಟಿ ರೂ.ಗಳನ್ನು ಸಮೀಪದ ಕೆರೆ ಅಭಿವೃದ್ಧಿಗೆ ಬಳಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ಒಪ್ಪಿದ ಮುಖ್ಯಮಂತ್ರಿಗಳು ಕೆರೆಯನ್ನ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒತ್ತುವರಿ ತೆರವು ಜಾಗದಲ್ಲಿ ಪಾರ್ಕ್
ನಗರ ಜಿಲ್ಲಾಡಳಿತ ಎಚ್‌ಎಸ್‌ಆರ್ ಬಡಾವಣೆಯಲ್ಲಿನ ಸರ್ಕಾರಿ ಭೂಮಿ ಒತ್ತುವರಿ ತೆರುವುಗೊಳಿಸದ ಜಾಗಕ್ಕೆ ಒಂದೂವರೆ ವರ್ಷದ ಹಿಂದೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ಅಂದಿನ ಬಿಡಿಎ ಆಯುಕ್ತರಿಗೆ ಜಾಗವನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸುವಂತೆ ಆದೇಶಿಸಿದ್ದರು. ಅದರಂತೆ ಜಾಗವನ್ನು ಅಭಿವೃದ್ಧಿಪಡಿಸಿ ಗಿಡಗಳು, ಕಲ್ಯಾಣಗಳು ಹಾಗೂ ಧ್ಯಾನ ಮಂದಿರಗಳನ್ನು ನಿರ್ಮಿಸಲಾಗಿದೆ. ನವೆಂಬರ್ ವೇಳೆಗೆ ಉದ್ಯಾನ ಲೋಕಾರ್ಪಣೆಗೊಳಿಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನ್ನ-ನೀರು-ವಸತಿ ಕೊಟ್ಟವ್ರ ಮರಿತೀರಾ?
ಕೋರಮಂಗಲದ ರಾಜೇಂದ್ರನಗರ ಕೊಳೆಗೇರಿಗೆ ಭೇಟಿ ನೀಡಿ ಉಚಿತ ವಸತಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿಗಳು, ಸರ್ಕಾರದ ವತಿಯಿಂದ ಬಡವರಿಗೆ ಅನ್ನಭಾಗ್ಯ, ಉಚಿತ ಮನೆ ಹಾಗೂ ಕೊಳೆಗೇರಿಗಳ ಜನರಿಗೆ ಉಚಿತವಾಗಿ ನೀರು ನೀಡಲಾಗುತ್ತಿದೆ ಎಂದು ಹೇಳಿದರು. ಇದೇ ವೇಳೆ ಅವರು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಯೋವೃದ್ಧೆಯೊಬ್ಬರನ್ನು “ಏನು ಅಜ್ಜಿ ನಿಮಗೆ ಅನ್ನ, ನೀರು, ವಸತಿ ಕೊಟ್ಟವ್ರ$° ಮರಿತೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಅಜ್ಜಿ, ಖಂಡಿತ ಇಲ್ಲ ಸ್ವಾಮಿ’ ಎಂದು ಉತ್ತರಿಸಿದರು.
ಕಾರ್ಮಿಕರ ಕಷ್ಟ ಆಲಿಸಿದ ಮುಖ್ಯಮಂತ್ರಿಗಳು
ಚರ್ಚ್‌ಸ್ಟ್ರೀಟ್‌ನಲ್ಲಿ ಪಾದಚಾರಿ ಕಾಮಗಾರಿ ಪರಿಶೀಲನೆ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕೂಲಿ ಕಾರ್ಮಿಕರನ್ನು ಮುಖ್ಯಮಂತ್ರಿಗಳು, ಎಷ್ಟು ದಿನಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ಅವರು, ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇವೆ ಎಂದರು. ಮರು ಪ್ರಶ್ನಿಸಿದ ಮುಖ್ಯಮಂತ್ರಿಗಳು ಊರಲ್ಲಿ ಉಚಿತವಾಗಿ 7 ಕೆ.ಜಿ.ಅಕ್ಕಿ ಸಿಗುತ್ತೇ ಅಲ್ವಾ, ಅಲ್ಲೆ ಕೆಲಸಕ್ಕೆ ಹೋಗೋದು ತಾನೆ ಎಂದಾಗ,
ಅಕ್ಕಿ ಕೋಡ್ತೀರಾ ಆದ್ರೆ ಬೇರೆ ಖರ್ಚಿಗೇನು ಮಾಡೋದು ನಮ್ಮೂರಲ್ಲಿ ಕೂಲಿ ಕಡಿಮೆ ಎಂದರು. ಅದಕ್ಕೆ ಮುಖ್ಯಮಂತ್ರಿಗಳು, ಇಲ್ಲಿ ಎಷ್ಟು ಕೂಲಿ ಕೊಡ್ತಾರೆ, ಎಲ್ಲಿ ಉಳಿದುಕೊಂಡಿದ್ದೀರಾ ಎಂದಾಗ, ಜೋಡಿಗೆ ದಿನಕ್ಕೆ 600 ರೂ. ಕೂಲಿ ಕೊಡ್ತಾರೆ ಎಂದು ಕಾರ್ಮಿಕರು ತಿಳಿಸಿದರು. ನೀವು ಯಾರ ಊರಿನವರು ಎಂಬ ಮುಖ್ಯಮಂತ್ರಿಗಳ ಪ್ರಶ್ನೆಗೆ ಅವರಲ್ಲಿ ಒಬ್ಬರು ಬಳ್ಳಾರಿ ಎಂದಾಗ, ಬಳ್ಳಾರಿನಾ ಎಂದು ಉದ್ಗರಿಸಿ ನಗುತ್ತಾ ಮುಂದೆ ನಡೆದರು.
