ಬೆಂಗಳೂರು ತಂಡದಲ್ಲಿ ಭಟ್ಕಳದ ಹರೀಶ್ ನಾಯ್ಕ
Team Udayavani, Aug 7, 2017, 8:00 AM IST
ನಾಗ್ಪುರ: ಪ್ರೊ ಕಬಡ್ಡಿ ಲೀಗ್ ಐದರ ಋತು ಸುದೀರ್ಘ ಅವಧಿಯವರೆಗೆ ಸಾಗುವ ಕಾರಣ ತಂಡದಲ್ಲಿದ್ದರೂ ಕಡೆಗಣಿಸಲ್ಪಟ್ಟ ಹಲವು ಪ್ರತಿಭಾವಂತ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಲಭಿಸುವ ಸಾಧ್ಯತೆಯಿದೆ. ಭಟ್ಕಳದ 19ರ ಹರೆಯದ ಹರೀಶ್ ನಾಯ್ಕ ಅಂತಹ ಪ್ರತಿಭೆ ಇರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕಳೆದ ಋತುವಿನಲ್ಲಿ ಬೆಂಗಳೂರು ಬುಲ್ಸ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಅವರಿನ್ನೂ ತಂಡದ ಪರ ಯಾವುದೇ ಪಂದ್ಯವನ್ನಾಡಿಲ್ಲ.
ಒಂದು ವೇಳೆ ಹರೀಶ್ ಅವರಿಗೆ ಆಡುವ ಅವಕಾಶ ಲಭಿಸಿದರೆ ಖಂಡಿತವಾಗಿಯೂ ತನ್ನ ಸಾಮರ್ಥ್ಯ ಏನೆಂಬುದನ್ನು ಪ್ರದರ್ಶಿಸುವ ವಿಶ್ವಾಸ ನನಗಿದೆ. ಅವರು ಕಳೆದ ವರ್ಷ ತಂಡದಲ್ಲಿದ್ದರು, ಆದರೆ ಅವರ ಕೌಶಲವನ್ನು ಯಾವ ರೀತಿ ಉಪಯೋಗಿಸಬಹುದೆಂದು ನಮಗೆ ಖಚಿತವಾಗಿ ಗೊತ್ತಾಗಲಿಲ್ಲ. ಆದರೆ ಈ ಬಾರಿ ದೀರ್ಘ ಅವಧಿಯ ಸ್ಪರ್ಧೆಯಾದ ಕಾರಣ ಹೊಸ ಮುಖಗಳಿಗೂ ಆಡುವ ಅವಕಾಶ ಸಿಗಲಿದೆ ಎಂದು ಬುಲ್ಸ್ ತಂಡದ ನಾಯಕ ರೋಹಿತ್ ಕುಮಾರ್ ಹೇಳಿದ್ದಾರೆ.
ಬಾಲ್ಯದಲ್ಲಿ ಹರೀಶ್ ಕ್ರಿಕೆಟ್ ಆಟಕ್ಕೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದರು. ಆದರೆ 10ನೇ ತರಗತಿ ವೇಳೆ ಸರ್ಪನ್‌ಕಟ್ಟ ಕ್ರೀಡಾ ಕ್ಲಬ್‌ಗ ಸೇರಿದ ಬಳಿಕ ಕಬಡ್ಡಿ ಮತ್ತು ಖೋ ಖೋ ಆಟಕ್ಕೆ ಗಮನವಿತ್ತರು. ಯಶಸ್ವಿ ರೈಡರ್ ಆಗಿ ಕಾಣಿಸಿಕೊಂಡ ಹರೀಶ್ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದ ವೇಳೆ ಬೆಂಗಳೂರು ಬುಲ್ಸ್ ತಂಡದ ಕಣ್ಣಿಗೆ ಬಿದ್ದರು. ಧಾರವಾಡದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಆಯ್ಕೆಯಾದೆ ಮತ್ತು ಅಲ್ಲಿಯೇ ಶಿಕ್ಷಣ ಮುಂದುವರಿಸಿದೆ.
ಕಬಡ್ಡಿ ಲೀಗ್‌ಗೆ ಸೇರ್ಪಡೆಯಾದ ಬಳಿಕ ನನ್ನ ಜೀವನದಲ್ಲಿ ಬದಲಾವಣೆಯಾಯಿತು. ಆರ್ಥಿಕವಾಗಿ ನನ್ನ ಕುಟುಂಬ ಬಲಗೊಂಡಿತು. ಲೀಗ್‌ನಿಂದ ಲಭಿಸಿದ ಹಣದಿಂದ ಕೆಲವು ಸಾಲಗಳನ್ನು ತೀರಿಸಿದೆ. ನನ್ನ ತಂದೆ ದಿನಕೂಲಿ ಕೆಲಸಗಾರ, ತಾಯಿ ಮನೆಕೆಲಸ. ಹಿರಿಯ ಅಕ್ಕ ಇದ್ದಾರೆ. ಇಬ್ಬರು ಸೋದರ ಮಾವಂದಿರು ಮನೆಯಲ್ಲಿದ್ದಾರೆ. ಒಬ್ಬರು ಕೆಎಸ್‌ಆರ್‌ಟಿಸಿ ಮತ್ತು ಇನ್ನೊಬ್ಬರು ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಈ ಋತುವಿನ ಸಂಬಳದಿಂದ ತನ್ನ ಕುಟುಂಬಕ್ಕೆ ಇನ್ನಷ್ಟು ನೆರವಾಗಬಹುದು ಎಂದು ಹರೀಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.