ವಾತ್ಸಲ್ಯ ಮೆರೆಯಲು ಸೋದರಿಯರು ಸಜ್ಜು
Team Udayavani, Aug 7, 2017, 1:23 PM IST
ಬೆಂಗಳೂರು: ಸೋದರತ್ವದ ಬಾಂಧವ್ಯ ಬೆಸೆಯುವ ಹಬ್ಬವೇ ರಾಖೀ ಹಬ್ಬ. ಅದಕ್ಕಾಗಿಯೇ ತರಹೇವಾರಿ ರಾಖೀಗಳು ಮಾರುಕಟ್ಟೆ ಪ್ರವೇಶಿಸಿದ್ದು, ಸೋದರಿಯರನ್ನು ಆತ್ಮೀಯವಾಗಿ ಬರಸೆಳೆಯುತ್ತಿವೆ. ಮತ್ತೂಂದೆಡೆ ಆನ್‌ಲೈನ್‌ನಲ್ಲೂ ರಾಖೀಗಳ ಖರೀದಿ ಭರಾಟೆ ಜೋರಾಗಿದೆ.
ಸೋದರಿಗೆ ಎಂಥದೇ ಕಷ್ಟ ಬಂದರೂ ತಾನು ಕಾಪಾಡುತ್ತೇನೆ. ನಿನ್ನ ಕಷ್ಟ-ಸುಖಕ್ಕೆ ಹೆಗಲು ನೀಡುತ್ತೇನೆ ಎಂದು ಸೋದರ ಅಭಯ ನೀಡುತ್ತಾನೆ. ಸೋದರನ ಬಾಳು ಸದಾ ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಹರಸುತ್ತಾ ಸೋದರಿ ರಾಖೀ ಕಟ್ಟುತ್ತಾಳೆ. ಇದೇ ರಕ್ಷಾ ಬಂಧನ ಸಹೋದರತೆ ಸಂಕೇತ.
ಶ್ರಾವಣ ಮಾಸದ ಹುಣ್ಣಿಮೆಯ ಉಪಾಕರ್ಮದಂದೇ “ರಕ್ಷಾ ಬಂಧನ’ ಕೂಡ ಆಚರಿಸಲಾಗುವುದು. ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ ರಾಖೀ ಹಬ್ಬ ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಹಲವೆಡೆ ಆಚರಿಸುತ್ತಾರೆ. ಪ್ರತಿಯೊಬ್ಬ ಸೋದರಿಯೂ ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸೋದರನ ಮುಂಗೈಗೆ ರಾಖೀಯನ್ನು ಕಟ್ಟುತ್ತಾಳೆ.
ಈ ದಿನ ಬೆಳಗಿನ ಜಾವ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿದ ಸೋದರಿಯರು ಸೋದರರನ್ನು ಕೂಡಿಸಿ, ಆತನ ಹಣೆಗೆ ತಿಲಕವಿಟ್ಟು, ರಾಖೀ ಕಟ್ಟಿ ಆರತಿ ಮಾಡಿ ಆಶೀರ್ವಾದ ಮಾಡುವ ಅಥವಾ ಪಡೆಯುವ ಬಾಂಧವ್ಯ ಬೆಸುಗೆಯ ಹಬ್ಬ. ರಾಖೀ ಕಟ್ಟಿದ ಸೋದರಿಗೆ ಇಷ್ಟವಾದ ಉಡುಗೊರೆ ಕೊಟ್ಟು ಸೋದರರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ವಾಡಿಕೆ.
ನಗರದ ಎಂ.ಜಿ.ರಸ್ತೆ, ಶಿವಾಜಿನಗರ, ಜಯ ನ ಗರ, ಕೋರ ಮಂಗಲ, ಬಳೇಪೇಟೆ, ಚಿಕ್ಕ ಪೇಟೆ, ಮೆಜೆ ಸ್ಟಿಕ್, ಮಲ್ಲೇ ಶ್ವರ, ಬಸ ವೇ ಶ್ವ ರ ನ ಗರ, ರಾಜಾ ಜಿ ನ ಗರ, ಚಾಮ ರಾ ಜ ಪೇಟೆ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಮಡಿವಾಳ, ಬಸವನಗುಡಿ, ಬನಶಂಕರಿ, ಯಶವಂತಪುರ ಹೀಗೆ ನಗ ರದ ಬಹು ತೇಕ ಬಡಾ ವ ಣೆ ಗಳಲ್ಲೂ ರಾಖೀಗಳ ಮಾರಾಟ ಭರ ದಿಂದ ಸಾಗಿದೆ. ಹಲವು ಫ್ಯಾನ್ಸಿ ಸ್ಟೋರ್ ಗ ಳಲ್ಲಿ ರಾಖೀಗಳ ಮಾರಾ ಟ ಕ್ಕೆಂದೇ ವಿಶೇಷ ಕೌಂಟ ರ್ ಗ ಳನ್ನು ತೆರೆಯಲಾ ಗಿ ದೆ.
