ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ WIZTOONZ ಅಕಾಡೆಮಿ


Team Udayavani, Aug 8, 2017, 6:30 AM IST

lead2.jpg

ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯುವ, ದೀರ್ಘಾವಧಿ ಅಸ್ತಿತ್ವ ಉಳಿಸಿಕೊಳ್ಳುವ ಬದ್ಧತೆ ತೋರುತ್ತಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಆ್ಯನಿಮೇಷನ್‌ ಮತ್ತು ಮಲ್ಟಿಮೀಡಿಯಾ ಕ್ಷೇತ್ರ ಕೂಡ ಒಂದು. ಈ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ‘ವಿಜ್‌ಟೋನ್‌ ಆ್ಯನಿಮೇಶನ್‌ ಅಕಾಡೆಮಿ’ ಒಂದು ಸೂಕ್ತ ವೇದಿಕೆ. 
 
ಉದ್ಯೋಗ ಎಂಬುದು ಇಂದು ಎಲ್ಲೆಡೆ ಎಲ್ಲರಿಗೂ ಅನಿವಾರ್ಯ. ಅದಕ್ಕಾಗಿ ಉತ್ತಮ ಶಿಕ್ಷಣ ಪಡೆಯಬೇಕಾಗುತ್ತದೆ. ಅದನ್ನು ಇಂದಿನ ಪೀಳಿಗೆ ಬಯಸುತ್ತಿದೆ ಕೂಡ. ಒಳ್ಳೆ ಶಿಕ್ಷಣ ಸಿಕ್ಕರೆ ಉದ್ಯೋಗ ಸಿಗದೇ ಇರಲು ಸಾಧ್ಯವೇ? ಎಂಬ ಪ್ರಶ್ನೆ ಇಂದಿನ ವಿದ್ಯಾರ್ಥಿಗಳ ಮನದಾಳದ‌ಲ್ಲಿ ನಾಟಿದರೆ, ಉತ್ತಮ ಕಲಿಕೆ ಹಾಗೂ ಉಜ್ವಲ ಭವಿಷ್ಯದತ್ತ ಹುಡುಕಾಟ ನಡೆಸುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಅಂತಹ ಉಜ್ವಲ ಭವಿಷ್ಯವುಳ್ಳ ಕ್ಷೇತ್ರವೆಂದರೆ ಆ್ಯನಿಮೇಶನ್‌ ಮತ್ತು ಮಲ್ಟಿಮೀಡಿಯಾ ಕಲಿಕೆ.

ಇಂತಹ ಆ್ಯನಿಮೇಶನ್‌ ಮತ್ತು ಮಲ್ಟಿಮೀಡಿಯಾವನ್ನು ಬೋಧಿಸುತ್ತಿರುವ ಅಪರೂಪದ ಹಾಗೂ ಅಪಾರ ಅನುಭವವುಳ್ಳ ಸಂಸ್ಥೆ ವಿಜ್‌ಟೋನ್‌ ಅಕಾಡೆಮಿ. ಇಲ್ಲಿ ಕಲಿತವರಿಗೆ ಉದ್ಯೋಗ ಖಾತ್ರಿಯಿದೆ. ಇದಕ್ಕಿಂತ ಮುಖ್ಯವಾಗಿ ನುರಿತ ಶಿಕ್ಷಕರಿಂದ ಸಿಗುವ ನೇರ ಶಿಕ್ಷಣ ವಿದ್ಯಾರ್ಥಿಗಳಿಗೆ ಜಾnನವನ್ನು, ಕ್ರಿಯಾಶೀಲತೆಯನ್ನು ಹಾಗೂ ಕ್ಷಿಪ್ರ ಕಲಿಕೆಯನ್ನು ದೊರಕುವಂತೆ ಮಾಡಿದೆ.