ಅಧಿಕಾರಿ ಅಮಾನತು
ಎಚ್‌ಎಸ್‌ಆರ್ ಬಡಾವಣೆಯ ಉದ್ಯಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಅವರು, ಈ ಭಾಗದಲ್ಲಿ ನಕ್ಷೆ, ಸೆಟ್‌ಬ್ಯಾಕ್ ಹಾಗೂ ನಿಯಮ ಬಾಹಿರವಾಗಿ ಅಂತಸ್ತುಗಳನ್ನು ಹೆಚ್ಚಿಗೆ ಕಟ್ಟಿದ್ದಾರೆ ಇದೆಲ್ಲ ಗೊತ್ತಿದ್ದರೂ, ಇಲ್ಲಿನ ಅಧಿಕಾರಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು. ಈ ವೇಳೆ ಅಧಿಕಾರಿಯನ್ನು ಕರೆಸಿದ ಮುಖ್ಯಮಂತ್ರಿಗಳು, “ನಿಯಮ ಉಲ್ಲಂಘನೆ ತಡೆಯುವುದು ನಿನ್ನ ಕರ್ತವ್ಯ ಅಲ್ಲೆನಪ್ಪಾ…ಮತ್ಯಾಕೆ ಕ್ರಮಕೈಗೊಳ್ಳಲಿಲ್ಲ… ಹೋಗಿ ನಿನ್ನ ಸಸ್ಪೆಂಡ್ ಮಾಡಿದ್ದೀನಿ” ಎಂದು ಹೇಳಿ ಆಯುಕ್ತರಿಗೆ ಅಮಾನತುಗೊಳಿಸುವಂತೆ ಆದೇಶಿಸಿದರು.
ವಯಸ್ಸು ಎಂಬತ್ತಾದರೂ ಹೀಗೆ ಇರ್ತಾರೆ
ಕಾವೇರಿ ಎಂಪೋರಿಯಂ ಕರಕುಶಲ ಮಳಿಗೆಗೆ ಭೇಟಿ ನೀಡಿದ ವೇಳೆ ಶಾಸಕ ಹ್ಯಾರೀಸ್ ಅವರು ಊರುಗೋಲಿನಲ್ಲಿ ಕಲಾಕೃತಿಯನ್ನು ಮಾಡಿರುವುದು ಮುಖ್ಯಮಂತ್ರಿಗಳಿಗೆ ತೋರಿಸಿದರು. ಈ ವೇಳೆ ಅಲ್ಲಿದ್ದ ಉಗ್ರಪ್ಪ, ಮುಖ್ಯಮಂತ್ರಿಗಳಿಗೆ ಅರವತ್ತಾದರೂ ಅದರ ಅವಶ್ಯಕತೆಯಿಲ್ಲ ಎಂದರು. ಇದಕ್ಕೆ ಮರು ಉತ್ತರಿಸಿದ ಹ್ಯಾರೀಸ್ ಅವರಿಗೆ ಎಂಬತ್ತಾದರೂ ಅವರು ಹೀಗೆ ಇರ್ತಾರೆ ಎಂದಾಗ, ಮುಖ್ಯಮಂತ್ರಿಗಳು ಮುಗುಳ್ನಕ್ಕು ಮುಂದೆ ನಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಜಿ.ಪಂ-ತಾ.ಪಂ ಮೀಸಲು: ಮತ್ತೆ ಕಾಲಾವಕಾಶ ಕೇಳಿದ ಸರ್ಕಾರ
Bengaluru: ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ
Arrested: ಸರ, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.