ಆನ್‌ಲೈನ್ ಶಾಪಿಂಗ್
ಎಲ್ಲದಕ್ಕೂ ಆನ್‌ಲೈನ್ ಶಾಪಿಂಗ್ ವ್ಯವಸ್ಥೆ ಇದ್ದು, ಅದನ್ನು ರಾಖೀ ಮಾರಾಟಕ್ಕೂ ವಿಸ್ತರಿಸಲಾಗಿದೆ. ಎಂಎನ್‌ಸಿ ಕಂಪನಿ ಉದ್ಯೋಗಿಗಳು, ಐಟಿಬಿಟಿಯಂತಹ ಟೆಕ್ಕಿಗಳಿಗೆ ಆನ್ ಲೈನ್ ಸೌಲ ಭ್ಯವು ರಾಖೀಗಳ ಖರೀ ದಿ ಗೆ ವರ ದಾ ನ ವಾ ಗಿವೆ. 99 ರೂ. ಬೆಲೆ ಯಿಂದ 2-3 ಸಾವಿರ ರೂ. ಹಾಗೂ ಮೇಲ್ಪಟ್ಟ ಬೆಲೆಯ ರಾಖೀಗಳು ಆನ್ ಲೈ ನ್ ಮೂಲಕ ಬುಕ್ ಆಗು ತ್ತಿ ವೆ. ಪರ್ಲ್ ವರ್ಕ್ ರಾಖೀ, ಕುಂದನ್ ರಾಖೀ, ಮಣಿ, ಕ್ರಿಸ್ಟಲ್, ಸ್ಟೋನ್, ಝರ್ದೋಸಿ ರಾಖೀ, ರುದ್ರಾಕ್ಷಿ ರಾಖೀ, ಬ್ರೆಸ್‌ಲೆಟ್ ರಾಖೀ, ಭಯ್ನಾ ಬಾಬಿ ರಾಖೀ, ಸಹೋದರಿಯರು ಸೇರಿದಂತೆ ಮಕ್ಕ ಳಿ ಗೆಂದೇ ವಿಶೇಷ ರಾಖೀಗ ಳು ಇಲ್ಲಿವೆ.
ಆನ್‌ಲೈನ್‌ನಲ್ಲಿ ಕೇವಲ ರಾಖೀಗಳು ಮಾತ್ರ ಬುಕ್ ಆಗುತ್ತಿಲ್ಲ. ಅದರೊಂದಿಗೆ ಸಹೋದರನಿಗೆ ಇಷ್ಟವಾಗುವ ಚಾಕಲೆಟ್‌ಗಳು ಕೂಡ ಖರೀದಿಯಾಗುತ್ತಿವೆ. ಅದಕ್ಕಾಗಿ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಕಂಪನಿಗಳು ವಿಶೇಷ ಕೌಂಟರ್ ತೆರೆದಿವೆ. ಕೆಲವು ಕಂಪನಿಗಳು ರಿಯಾಯಿತಿ ಕೂಡ ನೀಡಿವೆ. ರಾಖೀ ಪಡೆ ದ ಸೋದ ರರು ತಮ್ಮ ಸೋದ ರಿಗೆ ಉಡು ಗೊ ರೆ ನೀಡುವುದು ವಾಡಿಕೆ. ಹೀಗಾಗಿ ಅದಕ್ಕೂ ಆನ್ ಲೈನ್ ಬುಕಿಂಗ್ ನಡೆ ಯು ತ್ತಿ ದೆ.
ಸಾಂಪ್ರದಾಯಿಕ್ಕೆ ಮಾರ್ಡನ್ ಟಚ್
ಆಧುನಿಕ ಮತ್ತು ಸಾಂಪ್ರದಾಯಿಕತೆಗಳ ಮಿಶ್ರಣವೆಂಬಂತೆ ಬ್ರೇಸ್ಲೇಟ್ ರಾಖೀಗಳೂ ಆಗಮಿಸಿವೆ. ಕ್ರಿಸ್ಟಲ್ ಬ್ರೇಸ್ಲೇಟ್ ರಾಖೀ, ಮೆಟಲ್, ಹಿತ್ತಾಳೆ, ಬೆಳ್ಳಿ, ಚಿನ್ನದ ಲೇಪಿತವುಳ್ಳ ಹಲವು ಬ್ರೇಸ್‌ಲೇಟ್‌ಗಳು ರಾಯಲ್ ಲುಕ್ ಕೊಡುತ್ತವೆ. ಜತೆಗೆ ಸ್ಪಂಜಿನಲ್ಲಿ ತಯಾರಾದ ರಾಖೀ, ಕಸೂತಿ, ಮಣಿ ಜೋಡಣೆ, ಥರ್ಮಾಕೋಲ್‌ನಿಂದ ತಯಾರಾದ ರಾಖೀಗಳು… ಹೀಗೆ ಬಗೆ ಬಗೆಯ ರಾಖೀಗಳು ಆಕರ್ಷಣೀಯವಾಗಿವೆ.