ಈ ವಿಜ್‌ಟೋನ್‌ ಅಕಾಡೆಮಿ ಶಿಕ್ಷಕರು ನೇರವಾಗಿ ಆ್ಯನಿಮೇಷನ್‌ ಹಾಗೂ ಮಲ್ಟಿಮೀಡಿಯಾ ಕ್ಷೇತ್ರದಿಂದ ಬಂದವರು. ನಾನಾ ಮಾಹಿತಿ ತಂತ್ರಜ್ಞಾನ, ಆ್ಯನಿಮೇಟೆಡ್‌ ಚಲನಚಿತ್ರ ಕ್ಷೇತ್ರ ಹಾಗೂ ಈ ಕ್ಷೇತ್ರದ ಇತರ ವಲಯಗಳಲ್ಲಿ ಸೇವೆ ಸಲ್ಲಿಸಿದ ಅನುಭವವುಳ್ಳವರು. ಆದ್ದರಿಂದ ಇವರಿಗೆ ಈ ಕ್ಷೇತ್ರಕ್ಕೆ ಯಾವ ವಿಧದ ತರಬೇತಿ ಪಡೆದ ವ್ಯಕ್ತಿಗಳು (ವಿದ್ಯಾರ್ಥಿಗಳು) ಬೇಕು ಎನ್ನುವುದು ಗೊತ್ತು. ಇಲ್ಲಿಗೆ ಕಲಿಯಲು ಬರುವವರ ಪ್ರತಿಭೆಯನ್ನು ಆಧರಿಸಿ ಅವರನ್ನು ಯಾವ ಕ್ಷೇತ್ರಕ್ಕೆ ಸಿದ್ಧಪಡಿಸಬೇಕು ಎನ್ನುವುದನ್ನೂ ಕೂಡ ಅರಿತಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆ್ಯನಿಮೇಷನ್‌ ಹಾಗೂ ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಪ್ರಸ್ತುತ ಏನು ಬೆಳವಣಿಗೆ ಆಗುತ್ತಿದೆ, ಮುಂದೇನು ಅಗಲಿದೆ ಎನ್ನುವ ಅರಿವು ಇವರಲ್ಲಿದೆ. ಜೊತೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾದ ಆ್ಯನಿಮೇಟೆಡ್‌ ಚಲನಚಿತ್ರದಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಗಳು ಸಹ ಇಲ್ಲಿಯ (ವಿಜ್‌ಟೋನ್‌j) ಶಿಕ್ಷಕರು. ಅವರಿಗೆ ಈ ಕ್ಷೇತ್ರದಲ್ಲಿರುವ ಬೇಡಿಕೆಯ ಬಗ್ಗೆ ಸಾಕಷ್ಟು ಅರಿವಿರುತ್ತದೆ ಎಂಬುದು ಮಾತ್ರ ವಿಶೇಷ. ಇಂತಹ ಅನುಭವಿ, ವೃತ್ತಿಪರ ಹಾಗೂ ಪರಿಣಿತ ಶಿಕ್ಷಕರನ್ನು ಒಳಗೊಂಡ ತಂಡ ಈ ಅಕಾಡೆಮಿಯ ಘನತೆ ಹೆಚ್ಚಳಕ್ಕೆ ಕಾರಣವಾಗಿದೆ.

ಉದ್ಯೋಗಕ್ಕೆ ಫಿಟ್‌:  ಇಲ್ಲಿನ ಮತ್ತೂಂದು ವಿಶೇಷತೆ ಏನೆಂದರೆ ವಿದ್ಯಾರ್ಥಿಗಳಿಗೆ ಕಲಿಕೆಯ ಜತೆ ಅಗತ್ಯ ತರಬೇತಿ ಸಿಗುವುದರಿಂದ ನೇರವಾಗಿ ಔದ್ಯೋಗಿಕ ಕ್ಷೇತ್ರಕ್ಕೆ ಪ್ರವೇಶಿಸಲು ಅನುಕೂಲವಾಗುತ್ತದೆ. ಉದ್ಯೋಗದಾತರಿಗೆ ಪ್ರತ್ಯೇಕ ತರಬೇತಿ ನೀಡುವ ಅಗತ್ಯ ಎದುರಾಗದು. ತರಬೇತಿಗಾಗಿಯೇ ಸಮಯ ಮೀಸಲಿಡುವ ಅಗತ್ಯವಿರುವುದಿಲ್ಲ. ವಿದ್ಯಾರ್ಥಿಗಳು (ಅಭ್ಯರ್ಥಿಗಳು) ನೇರವಾಗಿ ಉದ್ಯೋಗಕ್ಕೆ ಫಿಟ್‌ ಆಗಿರುತ್ತಾರೆ. 

