“ಪ್ಲಾಸ್ಟಿಕ್‌ಅಕ್ಕಿ’ ವಿತರಣೆ: ಜಿಲ್ಲಾಧಿಕಾರಿಗೆ ಮನವಿ
Team Udayavani, Aug 8, 2017, 8:00 AM IST
ಪಡುಬಿದ್ರಿ: ಜನತೆಯಲ್ಲಿ ಸಂಚಲನವನ್ನು ಮೂಡಿಸಿರುವ “ಪ್ಲಾಸ್ಟಿಕ್ ಅಕ್ಕಿ’ಯ ಕುರಿತು”ಉದಯವಾಣಿ’ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಗ್ರಾಹಕರು ಹೆಜಮಾಡಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ಈ ವಿಚಾರವು ದೃಢಪಟ್ಟಿದ್ದು ಹೆಜಮಾಡಿಯ ನಾಗರಿಕ ಕ್ರಿಯಾ ಸಮಿತಿಯು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಪತ್ರವೊಂದನ್ನು ನೀಡಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸಂಘದ ಹೆಜಮಾಡಿ ಶಾಖೆಗೆ ಬಂದಿರುವ ಸರಕಾರದ ಅನ್ನಭಾಗ್ಯದ 250 ಚೀಲ ಅಕ್ಕಿಯಲ್ಲಿ ಈ ಪ್ಲಾಸ್ಟಿಕ್ ಹರಳುಗಳು ಕಂಡುಬಂದಿದೆ. ಸರಕಾರವು ಈ ಹಿಂದಿನ ಸಂದರ್ಭಗಳಲ್ಲಿ “ಪ್ಲಾಸ್ಟಿಕ್ ಅಕ್ಕಿ’ಯ ಬಗೆಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆ ನೀಡಿದ್ದರೂ ಮುಂದುವರಿದಿರುವ ಈ ಚಾಳಿಯ ಬಗೆಗೆ ಜಿಲ್ಲಾಧಿಕಾರಿಯವರು ಇಲಾಖಾ ತನಿಖೆಯನ್ನು ನಡೆಸಬೇಕು. ಈ ತರದ ಅಕ್ಕಿ ಯಾವ ಸಂಘಕ್ಕೂ, ನ್ಯಾಯಬೆಲೆ ಅಂಗಡಿಗಳಿಗೂ ರವಾನೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿ ಜಿಲ್ಲಾಧಿಕಾರಿಯವರಿಗಿತ್ತ ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಸ್ಪಂದನೆ
ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಶೇಖರ್ ಹೆಜ್ಮಾಡಿ ಹಾಗೂ ಹೆಜಮಾಡಿಯ ಗ್ರಾಮಸ್ಥರು ಸೋಮವಾರ ಮನವಿಯನ್ನು ನೀಡಿದ್ದಾರೆ. ಮನವಿಗೆ ಸ್ಪಂದಿಸಿರುವ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಈ ಕುರಿತಾದ ಸೂಕ್ತ ತನಿಖೆಯನ್ನು ನಡೆಸುವಂತೆ ಆದೇಶವನ್ನೂ ನೀಡಿರುವುದಾಗಿ ಶೇಖರ ಹೆಜ್ಮಾಡಿ ತಿಳಿಸಿರುತ್ತಾರೆ.
ಉಗ್ರ ಹೋರಾಟದ ಎಚ್ಚರಿಕೆ
ಈಗಾಗಲೇ ಈ ಅಕ್ಕಿ ಮೂಟೆಗಳನ್ನು ವಿತರಿಸದಂತೆ ಆದೇಶಿಸಲಾಗಿದೆ. ಈ ಕುರಿತಾಗಿ ತಾವು ರಾಜ್ಯ ಆಹಾರ ಸಚಿವ ಯು. ಟಿ. ಖಾದರ್ ಅವರಿಗೂ ಮನವಿಯನ್ನು ರವಾನಿಸಲಿದ್ದು, ಜನಸಾಮಾನ್ಯನ ಅನ್ನಭಾಗ್ಯದ ಅಕ್ಕಿಯಲ್ಲೂ ಪ್ಲಾಸ್ಟಿಕ್ ಬೆರೆಸಿ ಅಟ್ಟಹಾಸ ಮೆರೆವ ಕುಳಗಳ ವಿರುದ್ಧ ತನಿಖೆ ನಡೆದು ಸತ್ಯಾಂಶ ಹೊರಬಾರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ವ್ಯವಸ್ಥೆಯ ವಿರುದ್ಧ ತಾವು ಉಗ್ರ ಹೋರಾಟವನ್ನು ಸಂಘಟಿಸುವುದಾಗಿ ಶೇಖರ್ ಹೆಜ್ಮಾಡಿ ಹೇಳಿದ್ದಾರೆ.
ಸಮಗ್ರ ತನಿಖೆಗೆ ಕಟಪಾಡಿ ಶಂಕರ ಪೂಜಾರಿ ಆಗ್ರಹ
ಛತ್ತೀಸ್‌ಘರ್‌ನಿಂದ ರವಾನೆಯಾಗುತ್ತಿರುವ ಅನ್ನಭಾಗ್ಯ ಪ್ಲಾಸ್ಟಿಕ್ ಅಕ್ಕಿಯ ಕುರಿತಾಗಿ ಮಾಧ್ಯಮಗಳು ಈ ಹಿಂದೆಯೇ ವರದಿ ಮಾಡಿದ್ದು ಎಲ್ಲವನ್ನೂ “ಏನೂ ಇಲ್ಲ’ ಎಂಬಂತೆ ವಿಧಾನಸಭೆಯಲ್ಲೂ ಚರ್ಚೆ ನಡೆಸಿ ಮುಕ್ತಾಯ ಹಾಡಿದ್ದ ಸರಕಾರವು ಮತ್ತೆ ಎಚ್ಚೆತ್ತುಕೊಳ್ಳಬೇಕಿದೆ. ಪ್ರಜ್ಞಾವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಗೇ ಈ ಕಲಬೆರಕೆ ಅಕ್ಕಿಯನ್ನು ರವಾನಿಸಿ ಇಲ್ಲಿನ ಬಡ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಮಧ್ಯವರ್ತಿಗಳ ಈ ಕುಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಇಲಾಖಾ ತನಿಖೆಯನ್ನೇ ನಡೆಸಬೇಕೆಂದು ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.