ಅಮರನಾಥ ಯಾತ್ರಿಕರ ಮೇಲೆ ದಾಳಿ: ಲಷ್ಕರ್ ಉಗ್ರರ ಕೈವಾಡ ಸ್ಪಷ್ಟ
Team Udayavani, Aug 7, 2017, 8:45 AM IST
ಕಾಶ್ಮೀರ: ಕಳೆದ ತಿಂಗಳು 8 ಮಂದಿ ಅಮರನಾಥ ಯಾತ್ರಿಕರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದು, ದಾಳಿಯಲ್ಲಿ ಪಾಕ್ ಕೈವಾಡ ಸ್ಪಷ್ಟವಾಗಿದೆ.
ಜು.10ರಂದು ನಡೆದಿದ್ದ ಈ ದಾಳಿಯನ್ನು ಪಾಕಿಸ್ಥಾನ ಮೂಲದ ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆ ನಡೆಸಿರುವುದು ಖಚಿತಪಟ್ಟಿದೆ. ಬಂಧಿತ ಆರೋಪಿಗಳು ಬಿಲಾಲ್ ಅಹ್ಮದ್ ರಾಶಿ, ಅಜೀಜ್ ಅಹ್ಮದ್ ವಾಗೈ ಮತ್ತು ಝರೂರ್ ಅಹ್ಮದ್ ಶಾ ಎಂಬುವವರಾಗಿದ್ದಾರೆ. ಈ ಆರೋಪಿಗಳು ಲಷ್ಕರ್‌ನ ಉಗ್ರರಾಗಿದ್ದು, ದಾಳಿಗೆ ಬೆಂಬಲ ನೀಡಿದ್ದಾರೆ. ಇವರು ಸಂಘಟನೆಯ ಸ್ಲಿàಪರ್ ಸೆಲ್‌ಗೆ ಸೇರಿದವರಾಗಿದ್ದಾರೆ ಎಂದು ಕಾಶ್ಮೀರ ವಿಭಾಗದ ಪೊಲೀಸ್ ಐಜಿ ಮುನೀರ್ ಖಾನ್ ಅವರು ತಿಳಿಸಿದ್ದಾರೆ.
ಬಂಧಿತರು ಲಷ್ಕರ್ ಉಗ್ರರಿಗೆ ಸರಂಜಾಮು ಸಾಗಾಟ, ದಾಳಿ ಯೋಜನೆ ರೂಪಿಸಲು ಸಹಾಯ ಮಾಡಿದ್ದಾರೆ. ಇನ್ನು ದಾಳಿ ನಡೆಸಿದ ಉಗ್ರರು ಪಾಕಿಸ್ಥಾನದವರಾಗಿದ್ದು, ಲಷ್ಕರ್‌ನ ಕಾಶ್ಮೀರದ ಕಮಾಂಡರ್ ಅಬು ಇಸ್ಮಾಯಿಲ್, ಅಬು ಮಾವಿಯಾ, ಯಾವಾರ್ ಬಶೀರ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಇಡೀ ದಾಳಿಯ ಪ್ಲಾನ್, ಭಾಗಿಯಾದವರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿದ್ದು, ಸದ್ಯ ಪೊಲೀಸ್ ವಶದಲ್ಲಿದ್ದಾರೆ.
ಪ್ರತ್ಯೇಕತಾವಾದಿ ಶಬೀರ್ ಶಾ ಆಪ್ತನ ಬಂಧನ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಆಪ್ತ ಹವಾಲಾ ಹಣ ಪೂರೈಕೆದಾರ ಅಸ್ಲಾಮ್ ವಾನಿಯನ್ನು ಶ್ರೀನಗರದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ದಶಕಗಳಷ್ಟು ಹಳೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.
ಈ ಪ್ರಕರಣದಲ್ಲಿ ಶಾಗೆ ಅಕ್ರಮವಾಗಿ ವಾನಿ 2.5 ಕೋಟಿ ರೂ. ಹಣ ವರ್ಗಾಯಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಎರಡು ಬಾರಿ ಕೋರ್ಟ್ ವಾರೆಂಟ್ ಜಾರಿಯಾದರೂ ವಾನಿ ಹಾಜರಾಗಿರಲಿಲ್ಲ. ಆದ್ದರಿಂದ ಆತನನ್ನು ಬಂಧಿಸಿ, ದೆಹಲಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.