ಇಲ್ಲಿ ಎಲ್ಲರಿಗೂ ಅವಕಾಶ: ಇಲ್ಲಿ ಕಲಿತವ, ಕಲಿಯದವ ಎಂಬ ಬೇಧವಿಲ್ಲ. ಪಿಯುಸಿ ಫೇಲ್‌ ಆದವರಿಂದ ಮೊದಲ್ಗೊಂಡು ಪದವಿಯಲ್ಲಿ ರ್‍ಯಾಂಕ್‌ ಪಡೆದವರೆಗೆ ಎಲ್ಲರಿಗೂ ಅವಕಾಶವುಂಟು. ಮನರಂಜನಾ ಕ್ಷೇತ್ರದಲ್ಲಿ ವ್ಯಾಪಿಸುತ್ತಿರುವ ಆ್ಯನಿಮೇಷನ್‌, ಹಾಗೂ ಮಲ್ಟಿಮೀಡಿಯಾ ಟಿವಿ ಜಾಹೀರಾತು, ಚಲನಚಿತ್ರ, ಗೇಮ್‌ ಕ್ಷೇತ್ರದಲ್ಲಿ ಸಾಕಷ್ಟು ಅನಿವಾರ್ಯತೆಯನ್ನು ಸೃಷ್ಟಿಸಿದೆ. ಅಪಾರ ಸಂಖ್ಯೆಯಲ್ಲಿ ಮಾನವ ಸಂಪನ್ಮೂಲ ಬಯಸುತ್ತಿರುವ ಈ ಕ್ಷೇತ್ರದಲ್ಲಿ ಉತ್ತಮ ವೇತನ ಸಿಗುತ್ತಿರುವುದು ಯುವಜನತೆ ಪಾಲಿಗೆ ಸೂಕ್ತ ಆಯ್ಕೆ. 2 ವರ್ಷದ ಕಲಿಕೆ ಪೂರೈಸಿದರೆ ಸಾಕು. ಉದ್ಯೋಗ ಗ್ಯಾರಂಟಿ. ಕನಿಷ್ಠ 15 ರಿಂದ 25 ಸಾವಿರ ರೂ. ಮಾಸಿಕ ವೇತನ ಪಡೆಯಲು ಸಾಧ್ಯವಿದೆ.  

ವಿಜ್‌ಟೋನ್‌ ಅಕಾಡೆಮಿಯಲ್ಲಿ ಪೆನ್ಸಿಲ್‌ ಹಿಡಿಯುವುದರಿಂದ ಚಿತ್ರ ಬಿಡಿಸುವವರೆಗೆ ಎಲ್ಲವನ್ನೂ ಕಲಿಸಲಾಗುತ್ತದೆ. ಅದರೆ, ಮುಂದೆ ಏನಾಗ ಬಯಸುತ್ತೀರಿ ಎನ್ನುವುದರ ಮೇಲೆ ಕಲಿಕೆ ಇರುತ್ತದೆ. ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ಒರೆಗೆ ಹಚ್ಚಲು ಈ ಕ್ಷೇತ್ರ ಅತ್ಯಂತ ಸೂಕ್ತ ಎನಿಸಿದರೂ, ಪ್ರತಿಭೆ ಯಾವ ರೀತಿಯದ್ದು ಅನ್ನುವುದನ್ನು ಆಧರಿಸಿ ಸೂಕ್ತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ಯುವಕ, ಯುವತಿಯರಿಗೆ ಬಿಟ್ಟಿದ್ದು. ಆಯ್ಕೆ ಬಗ್ಗೆಯೂ ವಿಜ್‌ಟೋನ್‌j ಸಲಹೆ ನೀಡುತ್ತದೆ. 

