ಕಲಿತ ವಿದ್ಯೆ ಸದ್ವಿನಿಯೋಗವಾಗಲಿ: ಪ್ರಭಂಜನ್‌ಕುಮಾರ್‌


Team Udayavani, Aug 7, 2017, 2:21 PM IST

07-BLR-2.jpg

ಬಳ್ಳಾರಿ: ವಿದ್ಯಾರ್ಥಿಗಳಿಗೆ ಕಲಿಕೆಯೆ ಗುರಿ ಆಗಬೇಕು. ಆನಂತರ ಸಮಾಜದ ಒಳಿತಿಗೆ ಬೋಧಕರಾಗಬೇಕು. ಜೀವನದಲ್ಲಿ ಕಲಿತ ವಿದ್ಯೆಯನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ವಿಮ್ಸ್‌ ವೈದ್ಯಕೀಯ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ| ಪ್ರಭಂಜನ್‌ಕುಮಾರ್‌
ಹೇಳಿದರು.

ನಗರದ ವೀವಿ ಸಂಘದ ರಾವ್‌ ಬಹದ್ದೂರ್‌ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾನುವಾರ ನೂತನ ವಿದ್ಯಾರ್ಥಿಗಳಿಗೆ ಸ್ವಾಗತಕೋರುವ ಫ್ರೆಶರ್ ಡೇ-2017 ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ವ್ಯಕ್ತಿತ್ವವು ವಿಕಸಿತಗೊಂಡಿದ್ದಲ್ಲಿ ಅರಿವಿನ ಮನೆಯಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಬೆಕು. ಜೀವನ ಮಕ್ಕಳು, ಪಾಲಕರು ಹಾಗೂ ಬೋಧಕರ ತ್ರಿವೇಣಿ ಸಂಗಮ. ಪೋಷಕರು ತಮ್ಮ
ಮಕ್ಕಳ ಮೇಲೆ ತಮ್ಮ ಸ್ವಂತದ ಅಭಿಪ್ರಾಯ ಹೇರುವ ಬದಲು ಪರಿಶೀಲಕರಾಗಿ ಅವರನ್ನು ಗಮನಿಸುತ್ತಿರಬೆಕು ಎಂದರು. 

ನಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ಶಾಲಾ ಕಾಲೇಜುಗಳೇ ಮೊದಲ ತಾಯಿ. ಅದಕ್ಕಾಗಿ ಏನಾದರೂ ಆಗು ಮೊದಲು ಮಾನವನಾಗಬೇಕೆಂದು ಹಿರಿಯರು ನುಡಿದಿದ್ದಾರೆ. ನಿಮ್ಮ ಮುಂದಿನ ಜೀವನದಲ್ಲಿ ಯಶಸ್ವಿಯಾಗಲು, ಶಿಸ್ತು, ಸಮಯಪಾಲನೆ, ಸರಿಯಾದ ರೀತಿಯ ಕಷ್ಟಪಡುವ ಸ್ವಭಾವಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ವೀವಿ ಸಂಘದ ಮಾಜಿ ಕಾರ್ಯದರ್ಶಿ ಗುರುಸಿದ್ದಯ್ಯ ಸ್ವಾಮಿ ಮಾತನಾಡಿ, ಓದು ಅಂದರೆ ಸಮುದ್ರದ ಮರಳಿನಲ್ಲಿ ಚಿಪ್ಪುಗಳನ್ನು ಆರಿಸುವುದಲ್ಲ. ಸಮುದ್ರದ ಆಳದಲ್ಲಿರುವ ಮುತ್ತು, ರತ್ನ, ಹವಳಗಳನ್ನು ಹುಡುಕುವುದೇ ಓದು. ಓದಿಗೆ
ಕೊನೆ ಇಲ್ಲ. ಓದಿನಿಂದ ಅನ್ವೇಷಣೆಗಳಿಗೆ ಮಿತಿಯಿಲ್ಲ. ಆದರೆ, ಗುರಿ ಬಲವಾಗಿರಬೇಕು ಎಂದರು.