ರಜೌರಿಯಲ್ಲಿ ಅಪಾರ ಶಸ್ತ್ರಾಸ್ತ್ರ ಪತ್ತೆ: ರಜೌರಿ-ರಾಸಿ ವಲಯದಲ್ಲಿ ಸೇನೆ, ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. “ಆಪರೇಷನ್ ಕ್ಲೀನ್ ಅಪ್’ ಕಾರ್ಯಾಚರಣೆ ವೇಳೆ ತರಬೇತಿ ಹೊಂದಿದ ಶ್ವಾನಗಳು ಇವುಗಳನ್ನು ಪತ್ತೆ ಮಾಡಿವೆ. ಸ್ಥಳದಿಂದ ಎಕೆ-47, ಎಕೆ-56 ರೈಫಲ್‌ಗಳು, ಚೀನಾ ಪಿಸ್ತೂಲ್, ಎರಡು ಸುತ್ತಿಗಾಗುವಷ್ಟು ಬುಲೆಟ್‌ಗಳು, 5 ಗ್ರೆನೇಡ್‌ಗಳು, 2 ಮ್ಯಾಗಝೀನ್‌ಗಳು, 639 ರೌಂಡ್‌ಗಾಗುವಷ್ಟು ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಗೆ ಕೋಡ್‌ವರ್ಡ್ ಬಳಸಿದ್ದರು!
ಅಮರನಾಥ ಯಾತ್ರಿಗಳ ಮೇಲಿನ ದಾಳಿ ಸಾಕಷ್ಟು ಪೂರ್ವ ನಿಯೋಜಿತ ಕೃತ್ಯ. ಇದಕ್ಕಾಗಿ ಉಗ್ರರು ಕೋಡ್‌ವರ್ಡ್ ಬಳಕೆ ಮಾಡಿದ್ದರು. ಯಾತ್ರಿ ಬಸ್ ಅನ್ನು ಶೌಕತ್ ಎಂದು ಬೆಂಗಾವಲಿಗಿದ್ದ ಸಿಆರ್‌ಪಿಎಫ್ ಬಸ್ಸನ್ನು ಬಿಲಾಲ್ ಎಂದು ಕೋರ್ಡ್‌ವರ್ಡ್ ಬಳಸಿದ್ದರು. ಜು.9ರಂದೇ ದಾಳಿ ಮಾಡಲು ಯೋಜಿಸಿದ್ದರಾದರೂ ಆ ದಿನ ಸಿಆರ್‌ಪಿಎಫ್ ವಾಹನವಾಗಲಿ, ಯಾತ್ರಿಕರ ವಾಹನವಾಗಲಿ ಪ್ರತ್ಯೇಕ ಪ್ರತ್ಯೇಕವಾಗಿ ಸಂಚರಿಸಿರಲಿಲ್ಲ. ಮರುದಿನ ಉಗ್ರರು ದಾಳಿಗೆ ಯೋಜಿಸಿದ್ದ ಸ್ಥಳದಲ್ಲಿ ಸಿಆರ್‌ಪಿಎಫ್ ವಾಹನದ ಮೇಲೆ ಗುಂಡಿನ ಮಳೆಗೆರೆಯಲು ಸಿದ್ಧತೆ ಮಾಡಿದ್ದರು. ಆದರೆ ಸಿಕ್ಕಿದ್ದು ಯಾತ್ರಿಗಳಿದ್ದ ವಾಹನವಾಗಿತ್ತು ಎಂದು ಪೊಲೀಸ್ ಐಜಿ ತಿಳಿಸಿದ್ದಾರೆ.
ಆಯ್ದ ಉಗ್ರರಿಗೆ ಬೆಂಬಲ ಕೊಡದಿರಿ: ಪಾಕ್‌ಗೆ ಟ್ರಂಪ್
ಪಾಕಿಸ್ಥಾನ ಆಯ್ದ ಉಗ್ರರಿಗೆ ಬೆಂಬಲ ಕೊಡು ವುದು ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಕ್ಕೆ ಸೂಚಿಸಿರುವುದಾಗಿ ಅಮೆರಿಕದ ಭದ್ರತಾ ಸಲಹೆಗಾರ ಜ.ಎಚ್.ಆರ್.ಮ್ಯಾಕ್‌ಮಾಸ್ಟರ್ ಹೇಳಿದ್ದಾರೆ. ಒಂದೆಡೆಯಲ್ಲಿ ಪಾಕ್ ತಾನು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವುದಾಗಿ ಹೇಳುತ್ತಿದೆ. ಮತ್ತೂಂದೆಡೆಸ ಉಗ್ರರು ಭಾರತ, ಆಫ್ಘಾನಿಸ್ತಾನದಲ್ಲಿ ನಡೆಸುವ ವಿಧ್ವಂಸಕ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುವುದನ್ನು ಮಾಡುತ್ತಿದೆ ಎಂದು ಬೊಟ್ಟು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.