ಆ್ಯನಿಮೇಷನ್‌, ಮಲ್ಟಿಮೀಡಿಯಾ ಮನರಂಜನಾ ಜಗತ್ತನ್ನು ಆಳುವ ಮಟ್ಟಕ್ಕೆ ಬೆಳೆಯುತ್ತಿದೆ: ಸಿಇಒ ಶ್ರೀಧರ್‌  ಇಂದು ಆ್ಯನಿಮೇಶನ್‌ ಹಾಗೂ ಮಲ್ಟಿಮೀಡಿಯಾ ಇಂಡಸ್ಟ್ರಿಯ ಬೆಳವಣಿಗೆ ಅದ್ಭುತವಾಗಿದ್ದು, ಈ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆ. ಪ್ರತಿಯೊಂದು ಕ್ಷೇತ್ರಕ್ಕೂ ಒಂದಲ್ಲ ಒಂದು ವಿಧದಲ್ಲಿ ಇದರ ಸಂಪರ್ಕ ಇದ್ದೇ ಇರುತ್ತದೆ. ಜಾಗತಿಕ ಹಾಗೂ ರಾಷ್ಟ್ರೀಯ ಆ್ಯನಿಮೇಷನ್‌ ಮಾರುಕಟ್ಟೆ ಭಾರಿ ಸಂಖ್ಯೆಯಲ್ಲಿ ಆದಾಯ ಗಳಿಸುತ್ತಿದ್ದು ಜಾಗತಿಕವಾಗಿ ಆದಾಯ ಪ್ರಮಾಣ ವರ್ಷದಿಂದ ವರ್ಷ ಹೆಚ್ಚಳವಾಗುತ್ತಿದೆ. ಭಾರತೀಯ ಕಂಪನಿಗಳು ಮುಖ್ಯವಾಗಿ ಡೊಮೆಸ್ಟಿಕ್‌ ಕ್ಷೇತ್ರದ ಪೂರೈಕೆಗಾಗಿ ಸಾಕಷ್ಟು ಕಾರ್ಯ ನಿರ್ವಹಿಸುತ್ತಿವೆ.

ಪ್ರತಿ ಹಂತ‌ದಲ್ಲೂ ಆ್ಯನಿಮೇಷನ್‌, ಹಾಗೂ ಮಲ್ಟಿಮೀಡಿಯಾ ತಂತ್ರಜಾnನದ ಬಳಕೆಯಾಗುತ್ತಿದ್ದು, ಮನರಂಜನಾ ಜಗತ್ತನ್ನು ಆಳುವ ಮಟ್ಟಕ್ಕೆ ಆ್ಯನಿಮೇಷನ್‌ ಹಾಗೂ ಮಲ್ಟಿಮೀಡಿಯಾ ಬೆಳೆಯುತ್ತಿದೆ. ಎಳೆಯರಿಂದ ವಯೋವೃದ್ಧರವರೆಗೆ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಈ ಕ್ಷೇತ್ರ ಮನರಂಜನೆ ಮಾತ್ರವಲ್ಲ ಉದ್ಯೋಗದ ಸೃಷ್ಟಿ ಹಾಗೂ ದೃಷ್ಟಿಯಲ್ಲಿ ಸೂಕ್ತ ಆಯ್ಕೆ ಎನಿಸಿದೆ ಎನ್ನುತ್ತಾರೆ ವಿಜ್‌ಟೋನ್‌j ಅಕಾಡೆಮಿ ಸಂಸ್ಥಾಪಕ ಹಾಗೂ ಸಿಇಒ ಶ್ರೀಧರ್‌ ವಿ.ಟಿ.

ವಿಜ್‌ಟೋನ್‌j ಅಕಾಡೆಮಿಯಲ್ಲಿ ಕಲಿತ ಕೆಲವರ‌ ಅಭಿಪ್ರಾಯಗಳು ಹೀಗಿವೆ..

ತರಬೇತಿ ಅವಧಿಯಲ್ಲೇ ಉದ್ಯೋಗ
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಆ್ಯನಿಮೇಷನ್‌ ಕ್ಷೇತ್ರ ಹೊಸದಾಗಿರಲಿಲ್ಲ. ತಂದೆಯ ಜೊತೆ ಜುರಾಸಿಕ್‌ ಪಾರ್ಕ್‌ ಚಿತ್ರ ನೋಡಿದ ನಂತರ ನಾನೂ ಒಬ್ಬ ಆ್ಯನಿಮೇಟರ್‌ ಆಗಬೇಕೆಂಬ ಕನಸು ಕಂಡೆ. ಪಿಯುಸಿಯಲ್ಲಿ ಇದ್ದಾಗ ಬೆಳೆದ ಆಸೆ ಮುಂದೆ ಹೆಮ್ಮರವಾಗಿ ಇಂದು ಬಯಸಿದ ಕ್ಷೇತ್ರದಲ್ಲೇ ಒಳ್ಳೆ ಉದ್ಯೋಗ ಪಡೆದಿದ್ದೇನೆ. ಸಹೃದಯರೊಬ್ಬರ ಸಲಹೆ ಮೇರೆಗೆ ವಿಜ್‌ಟೂನ್‌jಗೆ ಬಂದು ಆ್ಯನಿಮೇಷನ್‌ ತರಬೇತಿ ಪಡೆದೆ. ತರಬೇತಿ ಅವಧಿಯಲ್ಲೇ ಉದ್ಯೋಗ ಸಿಕ್ಕಿತು. 
-ಅಜಿತ್‌ ಪಿ. ಬೆಂಗಳೂರು

