“ಇತರ ಭಾಷೆಗಳ ಕಲಿಕೆಗೆ ಮಾತೃಭಾಷೆಯೇ ತಳಹದಿ’
Team Udayavani, Aug 7, 2017, 7:00 AM IST
ಕೋಟೇಶ್ವರ: ಶಾಲಾ ಹಂತದಲ್ಲಿ ಇಂಗ್ಲೀಷ್‌ನಂತಹ ಇತರ ಭಾಷೆಗಳಲ್ಲಿ ಮಗು ಪ್ರಭುತ್ವವನ್ನು ಸ್ಥಾಪಿಸಬೇಕಾದರೆ ಮಾತೃಭಾಷೆಯಲ್ಲಿ ಗಟ್ಟಿತನವಿರ ಬೇಕು.
ಮಾತೃಭಾಷೆಯನ್ನೇ ಸರಿಯಾಗಿ ಕಲಿಯಲಾರದ ಮಗುವಿಗೆ ಅಪರಿಚಿತವಾದ ಇನ್ನೊಂದು ಭಾಷೆ ಬೌದ್ಧಿಕ ಹೊರೆಯಾಗುವುದು. ಹಾಗಾಗಿ ಹೆತ್ತವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕನಿಷ್ಟ ಐದನೇ ತರಗತಿಯವರೆಗಾದರೂ ಮಕ್ಕಳಿಗೆ ತಮ್ಮ ಮಾತೃಭಾಷೆಯ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಬೇಕು ಎಂದು ಪ್ರಖ್ಯಾತ ಚಿಂತನಕಾರ ಪೊÅà.ಕನರಾಡಿ ವಾದಿರಾಜ ಭಟ್ ಅಭಿಪ್ರಾಯ ಪಟ್ಟರು.
ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯ ಜೀವನ್ ಹುಟ್ಟು ಹಬ್ಬದ ಪ್ರಯುಕ್ತ ತಾಯಿ ತಂದೆ ಜ್ಯೋತಿ-ಚಂದ್ರ ಅವರು ಪ್ರಾಯೋಜಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ 6ನೇ ಸಂಚಿಕೆ ಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ತಿಂಗಳ ಕಲಿಕಾ ಪ್ರದರ್ಶನದ ಎರಡನೇ ಕಾರ್ಯಕ್ರಮ, ದಶಪ್ರಶ್ನೆ ಎಂಬ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮ ಹಾಗೂ ಸರ್ವಪೋಷಕರ ಸಭೆಯು ಶಾಲಾ ಮುಖ್ಯೋಪಾಧ್ಯಾಯರಾದ ನಾಗರತ್ನಾ ಹೆಬ್ಟಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಮಾರಂಭದಲ್ಲಿ ಗ್ರಾಮ ಪಂಚಾ ಯತ್ ಸದಸ್ಯರಾದ ಮನೋಜ್ ಕುಮಾರ್ ಶೆಟ್ಟಿ, ಬಿದ್ಕಲ್‌ಕಟ್ಟೆ ಸಿ.ಆರ್.ಪಿ. ಸುಧಾಕರ ಶೆಟ್ಟಿ, ಎಸ್. ಡಿ.ಎಂ.ಸಿ. ಸದಸ್ಯರಾದ ಜ್ಯೋತಿ, ಹೆತ್ತವರಾದ ಗೋಪಾಲಕೃಷ್ಣ, ಮುಖ್ಯೋ ಪಾಧ್ಯಾಯರಾದ ನಾಗರತ್ನ ಹೆಬ್ಟಾರ್, ಸಹಶಿಕ್ಷಕರುಗಳಾದ ಸತೀಶ್ ಶೆಟ್ಟಿಗಾರ್, ರಮಣಿ, ಜ್ಯೋತಿಲಕ್ಷ್ಮೀ, ಚಿತ್ರಾ, ದೈ.ಶಿ. ಶಿಕ್ಷಕಿ ಮಂಜುಳಾ, ಗೌರವ ಶಿಕ್ಷಕಿಯರಾದ ಮಹಾಲಕ್ಷ್ಮೀ, ಭಾರತಿ, ವೇದಾವತಿ, ವಿದ್ಯಾರ್ಥಿಗಳು ಹಾಗೂ ಸರ್ವ ಹೆತ್ತವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ನಾಗರತ್ನ ಸ್ವಾಗತಿಸಿದರು. ಚಾರಣದ ಸಂಪಾದಕರಾದ ಸಹಶಿಕ್ಷಕ ಸತೀಶ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳ ನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಚಿತ್ರಾ ಕುಮಾರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.