ಪಶ್ಚಿಮ ಬಂಗಾಳ ಮತ್ತಿತರ ಕಡೆಗಳಿಂದ ಕೋಟ್ಯಾಂತರ ರೂ. ಮೌಲ್ಯದ ರಾಖೀಗಳು ದೇಶದ ನಾನಾ ಭಾಗಗಳಿಗೆ ಸರಬರಾಜಾಗುತ್ತಿವೆ. ಬೆಂಗಳೂರಿಗೂ ಅಲ್ಲಿಂದಲೇ ಆಗಮಿಸುತ್ತಿದ್ದು, ಕನಿಷ್ಠ 5 ರೂ. ನಿಂದ 500 ರೂ. ಹಾಗೂ ಮೇಲ್ಪಟ್ಟ ಬೆಲೆ ಗೆ ಮಾರಾಟವಾಗುತ್ತಿವೆ. ಪೂರ್ಣ ಚಿನ್ನ-ಬೆಳ್ಳಿಯ ಹಾಗೂ ಚಿನ್ನ-ಬೆಳ್ಳಿ ಲೇಪಿತ ರಾಖೀಗಳು ವಿನ್ಯಾಸ ಮತ್ತು ಗಾತ್ರಕ್ಕೆ ತಕ್ಕಂತೆ ಮಾರಾಟವಾಗುತ್ತಿವೆ.
ಈ ಬಾರಿ ಚೀನಾದಲ್ಲಿ ತಯಾರಾಗಿ ಬರುವ ರಾಖೀಗಳನ್ನು ತಿರಸ್ಕರಿಸುವ ಅಭಿಯಾನ ಕೂಡ ನಡೆಯುತ್ತಿದ್ದು, ಅನೇಕ ಸಹೋದರಿಯರು ಚೀನಾದ ರಾಖೀಗಳನ್ನು ಖರೀದಿಸಬಾರದೆಂದು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಇದೆ.
” ಪ್ರತಿ ವರ್ಷವೂ ತಪ್ಪದೇ ನನ್ನ ಸಹೋದರನಿಗೆ ಸಂಪ್ರದಾಯ ಬದ್ಧವಾಗಿ ರಾಖೀ ಕಟ್ಟಿ, ತಿಲಕವಿಟ್ಟು, ಸಿಹಿ ಹಂಚಿ ನಾನೂ ಉಡುಗೊರೆಗಳನ್ನು ಪಡೆ ಯು ತ್ತಿದ್ದೆ. ಸಿಕ್ಕಸಿಕ್ಕವರಿಗೆ ರಾಖೀ ಕಟ್ಟಿ ಅದರ ಪಾವಿತ್ರ್ಯತೆ ಹಾಳು ಮಾಡಲು ನಾನು ಬಯಸುವುದಿಲ್ಲ.”
-ಧನಲಕ್ಷ್ಮಿ, ಐಟಿ ಉದ್ಯೋಗಿ, ಎಂ.ಜಿ.ರಸ್ತೆ.
“ರಾಖೀ ತಯಾರಿಕೆ, ಸಾರಿಗೆ ವೆಚ್ಚ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಈ ನಡುವೆ ಜಿಎಸ್‌ಟಿ ಬಂದಿದ್ದು, ಈ ಬಾರಿ ರಾಖೀ ದರದಲ್ಲಿ ಶೇ.10ರಷ್ಟು ಬೆಲೆ ಏರಿಕೆಯಾಗಿದೆ. ಆನ್‌ಲೈನ್‌ನಲ್ಲಿ ನಮಗೆ ಬೇಕಾದ ವಿನ್ಯಾಸದ ರಾಖೀಗಳು ಲಭ್ಯವಿದ್ದು, ಸ್ವಲ್ಪ ರೇಟ್ ದುಬಾರಿ ಆದರೂ, ಸಹೋದರನಿಗಾಗಿ ಎಷ್ಟು ಖರ್ಚು ಮಾಡಿದರು ಕಡಿಮೆಯೇ”
-ಶ್ವೇತಾ, ಎಂಬಿಬಿಎಸ್, ವಿದ್ಯಾರ್ಥಿನಿ
“ಜನರು ಬ್ಯುಸಿ ಆಗಿದ್ದಾರೆ. ಅವರಿಗೆ ನಿಂತು ವ್ಯಾಪಾರ ಮಾಡುವಷ್ಟು ಸಮಯವಿಲ್ಲ. ಇದರಿಂದ ಇ ತ್ತೀ ಚೆಗೆ ಆನ್ ಲೈನ್ ಮಾರಾಟಕ್ಕೆ ಒಲವು ಹೆಚ್ಚಾಗಿದೆ. ರಾಖೀ ಹಬ್ಬ ಆ.7ಕ್ಕಿದೆ. ಆದರೆ, ಕಳೆದ ತಿಂಗಳಿಂದಲೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಫ್ಯಾನ್ಸಿ ರಾಖೀಗ ಳಿಗೆ ಬೇಡಿಕೆ ಹೆಚ್ಚಾ ಗಿ ದೆ ”.
-ವಿಜು, ಆನ್ ಲೈನ್ ರಾಖೀ ಮಾರಾ ಟಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.