 ಕಲಿಕೆಯ ಪ್ರಭಾವ ಸಾಕಷ್ಟು
ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ ಇಂದು ಈ ಎತ್ತರಕ್ಕೆ ಏರುವಲ್ಲಿ ವಿಜ್‌ಟೋನ್‌j ಕಲಿಕೆಯ ಪ್ರಭಾವ ಸಾಕಷ್ಟಿದೆ. ಹವ್ಯಾಸಕ್ಕಾಗಿ ಕಲಿತ ಚಿತ್ರಕಲೆ ಇಂದು ಉದ್ಯೋಗ ನೀಡಿದೆ. ಕಲಿಯುವಾಗ ಸಿಕ್ಕ ಉತ್ತಮ ವಾತಾವರಣ ಇಂದು ಈ ಹಂತ ತಲುಪಲು ಸಹಕಾರಿಯಾಗಿದೆ. 
-ಪಲ್ಲವಿ, ಶಿವಮೊಗ್ಗ
  
ವಿಜ್‌ಟೂನ್‌ನಿಂದ ಉದ್ಯೋಗ
ಆ್ಯನಿಮೇಷನ್‌ ಕೋರ್ಸ್‌ಗಾಗಿ ಬೆಂಗಳೂರಿಗೆ ಬಂದೆ. ಬಂದಾಗ ಎಲ್ಲಿ, ಏನು ಎಂದು ಗೊತ್ತಿರಲಿಲ್ಲ. ಪತ್ರಿಕೆಯಲ್ಲಿ ಜಾಹೀರಾತು ನೋಡಿ ಇಲ್ಲಿಗೆ ಬಂದೆ. ನಿಜಕ್ಕೂ ನನಗೆ ಅಗತ್ಯ ಇದ್ದ ತರಬೇತಿ ಸಿಕ್ಕಿತು. ಇಂದು ಉದ್ಯೋಗ ಕ್ಷೇತ್ರಕ್ಕೆ ಕಾಲಿರಿಸುವ ಅವಕಾಶ ಸಹ ವಿಜ್‌ಟೋನ್‌jನಿಂದ ಸಿಕ್ಕಿದೆ. ಡ್ರಾಯಿಂಗ್‌ ಕಲಿಕೆ ತಂದೆಯಿಂದ ಬಳುವಳಿಯಾಗಿ ಲಭಿಸಿತು. ಉದ್ಯೋಗ ವಿಜ್‌ಟೋನ್‌jನಿಂದ ಲಭಿಸಿದೆ. 
­-ಅನುದೀಪ್‌ ಆರ್‌.ಬಿ. ಪುತ್ತೂರು
    
ವಿಳಾಸ: ವಿಜ್‌ಟೋನ್‌j ಆ್ಯನಿಮೇಶನ್‌ ಅಕಾಡೆಮಿ, 
ನಂ.64, 13ನೇ ಕ್ರಾಸ್‌, 3ನೇ ಹಂತ, ಜೆ.ಪಿ.ನಗರ, ಬೆಂಗಳೂರು-78. 
ವೆಬ್‌ಸೈಟ್‌: www.wiztoonz.com 
ಮೊಬೈಲ್‌:  90198 84884.
  

– ಗೋಪಾಲ್‌ತಿಮ್ಮಯ್ಯ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ

Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ

1-modi

Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

kejriwal-2

AAP ಬೇಡಿಕೆ: ನಿರ್ಗಮಿತ ಸಿಎಂ ಕೇಜ್ರಿವಾಲ್ ಅವರಿಗೆ ಸರಕಾರಿ ವಸತಿ ಕಲ್ಪಿಸಿ

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

Sagara: ಲೈಂಗಿಕ ದೌರ್ಜನ್ಯ ಎಸಗುವವರನ್ನು ಗಲ್ಲಿಗೇರಿಸಿ: ಬೇಳೂರು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.