ಇಲ್ಲಿಯವರೆಗೆ ನೀವು ಮಾಡಿದ ಹುಡುಗಾಟ ಸಾಕು, ಇನ್ನುಮುಂದೆ ಹೊಸ ಹೊಸ ಜ್ಞಾನದ ವಿಷಯಗಳ ಬಗ್ಗೆ ಹುಡುಕಾಟ ಪ್ರಾರಂಭವಾಗಲಿ ಎಂದರು. ವೀ.ವಿ.ಸಂಘದ ಸಹಕಾರ್ಯದರ್ಶಿ ಐಗೋಳ್‌ ಚಿದಾನಂದ ಮಾತನಾಡಿ, ಗಡಿನಾಡಿನಲ್ಲಿರುವ ಬಳ್ಳಾರಿಯು ಕರ್ನಾಟಕಕ್ಕೆ ಸೇರಲು ಶ್ರಮಿಸಿ ಈ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿದ ಮಹಾನ್‌ ಚೇತನ ವೈ. ಮಹಬಲೇಶ್ವರಪ್ಪನವರು. ಈ ಸಂಸ್ಥೆಯು ಕೇವಲ ಒಂದು ಜಾತಿಗೆ ಸೀಮಿತವಾಗಿರದೇ ಜಾತ್ಯತೀತವಾಗಿದೆ. ಮೂರು ದಶಕಗಳಿಂದ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಾ ಬಂದಿದೆ ಎಂದರು. ವೀ.ವಿ.ಸಂಘದ ಕಾರ್ಯದರ್ಶಿ ಉಡೇದ್‌ ಬಸವರಾಜ ಮಾತನಾಡಿ, ವೀರಶೈವ ವಿದ್ಯಾವರ್ದಕ ಸಂಘದ ಈ ಅಂಗ ಸಂಸ್ಥೆಗಳಲ್ಲಿ ಯಾವಾಗಲೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮೊದಲ ಆದ್ಯತೆ. ವಿದ್ಯಾರ್ಥಿಗಳ ಏಳಿಗೆಗೆ ಹಗಳಿರುಳು ಶ್ರಮಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.

ವೀರಶೈವ ವಿದ್ಯಾವರ್ಧಕ ಸಂಘದ  ಉಪಾಧ್ಯಕ್ಷ ಏಚರೆಡ್ಡಿ ಸತೀಶ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಹೊಸಪೇಟೆ ಪಿಡಿಐಟಿ ಕಾಲೇಜಿನ ಅಧ್ಯಕ್ಷ ಗೋನಾಳ್‌ ವಿರೂಪಾಕ್ಷಗೌಡ, ಕೊರ‌್ಲಗುಂದಿ ಬಸವರಾಜ ಮಾತನಾಡಿದರು. ಪ್ರೊ| ರಾಖೀಪಾಟೀಲ್‌ ಅವರು
ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಹಲವಾರು ಸೌಲಭ್ಯಗಳನ್ನು ವಿವರಿಸಿದರು.

ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಸಂಯೋಜಕರಾದ ಡಾ| ಜೇವರ್ಗಿ ಪಕ್ಕೀರಪ್ಪ, ಡಾ| ಸುಮಂಗಳಾ ಬಿಇ ಮೊದಲನೆ ವರ್ಷದ ವಿದ್ಯಾರ್ಥಿಗಳಿಗೆ ವಿಟಿಯುನಲ್ಲಿ ಹೊಸದಾಗಿ ಅಳವಡಿಸಲಾಗುತ್ತಿರುವ ಛಾಯ್ಸ ಬೇಸಡ್‌ ಕ್ರೆಡಿಟ್‌ ಸಿಸ್ಟಮ್‌ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಪ್ರೊ| ಗುರುರಾಜ್‌
ಮಹಾವಿದ್ಯಾಲಯದ ಪ್ಲೇಸ್ಟ್ಮೆಂಟ್-ವಿವರಗಳ  ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗು ಪೋಷಕರು, ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಮಹಾವಿದ್ಯಾಲಯದ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ| ಕುಪ್ಪಗಲ್‌ ವೀರೇಶ್‌ ಸ್ವಾಗತಿದರು. ಉಪಪ್ರಾಂಶುಪಾಲ ಡಾ.ಟಿ. ಹನುಮಂತರೆಡ್ಡಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಚ್‌.ಎಂ.ರೋಹಿಣಿ ನಿರೂಪಿಸಿದರು.
ಪ್ರೊ.ಟಿ.ಎಚ್‌.ಪಾಟೀಲ್‌ ವಂದಿಸಿದರು.

ಟಾಪ್ ನ್ಯೂಸ್

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.